ಬಳಕೆದಾರರು ತಮ್ಮ ಸ್ಯಾಮ್‌ಸಂಗ್ ಫೋನಿನ ರಿಪೇರಿಗೆ ತಗಲುವ ವೆಚ್ಚ್ ತಿಳಿಯುವುದು ಹೇಗೆ ಗೊತ್ತಾ?

By Gizbot Bureau
|

ನಿಮ್ಮ ಸ್ಯಾಮ್ ಸಂಗ್ ಫೋನಿನ ಡಿಸ್ಪ್ಲೇ ಹಾಳಾಗಿದ್ಯಾ?ಅಥವಾ ಫೋನಿನಲ್ಲಿ ಇನ್ಯಾವುದೋ ಭಾಗ ಹಾಳಾಗಿ ವರ್ಕ್ ಆಗ್ತಾ ಇಲ್ವಾ? ರಿಪೇರಿ ಮಾಡಿಸಬೇಕು ಎಂದುಕೊಳ್ಳುತ್ತಿದ್ದೀರಾ? ಹಾಗಾದ್ರೆ ರಿಪೇರಿ ಮಾಡಿಸುವುದಕ್ಕೆ ಎಷ್ಟು ಖರ್ಚಾಗುತ್ತದೆ. ಸುಮ್ಮನೆ ಹೀಗೆ ಯಾವುದೇ ಅಂಗಡಿಯಲ್ಲಿ ಹೋಗಿ ಕೇಳಿದರೆ ತಿರುಪತಿ ನಾಮ ಹಾಕಿಸಿಕೊಳ್ಳೋದು ಗ್ಯಾರೆಂಟಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.

ಬಳಕೆದಾರರು ತಮ್ಮ ಸ್ಯಾಮ್‌ಸಂಗ್ ಫೋನಿನ ರಿಪೇರಿಗೆ ತಗಲುವ ವೆಚ್ಚ್ ತಿಳಿಯುವುದು ಹೇಗೆ

ಹಾಗಾಗಿ ಕಡಿಮೆ ಬೆಲೆಯಲ್ಲಿ ಎಲ್ಲಿ ಸರಿ ಮಾಡಿಸ್ಕೊಳ್ಳೋದು ಅಂತ ಚಿಂತಿಸುತ್ತಿರಬಹುದು. ಕಡಿಮೆ ಬೆಲೆಗೆ ಮಾರುಹೋಗಿ ಫೇಕ್ ವಸ್ತುಗಳಿಂದ ರಿಪೇರಿ ನಡೆಯಬಹುದು. ಹೇಗೆ ಆಲೋಚಿಸಿದರೂ ನಿಮ್ಮ ಫೋನ್ ನ್ನು ಸರಿಯಾಗಿ ರಿಪೇರಿ ಮಾಡಿಸಿಕೊಳ್ಳೋದಕ್ಕೆ ನಿಮಗೆ ಸಾಧ್ಯವಾಗದೇ ಇರಬಹುದು! ಆದರೆ ಇನ್ನು ಮುಂದೆ ಈ ವಿಚಾರಕ್ಕಾಗಿ ಚಿಂತೆ ಮಾಡಬೇಡಿ.

ಲಿಸ್ಟ್ ನಲ್ಲಿ ಏನಿರುತ್ತದೆ?

ಲಿಸ್ಟ್ ನಲ್ಲಿ ಏನಿರುತ್ತದೆ?

ಸೌತ್ ಕೊರಿಯಾದ ಟೆಕ್ ಸಂಸ್ಥೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಗಳ ವಿಭಿನ್ನ ಪಾರ್ಟ್ ಗಳ ಬೆಲೆಯನ್ನು ಲಿಸ್ಟ್ ಮಾಡಿದೆ. ಅದರಲ್ಲಿ ಡಿಸ್ಪ್ಲೆ ಮತ್ತು ಮದರ್ ಬೋರ್ಡ್ ವರೆಗಿನ ಎಲ್ಲಾ ಭಾಗಗಳ ರಿಪೇರಿಗೆ ಎಷ್ಟಾಗುತ್ತದೆ ಎಂಬುದನ್ನು ವೆಬ್ ಸೈಟ್ ನಲ್ಲಿ ನಮೂದಿಸಲಾಗಿದೆ. ಒಮ್ಮೆ ನೀವು ಈ ಪೇಜಿಗೆ ತೆರಳಿದಾಗ ನಿಮ್ಮ ಸ್ಮಾರ್ಟ್ ಫೋನ್ ಸರಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಹ್ಯಾಂಡ್ ಸೆಟ್ ಮಾಡೆಲ್ ನ್ನು ಆಯ್ಕೆ ಮಾಡಬೇಕು.

ಯಾವೆಲ್ಲ ಸರಣಿಗಳ ವಿವರ ಇದೆ:

ಯಾವೆಲ್ಲ ಸರಣಿಗಳ ವಿವರ ಇದೆ:

ಕಂಪೆನಿಯು ಏಳು ಸ್ಮಾರ್ಟ್ ಫೋನ್ ಸರಣಿಯ ಬೆಲೆಯನ್ನು ಪಟ್ಟಿ ಮಾಡಿದೆ. ಗ್ಯಾಲಕ್ಸಿ ಎ, ಗ್ಯಾಲಕ್ಸಿ ಸಿ, ಗ್ಯಾಲಕ್ಸಿ ಜೆ , ಗ್ಯಾಲಕ್ಸಿ ಎಂ, ಗ್ಯಾಲಕ್ಸಿ ನೋಟ್, ಗ್ಯಾಲಕ್ಸಿ ಆನ್ ಮತ್ತು ಗ್ಯಾಲಕ್ಸಿ ಎಸ್.

ಎಷ್ಟು ಖರ್ಚಾಗುತ್ತದೆ?

ಎಷ್ಟು ಖರ್ಚಾಗುತ್ತದೆ?

ನಿಮಗೊಂದು ಅಂದಾಜು ಸಿಗುವುದಕ್ಕಾಗಿ ಹೇಳುತ್ತಿದ್ದೇವೆ ಸ್ಯಾಮ್ ಸಂಗ್ ಪಟ್ಟಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಸ್ಯಾಮ್ ಸಂಗ್ ಎಸ್10+ ಸ್ಮಾರ್ಟ್ ಫೋನಿನ ಡಿಸ್ಪ್ಲೇಗೆ 14,365 ರುಪಾಯಿ ಚಾರ್ಜ್ ಮಾಡುತ್ತದೆ. Rs 20,690 (128GB), Rs 34,182 (512GB, 1TB) ನ್ನು ಮದರ್ ಬೋರ್ಡ್ ಗೆ ಚಾರ್ಜ್ ಮಾಡುತ್ತದೆ. ಬ್ಯಾಟರಿ ಕಿಟ್ ಗೆ Rs 2,139,ಹಿಂಭಾಗದ ಗ್ಲಾಸ್ ಗೆ Rs 4,422 (128GB), Rs 5,884 (512GB) ಮತ್ತು Rs 5,300 (1TB)ನ್ನು ಚಾರ್ಜ್ ಮಾಡಲಾಗುತ್ತದೆ.

ಇದೇ ರೀತಿ ಗ್ಯಾಲಕ್ಸಿ ನೋಟ್ 9 ಗೆ ಸ್ಯಾಮ್ ಸಂಗ್ ಡಿಸ್ಪ್ಲೇಗೆ Rs 13,840, ಮದರ್ ಬೋರ್ಡ್ ಗೆ Rs 21,233 (128GB) ಮತ್ತು Rs 32,192 (512GB), ಬ್ಯಾಟರಿ ಕಿಟ್ ಗೆ Rs 2,291 ಬ್ಯಾಕ್ ಗ್ಲಾಸ್ ಗೆ Rs 4,109.

ಇತರೆ ಖರ್ಚುಗಳು:

ಇತರೆ ಖರ್ಚುಗಳು:

ಬೇರೆಬೇರೆ ಪ್ರೊಡಕ್ಟ್ ಗೆ ಬೇರೆಬೇರೆ ಬೆಲೆಯನ್ನು ನಿಗದಿಗೊಳಿಸಲಾಗಿದ್ದು ವಾರೆಂಟಿ ಜೊತೆಗಾದ್ರೆ ಅದಕ್ಕೂ ಬೇರೆ ಬೆಲೆ ಇರುತ್ತದೆ. ಈ ನಿಯಮಗಳ ಭಾಗವಾಗಿ ಸ್ಯಾಮ್ ಸಂಗ್ ನ ಓಳಾಂಗಣ ನಿಯಮಗಳು ಮತ್ತು ಜಿಎಸ್ ಟಿ, ಕಾರ್ಮಿಕ ಮತ್ತು ಇತರೆ ಖರ್ಚುಗಳ ಹೊರತಾಗಿ ಇರುತ್ತದೆ. ಈ ಪಟ್ಟಿಯಲ್ಲಿರುವ ಬೆಲೆಯು ಪ್ರೀಮಿಯಂ ಕಲರ್ ಮತ್ತು ಗರಿಷ್ಟ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಗಾಗಿ ಇರುತ್ತದೆ ಮತ್ತು ನೈಜ ಬೆಲೆಯನ್ನು ನೀವು ಸೇವಾ ಕೇಂದ್ರದಲ್ಲಿ ವಿಚಾರಿಸಿ ರಿಪೇರಿಯ ಸಂದರ್ಬದಲ್ಲಿ ತಿಳಿದುಕೊಳ್ಳಬಹುದು.

ಗ್ಯಾಲಕ್ಸಿ ಆಪ್ ಸ್ಟೋರ್:

ಇತ್ತೀಚೆಗೆ ಸ್ಯಾಮ್ ಸಂಗ್ ಹೊಸದಾಗಿ ಮೇಕ್ ಇನ್ ಇಂಡಿಯಾ ಆಪ್ ಸ್ಟೋರ್ ನ್ನು ಬಿಡುಗಡೆಗೊಳಿಸಿದೆ.ಅದಕ್ಕೆ ಗ್ಯಾಲಕ್ಸಿ ಆಪ್ಸ್ ಸ್ಟೋರ್ ಎಂದು ಕೂಡ ಕರೆಯಲಾಗಿದೆ. ಹೊಸ ಆಪ್ ಸ್ಟೋರ್ ನಲ್ಲಿ ಬಳಕೆದಾರರಿಗೆ 12 ವಿಭಿನ್ನ ಪ್ರಾದೇಶಿಕ ಭಾಷೆಗಳಲ್ಲಿ ಆಕ್ಸಿಸ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಸೌತ್ ಕೊರಿಯನ್ ಕಂಪೆನಿ ಇಂಡಸ್ ಆಪ್ ಬಜಾರ್ ಜೊತೆಗೆ ಕೈಜೋಡಿಸಿ ಆಪ್ ಸ್ಟೋರ್ ನ್ನು ಪ್ರಕಟಿಸಿದೆ. ಇಂಗ್ಲೀಷ್, ಮಳಯಾಳಂ, ತೆಲುಗು, ತಮಿಳು, ಓಡಿಸ್ಸಾ, ಅಸ್ಸಾಮೀ,ಪಂಜಾಬಿ, ಕನ್ನಡ, ಗುಜರಾತಿ, ಹಿಂದಿ, ಉರ್ದು, ಬೆಂಗಾಳಿ, ಮರಾಠಿ ಭಾಷೆಗಳಿಗೆ ಬೆಂಬಲ ನೀಡುತ್ತದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಆಪ್ ಸ್ಟೋರ್ ಬಳಕೆದಾರರಿಗೆ ಅಪ್ಲಿಕೇಷನ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಿ ಹೋಸ್ಟ್ ಮಾಡಲು ಅವಕಾಶ ನೀಡುತ್ತದೆ. ಸೈನ್ ಇನ್ ನ ಅಗತ್ಯತೆಯೂ ಇರುವುದಿಲ್ಲ. ಇಂಡಿಯನ್ ಇನ್ನೋವೇಷನ್ ಗಳನ್ನು ಹೈಲೆಟ್ ಮಾಡುವುದಕ್ಕೆ ಗ್ಯಾಲಕ್ಸಿ ಆಪ್ ನಲ್ಲಿ ವಿಭಿನ್ನ ಸೆಕ್ಷನ್ ಕೂಡ ಇರುತ್ತದೆ.

Best Mobiles in India

English summary
Samsung users, here's how you can know the repair costs of your smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X