ಪ್ರಪಂಚದ ಸ್ಲಿಮ್ ಫೋನ್‌ಗಳತ್ತ ಒಂದು ನೋಟ

By Shwetha
|

ಫೋನ್ ಕ್ಷೇತ್ರದಲ್ಲಿ ಇಂದು ವೈವಿಧ್ಯಮಯ ಫೋನ್‌ಗಳನ್ನು ನಮಗೆ ಕಾಣಬಹುದಾಗಿದ್ದು ಅತಿ ವೈಶಿಷ್ಟ್ಯತೆಗಳಿಂದ ಕೂಡಿರುವ ಫೋನ್‌ಗಳು ಗ್ರಾಹಕರ ಮನವನ್ನು ಕದಿಯುತ್ತಿದೆ. ಅಂತೆಯೇ ಇಂದಿನ ಲೇಖನದಲ್ಲಿ ನಿಮ್ಮ ಮನಕೆ ಅತ್ಯುನ್ನತ ರಸಗವಳವನ್ನು ನೀಡುವ ತೆಳು ಫೋನ್‌ಗಳ ಪರಿಚಯವನ್ನು ನಾವು ಮಾಡುತ್ತಿದ್ದೇವೆ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಉತ್ತಮ ಬ್ರ್ಯಾಂಡ್‌ಗಳಿಂದ ಕೂಡಿರುವ ಈ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿವೆ. ಬನ್ನಿ ಇಂದಿನ ಲೇಖನದಲ್ಲಿ ಆ ಫೋನ್ ಕುರಿತಾದ ವಿವರಗಳನ್ನು ಅರಿಯೋಣ.

ವಿವೊ X5Max

ವಿವೊ X5Max

4.75 ಎಮ್‌ಎಮ್‌ನ ವಿವೊ X5Max ಜಗತ್ತಿನಲ್ಲೇ ಅತ್ಯಂತ ಸ್ಲಿಮ್ ಫೋನ್ ಎಂದೆನಿಸಿದೆ. ಇದು ಅತಿ ವೇಗವಾದ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಸಿಪಿಯುವನ್ನು ಪಡೆದುಕೊಂಡಿದೆ. 2 ಜಿಬಿ RAM ಇದರಲ್ಲಿದ್ದು, 16 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ. 13-ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಆಗಿದೆ.

ಒಪ್ಪೊ ಆರ್5

ಒಪ್ಪೊ ಆರ್5

5.2 ಇಂಚಿನ 1080p ಅಮೋಲೆಡ್ ಡಿಸ್‌ಪ್ಲೇ ಫೋನ್‌ನಲ್ಲಿದೆ. ವಿವೊ X5Max ನಲ್ಲಿರುವ ಅದೇ ವಿನ್ಯಾಸವನ್ನು ಈ ಫೋನ್‌ನಲ್ಲಿ ನಮಗೆ ಕಾಣಬಹುದಾಗಿದ್ದು ಸ್ವಲ್ಪ ದಪ್ಪವಾಗಿದೆ. 2,000 mAh ಬ್ಯಾಟರಿ ಫೋನ್‌ನಲ್ಲಿದೆ.

ಜಿಯೋನಿ ಇಲೈಫ್ S5.1

ಜಿಯೋನಿ ಇಲೈಫ್ S5.1

ಸ್ಲಿಮ್ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಜಿಯೋನಿ ಇಲೈಫ್ S5.1 ಓಕ್ಟಾ ಕೋರ್ ಪ್ರೊಸೆಸರ್, ಕಡಿಮೆ ರೆಸಲ್ಯೂಶನ್ ಡಿಸ್‌ಪ್ಲೇ, 2 ಜಿಬಿ RAM ಮತ್ತು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಜಿಯೋನಿ ಇಲೈಫ್ ಎಸ್5.5

ಜಿಯೋನಿ ಇಲೈಫ್ ಎಸ್5.5

5.5 ಎಮ್‌ಎಮ್ ಅಳತೆಯನ್ನು ಈ ಫೋನ್ ಪಡೆದುಕೊಂಡಿದ್ದು ಅದ್ಭುತ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. 5 ಇಂಚಿನ 1080p ಅಮೋಲೆಡ್ ಡಿಸ್‌ಪ್ಲೇ ಇದರಲ್ಲಿದ್ದು 2 ಜಿಬಿ RAM ಡಿವೈಸ್‌ನಲ್ಲಿದೆ. ಇನ್ನು ಫೋನ್ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಜಿಯೋನಿ ಇಲೈಫ್ ಎಸ್7

ಜಿಯೋನಿ ಇಲೈಫ್ ಎಸ್7

ಚೀನಾದ ಸ್ಮಾರ್ಟ್‌ಫೋನ್ ಜಿಯೋನಿ ಇಲೈಫ್ ಎಸ್7 5.2 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು, 64 ಬಿಟ್ MediaTek ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು, 16 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದ್ದು 8 ಮೆಗಾಪಿಕ್ಸೆಲ್ ಮುಂಭಾಗದಲ್ಲಿದೆ.

ವಿವೋ ಎಕ್ಸ್3

ವಿವೋ ಎಕ್ಸ್3

5 ಇಂಚಿನ 720 ಸ್ಕ್ರೀನ್ ಡಿವೈಸ್‌ನಲ್ಲಿದ್ದು 1 ಜಿಬಿ RAM ಫೋನ್‌ನಲ್ಲಿದೆ. ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಅನ್ನು ಪಡೆದುಕೊಂಡಿದೆ.

ಹುವಾಯಿ ಅಸೆಂಡ್ ಪಿ6

ಹುವಾಯಿ ಅಸೆಂಡ್ ಪಿ6

4.7 ಇಂಚಿನ 720 x 1280 ಪಿಕ್ಸೆಲ್‌ಗಳನ್ನು ಫೋನ್ ಹೊಂದಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ 4.2.2 ಇದನ್ನು ಕಿಟ್‌ಕ್ಯಾಟ್ 4.4.2 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಕ್ವಾಡ್ ಕೋರ್ 1.5GHZ ಕೋರ್ಟೆಕ್ಸ್ A9 ಫೋನ್‌ನಲ್ಲಿದ್ದು ಎಸ್‌ಡಿ ಕಾರ್ಡ್ ಅನ್ನು ಡಿವೈಸ್ ಪಡೆದುಕೊಂಡಿದೆ. ಹಿಂಬದಿ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

Most Read Articles
Best Mobiles in India

English summary
In this article we can see the worlds slimmest phones. These phones are came from major brands and highlighting major specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X