ಸ್ಮಾರ್ಟ್ ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲ

Posted By: Varun
ಸ್ಮಾರ್ಟ್ ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲ

ಇತ್ತೀಚಿನ ಅಧ್ಯಯನವೊಂದರಪ್ರಕಾರ, 60% ಜನರು ತಮ್ಮ ಸ್ಮಾರ್ಟ್ ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲವಂತೆ.

ಸುಮಾರು 1336 ಜನರ ಮೇಲೆ ಅಧ್ಯಯನ ನಡೆಸಿ, (ಅದರಲ್ಲೂ 80% ಜನ 21-40 ವರ್ಷ) ಅಭ್ಯಸಿಸಿ ಈ ತೀರ್ಮಾನಕ್ಕೆ ಬರಲಾಯಿತಂತೆ.ಬಹುತೇಕ ಜನರು ಫೇಸ್ಬುಕ್, ಟ್ವಿಟರ್, ಗೂಗಲ್ + ಉಪಯೋಗಿಸಲು ಇಲ್ಲವೆ ಹೆಚ್ಚಾಗಿ ಇ-ಮೇಲ್ ನೋಡುವ ಉದ್ದೇಶಗಳಿಗಾಗಿ ತಮ್ಮ ಸ್ಮಾರ್ಟ್ಫೋನ್ ಬಳಸುತ್ತರೆಂದೂ, ಸುಮಾರು 71 % ಜನ, ಫೋನ್ ನಲ್ಲಿ ಇರುವ ಆಟಗಳನ್ನು ಆಡಲು ಮತ್ತು ಇತ್ತೀಚಿನ ಸುದ್ದಿಯನ್ನು ಪರಿಶೀಲಿಸಲು ಸ್ಮಾರ್ಟ್ಫೋನ್ ಬಳಸುತ್ತಾರಂತೆ.

ಮತ್ತೊಂದು ಆಘಾತಕಾರಿ ಪ್ರವೃತ್ತಿ ಬೆಳಕಿಗೆ ಬಂದಿರುವುದು ಏನೆಂದರೆ ಈ ಜನ ವಿವಿಧ ಚಟುವಟಿಕೆಗಳಿಗೋಸ್ಕರ ಒಂದು ದಿನದಲ್ಲಿ ಕನಿಷ್ಠ 13 ಸಾರಿಯಾದರೂ ತಮ್ಮ ಸ್ಮಾರ್ಟ್ಫೋನ್ ಬಳಸುತ್ತಾರಂತೆ.60% ರಷ್ಟು ಜನ ತಾವು ಸ್ನಾನದ ಮಧ್ಯೆ, ಊಟದ ಮಧ್ಯೆ, ಇಲ್ಲವೆ ವಾಹನ ಚಾಲನೆಯ ಸಮಯದಲ್ಲೂ ಬಳಸುವುದನ್ನು ಒಪ್ಪಿಕೊಂಡರು.

ಮೇಲಿನ ಅಂಶಗಳು ಗಾಬರಿ ಹುಟ್ಟಿಸುವುದರ ಜೊತೆಗೆ ತಂತ್ರಜ್ಞಾನಕ್ಕೆ ಎಷ್ಟು ಜೋತುಬಿದ್ದಿದ್ದೇವೆ ಎಂಬುದನ್ನು ನಿರೂಪಿಸುತ್ತವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot