ನೌಕಾಪಡೆಯಲ್ಲಿ ಫೇಸ್‌ಬುಕ್‌, ವಾಟ್ಸ್‌ಆಪ್‌ ಬ್ಯಾನ್‌..! ಸ್ಮಾರ್ಟ್‌ಫೋನ್‌ಗೂ ನಿಷೇಧ..!

By Gizbot Bureau
|

ಇತ್ತೀಚೆಗೆ ನೆರೆ ರಾಷ್ಟ್ರ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿ ರಾಷ್ಟ್ರದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ ನಂತರ, ಭಾರತೀಯ ನೌಕಾಪಡೆ ತನ್ನ ಎಲ್ಲಾ ಆನ್‌ಬೋರ್ಡ್ ಹಡಗುಗಳು ಮತ್ತು ನೌಕಾ ನೆಲೆಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಿ ನಿರ್ದೇಶನ ನೀಡಿದೆ.

ಈಗಿನಿಂದಲೇ ನಿಷೇಧ

ಈಗಿನಿಂದಲೇ ನಿಷೇಧ

"ಈಗಿನಿಂದ ನೌಕಾ ನೆಲೆಗಳು ಮತ್ತು ಹಡಗುಗಳಲ್ಲಿ ಇಲ್ಲಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್ ಮತ್ತು ಇತರ ಮೆಸೆಂಜರ್‌ಗಳನ್ನು ಒಳಗೊಂಡಂತೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗುತ್ತದೆ" ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜೊತೆ ಯಾವುದೇ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಬೋರ್ಡ್ ಹಡಗು ಮತ್ತು ನೌಕಾ ನೆಲೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಏಳು ಸಿಬ್ಬಂದಿ ನೇಮಕ

ಏಳು ಸಿಬ್ಬಂದಿ ನೇಮಕ

ಡಿಸೆಂಬರ್ 20ರಂದು, ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿ ಮತ್ತು ಹವಾಲಾ ಆಪರೇಟರ್‌ನ್ನು ಗುಪ್ತಚರ ಸಂಸ್ಥೆ ಬಂಧಿಸಿತ್ತು.

ಪಾಕಿಸ್ತಾನದ ಏಜೆಂಟರಿಗೆ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ಮತ್ತು ನೌಕೆಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಮುಂಬೈ, ಕಾರವಾರ ಮತ್ತು ವಿಶಾಖಪಟ್ಟಣಂನ ಏಳು ನೌಕಾಪಡೆಯ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಭಾರತದಲ್ಲಿನ ನಿರ್ಣಾಯಕ ಆಸ್ತಿಗಳ ಸುತ್ತ ಇರಿಸಲಾಗಿರುವ ಭದ್ರತಾ ಸಾಧನಗಳಲ್ಲಿನ ದೋಷಗಳನ್ನು ಬಹಿರಂಗಪಡಿಸಿದೆ.

ಪಾಕಿಸ್ತಾನದ ಕುತಂತ್ರ

ಪಾಕಿಸ್ತಾನದ ಕುತಂತ್ರ

"ವಿಶಾಖಪಟ್ಟಣಂನಿಂದ ಮೂವರು, ಕಾರವಾರದಿಂದ ಇಬ್ಬರು ಮತ್ತು ಮುಂಬೈನಿಂದ ಇಬ್ಬರು ನಾವಿಕರನ್ನು ಬಂಧಿಸಲಾಗಿದೆ" ಎಂದು ಗುಪ್ತಚರ ಸಂಸ್ಥೆ ತಿಳಿಸಿದ್ದು, ಇದು ಪಾಕಿಸ್ತಾನ ನಡೆಸುತ್ತಿರುವ ಗೂಢಾಚಾರ್ಯೆ ದಂಧೆಯನ್ನು ತಡೆದಿದೆ. ಚೀನಾ ಮತ್ತು ಪಾಕಿಸ್ತಾನದ ಕಡಲ ಗಡಿಗಳ ಭದ್ರತೆಯ ಜವಾಬ್ದಾರಿಯುತ ಪೂರ್ವ ಮತ್ತು ಪಶ್ಚಿಮ ನೌಕಾ ಕಮಾಂಡ್ ಕೇಂದ್ರಗಳನ್ನು ಪಾಕಿಸ್ತಾನದ ಏಜೆಂಟರಿಗೆ ನೀಡಲಾಗಿತ್ತು ಎಂದು ಏಜೆನ್ಸಿಗಳು ತಿಳಿಸಿವೆ.

ವಿಚಾರಣೆ ಮುಂದುವರಿಕೆ

ವಿಚಾರಣೆ ಮುಂದುವರಿಕೆ

ಇನ್ನು, ಕೆಲವು ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಏಜೆನ್ಸಿ ತಿಳಿಸಿದ್ದು, ಭಾರತೀಯ ನೌಕಾಪಡೆಯ ಪೂರ್ವ ಕಮಾಂಡ್‌ನ ಪ್ರಧಾನ ಕಚೇರಿ ಮತ್ತು ಪರಮಾಣು ಜಲಾಂತರ್ಗಾಮಿ ಅರಿಹಂತ್‌ ಇರುವ ವಿಶಾಖಪಟ್ಟಣಂ ಪಾಕಿಸ್ತಾನದ ಗೂಢಾಚರ್ಯೆ ದಂಧೆಗೆ ಗುರಿಯಾಗಿದೆ ಎಂದು ಏಜೆನ್ಸಿ ಸೂಚಿಸಿವೆ. ಈಸ್ಟರ್ನ್ ಕಮಾಂಡ್ ಅನುಮಾನಾಸ್ಪದ ಚೀನಾ ಹಡಗಿನ ಚಲನೆಯನ್ನು ಗಮನದಲ್ಲಿರಿಸಿಕೊಳ್ಳುತ್ತದೆ ಎಂದು ಹೇಳಿದೆ.

ಭದ್ರತಾ ಉಲ್ಲಂಘನೆಯಿಲ್ಲ

ಭದ್ರತಾ ಉಲ್ಲಂಘನೆಯಿಲ್ಲ

ನೌಕಾಪಡೆಯ ಪಶ್ಚಿಮ ಕಮಾಂಡ್‌ ಮುಂಬೈನಲ್ಲಿದೆ, ಅಲ್ಲಿಂದ ಪಾಕಿಸ್ತಾನ ನಡೆಸಿದ ಎಲ್ಲಾ ದುಷ್ಕೃತ್ಯಗಳನ್ನು ಬಹಿರಂಗಪಡಿಸಲಾಗಿದ್ದು, ಮತ್ತು ಏಕೈಕ ವಿಮಾನವಾಹಕ ನೌಕೆ ವಿಕ್ರಮಾದಿತ್ಯ ಹೊಂದಿರುವ ನೌಕಾ ಕೇಂದ್ರ ಕಾರವಾರದಲ್ಲೂ ಕೂಡ ಗೂಢಾಚರ್ಯೆ ದಂಧೆ ನಡೆದಿದೆ. ಆದಾಗ್ಯೂ, ಭಾರತೀಯ ನೌಕಾಪಡೆಯು ಯಾವುದೇ ಭದ್ರತಾ ಉಲ್ಲಂಘನೆಯಿಲ್ಲ ಎಂದಿದೆ.

ಡಾಲ್ಫಿನ್ಸ್‌ ನೋಸ್‌

ಡಾಲ್ಫಿನ್ಸ್‌ ನೋಸ್‌

"ನೌಕಾ ಗುಪ್ತಚರ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, ಆಂಧ್ರಪ್ರದೇಶ ಪೊಲೀಸರು ಕೆಲವು ಕಿರಿಯ ನೌಕಾಪಡೆಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಆಂಧ್ರಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದು ನೌಕಾಪಡೆ ಹೇಳಿದೆ. ಈ ಮಧ್ಯೆ, ಆಂಧ್ರಪ್ರದೇಶದ ಪೊಲೀಸ್ ಗುಪ್ತಚರ ವಿಭಾಗವು ಕೇಂದ್ರ ಗುಪ್ತಚರ ಸಂಸ್ಥೆ ಮತ್ತು ನೌಕಾ ಗುಪ್ತಚರ ಸಹಯೋಗದೊಂದಿಗೆ 'ಡಾಲ್ಫಿನ್ಸ್ ನೋಸ್' ಎಂಬ ಕಾರ್ಯಾಚರಣೆಯಡಿಯಲ್ಲಿ ಈ ದಂಧೆಯನ್ನು ಭೇದಿಸಿದೆ.

ಪಾಕಿಸ್ತಾನಿ ಮಹಿಳೆಯರೊಂದಿಗೆ ಸಂಪರ್ಕ

ಪಾಕಿಸ್ತಾನಿ ಮಹಿಳೆಯರೊಂದಿಗೆ ಸಂಪರ್ಕ

ಆರೋಪಿಗಳನ್ನು ಡಿಸೆಂಬರ್ 20 ರಂದು ವಿಜಯವಾಡದ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಜನವರಿ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧಿತ ಅಧಿಕಾರಿಗಳೆಲ್ಲರೂ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನಿ ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಹನಿಟ್ರ್ಯಾಪ್‌

ಹನಿಟ್ರ್ಯಾಪ್‌

ಮಾಹಿತಿ ನೀಡಲು ಅಧಿಕಾರಿಗಳಿಗೆ ಹವಾಲಾ ಆಪರೇಟರ್ ಮೂಲಕ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನಿಗಳು ಹಾಗೂ ನಾವಿಕರ ನಡುವಿನ ಚಾಟ್‌ಗಳು ಅಶ್ಲೀಲವಾಗಿವೆ ಎಂದು ಹೇಳಲಾಗಿದ್ದು, ಫೇಸ್‌ಬುಕ್‌ನಲ್ಲಿ ಮಹಿಳೆಯರು ಹನಿಟ್ರಾಪ್‌ ಮೂಲಕ ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರನ್ನು ಸ್ಥಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Most Read Articles
Best Mobiles in India

English summary
Smartphones, Social Media Banned On Indian Navy After Espionage Racket

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X