ನೋಕಿಯಾ 8 ಬೋತಿ ಫೋಟೋ:
ಸ್ಮಾರ್ಟ್ ಫೋನ್ ಲೋಕದಲ್ಲಿಯೇ ಅತೀ ಜನಪ್ರಿಯತೆಯನ್ನು ಪಡೆದುಕೊಂಡ ಫೀಚರ್ ಎಂದರೆ ನೋಕಿಯಾ 8 ನಲ್ಲಿ ಕಾಣಿಸಿಕೊಂಡಿದ್ದ ಬೋತಿ ಫೋಟೋ ಕ್ಲಿಕ್ ಮಾಡುವ ಆಯ್ಕೆ. ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂದಾಗದಲ್ಲಿ ಸೆಲ್ಪಿ ಕ್ಯಾಮೆರಾ ಸಹ ಉತ್ತಮವಾಗಿದ್ದು ಎರಡರಲ್ಲೂ ಒಂದೇ ಸಮಯದಲ್ಲಿ ಫೋಟೋ ತೆಗೆಯುವ ಅವಕಾಶವನ್ನು ಮಾಡಿಕೊಡಲಾಗಿತ್ತು.
ಆಪಲ್ ಐಫೋನ್ X ಅನಿಮೋಜಿ:
ಎಮೋಜಿಗಳಿಗೆ ಬದಲಾಗಿ ನಮ್ಮದೇ ಹಾವ ಭಾವವನ್ನು ಆಪಲ್ ಐಫೋನ್ X ನಲ್ಲಿ ರೆಕಾರ್ಡ್ ಮಾಡಿಕೊಂಡು ನಮ್ಮದೇ ಅನಿಮೋಜಿಗಳನ್ನು ಕ್ರಿಯೇಟ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದು ಸಹ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.
LG K7i- ಸೊಳ್ಳೆ ಓಡಿಸುವ ತಂತ್ರಜ್ಞಾನ:
ವಿಶ್ವದ ಮೊದಲ ಸೊಳ್ಳೆ ಓಡಿಸುವ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು LG K7i. ಈ ಸ್ಮಾರ್ಟ್ ಫೋನ್ ನೊಂದಿಗೆ ಕಾಣಿಸಿಕೊಂಡಿದ್ದ ಬ್ಯಾಕ್ ಪ್ಯಾನಲ್ ನಲ್ಲಿ ಸೊಳ್ಳೆ ಓಡಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು. ಇದು ಸೊಳ್ಳೆಗಳನ್ನು ದೂರ ಮಾಡುತ್ತಿತ್ತು.
ಮೊಟೊ X4- ಪ್ರೋಜೆಟ್ Fi:
ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿದ್ದ ಮೊಟೊ X4 ಸ್ಮಾರ್ಟ್ ಫೋನ್ ನಲ್ಲಿ ಪ್ರಾಜೆಕ್ಟ್ ಫೈ ಎನ್ನುವ ಹೊಸ ವರ್ಚುವಲ್ ಮೊಬೈಲ್ ನೆಟ್ ವರ್ಕ್ ಅನ್ನು ನೀಡಲಾಗಿದ್ದು, ಇದನ್ನು ಗೂಗಲ್ ಪರಿಚಯ ಮಾಡಿತ್ತು. ಇದು ನಿಮ್ಮ ಫೋನಿನ ಡೇಟಾವನ್ನು ಉಳಿಸುವಂತಹ ಕಾರ್ಯವನ್ನು ಮಾಡುತ್ತಿತ್ತು. ಇದರಿಂದ ಕಾಲ್ ಡ್ರಾಪ್ ಸಮಸ್ಯೆ ಪರಿಹಾರವಾಗಿತ್ತು.
ಭಾರತದಲ್ಲಿ ಸ್ಮಾರ್ಟ್ಫೋನ್ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!
ರೆಜರ್ ಫೋನ್- 120Hz ರಿಫ್ರೆಷ್ ರೆಟ್:
ಗೇಮಿಂಗ್ ಗಾಗಿಯೇ ಬಿಡುಗಡೆಗೊಂಡ ರೆಜರ್ ಫೋನಿನಲ್ಲಿ QHD ಗುಣಮಟ್ಟದ 5.72 ಇಂಚಿನ LCD ಟಿವಿಯನ್ನು ಅಳವಡಿಸಲಾಗಿದ್ದು, ಇದು ಒಂದು ಸೆಂಕೆಡ್ ನಲ್ಲಿ 120 ಇಮೇಜ್ ಗಳನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿತ್ತು. ಇದು ಹೈ ಎಂಡ್ ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದಂತೆ ಇತ್ತು.