Subscribe to Gizbot

5,499ಕ್ಕೆ HD ಡಿಸ್‌ಪ್ಲೇ, 2GB RAM, 8MP ಕ್ಯಾಮೆರಾ ಇರುವ 4G ಸ್ಮಾರ್ಟ್‌ಪೋನ್‌

Written By:

ಸದ್ಯ ಭಾರತೀಯ ಮಾರಕಟ್ಟೆಯಲ್ಲಿ 4G ಸಪೋರ್ಟ್‌ ಮಾಡುವ ಸ್ಮಾರ್ಟ್‌ಪೋನುಗಳ ಹಾವಳಿ ಹೆಚ್ಚಾಗಿದ್ದು, ಇದೇ ಹಾದಿಯಲ್ಲಿ ಎಂಟ್ರಿ ಬೆಲೆಯ ಸ್ಮಾರ್ಟ್‌ಪೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳನ್ನು ಉತ್ಪಾದನೆ ಮಾಡುತ್ತಿರುವ ಸ್ವೈಪ್ ಎಲೈಟ್-3 ಎನ್ನುವ ಪೋನ್‌ವೊಂದನ್ನು ಬಿಡುಗಡೆ ಮಾಡಿದೆ.

5,499ಕ್ಕೆ HD ಡಿಸ್‌ಪ್ಲೇ, 2GB RAM, 8MP ಕ್ಯಾಮೆರಾ ಇರುವ 4G ಸ್ಮಾರ್ಟ್‌ಪೋನ್‌

ಓದಿರಿ: ವಾಟ್ಸ್‌ಆಪ್ ಹೊಸ ಆಪ್‌ಡೇಟ್‌ ಕದ್ದ ಮಾಲು..!

5,499ಕ್ಕೆ 5 ಇಂಚಿನ ಡಿಸ್‌ಪ್ಲೇ ಹೊಂದಿರುವ 4G VoLTE ಸಪೋರ್ಟ್ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿರುವ ಸ್ವೈಪ್ ಎಲೈಟ್-3 ಸದ್ಯ ಹಾಟ್‌ಟ್ರೇಂಟ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ ಡಿಸ್‌ಪ್ಲೇ:

5 ಇಂಚಿನ ಡಿಸ್‌ಪ್ಲೇ:

ಸ್ವೈಪ್ ಎಲೈಟ್-3 ಸ್ಮಾರ್ಟ್‌ಪೋನು ಕಡಿಮೆ ಬೆಲೆಯದಾದರು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 720x1280 p ರೆಸ್ಯೂಲೆಷನ್ ಗುಣಮಟ್ಟದ IPS ಡಿಸ್‌ಪ್ಲೇ ಇದಾಗಿದೆ. ಡ್ಯುಯಲ್ ಸಿಮ್ ಹಾಕಬಹುದಾಗಿದೆ.

1.3GHz ಪ್ರೋಸೆಸರ್:

1.3GHz ಪ್ರೋಸೆಸರ್:

ಎಲೈಟ್-3 ಸ್ಮಾರ್ಟ್‌ಪೋನಿನಲ್ಲಿ 1.3GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ SC9832 ಪ್ರೋಸೆಸರ್ ಅಳವಡಿಸಲಾಗಿದ್ದು, 2GB RAM ನೊಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, ಮೆಮೊರಿ ಕಾರ್ಡ್‌ ಹಾಕುವ ಮೂಲಕ 32GBವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

8 MP ಕ್ಯಾಮೆರಾ:

8 MP ಕ್ಯಾಮೆರಾ:

ಎಲೈಟ್-3 ಸ್ಮಾರ್ಟ್‌ಪೋನ್ 8 MP ಕ್ಯಾಮೆರಾವನ್ನು ಹೊಂದಿದ್ದು, ಇದರೊಂದಿಗೆ LED ಫ್ಲಾಷ್‌ ಲೈಟ್‌ ಇದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 2500mAh ಅಳವಡಿಸಲಾಗಿದೆ.

4G VoLTE ಸಪೋರ್ಟ್:

4G VoLTE ಸಪೋರ್ಟ್:

ಎಲೈಟ್-3 ಸ್ಮಾರ್ಟ್‌ಪೋನ್ 4G VoLTE ಸಪೋರ್ಟ್ ಮಾಡಲಿದೆ. Wi-Fi, 3.5mm ಆಡಿಯೋ ಜಾಕ್, GPS, Bluetooth ಮತ್ತು FM radio ಈ ಪೋನಿನಲ್ಲಿದೆ. ಅಲ್ಲದೇ ಭಾರತದಲ್ಲಿರುವ 13 ಭಾಷೆಗಳಲ್ಲಿ ಈ ಪೋನ್ ಸಪೋರ್ಟ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Swipe Technologies has launched the successor to its budget smartphone - the Swipe Elite 3 - with 4G VoLTE support at Rs. 5,499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot