Subscribe to Gizbot

ವಾಟ್ಸ್‌ಆಪ್ ಹೊಸ ಆಪ್‌ಡೇಟ್‌ ಕದ್ದ ಮಾಲು..!

Written By:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೆಸೆಂಜಿಗ್ ಆಪ್‌ಗಳಲ್ಲಿ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಆತ್ಯಂತ ಜನಪ್ರಿಯವಾಗಿದ್ದು, ಈ ಕಾರಣದಿಂದ ವಾಟ್ಸ್‌ಆಪ್‌ ಬಳಕೆದಾರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದ್ದು, ಆದರೆ ಈ ನಿಟ್ಟಿನಲ್ಲಿ ವಾಟ್ಸ್‌ಆಪ್‌ ಇತರೆ ಆಪ್‌ಗಳ ಫಿಚರ್ ಅನ್ನು ಕದ್ದಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

ವಾಟ್ಸ್‌ಆಪ್ ಹೊಸ ಆಪ್‌ಡೇಟ್‌ ಕದ್ದ ಮಾಲು..!

ಓದಿರಿ: 10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ಸದ್ಯ ವಾಟ್ಸ್‌ಆಪ್ ಬಿಡುಗಡೆ ಮಾಡಿರುವ ಸ್ಟೆಟಸ್‌ ಆಪ್‌ಡೇಟ್ ಮಾಡುವ ಫೀಚರ್ ಕುರಿತು ಇಂದು ಚರ್ಚೆಗಳು ಆರಂಭವಾಗಿದ್ದು, ಬಹು ದಿನಗಳಿಂದ ಈ ಆಯ್ಕೆಯನ್ನು ತನ್ನ ಬಳಕೆದಾರಿಗೆ ನೀಡಲು ಬಯಸಿದ್ಧ ವಾಟ್ಸ್‌ಆಪ್, ಇಮೇಜ್, ಜಿಫ್ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಸ್ಟೇಟಸ್ ಆಪ್‌ಡೇಟ್ ಮಾಡುವ ಹೊಸ ಆಯ್ಕೆಯೊಂದನ್ನು ತನ್ನ ಬಳಕೆದಾರರಿಗೆ ನೀಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನಾಪ್‌ ಚಾಟ್‌ ನಿಂದ ಕದ್ದಿದ್ದು..!

ಸ್ನಾಪ್‌ ಚಾಟ್‌ ನಿಂದ ಕದ್ದಿದ್ದು..!

ಸದ್ಯ ವಾಟ್ಸ್‌ಆಪ್ ನೀಡಿರುವ ಆಪ್‌ಡೇಟ್‌ ನಲ್ಲಿರುವ ಸ್ಟೇಟಸ್ ಆಪ್‌ಡೇಟ್, ಮತ್ತೊಂದು ಜನಪ್ರಿಯ ಆಪ್ ಆಗಿರುವ ಸ್ನಾಪ್‌ಚಾಟ್‌ನಿಂದ ಕದ್ದಿದ್ದು ಎನ್ನಲಾಗಿದೆ. ಸದ್ಯ ವಾಟ್ಸ್‌ಆಪ್ ನೀಡಿರುವ ಆಯ್ಕೆಗಳು ಈ ಹಿಂದೆ ಸ್ನಾಪ್‌ಚಾಟ್‌ನಲ್ಲಿ 'ಸ್ಟೋರಿಸ್‌' ಎಂದು ಕರೆಯಲಾಗಿತ್ತು. ಅದು ಸಾಕಷ್ಟು ಜನಪ್ರಿಯತೆಯನ್ನು ಕಾಯ್ದು ಕೊಂಡಿತ್ತು. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಅದನ್ನು ಕಾಪಿ ಮಾಡಿದೆ ಎನ್ನುವ ವಾದ ಜೋರಾಗಿದೆ.

ಎಮೋಜಿ, ಇಮೇಜ ಬಳಸಬಹುದು..!

ಎಮೋಜಿ, ಇಮೇಜ ಬಳಸಬಹುದು..!

ಸದ್ಯ ಸ್ಟೇಟಸ್ ಆಪ್‌ಡೇಟ್‌ನಲ್ಲಿ ಕ್ಯಾಮೆರಾ ಆಪ್ ಬಳಸಿಕೊಂಡು ಬಳಕೆದಾರರು ಪೋಟೋ ತೆಗೆಯಬಹುದು, ವಿಡಿಯೋ ಮಾಡಬಹುದು, ಅಲ್ಲದೇ ಆದರ ಮೇಲೆ ಟೆಕ್ಸ್ಟ್ ಮತ್ತು ಎಮೋಜಿಗಳಿಂದ ಬರೆಯಬಹುದಾಗಿದೆ, ಅಲ್ಲದೇ ಇದು 24 ಗಂಟೆಗಳ ನಂತರದಲ್ಲಿ ಅಳಿಸಿ ಹೋಗಲಿದೆ. ಈ ಎಲ್ಲಾ ಫಿಚರ್ ಗಳು ಸ್ನಾಪ್‌ಚಾಟ್‌ನಲ್ಲಿ 'ಸ್ಟೋರಿಸ್‌' ನಲ್ಲಿ ಇರುವುದು.

ವಾಟ್ಸ್‌ಆಪ್‌ ಮಾತ್ರವಲ್ಲ, ಕದ್ದವರು ಇನ್ನು ಇದ್ದಾರೆ..!

ವಾಟ್ಸ್‌ಆಪ್‌ ಮಾತ್ರವಲ್ಲ, ಕದ್ದವರು ಇನ್ನು ಇದ್ದಾರೆ..!

ಫೇಸ್‌ಬುಕ್‌ ಒಡೆತನಕ್ಕೆ ಸೇರಿದ ವಾಟ್ಸ್‌ಆಪ್‌ ಮಾತ್ರವೇ ಸ್ನಾಪ್‌ಚಾಟ್‌ 'ಸ್ಟೋರಿಸ್‌'ನ ಕದ್ದಿಲ್ಲ, ಈ ಹಿಂದೇ ಇದೇ ಆಯ್ಕೆಯನ್ನು ಫೇಸ್‌ಬುಕ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅಳವಡಿಸಿತ್ತು, ನಂತರ ಮೆಸೆಂಜರ್‌ನಲ್ಲೂ ಇದೇ ಆಯ್ಕೆಗಳನ್ನು ನೀಡಿತ್ತು, ಈಗ ಅದನ್ನೇ ವಾಟ್ಸ್‌ಆಪ್‌ಗೆ ವರ್ಗಾಹಿಸಿದೆ. ಒಟ್ಟಿನಲ್ಲಿ ಸ್ನಾಪ್‌ಚಾಟ್‌ನಲ್ಲಿ 'ಸ್ಟೋರಿಸ್‌' ಫೇಸ್‌ಬುಕ್ ಮಾಲೀಕತ್ವದ ಎಲ್ಲಾ ಆಪ್‌ಗಳಲ್ಲಿಯೂ ಬೇರೆ ಬೇರೆ ಹೆಸರಿನಲ್ಲಿ ಕಾಪಿ ಮಾಡಲಾಗಿದೆ.

ಸ್ಟೇಟಸ್ ಆಪ್‌ಡೇಟ್‌..!

ಸ್ಟೇಟಸ್ ಆಪ್‌ಡೇಟ್‌..!

ಸದ್ಯ ವಾಟ್ಸ್‌ಆಪ್ ನೀಡಿರುವ ಸ್ಟೇಟಸ್ ಆಪ್‌ಡೇಟ್‌ ಆಯ್ಕೆಯೂ ಆಂಡ್ರಾಯ್ಡ್, ಐಎಸ್ಓ ಮತ್ತು ವಿಂಡೋಸ್‌ ಬಳಕೆದಾರಿಗೆ ಮುಕ್ತವಾಗಿದ್ದು, ಸುಮಾರು ಬಿಲಿಯನ್‌ ಸಂಖ್ಯೆಯಲ್ಲಿರುವ ವಾಟ್ಸ್ಆಪ್‌ ಬಳಕೆದಾರಿಗೆ ಈ ಆಯ್ಕೆಯೂ ದೊರೆಯಲಿದೆ.

ಓದಿರಿ: ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
When a rival app-maker comes up with a popular feature the easiest response is to copy it. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot