Subscribe to Gizbot

ಬಜೆಟ್ ಬೆಲೆಯ ಸ್ವೈಪ್ ವರ್ಚ್ಯು ಫೋನ್ ರಿವ್ಯೂ

Written By:

ಬಜೆಟ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಸ್ವೈಪ್ ಕಂಪೆನಿ ತನ್ನ ವರ್ಚ್ಯು ಫೋನ್ ಅನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಗೆ ತನ್ನ ಅತ್ಯುನ್ನತ ಫೋನ್‌ಗಳನ್ನು ಸರಬರಾಜು ಮಾಡುವ ಸ್ವೈಪ್ ಕಂಪೆನಿ ರೂ 5,999 ಕ್ಕೆ ಬಿಡುಗಡೆ ಮಾಡಿದೆ. ಫೋನ್ ಸಾಮಾನ್ಯ ನಗರೀಕರ ಫೋನ್ ಹೊಂದಬೇಕೆಂಬ ಆಸೆಯನ್ನು ಪೂರೈಸುವಂತಿದ್ದು ಅದಕ್ಕೆ ತಕ್ಕಂತೆ ಫೀಚರ್‌ಗಳನ್ನು ಒಳಗೊಂಡಿದೆ.

ಡಿವೈಸ್ 5.00 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 720x1280 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. 1.3GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 2ಜಿಬಿ RAM ಅನ್ನು ಫೋನ್ ಹೊಂದಿದೆ. 16 ಜಿಬಿ ಸಂಗ್ರಹಣಾ ಸಾಮರ್ಥ್ಯ ಅಂತೆಯೇ 32 ಜಿಬಿ ವಿಸ್ತರಣಾ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದೆ. ಫೋನ್ ಹಿಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಆಂಡ್ರಾಯ್ಡ್ 5.1 ಓಎಸ್ ಅನ್ನು ಫೋನ್ ಪಡೆದುಕೊಂಡಿದ್ದು 2500mAh ರಿಮೂವೇಬಲ್ ಬ್ಯಾಟರಿಯನ್ನು ಡಿವೈಸ್ ಪಡೆದುಕೊಂಡಿದೆ. ಈ ಫೋನ್ ಕುರಿತ ಸವಿವರವಾದ ರಿವ್ಯೂವನ್ನು ಕೆಳಗಿನ ವೀಡಿಯೊದಲ್ಲಿ ನಾವು ನೀಡಿದ್ದೇವೆ.

English summary
Here we are giving you tremendous review on swipe virtue which was launched price of RS 5,999. Android smartphone swipe virtue is best suitable for common man who wants more specification in his device and less work to do..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot