Subscribe to Gizbot

ಬಿದ್ದರೂ ಒಡೆಯದ ಟ್ಯೂರಿಂಗ್ ಫೋನ್ ವಿಶೇಷತೆ

Written By:

ಆಧುನಿಕ ತಂತ್ರಜ್ಞಾನದ ಮೋಡಿಗೆ ನಿಜವಾಗಲೂ ನಾವು ತಲೆಬಾಗಲೇ ಬೇಕು. ದಿನದಿಂದ ದಿನಕ್ಕೆ ಬಳಕೆದಾರರನ್ನು ಅಚ್ಚರಿಯ ಕೂಪಕ್ಕೆ ತಳ್ಳುತ್ತಿರುವ ವಿಸ್ಮಯ ಲೋಕ ಇದಾಗಿದೆ. ಒಂದಿಲ್ಲೊಂದು ಅದ್ಭುತಗಳ ಮೂಲಕ ನಮ್ಮನ್ನು ಸಮೀಪಿಸುತ್ತಿರುವ ಈ ಜಗತ್ತನ್ನು ನಾವು ಹೆಚ್ಚು ಮೆಚ್ಚಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ: ಫೋನ್ ಅಪ್‌ಡೇಟ್ ಏಕೆ ಮುಖ್ಯ? ಇಲ್ಲಿದೆ ಕಾರಣ

ಇದಕ್ಕೆ ಕಾರಣ ಇಂದಿನ ಲೇಖನದಲ್ಲಿ ನಾವು ವಿಶೇಷವಾಗಿ ನಿಮ್ಮ ಮುಂದೆ ತೆರೆದಿಡುತ್ತಿರುವ ಟ್ಯೂರಿಂಗ್ ಫೋನ್ ರೊಬೋಟಿಕ್ ಕಂಪೆನಿಯ ನಿರ್ಮಾಣವಾಗಿದೆ. ಅತ್ಯುತ್ತಮ ಫೀಚರ್‌ಗಳನ್ನೊಳಗೊಂಡು ಬಂದಿರುವ ಈ ಫೋನ್‌ನ ಭವ್ಯತೆಗೆ ಯಾರು ಕೂಡ ಮೆಚ್ಚಲೇಬೇಕು. ಆಧುನಿಕ ಭದ್ರತಾ ವ್ಯವಸ್ಥೆಯೊಂದಿಗೆ ಬಂದಿರುವ ಈ ಡಿವೈಸ್ ಸುಭದ್ರ ಡಿವೈಸ್ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

ಸುಂದರವಾದ ಆಕಾರ, ವಿನ್ಯಾಸ ಮತ್ತು ಮೋಹಕತೆಯೊಂದಿಗೆ ಈ ಫೋನ್ ಬಂದಿದ್ದು ಖರೀದಿಸುವ ಉತ್ಸಾಹವನ್ನು ಇದು ನಿಮ್ಮಲ್ಲಿ ಉಂಟುಮಾಡುವುದು ಖಂಡಿತ. ಹಾಗಿದ್ದರೆ ಈ ಫೋನ್ ಕುರಿತ ಇನ್ನಷ್ಟು ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ
  

5.5 ಇಂಚಿನ ಸ್ಮಾರ್ಟ್‌ಫೋನ್ ಇದಾಗಿದ್ದು, ಆಂಡ್ರಾಯ್ಡ್ 5.1 ಇದರಲ್ಲಿ ಚಾಲನೆಯಾಗುತ್ತಿದೆ. ಶಾರ್ಪ್ ಕರ್ವ್, ಬಹು ಬಣ್ಣ ಶೇಲ್‌ಗಳನ್ನು ಇದು ಹೊಂದಿದೆ. ಹಿಂಭಾಗದಲ್ಲಿ ಪ್ಯಾಟ್ರನ್ ಅನ್ನು ಇದು ಹೊಂದಿದ್ದು, ಸೊಗಸಾದ ನೋಟವನ್ನು ಇದು ಪಡೆದುಕೊಂಡಿದೆ.

ನ್ಯಾನೊ ಕೋಟಿಂಗ್
  

ಡಿವೈಸ್ ನ್ಯಾನೊ ಕೋಟಿಂಗ್ ಅನ್ನು ಸ್ಮಾರ್ಟ್‌ಫೋನ್ ಪಡೆದುಕೊಂಡಿದ್ದು, 3 ಜಿಬಿ RAM ಇದರಲ್ಲಿದೆ.

ಸಂಗ್ರಹಣಾ ಸಾಮರ್ಥ್ಯ
  

ಡಿವೈಸ್ 16 ಜಿಬಿ, 64 ಜಿಬಿ ಮತ್ತು 128 ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬಂದಿದೆ.

ಕ್ಯಾಮೆರಾ ವಿಶೇಷತೆ
  

ಫೋನ್ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಇತರ ವೈಶಿಷ್ಟ್ಯ
  

ಫೋನ್ ಯುಎಸ್‌ಬಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿಲ್ಲ. ಮ್ಯಾಕ್‌ಬುಕ್‌ನ ಮೆಗ್‌ಸೆಫ್‌ನಂತೆ ಇದು ಕಂಡುಬರುತ್ತಿದ್ದು ಬ್ಲ್ಯೂಟೂತ್ ಇದರಲ್ಲಿದೆ.

ಮೂರು ಮಾಡೆಲ್‌ಗಳು
  

ಫೋನ್ ಮೂರು ಮಾಡೆಲ್‌ಗಳಲ್ಲಿ ಬಂದಿದ್ದು ಪಾರೊ, ಕಾರ್ಡಿನಲ್, ಬ್ಯುಲ್ಫ್ ಆಗಿದೆ.

ಫೋನ್ ನೋಟ ಇನ್ನಷ್ಟು ಚಿತ್ರಗಳಲ್ಲಿ
  

ಫೋನ್‌ನ ಅದ್ಭುತ ನೋಟವನ್ನು ಈ ಚಿತ್ರದಲ್ಲಿ ಕಾಣಬಹುದು.

ಜಗತ್ತೇ ಬದಲಾಗಿದೆ
  

ಈ ಅದ್ಭುತ ಫೋನ್ ಜಗತ್ತನ್ನೇ ಬದಲಾಯಿಸುವುದು ಖಂಡಿತ.

ಜಲನಿರೋಧಕ ಫೋನ್
  

ಫೋನ್ ಜಲನಿರೋಧಕ ವಿಶೇಷತೆಯನ್ನು ಪಡೆದುಕೊಂಡಿದ್ದು, ಕಮಾಲಿನ ಡಿವೈಸ್ ಇದಾಗಿದೆ.

ಸೂಪರ್ ಫೋನ್
  

ನಿಜಕ್ಕೂ ಈ ಫೋನ್ ಅತ್ಯುನ್ನತ ವಿಶೇಷತೆಯನ್ನೊಳಗೊಂಡು ಸೂಪರ್ ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Turing Phone is a 5.5-inch smartphone, running Android 5.1, but it’s like nothing you’ve seen before. It has a sharply curved, multi-colored shell, and a patterned back, borrowed from spaceship designs and the result of “thousands, literally thousands” of sketches.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot