ಗೂಗಲ್ ತನ್ನ ನೂತನ ಆಂಡ್ರಾಯ್ಡ್ ಆವೃತ್ತಿ ಆಂಡ್ರಾಯ್ಡ್ 8.0 'ಆಂಡ್ರಾಯ್ಡ್ ಓರಿಯೋ' ಬಿಡುಗಡೆ ಮಾಡಿದ್ದು, ಎಲ್ಲಾ ಮೊಬೈಲ್ ತಯಾರಿಕಾ ಕಂಪೆನಿಗಳು ಕೂಡ 'ಆಂಡ್ರಾಯ್ಡ್ ಓರಿಯೋ' ಅನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ತರಲು ಪ್ರಯತ್ನಿಸುತ್ತಿವೆ.! ಗ್ರಾಹಕರ ಆಯ್ಕೆಗೆ ಅಪ್‌ಡೇಟ್ ಆಗಬೇಕಿರುವುದು ಮೊಬೈಲ್ ಕಂಪೆನಿಗಳ ಕರ್ತವ್ಯ ಕೂಡ ಆಗಿದೆ.!!
ಹಾಗಾಗಿ, ಲೆನೊವೊ ಒಡೆತನದ ಮೋಟೋ ಕಂಪೆನಿ ತನ್ನ ಗ್ರಾಹಕರಿಗೆ 'ಆಂಡ್ರಾಯ್ಡ್ ಓರಿಯೋ' ಅಪ್‌ಡೇಟ್ ಆಗುವ ಸ್ಮಾರ್ಟ್‌ಪೋನ್‌ಗಳು ಯಾವುವು ಎಂಬ ಪಟ್ಟಿಯನ್ನು ನೀಡಿದ್ದು, ಹಾಗಾದರೆ ಯಾವ ಯಾವ ಮೋಟೋ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ. ಯಾವ ಮೊಟೊ ಫೋನ್‌ಗಳು ಅಪ್‌ಡೇಟ್ ಆಗುವುದಿಲ್ಲ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!
12 ಮೋಟೋ ಫೋನ್‌ಗಳಿಗೆ ಅಪ್‌ಡೇಟ್!!
ಮೋಟೋ ತನ್ನ ಬಹುತೇಕ ಕಂಪೆನಿಗಳಿಗೆ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ತರುತ್ತಿದೆ.! ಮೋಟೋ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನ್ಲಲ್ಲಿ ಹೇಳಿರುವಂತೆ ಮೋಟೋದ 12 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆಯಲಿವೆ.!!
ಅಪ್‌ಡೇಟ್ ಪಡೆಯುವ 12ಅಪ್‌ಡೇಟ್ ಫೋನ್!!
ಮೋಟೋ ಝಡ್, ಮೋಟೋ ಝಡ್ ಡ್ರಾಯಿಡ್, ಮೋಟೋ ಝಡ್ ಫೋರ್ಸ್ ಡ್ರಾಯಿಡ್, ಮೋಟೋ ಝಡ್ ಪ್ಲೇ, ಮೋಟೋ ಝಡ್ ಪ್ಲೇ , ಮೋಟೋ ಝಡ್ 2 ಪ್ಲೇ, ಮೋಟೋ ಝಡ್ 2 ಫೋರ್ಸ್ ಆವೃತ್ತಿ, ಮೋಟೋ ಎಕ್ಸ್ 4, ಮೋಟೋ ಜಿ 5, ಮೋಟೋ ಜಿ 5 ಪ್ಲಸ್, ಮೋಟೋ ಜಿ 5 ಎಸ್, ಮೋಟೋ ಜಿ 5 ಎಸ್ ಪ್ಲಸ್.
ಅಪ್‌ಡೇಟ್ ಆಗದಿರುವ ಅಪ್‌ಡೇಟ್ ಫೋನ್‌ಗಳು?
ಮೋಟೋ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಓರಿಯೋಗೆ ಅಪ್‌ಡೇಟ್ ಆಗುವ ಫೋನ್‌ಗಳ ಲಿಸ್ಟ್ ಇದೆ. ಹಾಗಾಗಿ, ಇದರರ್ಥ ಮೋಟೋ ಜಿ 4 ಮತ್ತು ಮೋಟೋ ಜಿ 4 ಪ್ಲಸ್‌ನಂತಹ ಫೋನ್‌ಗಳು ಓರಿಯೊ ನವೀಕರಣವನ್ನು ಪಡೆಯುವುದಿಲ್ಲ.
ಅಪ್‌ಡೇಟ್ ಯಾವಾಗ?
ಲೀಸ್ಟ್‌ನಲ್ಲಿರುವ ಬಹುತೇಕ ಫೋನ್‌ಗಳು ಈ ವರ್ಷದಾಧ್ಯಂತಕ್ಕೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗುತ್ತವೆ ಎಂದು ಮೋಟೋ ಕಂಪೆನಿ ತಿಳಿಸಿದೆ.!! ಹಾಗಾಗಿ, ಆದಷ್ಟು ಬೇಗ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಅನ್ನು ಮೋಟೋ ಫೋನ್ ಬಳಕೆದಾರರು ಪಡೆಯಬಹುದು.!!
ಓದಿರಿ:ಜಿಯೋಗೆ ಮತ್ತೊಂದು ವಿಶ್ವ ಕಿರೀಟ!..ಏನಂತ ಗೊತ್ತಾದ್ರೆ ಖುಷಿಪಡ್ತಿರಾ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.