ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್‌ ಫೀಚರ್‌ ಮೊಬೈಲ್‌ಗಳು!

|

ಪ್ರಸ್ತುತ ಮಾರುಕಟ್ಟೆಗೆ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೆ ಇವೆ. ಅದಾಗ್ಯೂ, ಸ್ಮಾರ್ಟ್‌ಫೋನ್‌ಗಳ ಜೊತೆಗೆ ಫೀಚರ್‌ ಮೊಬೈಲ್‌ಗಳು ಸ್ಥಾನ ಉಳಿಸಿಕೊಂಡಿವೆ. ಮಾರುಕಟ್ಟೆಯಲ್ಲಿ ಎಂತಹ ಫೋನ್ಗಳು ಇದ್ದರು, ಫೋನ್ ಖರೀದಿಸುವ ಗ್ರಾಹಕರ ಮಾತ್ರ ತನ್ನ ಅಗತ್ಯ ಹಾಗೂ ಬಜೆಟ್‌ಗೆ ಸರಿ ಹೊಂದುವ ಮೊಬೈಲ್‌ ಆಯ್ಕೆ ಮಾಡುತ್ತಾನೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಫೀಚರ್‌ ಫೋನ್‌ಗಳು ಗಮನ ಸೆಳೆಯುವ ಆಯ್ಕೆಗಳನ್ನು ಒಳಗೊಂಡಿವೆ.

ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್‌ ಫೀಚರ್‌ ಮೊಬೈಲ್‌ಗಳು!

ಹೌದು, ಮೊಬೈಲ್‌ ಮಾರುಕಟ್ಟೆಯಲ್ಲಿ ಕೆಲವು ಪ್ರಮುಖ ಕಂಪನಿಗಳು ನೂತನ ಮಾದರಿಯ ಫೀಚರ್‌ ಫೋನ್‌ಗಳ ಬಿಡುಗಡೆ ಮಾಡುತ್ತ ಮುನ್ನಡೆದಿವೆ. ಗ್ರಾಹಕರನ್ನು ಸೆಳೆಯಲು ಆಕರ್ಷಕ ಫೀಚರ್ಸ್‌ಗಳನ್ನು ನೀಡುತ್ತಿವೆ. ಮುಖ್ಯವಾಗಿ ಕಾರ್ಬನ್, ಐಟೆಲ್‌, ಮೈಕ್ರೋಮ್ಯಾಕ್ಸ್‌ ಹಾಗೂ ಇಂಟೆಕ್ಸ್‌ ಕಂಪನಿಗಳು ಅಗ್ಗದ ಬೆಲೆಯ ಫೀಚರ್ಸ್‌ ಫೋನ್‌ಗಳ ವಲಯದಲ್ಲಿ ಸದ್ದು ಮಾಡುತ್ತಿವೆ. ಹಾಗಾದರೇ ಸದ್ಯ ಕಡಿಮೆ ಬೆಲೆಯ ಒಳಗೆ ಲಭ್ಯವಿರುವ ಟಾಪ್‌ 3 ಫೀಚರ್‌ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ IT2163 ಮೊಬೈಲ್‌
ಐಟೆಲ್‌ ಸಂಸ್ಥೆಯ ಐಟೆಲ್ IT2163 ಮೊಬೈಲ್‌ 2.8 ಇಂಚಿನ ಬಣ್ಣ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಅನೇಕ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಹಲವಾರು ದಿನಗಳವರೆಗೆ ಇರುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಫ್ಲ್ಯಾಷ್‌ಲೈಟ್, ಸೂಪರ್ ಬ್ಯಾಟರಿ ಮೋಡ್, ಆಟೋ ಕಾಲ್ ರೆಕಾರ್ಡಿಂಗ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ. ಇನ್ನು ಬ್ಯಾಟರಿ ಬ್ಯಾಕ್‌ಅಪ್ ನೋಡುವುದಾದರೆ ಈ ಸ್ಮಾರ್ಟ್‌ಫೋನ್‌ಗೆ 800mAh ಬ್ಯಾಟರಿಯನ್ನು ನೀಡಲಾಗಿದೆ ಇದು ದೀರ್ಘಕಾಲ ಬಾಳಿಕೆ ಬರುತ್ತದೆ.

ಭಾರತದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್‌ ಫೀಚರ್‌ ಮೊಬೈಲ್‌ಗಳು!

ಕಾರ್ಬನ್‌ KX3 ಮೊಬೈಲ್‌
ಕಾರ್ಬನ್‌ KX3 ಮೊಬೈಲ್‌3 1.8 ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಇದು 320×240 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದೆ. ಸ್ಟೋರೇಜ್ ವಿಷಯದಲ್ಲಿ ಸ್ಮಾರ್ಟ್‌ಫೋನ್ 4MB RAM ಮತ್ತು 4GB ವರೆಗೆ ವಿಸ್ತರಿಸಬಹುದಾದ ಇಂಟರ್ನಲ್ ಸ್ಟೋರೇಜ್ ಪ್ಯಾಕ್ ಮಾಡುತ್ತದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಕನೆಕ್ಟಿವಿಟಿ, ವಿಡಿಯೋ ಪ್ಲೇಯರ್, ಎಫ್‌ಎಂ, ಎಲ್‌ಇಡಿ ಟಾರ್ಚ್, 0.3 ವಿಜಿಎ ​​ಕ್ಯಾಮೆರಾ ಮತ್ತು ಬ್ಲೂಟೂತ್ ಹೊಂದಿದೆ. ಇನ್ನು ಬ್ಯಾಟರಿ ಬ್ಯಾಕ್‌ಅಪ್ ನೋಡುವುದಾದರೆ ಈ ಸ್ಮಾರ್ಟ್‌ಫೋನ್‌ಗೆ 800mAh ಬ್ಯಾಟರಿಯನ್ನು ನೀಡಲಾಗಿದೆ ಇದು ದೀರ್ಘಕಾಲ ಬಾಳಿಕೆ ಬರುತ್ತದೆ.

ಮೈಕ್ರೋಮ್ಯಾಕ್ಸ್‌ X378 ಮೊಬೈಲ್‌
ಮೈಕ್ರೋಮ್ಯಾಕ್ಸ್‌ ಸಂಸ್ಥೆಯ ಮೈಕ್ರೋಮ್ಯಾಕ್ಸ್‌ X378 ಫೋನ್‌ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ 1.77 ಇಂಚಿನ ಬಣ್ಣ ಡಿಸ್ಪ್ಲೇಯನ್ನು ಹೊಂದಿದೆ. ಸ್ಟೋರೇಜ್ ವಿಷಯದಲ್ಲಿ ಸ್ಮಾರ್ಟ್‌ಫೋನ್ 4MB RAM ಮತ್ತು 4GB ವರೆಗೆ ವಿಸ್ತರಿಸಬಹುದಾದ ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಮೈಕ್ರೊ SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಪಡೆದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಕನೆಕ್ಟಿವಿಟಿ, ವಿಡಿಯೋ ಪ್ಲೇಯರ್, ಎಫ್‌ಎಂ, ಎಲ್‌ಇಡಿ ಟಾರ್ಚ್, 0.3 ವಿಜಿಎ ​​ಕ್ಯಾಮೆರಾ ಮತ್ತು ಬ್ಲೂಟೂತ್ ಹೊಂದಿದೆ. ಇನ್ನು ಬ್ಯಾಟರಿ ಬ್ಯಾಕ್‌ಅಪ್ ನೋಡುವುದಾದರೆ ಈ ಸ್ಮಾರ್ಟ್‌ಫೋನ್‌ಗೆ 800mAh ಬ್ಯಾಟರಿಯನ್ನು ನೀಡಲಾಗಿದೆ ಇದು ದೀರ್ಘಕಾಲ ಬಾಳಿಕೆ ಬರುತ್ತದೆ.

ಇಂಟೆಕ್ಸ್‌ ECO 105VX ಮೊಬೈಲ್‌
ಇಂಟೆಕ್ಸ್‌ ECO 105VX ಫೋನ್ 128×160 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.8 ಇಂಚಿನ QVGA ಬಣ್ಣ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನಿನ ಸ್ಟೋರೇಜ್‌ ನೋಡುವುದಾದರೇ, ಇದು 4MB RAM ಮತ್ತು ಇಂಟರ್ನಲ್ ಸ್ಟೋರೇಜ್ ಹೊಂದಿದ್ದು ಮೈಕ್ರೊ SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದಾಗಿದೆ. ಇತರ ವೈಶಿಷ್ಟ್ಯಗಳೆಂದರೆ QWERTY ಕೀಪ್ಯಾಡ್, LED ಟಾರ್ಚ್, ಜೂಮ್ ವೈಶಿಷ್ಟ್ಯದೊಂದಿಗೆ 0.3MP ಕ್ಯಾಮೆರಾ. ಇನ್ನು ಬ್ಯಾಟರಿ ಬ್ಯಾಕ್‌ಅಪ್ ನೋಡುವುದಾದರೆ ಈ ಮೊಬೈಲ್‌ 1050mAh ಬ್ಯಾಟರಿಯನ್ನು ಹೊಂದಿದ್ದು ಅದು ದೀರ್ಘಕಾಲ ಬಾಳಿಕೆ ಬರಬಲ್ಲದು.

Best Mobiles in India

English summary
These Top Feature Phones Available at Low Price In India 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X