ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಈ ಸ್ಮಾರ್ಟ್ ಫೋನ್ ಗಳ ಬೆಲೆ 10,000ರುಪಾಯಿಗಿಂತಲೂ ಕಡಿಮೆ

By Gizbot Bureau
|

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಉತ್ತಮ ಖರೀದಿದಾರರಿದ್ದಾರೆ. ಈ ಬಜೆಟ್ ಸೆಗ್ಮೆಂಟ್ ನ ಸ್ಮಾರ್ಟ್ ಫೋನ್ ಗಳಲ್ಲಿ ಬಹಳಷ್ಟು ಅಪ್ ಡೇಟ್ ಆಗಿದೆ. ಶಿಯೋಮಿ, ರಿಯಲ್ ಮಿ, ಸ್ಯಾಮ್ ಸಂಗ್ ಮತ್ತು ಇತರೆ ಹಲವು ಬ್ರ್ಯಾಂಡಿನ ಸ್ಮಾರ್ಟ್ ಫೋನ್ ಗಳಲ್ಲಿ ಅನೇಕ ಅಧ್ಬುತ ಫೀಚರ್ ಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ. ಸದ್ಯ ಈ ಫೀಚರ್ ಗಳು ಕೈಗೆಟುಕುವ ಬಜೆಟ್ ಬೆಲೆಯಲ್ಲಿ ಸಿಗುವುದರಿಂದಾಗಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗುವ ಡಿವೈಸ್ ಗಳಿಗೆ ಬಹಳ ಬೇಡಿಕೆ ಇರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸ್ಮಾರ್ಟ್ ಫೋನ್

ಬಜೆಟ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬೆಲೆ ಇದೀಗ 10,000 ರುಪಾಯಿಗಿದೆ. ಇದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್, ಅತ್ಯದ್ಭುತ ಬ್ಯಾಟರಿ ಲೈಫ್, ನೂತನವಾಗಿರುವ ಕ್ಯಾಮರಾ ತಂತ್ರಜ್ಞಾನಗಳು ಸೇರಿದಂತೆ ಹಲವು ವೈಶಿಷ್ಟ್ಯತೆಗಳಿರುತ್ತದೆ.

ಬಜೆಟ್ ಸ್ಮಾರ್ಟ್ ಫೋನ್ ಗಳ ದುನಿಯಾ ಒಂದು ಹಂತ ಮೇಲಕ್ಕೆ ಹೋಗುವ ಸಾಧ್ಯತೆ ಇದೆ. ನಾವಿಲ್ಲಿ ಕೆಲವು ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಇಟ್ಟಿ ಪಟ್ಟಿ ಮಾಡಿದ್ದೇವೆ.

ಲಾವ್ Z52 ಪ್ರೋ

ಲಾವ್ Z52 ಪ್ರೋ

ಲಾವಾಮ Z52 ಪ್ರೋ 5.5-ಇಂಚಿನ ಡಿಸ್ಪ್ಲೇ, ಆಕ್ಟಾ ಕೋರ್ ಪ್ರೊಸೆಸರ್, 2GB RAM ಮತ್ತು 16GB ಸ್ಟೋರೇಜ್ ಜಾಗವನ್ನು ಹೊಂದಿರುವ ನಿರೀಕ್ಷೆ ಇದೆ. 4120mAh ಬ್ಯಾಟರಿ ವ್ಯವಸ್ಥೆ ಇರುವ ನಿರೀಕ್ಷೆ ಇದೆ.

ನೋಕಿಯಾ ಸಿ2

ನೋಕಿಯಾ ಸಿ2

ಕಳೆದ ತಿಂಗಳೇ ನೋಕಿಯಾ ಸಿ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಪ್ರಕಟಿಸಲಾಗಿತ್ತು. ಈ ಸ್ಮಾರ್ಟ್ ಫೋನಿನಲ್ಲಿ 5.7-ಇಂಚಿನ ಡಿಸ್ಪ್ಲೇ, ಯುನಿಸಾಕ್ SoC, 16GB ಸ್ಟೋರೇಜ್ ಜಾಗ, 1GB RAM ಮತ್ತು 2800mAh ಬ್ಯಾಟರಿ ವ್ಯವಸ್ಥೆ ಇರಲಿದೆ

ಕೂಲ್ ಪ್ಯಾಡ್ ಕೂಲ್ 9

ಕೂಲ್ ಪ್ಯಾಡ್ ಕೂಲ್ 9

ಕೂಲ್ ಪ್ಯಾಡ್ ಕೂಲ್ 9 ಬಜೆಟ್ ಸ್ಮಾರ್ಟ್ ಫೋನಿನಲ್ಲಿ 5.71-ಇಂಚಿನ ಡಿಸ್ಪ್ಲೇ ಜೊತೆಗೆ HD+ ರೆಸಲ್ಯೂಷನ್, ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್, 4GB RAM, 64GB ಸ್ಟೋರೇಜ್ ಜಾಗ ಮತ್ತು ಇತರೆ ಹಲವು ವೈಶಿಷ್ಚ್ಯತೆಗಳಿರಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್ 2020

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್ 2020

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್ 2020 ಭಾರತದಲ್ಲಿ ಈಗಾಗಲೇ ಲಾಂಚ್ ಮಾಡಲಾಗಿದ್ದು ಎಂಟ್ರಿ ಲೆವೆಲ್ಲಿನ ಎಲ್ಲಾ ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ. ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಇದಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಮಾರಾಟ ಪ್ರಕ್ರಿಯೆ ಇನ್ನೂ ಕೂಡ ಪ್ರಾರಂಭವಾಗಿಲ್ಲ.

ಅಲ್ಕ್ಯಾಟೆಲ್ 1V 2020

ಅಲ್ಕ್ಯಾಟೆಲ್ 1V 2020

ಈ ವರ್ಷದ ಜನವರಿಯಲ್ಲೇ ಅಲ್ಕ್ಯಾಟೆಲ್ 1V 2020 ಯನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಇದರಲ್ಲಿ 6.22-ಇಂಚಿನ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಹೆಲಿಯೋ ಪಿ 22 SoC ಮತ್ತು 4000mAh ಬ್ಯಾಟರಿ ವ್ಯವಸ್ಥೆ ಇರಲಿದೆ.

ಲೆನೋವಾ ಎ7

ಲೆನೋವಾ ಎ7

ಲೆನೋವಾ ಎ7 ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳುವ ಸ್ಮಾರ್ಟ್ ಫೋನ್ ಆಗಿದ್ದು 6.09-ಇಂಚಿನ ಡಿಸ್ಪ್ಲೇ ಹೊಂದಿದೆ. ಡುಯಲ್ ಕ್ಯಾಮರಾ ಗಳನ್ನು ಹಿಂಭಾಗದಲ್ಲಿ ಇದು ಹೊಂದಿದ್ದು ಮುಂಭಾಗದಲ್ಲಿ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. 4000mAh ಬ್ಯಾಟರಿ ಇದರಲ್ಲಿದೆ.

ಶಿಯೋಮಿ ರೆಡ್ಮಿ 8ಎ ಪ್ರೋ

ಶಿಯೋಮಿ ರೆಡ್ಮಿ 8ಎ ಪ್ರೋ

ಶಿಯೋಮಿ ರೆಡ್ಮಿ 8ಎ ಪ್ರೋ ಚೀನಾ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಕಟಗೊಂಡಿದ್ದು ಭಾರತೀಯ ಮಾರುಕಟ್ಟೆಗೆ ಇನ್ನಷ್ಟೇ ಪ್ರವೇಶವಾಗಬೇಕಿದೆ. 6.22-ಇಂಚಿನ ಡಿಸ್ಪ್ಲೇ ಜೊತೆಗೆ HD+ ರೆಸಲ್ಯೂಷನ್, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 439 SoC, 2GB RAM ಮತ್ತು ದೀರ್ಘಾವಧಿ ಬರುವ 5000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

ಇನ್ಫಿನಿಕ್ಸ್ ನೋಟ್ 7 ಲೈಟ್

ಇನ್ಫಿನಿಕ್ಸ್ ನೋಟ್ 7 ಲೈಟ್

ಈ ತಿಂಗಳ ಆರಂಭದಲ್ಲಿ ಪ್ರಕಟಗೊಂಡಿರುವ ಇನ್ಫಿನಿಕ್ಸ್ ನೋಟ್ 7 ವೈಟ್ 6.6-ಇಂಚಿನ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಹೆಲಿಯೋ ಜಿ 70 SoC, 5000mAh ಬ್ಯಾಟರಿ, 128GB ಸ್ಟೋರೇಜ್ ಜಾಗವನ್ನು ಹೊಂದಿದೆ. ಸದ್ಯದಲ್ಲೇ ದೇಶದಲ್ಲಿ ಈ ಫೋನ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

ನೋಕಿಯಾ 1.3

ನೋಕಿಯಾ 1.3

ನೋಕಿಯಾ 1.3 ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸ್ಮಾರ್ಟ್ ಫೋನ್ ಆಗಿದೆ. ಕಳೆದ ತಿಂಗಳು ಬಿಡುಗಡೆಗೊಂಡಿರುವ ಡಿವೈಸ್ ಆಗಿದ್ದು 5.71-ಇಂಚಿನ ಡಿಸ್ಪ್ಲೇ, ಇನ್ ಬಿಲ್ಟ್ ಕ್ಯಾಮರಾ ಮತ್ತು ನೂತನ ಆಂಡ್ರಾಯ್ಡ್ ಗೋವನ್ನು ಹೊಂದಿದೆ.

Best Mobiles in India

Read more about:
English summary
Already, the budget smartphone market segment priced under Rs. 10,000 has started witnessing improvements such as devices with a quad-camera setup, superior battery life, advanced camera capabilities and much more. The upcoming budget smartphones are expected to take the same to the next level.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X