Subscribe to Gizbot

ನಿಮ್ಮ ಹಳೆ ಸ್ಮಾರ್ಟ್‌ಪೋನ್ ಮಾರುವ ಮುನ್ನ ಈ ಎಚ್ಚರಿಕೆಗಳಿರಲಿ!!

Written By:

ಒಂದು ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತಲೂ ಖರೀದಿಸಿದ ಸ್ಮಾರ್ಟ್‌ಫೋನ್ ಅನ್ನು ಮತ್ತೊಮ್ಮೆ ಮಾರಾಟ ಮಾಡುವುದು ಭಾರೀ ಕಷ್ಟ! ಸ್ಮಾರ್ಟ್‌ಪೋನ್ ಯಾರಿಗೆ ಮಾರುವುದು, ಖರೀದಿಸಿದ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಕೇಳುತ್ತಾರೆ, ಫೋನ್ ಮಾರಿದರೆ ಮತ್ಯಾವ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸುವುದು ಎಲ್ಲ ಗೊಂದಲಗಳು ನಮ್ಮನ್ನು ಕಾಡುತ್ತವೆ.!!

ಆದರೆ, ನಿಮಗೆ ಗೊತ್ತಾ? ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸೆಕೆಂಡ್ ಹ್ಯಾಂಡ್‌ಗೆ ಮಾರುವಾಗ ಹುಟ್ಟುವ ಈ ಎಲ್ಲಾ ತೊಂದರೆಗಳು ತೊಂದರೆಗಳು ಅಲ್ಲವೇ ಅಲ್ಲ.! ಏಕೆಂದರೆ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದರೆ. ಈ ಸಾಮಾನ್ಯ ಕೆಲಸಗಳ ತೊಂದರೆಗಿಂತಲೂ ಹೆಚ್ಚಿನ ತೊಂದರೆಗೆ ನೀವು ಸಿಲುಕಿರುತ್ತೀರಾ.!!

ನಿಮ್ಮ ಹಳೆ ಸ್ಮಾರ್ಟ್‌ಪೋನ್ ಮಾರುವ ಮುನ್ನ ಈ ಎಚ್ಚರಿಕೆಗಳಿರಲಿ!!

ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದೀರೆ, ನಿಮ್ಮ ಫೋನ್‌ ಮಾರಾಟ ಮಾಡುವ ಮುನ್ನ ನೀವು ಅನುಸರಿಸಲೇಬೇಕಾದ ವಿಧಾನಗಳು ಯಾವುವು? ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿ!

ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿ!

ಸ್ಮಾರ್ಟ್‌ಫೋನ್‌ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ.!! ನೀವು ಸ್ಮಾರ್ಟ್‌ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ, ಹಾಗಾಗಿ, ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.!!

ಫೋನ್ ಬ್ಯಾಕ್‌‌ಅಪ್‌ ತೆಗೆದಿಡಿ!!

ಫೋನ್ ಬ್ಯಾಕ್‌‌ಅಪ್‌ ತೆಗೆದಿಡಿ!!

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡುವ ಮುನ್ನವೇ ಸ್ಮಾರ್ಟ್‌ಫೋನಿನ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ಗೂಗಲ್ ಡ್ರೈವ್ ಅಥವಾ ಕಂಪ್ಯೂಟರ್‌ನಲ್ಲಿ ನಿಮ್ಮೆಲ್ಲಾ ಫೈಲ್‌ಗಳು, ವಿಡಿಯೊ, ಮತ್ತು ಚಿತ್ರಗಳನ್ನು ಬ್ಯಾಕಪ್ ತೆಗೆದುಕೊಳ್ಳಿ.! ಇಲ್ಲವಾದರೆ ಮೊಬೈಲ್ ಖರೀದಿಸಿದವರು ಅದನ್ನು ಡಿಲೀಟ್ ಮಾಡಬಹುದು ಇಲ್ಲವೇ ಮಿಸ್ ಯೂಸ್ ಮಾಡಿಕೊಳ್ಳಬಹುದು.!!

ಫೋನ್‌ನ ಬೆಲೆ ಎಷ್ಟು ತಿಳಿಯಿರಿ!!

ಫೋನ್‌ನ ಬೆಲೆ ಎಷ್ಟು ತಿಳಿಯಿರಿ!!

ಶೋರೂಂನಿಂದ ಸ್ಮಾರ್ಟ್ಪೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ40 ರಷ್ಟು ಇಳೆಯಾಗುತ್ತದೆ ಎನ್ನುತ್ತವೆ ಸೆಕೆಂಡ್‌ ಹ್ಯಾಂಡ್‌ ಬೆಲೆಗಳನ್ನು ಹೇಳುವಂತಹ ಸೈಟ್‌ಗಳು.!! ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಫೋನ್ ಖರೀದಿಸುವವರು ಯಾರು?

ಫೋನ್ ಖರೀದಿಸುವವರು ಯಾರು?

ನೀವು ಫೋನ್ ಮಾರಾಟ ಮಾಡುತ್ತಿರುವ ವ್ಯಕ್ತಿ ಯಾರು ಎಂಬ ಸಂಪೂರ್ಣ ಮಾಹಿತಿ ನಿಮಗಿರಲಿ. ಇಲ್ಲವಾದರೆ ಖಂಡಿತ ಆ ಪೋನ್ ಮಾರುವ ಸಾಹಸ ಬೇಡ.!! ವ್ಯಕ್ತಿಗತವಾಗಿ ಫೋನ್ ಮಾರಾಟ ಮಾಡುವುದಕ್ಕಿಂತಲೂ ಎಕ್ಸ್‌ಚೇಂಜ್ ಆಫರ್ ಮೂಲಕ ಮತ್ತೊಂದು ಸ್ಮಾರ್ಟ್‌ಪೋನ್ ಖರೀದಿಸುವುದು ಒಳ್ಳೆಯದು ಎನ್ನಬಹುದು.!!

ಇರುವ ಫೋನ್ ಅನ್ನೇ ಉಳಿಸಿಕೊಳ್ಳಿ.!!

ಇರುವ ಫೋನ್ ಅನ್ನೇ ಉಳಿಸಿಕೊಳ್ಳಿ.!!

ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಇಚ್ಚೇ ಇದ್ದರೆ ಮಾತ್ರ ಈ ಎಲ್ಲಾ ಕೆಲಸಗಳನ್ನು ಮಾಡಿ. ಆದರೆ, ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮುನ್ನ ಈಗಿರುವ ಫೋನ್ ಅನ್ನೇ ಬಳಕೆ ಮಾಡಲು ಪ್ರಯತ್ನಿಸಿ.! ಏಕೆಂದರೆ ಇಂದು ಸೆಕೆಂಡ್ ಹ್ಯಾಂಡ್ ಫೋನ್ ಬೆಲೆಯೂ ಕಡಿಮೆ ಇದೆ ಮತ್ತು ನಿಮ್ಮ ಫೋನ್ ಮಾರಿ ಸಮಸ್ಯೆಯನ್ನು ಎದುರಿಸುವ ಸಂಭವ ಇರಲಿದೆ.!!

ಓದಿರಿ:ಜಿಯೋಗಾಗಿ ಬದಲಾಗುತ್ತಿದೆಯೇ ಮತ್ತೊಂದು ಟೆಲಿಕಾಂ ನಿಯಮ!!..ಬದಲಾದರೆ ಗ್ರಾಹಕರಿಗೆ ಹಬ್ಬ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Blame it on peer pressure or call it the flamboyance of a burgeoning middle-class. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot