ಆಂಡ್ರಾಯ್ಡ್ ಫೋನ್ ನ್ನು ಮತ್ತಷ್ಟು ಸುರಕ್ಷಿತವಾಗಿಡಲು ಏನು ಮಾಡಬೇಕು ಗೊತ್ತಾ?

By Gizbot Bureau
|

ಆಂಡ್ರಾಯ್ಡ್ ಅನ್ನುವುದು ಅನೇಕ ರೀತಿಯ ಸ್ಕ್ಯಾಮರ್ ಗಳನ್ನು,ಮಾಲ್ವೇರ್,ಕಳ್ಳರು,ಕದೀಮರು ಸೇರಿದಂತೆ ಅನೇಕರು ತಮ್ಮ ಜಾಹೀರಾತುಗಳಿಗಾಗಿ ಅಥವಾ ದುರುದ್ದೇಶದಿಂದ ನಿಮ್ಮ ಮಾಹಿತಿಯನ್ನು ಕದಿಯಲು ಬಳಸುವ ಪ್ರಸಿದ್ಧ ಸ್ಮಾರ್ಟ್ ಫೋನ್ ಗಳ ಆಪರೇಟಿಂಗ್ ವ್ಯವಸ್ಥೆಯಾಗಿದೆ.ಗೂಗಲ್ ಸಂಸ್ಥೆ ದಶಕಗಳಿಂದಲೂ ಆಂಡ್ರಾಯ್ಡ್ ಸಿಸ್ಟಮ್ ನ್ನು ಸುಭದ್ರಗೊಳಿಸಿ ಭದ್ರತೆ ಕಾಪಾಡಲು, ವಯಕ್ತಿಕ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲು,ಡಾಟಾಗಳಿಗೆ ಕಾವಲು ವ್ಯವಸ್ಥೆ ನೀಡಲು ಅನೇಕ ರೀತಿಯ ಸೆಟ್ಟಿಂಗ್ಸ್ ಗಳನ್ನು ನೀಡಿದೆ.

ಆಂಡ್ರಾಯ್ಡ್ ಫೋನ್ ನ್ನು ಮತ್ತಷ್ಟು ಸುರಕ್ಷಿತವಾಗಿಡಲು ಏನು ಮಾಡಬೇಕು ಗೊತ್ತಾ?

ಆದರೆ ಬಳಕೆದಾರರಿಗೆ ಈ ವ್ಯವಸ್ಥೆಗಳ ಬಗ್ಗೆ ಅಥವಾ ಸೆಟ್ಟಿಂಗ್ಸ್ ಗಳ ಬಗ್ಗೆ ಮಾಹಿತಿ ಕೊರತೆ ಇದೆ. ನಿಮ್ಮ ಹಣಕಾಸಿನ ಮತ್ತು ವಯಕ್ತಿಕ ಡಾಟಾವನ್ನು ಹೊಂದಿರುವ ಆಂಡ್ರಾಯ್ಡ್ ಫೋನ್ ಗಳ ಸುರಕ್ಷತೆಗಾಗಿ ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು.ನಿಮ್ಮ ಆಂಡ್ರಾಯ್ಡ್ ಫೋನ್ ನ್ನು ಮತ್ತಷ್ಟು ಸುರಕ್ಷಿತವಾಗಿಡಲು ಬೇಕಾಗುವ ಕೆಲವು ಮಾರ್ಗಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

1. ಸೆಟ್ಟಿಂಗ್ಸ್ ಮೆನುವಿಗೆ ತೆರಳಿ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಇನ್ಸ್ಟಾಲ್ ಆಗಿರುವ ಎಲ್ಲಾ ಆಪ್ ಗಳ ಪರಿಶೀಲನೆ ಮಾಡುವ ಹವ್ಯಾಸ ರೂಢಿಸಿಕೊಳ್ಳಿ:

ನಿಮ್ಮ ಫೋನಿನಲ್ಲಿ ಯಾವೆಲ್ಲಾ ಆಪ್ ಗಳು,ಎಪಿಕೆ ಫೈಲ್ ಗಳು,ಪ್ರೊಸೆಸಸ್ ಗಳು ಇವೆ ಎಂಬ ಬಗ್ಗೆ ನಿಮಗೆ ಮಾಹಿತಿ ಇರುವುದು ಬಹಳ ಮುಖ್ಯ.ಇದರ ಟ್ರ್ಯಾಕ್ ನ್ನು ನೀವು ಆಗಾಗ ಪರಿಶೀಲಿಸುತ್ತಿರಿ.ಹೀಗೆ ಮಾಡುವುದರಿಂದ ನೀವು ಇನ್ಸ್ಟಾಲ್ ಮಾಡದ ಯಾವುದಾದರೂ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಸೇರಿಕೊಂಡಿದ್ದರೆ ನಿಮಗೆ ತಿಳಿಯುತ್ತದೆ.ನಿಮ್ಮ ಡಾಟಾವನ್ನು ಕದಿಯುವ ಉದ್ದೇಶದಿಂದ ಕೆಲವು ಮಾಲ್ವೇರ್ ಗಳು,ಸ್ಪೈವೇರ್ ಗಳು,ಆಡ್ವೇರ್ ಗಳು ಆಗಾಗ ನಿಮಗೆ ಗೊತ್ತಿಲ್ಲದೆ ನಿಮ್ಮ ಆಂಡ್ರಾಯ್ಡ್ ಒಳಗಡೆ ಸೇರಿಕೊಂಡು ಬಿಡುತ್ತವೆ.ಇವುಗಳು ಬಹಳ ಡೇಂಜರ್ ಆಗಿರುತ್ತವೆ ಯಾಕೆಂದರೆ ಸಾಮಾನ್ಯವಾಗಿ ಇಂತಹವುಗಳು ಯಾವುದೇ ಐಕಾನ್ ನ್ನು ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಬಿಡುವುದಿಲ್ಲ. ಹಾಗಾಗಿ ಆಗಾಗ ನಿಮ್ಮ ಸೆಟ್ಟಿಂಗ್ಸ್ ಗೆ ತೆರಳಿ ಯಾವೆಲ್ಲಾ ಆಪ್ ಗಳು ಸೇರಿಕೊಂಡಿವೆ ಎಂಬುದನ್ನು ಪರಿಶೀಲಿಸಿ.

2. ಆಂಡ್ರಾಯ್ಡ್ ನಲ್ಲಿರುವ ಪರ್ಮಿಷನ್ ಮ್ಯಾನೇಜರ್ ನ್ನು ಪರಿಶೀಲಿಸಿ ಮತ್ತು ಅಗತ್ಯತೆಗೆ ಅನುಸಾರ ಡಿಸೇಬಲ್ ಮಾಡಿ

ಮೆಸೇಜ್ ಗಳಲ್ಲಿ ರಿಸೀವ್ ಮಾಡುವ ಯಾವುದೇ ಎಪಿಕೆ ಫೈಲ್ ಗಳನ್ನು ಅಥವಾ ಆಪ್ ಗಳನ್ನು ಇನ್ಸ್ಟಾಲ್ ಮಾಡಬೇಡಿ.ಒಂದು ವೇಳೆ ಹೆಸರು ಕೇಳಿದಂತೆ ಭಾಸವಾಗುವ ಮೆಸೇಜ್ ಆಗಿದ್ದರೂ ಕೂಡ ಲಿಂಕ್ ಮೂಲಕ ಇನ್ಸ್ಟಾಲ್ ಮಾಡಬೇಡಿ. ಬದಲಾಗಿ ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಆಪ್ ಇನ್ಸ್ಟಾಲ್ ಮಾಡಿ.ಅಷ್ಟೇ ಅಲ್ಲ ಸೆಟ್ಟಿಂಗ್ಸ್ ನಲ್ಲಿ ಒಂದು ಡೀಫಾಲ್ಟ್ ಆಯ್ಕೆ ಕೂಡ ಇರುತ್ತದೆ.ಸೆಟ್ಟಿಂಗ್ಸ್-ಸೆಕ್ಯುರಿಟಿ-ಗೂಗಲ್ ಪ್ಲೇ ಪ್ರೊಟೆಕ್ಟ್ ಗೆ ತೆರಳಿ ನೀವು ಭದ್ರತೆ ಕಾಪಾಡಿಕೊಳ್ಳಬಹುದು.ಇದು ಆನ್ ಆಗಿದೆಯೇ ಪರಿಶೀಲಿಸಿ ಮತ್ತು ನಿಮ್ಮ ಫೋನ್ ನ್ನು ಆಗಾಗ ಇಲ್ಲಿ ಸ್ಕ್ಯಾನ್ ಮಾಡುತ್ತಿರಿ.

3. ಇನ್ಸ್ಟಾಲ್ ಅನ್ ನೋನ್ ಆಪ್ಸ್ ಆಯ್ಕೆಯನ್ನು ಡಿಸೇಬಲ್ ಮಾಡಿ

ಸೆಟ್ಟಿಂಗ್ಸ್ ಮೆನುವಿನ ಒಳಭಾಗದಲ್ಲಿರುವ ಈ ಇನ್ಸ್ಟಾಲ್ ಅನ್ ನೋನ್ ಆಪ್ಸ್ ಆಯ್ಕೆಯನ್ನು ಡಿಸೇಬಲ್ ಮಾಡಿ. ಆ ಮೂಲಕ ಅಪರಿಚಿತ ಆಪ್ ಗಳು ಇನ್ಸ್ಟಾಲ್ ಆಗುವುದನ್ನು ತಡೆಯಿರಿ.ಗೂಗಲ್ ಕ್ರೋಮ್ ಸೇಫ್ ಬ್ರೌಸಿಂಗ್ ನ್ನು ಡಿಫಾಲ್ಟ್ ಆಗಿ ಅನೇಬಲ್ ಆಗಿರಿಸಿ. ಇಂಟರ್ನೆಟ್ ಬ್ರೌಸಿಂಗ್ ಗಾಗಿ ಗೂಗಲ್ ಕ್ರೋಮ್ ಬಳಸುವಾಗ ಸೇಫ್ ಬ್ರೌಸಿಂಗ್ ಆನ್ ಆಗಿದೆಯೇ ಗಮನಿಸಿ.ಇದು ನಿಮ್ಮನ್ನು ಫಿಶ್ಶಿಂಗ್ ವೆಬ್ ಸೈಟ್ ಗಳಿಂದ ಮತ್ತು ಇತರೆ ಅಪರಿಚಿತ ಹ್ಯಾಕಿಂಗ್ ಗಳಿಂದ ರಕ್ಷಣೆ ನೀಡುತ್ತದೆ.

4. ಇತರರಿಗೆ ನಿಮ್ಮ ಫೋನ್ ಕೊಡುವಾಗ ಆಪ್ ಪಿನ್ನಿಂಗ್ ನ್ನು ಆನ್ ಮಾಡಿ ಇಡಿ

ನಿಮ್ಮ ಫ್ರೆಂಡಿಗೆ ಅಥವಾ ಇತರರಿಗೆ ಯಾರಿಗಾದರೂ ನಿಮ್ಮ ಫೋನ್ ನ್ನು ಆಟವಾಡಲು ಅಥವಾ ಇನ್ನಿತರೆ ಯಾವುದೇ ಕಾರಣಕ್ಕೆ ನೀಡುವಾಗ ಅವರಿಗೆ ಫೋನ್ ನೀಡುವ ಮುನ್ನ ಆಪ್ ಪಿನ್ನಿಂಗ್ ನ್ನು ಆನ್ ಮಾಡಿ ಇಡಿ.ಈ ಫೀಚರ್ ಕರೆಂಟ್ ಆಪ್ ನ್ನು ಮಾತ್ರವೇ ನೋಡುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಬೇರೆ ಆಪ್ ಗಳಿಗೆ ಅವರು ತೆರಳುವುದನ್ನು ತಡೆಯುತ್ತದೆ.ಈ ಫೀಚರ್ ಇತರೆ ಬಳಕೆದಾರರು ನಿಮ್ಮ ಫೋನಿನಿಂದ ಅನಗತ್ಯ ಕಿರಿಕಿರಿ ಮಾಡುವುದು ತಪ್ಪುತ್ತದೆ.

5. ಟು ಫ್ಯಾಕ್ಟರ್ ಅಥೆಂಟಿಕೇಷನ್ ಮತ್ತು ಫೈಂಡ್ ಮೈ ಡಿವೈಸ್ ನ್ನು ಆನ್ ಮಾಡಿ ಇಡಿ

ನಿಮ್ಮ ಗೂಗಲ್ ಖಾತೆಗೆ ಎರಡು ಹಂತದ ಭದ್ರತೆಯನ್ನು ಒದಗಿಸಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.ಇನ್ನು ಫೈಂಡ್ ಮೈ ಡಿವೈಸ್ ಆಯ್ಕೆಯನ್ನು ಕೂಡ ಆನ್ ಮಾಡಿ ಇಡಿ.ಫೈಂಡ್ ಮೈ ಡಿವೈಸ್ ಫೀಚರ್ ಮೂಲಕ ನಿಮ್ಮ ಡಿವೈಸ್ ನ್ನು ನೀವು ಹುಡುಕಾಡುವುದಕ್ಕೆ ಅವಕಾಶವಿರುತ್ತದೆ.ಹಾಗಾಗಿ ಡಿವೈಸ್ ಕಳೆದು ಹೋದಾಗ ಇದು ನೆರವಿಗೆ ಬರುತ್ತದೆ.

6. ಲಾಕ್ ಸ್ಕ್ರೀನ್ ನಲ್ಲಿರುವ ವಿಸಿಬಿಲಿಟಿಯನ್ನು ನಿಯಂತ್ರಿಸಿ

ನಿಮಗೆ ಯಾರಿಂದ ಮೆಸೇಜ್ ಬಂದಿದೆ ಎಂಬುದನ್ನು ಇತರರು ನೋಡಬಾರದು ಎಂಬುದು ನಿಮ್ಮ ಉದ್ದೇಶವಾಗಿದ್ದರೆ ನೀವು ಲಾಕ್ ಸ್ಕ್ರೀನ್ ನೋಟಿಫಿಕೇಷನ್ ನ್ನು ನಿಯಂತ್ರಿಸಬಹುದು.ಸೆಟ್ಟಿಂಗ್ಸ್ ಮೆನುವಿನ ಒಳಭಾಗದಲ್ಲಿ ಇದನ್ನು ನಿಯಂತ್ರಿಸುವ ಆಯ್ಕೆ ಇರುತ್ತದೆ.

7. ಪದೇ ಪದೇ ಬಳಕೆಯಲ್ಲಿರದ ಆಪ್ ಗಳನ್ನು ಡಿಲೀಟ್ ಮಾಡಿ

ಪದೇ ಪದೇ ನೀವು ಬಳಸದ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ತುಂಬಿ ಹೋಗಿದ್ದರೆ ಅವುಗಳನ್ನು ಡಿಲೀಟ್ ಮಾಡುವ ಅಭ್ಯಾಸವಿಟ್ಟುಕೊಳ್ಳಿ. ಇನ್ಸ್ಟಾಲ್ ಮಾಡಿದ ಆಪ್ ಗಳೆಲ್ಲವೂ ನಿಮ್ಮ ಮೊಬೈಲ್ ನಲ್ಲಿ ಹಾಗೆಯೇ ತುಂಬಿಕೊಂಡಿರಬೇಕಿಲ್ಲ. ಆಗಾಗ ಆಪ್ ಗಳು ಅಪ್ ಡೇಟ್ ಆಗುತ್ತಿರುತ್ತದೆ.ಬ್ಯಾಕ್ ಡೋರ್ ನಲ್ಲಿ ಮಾಲ್ವೇರ್ ಗಳು ಪ್ರವೇಶಿಸುವುದಕ್ಕೆ ಇವುಗಳು ಅವಕಾಶ ನೀಡುವ ಸಾಧ್ಯತೆ ಇರುತ್ತದೆ.

8. ವೈಫೈ ಮತ್ತು ಬ್ಲೂಟೂತ್ ಅಗತ್ಯವಿಲ್ಲದೇ ಇರುವಾಗ ಆಫ್ ಮಾಡಿ ಬಿಡಿ

ನಿಮ್ಮ ಬಳಿ ಉಚಿತ ವೈಫೈ ಇದೆ ಅನ್ನೋ ಕಾರಣಕ್ಕೆ ಯಾವಾಗಲೂ ಅದು ಆನ್ ಇರಬೇಕು ಎಂದೇನಿಲ್ಲ. ಯಾವಾಗ ನೀವು ವೈಫೈ ಬಳಸುವುದಿಲ್ಲವೋ ಆಗ ಅದನ್ನು ಆಫ್ ಮಾಡಿ ಇಡುವ ಅಭ್ಯಾಸ ರೂಢಿಸಿಕೊಳ್ಳಿ.ಮಲಗುವಾಗ ಅಥವಾ ಜಿಮ್ ಗೆ ತೆರಳಿರುವಾಗ ಅಥವಾ ಇನ್ನಿತರೆ ಮೊಬೈಲ್ ಬಳಸದ ಸಂದರ್ಬಗಳಲ್ಲಿ ವೈಫೈ ಮತ್ತು ಬ್ಲೂಟೂತ್ ಎರಡನ್ನೂ ಆಫ್ ಮಾಡಿ ಇಡುವ ಅಭ್ಯಾಸ ಬಹಳ ಒಳ್ಳೆಯದು.ವೈಫೈ ಮತ್ತು ಬ್ಲೂಟೂತ್ ಗಳ ಮೂಲಕ ಸುಲಭವಾಗಿ ಸ್ಪೈವೇರ್ ಗಳು ನಿಮ್ಮ ಮೊಬೈಲ್ ನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

Most Read Articles
Best Mobiles in India

Read more about:
English summary
Tips To Make Your Android Smartphone More Safe And Secure: Step By Step Guide

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X