₹ 10,000 ಒಳಗಿನ ಬೆಸ್ಟ್‌ 4G ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು..!

By GizBot Bureau
|

VoLTE ವೈಶಿಷ್ಟ್ಯತೆಯು ಸ್ಮಾರ್ಟ್ ಫೋನ್ ಗಳಲ್ಲಿ LTE ಮೇಲಿನ ಹಿಡಿತವನ್ನು ಇಟ್ಟಿರುತ್ತದೆ. LTE ವೇಗವಾದ ಮೀಡಿಯಾದಲ್ಲಿದ್ದರೆ ಅದು ಹೆಡ್ ಡಿ ವಾಯ್ಸ್ ಕಾಲಿಂಗ್ ಗೆ ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ ನಾವು ಕೆಲವು 10,000 ರುಪಾಯಿ ಒಳಗೆ ಖರೀದಿಸಬಹುದಾದ ಕೆಲವು 4G VoLTE ಮೊಬೈಲ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ . ಹಾಗಾದ್ರೆ ಆ ಫೋನ್ ಗಳು ಯಾವುವು ಎಂಬ ಪಟ್ಟಿ ಇಲ್ಲಿದೆ ನೋಡಿ.

  • 4G VoLTE ಬೆಂಬಲಿತ 10,000 ರುಪಾಯಿ ಒಳಗಿನ 10 ಬೆಸ್ಟ್ ಆಂಡ್ರಾಯ್ಡ್ ಫೋನ್ ಗಳಿವು

ಭಾರತದಲ್ಲಿ ವಾಸಿಸುವವರು ಈಗಾಗಲೇ VoLTE ಬಗ್ಗೆ ಕ್ರೇಝ್ ಹೊಂದಿರುತ್ತಾರೆ. ಆದರೆ ರಿಲಯನ್ಸ್ ಜಿಯೋ ಸಂಸ್ಥೆಗೆ ಧನ್ಯವಾದವನ್ನು ಅರ್ಪಿಸಬೇಕು ಯಾಕೆಂದರೆ ತಮ್ಮ ಎಲ್ಲಾ ಫೋನ್ ಗಳನ್ನು ಅವರು 4G VoLTE ಸ್ಮಾರ್ಟ್ ಫೋನ್ ಆಗಿ ಬದಲಾಯಿಸಿದ್ದಾರೆ. ಆದರೆ ಪ್ರಾರಂಭಿಕ ಹಂತಗಳಲ್ಲಿ VoLTE ನಲ್ಲಿ ಇಷ್ಟೊಂದು ಆಯ್ಕೆಗಳಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಈಗಿನ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ VoLTE ಅನೇಬಲ್ ಆಗಿರುತ್ತದೆ ಮತ್ತು. ಸ್ಮಾರ್ಟ್ಫೋನ್ಗಳಲ್ಲಿರುವ VoLTE ಕಾರ್ಯಕ್ಷಮತೆಯು ಬಳಕೆದಾರರನ್ನು LTE ಯೊಳಗೆ ಜೋಡಿಸಲು ಅನುಮತಿಸುತ್ತದೆ.

₹ 10,000 ಒಳಗಿನ ಬೆಸ್ಟ್‌ 4G ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು..!

LTE ಒಂದು ವೇಗದ ಮಾಧ್ಯಮ ಆಗಿದ್ದು, HD ವಾಯ್ಸ್ ಕಾಲಿಂಗ್ ಗೆ ಇದು ಅನುಮತಿ ನೀಡುತ್ತದೆ. ಹಿಂದೆಲ್ಲ ಈ ಆಯ್ಕೆಯು ಕೇವಲ ದುಬಾರಿ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ 4G VoLTE ಸಾಮರ್ಥ್ಯವು 10,000 ರುಪಾಯಿ ಒಳಗಿನ ಮೊಬೈಲ್ ಗಳಲ್ಲೂ ಲಭ್ಯವಿದೆ. ಹಾಗಾದ್ರೆ 10,000 ರುಪಾಯಿ ಒಳಗೆ ಈ ಸೌಲಭ್ಯ ಜೊತೆಗೆ ಇನ್ನಷ್ಟು ಆಕರ್ಷಕ ವೈಶಿಷ್ಟ್ಯತೆಗಳೊಂದಿಗೆ ಸಿಗುವ ಟಾಪ್ 10 ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಗಮನಿಸಿ.

1. ಶಿಯೋಮಿ ರೆಡ್ಮಿ ವೈ

1. ಶಿಯೋಮಿ ರೆಡ್ಮಿ ವೈ

ಶಿಯೋಮಿ ರೆಡ್ಮಿ ವೈ2 ಒಂದು ಉತ್ತಮ ಆಂಡರಾಯ್ಡ್ ಸ್ಮಾರ್ಟ್ ಫೋನ್ ಆಗಿದ್ದು 2018 ರಲ್ಲಿ ಬಿಡುಗಡೆಗೊಂಡಿದೆ. ಪ್ರೀಮಿಯಮ್ ಲುಕ್ ನಲ್ಲಿ ಬರುವ ಈ ಸ್ಮಾರ್ಟ್ ಫೋನ್ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ. 5.99 ಇಂಚಿನ ಡಿಸ್ಪ್ಲೇ ಜೊತೆಗೆ 720×1440p ರೆಸಲ್ಯೂಷನ್ ನ್ನು ಹೊಂದಿದೆ.

ಆ ಫೋನ್ 2Ghz octa-core ಪ್ರೊಸೆಸರ್ ನಿಂದ ಪವರ್ ಆಗಿದ್ದು, 3ಜಿಬಿ ಮೆಮೊರಿ ಹೊಂದಿದೆ. ಇದರ ಜೊತೆಗೆ 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೊ ಎಸ್ ಡಿ ಕಾರ್ಡ್ ಮೂಲಕ ಇದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಲು ಅವಕಾಶವಿದೆ. ಕ್ಯಾಮರಾ ವಿಚಾರದ ಬಗ್ಗೆ ಹೇಳುವುದಾದರೆ 12 ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 16 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾವನ್ನು ಇದು ಒಳಗೊಂಡಿದೆ.

ಶಿಯೋಮಿ ರೆಡ್ಮಿ ವೈ2 ನೂತನ ಆಂಡ್ರಾಯ್ಡ್ ಓರಿಯೋ ಮೂಲಕ ರನ್ ಆಗುತ್ತದೆ ಇದರ ಬ್ಯಾಟರಿ ಕೆಪಾಸಿಟಿ 3080mAh ನಾನ್ ರಿಮೂವೇಬಲ್ ಆಗಿದೆ.3ಜಿ ಮತ್ತು 4ಜಿ ಎರಡಕ್ಕೂ ಈ ಫೋನ್ ಬೆಂಬಲ ನೀಡುತ್ತದೆ ಮತ್ತು ಇದು ಒಂದು ಅತ್ಯುತ್ತಮ 4G VoLTE ಮೊಬೈಲ್ ಭಾರತದಲ್ಲಿ 10,000 ರುಪಾಯಿ ಬೆಲೆಯ ಒಳಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

2. ಹುವಾಯಿ ಹಾನರ್ 7ಸಿ

2. ಹುವಾಯಿ ಹಾನರ್ 7ಸಿ

ಒಂದು ವೇಳೆ ಉತ್ತಮವಾಗಿ ಕಾಣಿಸುವ ಸ್ಮಾರ್ಟ್ ಫೋನ್ ಒಂದನ್ನು ಖರೀದಿಸಬೇಕು ಜೊತೆಗೆ ಅದರಲ್ಲಿ ಪವರ್ ಫುಲ್ ಆಗಿರುವ ವೈಶಿಷ್ಟ್ಯತೆಗಳು ಇರಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಹೇಳಿ ಮಾಡಿಸಿದ ಫೋನ್ ಎಂದರೆ ಹುವಾಯಿ ಹಾನರ್ 7ಸಿ. ಮಾರ್ಚ್ 2018 ರಲ್ಲಿ ಈ ಫೋನ್ ನ್ನು ಬಿಡುಗಡೆಗೊಳಿಸಲಾಯಿತು.

ಹುವಾಯಿ ಹಾನರ್ 7ಸಿ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 1.8GHz octa-core ಪ್ರೊಸೆಸರ್ ಮತ್ತು 4GB RAMಇದೆ. ಇದನ್ನು ಹೊರತು ಪಡಿಸಿ, 64 ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಅದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಬಹುದು.

ಕ್ಯಾಮರಾ ವಿಭಾಗವನ್ನು ಪರಿಗಣಿಸಿದರೆ, ಹುವಾಯಿ ಹಾನರ್ 7ಸಿ 13 ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 8 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವನ್ನು ಒಳಗೊಂಡಿದೆ. ನೂತನ ಆಂಡ್ರಾಯ್ಡ್ ಓರಿಯೋ ಮೂಲಕ ಇದು ರನ್ ಆಗುತ್ತದೆ. 10000 ರುಪಾಯಿ ಒಳಗೆ ಲಭ್ಯವಾಗುವ ಒಂದು ಅತ್ಯುತ್ತಮವಾದ 4G VoLTE ಸಾಮರ್ಥ್ಯದ ಮೊಬೈಲ್ ಗಳಲ್ಲಿ ಇದೂ ಒಂದು.

3. ಇನ್ ಫೋಕಸ್ ವಿಷನ್ 3

3. ಇನ್ ಫೋಕಸ್ ವಿಷನ್ 3

ಇನ್ ಫೋಕಸ್ ವಿಷನ್ ಕೂಡ 2018 ರಲ್ಲಿ ಬಿಡುಗಡೆಗೊಂಡಿರುವ ಒಂದು ಪವರ್ ಫುಲ್ ಫೋನ್ ಗಳಲ್ಲಿ ಒಂದೆನಿಸಿದೆ. ಈ ಫೋನ್ ಕೇವಲ 8000 ರುಪಾಯಿ ಒಳಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಮತ್ತು ಇದು ಇತರೆ ಮಿಡ್ ರೇಂಜ್ ಫೋನ್ ಗಳ ಜೊತೆಗೆ ಸ್ಪರ್ಧೆಯೊಡ್ಡುವ ಹಲವಾರು ವೈಶಿಷ್ಟ್ಯತೆಗಳ್ನು ಒಳಗೊಂಡಿದೆ.

ಇನ್ ಫೋಕಸ್ ವಿಷನ್ 3 5.7-ಇಂಚಿನ ಡಿಸ್ಪ್ಲೇ ಮತ್ತು 1.3Ghz quad-core ಪ್ರೊಸೆಸರ್ ನಿಂದ ಪವರ್ ಆಗಿದೆ. ಈ ಫೋನ್ 2ಜಿಬಿ ಮೆಮೊರಿ ಮತ್ತು 16ಜಿಬಿ ಇಂಟರ್ನಲ್ ಸ್ಟೋರೇಜ್ ನ್ನು ಹೊಂದಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನಷ್ಟು ಹಿಗ್ಗಿಸಿಕೊಳ್ಳುವ ಅವಕಾಶ ಬಳಕೆದಾರರಿಗೆ ಲಭ್ಯವಿದೆ.

ಈ ಫೋನಿನ ಕ್ಯಾಮರಾಗಳ ಬಗ್ಗೆ ಮಾತನಾಡುವುದಾದರೆ ಪ್ರೈಮರಿ ಕ್ಯಾಮರಾ 13 ಮೆಗಾ ಪಿಕ್ಸಲ್ ಸಾಮರ್ಥ್ಯ ಹೊಂದಿದ್ದರೆ, ಸೆಕೆಂಡರಿ ಸೆಲ್ಫೀ ಕ್ಯಾಮರಾ 8 ಮೆಗಾ ಪಿಕ್ಸಲ್ ಸಾಮರ್ಥ್ಯ ಹೊಂದಿದೆ. ಇದೆಲ್ಲವನ್ನು ಹೊರತು ಪಡಿಸಿ ಇನ್ ಫೋಕಸ್ ವಿಷನ್ 3 Android Nougat ನಿಂದ ರನ್ ಆಗುತ್ತದೆ ಮತ್ತು 4000mAh ನಾನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದೆ

ಈ ಫೋನ್ USB OTG, 3G, 4G, Wi-Fi, GPS ಹಾಗೂ ಇನ್ನು ಹಲವು ಕನೆಕ್ಟಿವಿಟಿ ಅವಕಾಶಗಳನ್ನು ಒದಗಿಸುತ್ತದೆ, ಇದು ಕೂಡ ಅತ್ಯುತ್ತಮ 4G VoLTE ಮೊಬೈಲ್ ಆಗಿದ್ದು 10,000 ರುಪಾಯಿ ಒಳಗೆ ಲಭ್ಯವಾಗುವ 2018 ರ ಫೋನ್ ಗಳಲ್ಲಿ ಒಂದೆನಿಸಿದೆ.

4. ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಪ್ರೋ

4. ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಪ್ರೋ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಪ್ರೋ ಮತ್ತೊಂದು ಆಂಡ್ರಾಯ್ಡ್ ಫೋನ್ ಆಗಿದ್ದು 2016 ರ ಜೂನ್ ನಲ್ಲಿ ಬಿಡುಗಡೆಗೊಂಡಿದೆ. ಹಲವಾರು ಧನಾತ್ಮಕ ರೇಟಿಂಗ್ ನ ಕಾರಣದಿಂದಾಗಿ ಬಳಕೆದಾರು ಇದಕ್ಕೆ ಯಶಸ್ಸಿನ ಮುದ್ರೆ ಒತ್ತಿದ್ದಾರೆ. ಇದು 5 ಇಂಚಿನ ಡಿಸ್ಪ್ಲೇ ಹೊಂದಿದ್ದು ಆಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಪ್ರೋ 1.5Ghz quad-core ಪ್ರೊಸೆಸರ್ ನ್ನು ಹೊಂದೆ ಮತ್ತು 2GB RAMಯನ್ನು ಒಳಗೊಂಡಿರುತ್ತದೆ. ಈ ಫೋನ್ 16GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ಕ್ಯಾಮರಾ ವಿಚಾರದ ಬಗ್ಗೆ ಹೇಳುವುದಾದರೆ 8 ಮೆಗಾ ಪಿಕ್ಸಲ್ ನ ಪ್ರೈಮರಿ ಕ್ಯಾಮರಾವನ್ನು ಮತ್ತು 5 ಮೆಗಾ ಪಿಕ್ಸಲ್ ನ ಮುಂಭಾಗದ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಹಾಗಾಗಿ ಒಟ್ಟಾರೆಯಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಪ್ರೋ ಅತ್ಯುತ್ತಮ 4G VoLTE ಮೊಬೈಲ್ ಆಗಿದ್ದು 10000 ರುಪಾಯಿ ಒಳಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

5. ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್

5. ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್

ಪ್ರೀಮಿಯಮ್ ಲುಕ್ ಮತ್ತು ದೊಡ್ಡ ದೊಡ್ಡ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಫೋನ್ ಒಂದು ನಿಮ್ಮ ಕೈ ಸೇರಬೇಕು ಎಂದು ಬಯಸುತ್ತಿದ್ದರೆ ಖಂಡಿತ ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ ಫೋನ್ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಅಕ್ಟೋಬರ್ 2016 ರಲ್ಲಿ ಈ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಈ ಸ್ಮಾರ್ಟ್ ಫೋನ್ 5.5- ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು 1.6Ghz octa-core ಪ್ರೊಸೆಸರ್ ನಿಂದ ಪವರ್ ಆಗಿರುತ್ತದೆ. 3GB of RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದು

ಇದರ ಜೊತೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ ನಲ್ಲಿ 13 ಮೆಗಾ ಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 8 ಮೆಗಾ ಪಿಕ್ಸಲ್ ನ ಮುಂಭಾಗದ ಸೆಲ್ಫೀ ಕ್ಯಾಮರಾ ಲಭ್ಯವಿದೆ. ಆಂಡ್ರಾಯ್ಡ್ ಮೂಲಕ ರನ್ ಆಗುವ ಇದು 3300mAh ನಾನ್ ರಿಮೂವೇಬಲ್ ಬ್ಯಾಟರಿಯನ್ನು ಒಳಗೊಂಡಿರುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ನೆಕ್ಸ್ಟ್ ಕೂಡ 4G VoLTE ಮೊಬೈಲ್ ಗಳಲ್ಲಿ 10000 ರುಪಾಯಿ ಒಳಗೆ ಸಿಗುವ ಬೆಸ್ಟ್ ಫೋನ್ ಆಗಿದೆ.

6. ನೋಕಿಯಾ 3

6. ನೋಕಿಯಾ 3

2018 ರಲ್ಲಿ ಬಿಡುಗಡೆಗೊಂಡಿರುವ ಮತ್ತೊಂದು ಬೆಸ್ಟ್ ಸ್ಮಾರ್ಟ್ ಫೋನ್ ಗಳಲ್ಲಿ ನೋಕಿಯಾ 3 ಕೂಡ ಒಂದು. ವಿಶ್ವದಾದ್ಯಂತ ಮಿಲಿಯನ್ ಗಟ್ಟಲೆ ಬಳಕೆದಾರರು ಇದನ್ನು ಇಷ್ಟ ಪಟ್ಟಿದ್ದಾರೆ. 10,000 ರುಪಾಯಿ ಒಳಗೆ ಖರೀದಿಸಬಹುದಾದ ಮತ್ತೊಂದು 4G VoLTE ಬೆಂಬಲಿತ ಸ್ಮಾರ್ಟ್ ಫೋನ್ ಎಂದರೆ ಅದು ನೋಕಿಯಾ 3.

ಇದು ದೊಡ್ಡದಾದ 5-inch ಇಂಚಿನ ಡಿಸ್ಪ್ಲೇ ಹೊಂದಿದ್ದು 1.3GHz quad-core ಪ್ರೊಸೆಸರ್ ನ್ನು ಒಳಗೊಂಡಿದೆ. ಇದನ್ನು ಹೊರತು ಪಡಿಸಿ 2GB RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ಹೊಂದಿದೆ ಜೊತೆಗೆ ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳುವ ಅವಕಾಶವೂ ಲಭ್ಯವಿದೆ.

ಕ್ಯಾಮರಾ ವಿಚಾರವನ್ನು ಹೇಳುವುದಾದರೆ, 8 ಮೆಗಾ ಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 8 ಮೆಗಾ ಪಿಕ್ಸಲ್ ನ ಸೆಲ್ಫೀ ಕ್ಯಾಮರಾವನ್ನು ಇದು ಒಳಗೊಂಡಿದೆ. ಈ ಫೋನ್ ರನ್ ಆಗುವುದು ಆಂಡ್ರಾಯ್ಡ್ 7.0 Nougat out of the box ನಿಂದ.

7. ಲೆನೊವಾ ಕೆ8 ಪ್ಲಸ್

7. ಲೆನೊವಾ ಕೆ8 ಪ್ಲಸ್

ಲೆನೊವಾ ಕೆ8 ಪ್ಲಸ್ 10,000 ರೂಪಾಯಿ ಒಳಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಮತ್ತೊಂದು ಅತ್ಯತ್ತುಮ ಆಂಡ್ರಾಯ್ಡ್ ಫೋನ್ ಆಗಿದೆ . ಇದು ಪ್ರೀಮಿಯಮ್ ಡಿಸೈನ್ ನ್ನು ಹೊಂದಿದ್ದು ಸಾಕಷ್ಟು ಉತ್ತಮ ವೈಶಿಷ್ಟ್ಯತೆಗಳಿಂದ ಕೂಡಿದೆ. 2017 ರಲ್ಲಿ ಈ ಸ್ಮಾರ್ಟ್ ಫೋನ್ ಬಿಡುಗಡೆಗೊಂಡಿದ್ದು, ಬಳಕೆದಾರರಿಂದ ಪ್ರಶಂಸೆಗೂ ಪಾತ್ರವಾಗಿದೆ.

ಲೆನೋವಾ ಕೆ8 ಪ್ಲಸ್ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ, ಇದು 5.20-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯೂಷನ್ 1080×1920P ಆಗಿದೆ. ಇದು 2.5GHz octa-core ಪ್ರೊಸೆಸರ್ ನಿಂದ ಕೂಡಿದೆ ಮತ್ತು 3GB ಮೆಮೊರಿಯನ್ನು ಹೊಂದಿದೆ 32GB ಇಂಟರ್ನಲ್ ಸ್ಟೇರೇಜ್ ಇದ್ದು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳುವ ಅವಕಾಶವಿದೆ .

ಕ್ಯಾಮರಾ ವಿಚಾರಕ್ಕೆ ಬಂದರೆ ಲೆನೊವಾ ಕೆ8 ಪ್ಲಸ್ 13 - ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 8 ಮೆಗಾ ಪಿಕ್ಸಲ್ ನ ಮುಂಭಾಗದ ಕ್ಯಾಮರಾವನ್ನು ಹೊಂದಿದೆ.ಒಟ್ಟಾರೆ ಹೇಳುವುದಾದರೆ ಲೆನೊವಾ ಕೆ8 ಪ್ಲಸ್ 10000 ರುಪಾಯಿ ಒಳಗೆ ಲಭ್ಯವಾಗುವ 4G VoLTE ಮೊಬೈಲ್ ಗಳಲ್ಲಿ ಮತ್ತೊಂದು ಅಧ್ಬುತ ಮೊಬೈಲ್ ಗಳ ಪಟ್ಟಿಗೆ ಸೇರಲಿದೆ.

8.ಎಲ್ ಜಿ ಕ್ಯೂ6

8.ಎಲ್ ಜಿ ಕ್ಯೂ6

ಎಲ್ ಜಿ ಕ್ಯೂ 6 10,000 ರುಪಾಯಿಯೊಳಗೆ ಸಿಗುವ ಮತ್ತೊಂದು ಬೆಸ್ಟ್ ಫೋನ್. ಇದು 2017 ರ ಜುಲೈ ನಲ್ಲಿ ಬಿಡುಗಡೆಗೊಂಡು ಅನೇಕ ಬಳಕೆದಾರರ ಬಳಗವನ್ನು ಹೊಂದಿದೆ. ಇದರಲ್ಲಿ 5.5- ಇಂಚಿನ ಡಿಸ್ಪ್ಲೇ ಇದ್ದು 1080×2160 pixels ರೆಸಲ್ಯೂಷನ್ ಹೊಂದಿದೆ.

ಎಲ್ ಜಿ ಕ್ಯೂ6 ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ, 1.4GHz octa-core ಪ್ರೊಸೆಸರ್ ನ್ನು ಹೊಂದಿದೆ ಮತ್ತು ಇದರಲ್ಲಿ 3GB RAM ಇದೆ. ಜೊತೆಗೆ 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯೂ ಇದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳುವ ಅವಕಾಶವಿದೆ.

ಕ್ಯಾಮರಾ ವಿಚಾರದ ಬಗ್ಗೆ ಪ್ರಸ್ತಾಪಿಸುವುದಾದರೆ 13 ಮೆಗಾ ಪಿಕ್ಸಲ್ ಪ್ರೈಮರಿ ಕ್ಯಾಮರಾ ಮತ್ತು 5 ಮೆಗಾ ಪಿಕ್ಸಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಎಲ್ ಜಿ ಕ್ಯೂ6 Android Nougat out of the box ನಿಂದ ರನ್ ಆಗುತ್ತದೆ. ಇದರಲ್ಲಿ 3000mAh ನಾನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದೆ.

9. ರೆಡ್ಮಿ 5

9. ರೆಡ್ಮಿ 5

ರೆಡ್ಮಿ 5 ಶಿಯೋಮಿ ಕಂಪೆನಿ ಮತ್ತೊಂದು ಬೆಸ್ಟ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಒಂದೆನಿಸಿದ್ದು 2017 ರ ಡಿಸೆಂಬರ್ ನಲ್ಲಿ ಬಿಡುಗಡೆಗೊಂಡಿದೆ. ಈ ಫೋನ್ 5.7- ಇಂಚಿನ ಡಿಸ್ಪ್ಲೇ ಹೊಂದಿದ್ದು ಅದರ ರೆಸಲ್ಯೂಷನ್ 720×1440p ಆಗಿದೆ. ಆಕರ್ಷಕವಾದ ಡಿಸೈನ್ ಮತ್ತು ವೈಶಿಷ್ಟ್ಯತೆಗಳನ್ನು ರೆಡ್ಮಿ 5 ಹೊಂದಿದೆ.

ವೈಶಿಷ್ಟ್ಯತೆಗಳ ಪಟ್ಟಿಯನ್ನು ಗಮನಿಸುವುದಾದರೆ ರೆಡ್ಮಿ 5 1.8GHz octa-core ಪ್ರೊಸೆಸರ್ ಜೊತೆಗೆ 3GB ಮೆಮೊರಿ ಹೊಂದಿದೆ. 32GB ಇಂಟರ್ನಲ್ ಸ್ಟೋರೇಜ್ ಅವಕಾಶವಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಬಳಕೆ ಮಾಡಬಹುದು.

ಕ್ಯಾಮರಾ ವಿಭಾಗದಲ್ಲಿ 12 ಮೆಗಾ ಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 5 ಮೆಗಾ ಪಿಕ್ಸಲ್ ನ ಸೆಲ್ಫೀ ಕ್ಯಾಮರಾ ಈ ಪೋನಿನಲ್ಲಿದೆ. ಈ ಫೋನ್ ರನ್ ಆಗುವುದು ಆಂಡ್ರಾಯ್ಡ್ 7.1.2 out of the boxನಿಂದ.

10. ಮೋಟೋ ಇ4 ಪ್ಲಸ್

10. ಮೋಟೋ ಇ4 ಪ್ಲಸ್

ಮತ್ತೊಂದು ಮೋಟೋರೋಲಾ ಫೋನ್ 10,000 ರುಪಾಯಿ ಒಳಗೆ ಭಾರತದಲ್ಲಿ ಖರೀದಿಸಲು ಅವಕಾಶವಿರುವುದೆಂದರೆ ಅದು ಮೋಟೋ ಇ4 ಪ್ಲಸ್. ಇದು ಪ್ರೀಮಿಯಮ್ ಡಿಸೈನ್ ಹೊಂದಿದ್ದು ವಿಭಿನ್ನ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರ ಡಿಸ್ಪ್ಲೇ 5.5-ಇಂಚಿನಷ್ಟಿದ್ದು ರೆಸಲ್ಯೂಷನ್ 720×1280 ಪಿಕ್ಸಲ್ ಆಗಿದೆ.

ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಮೋಟೋ ಇ4 ಪ್ಲಸ್ 1.3GHz quad-core ಪ್ರೊಸೆಸರ್ ಜೊತೆಗೆ 3GB ಮೆಮೊರಿ ಇದೆ. ಇದಿಷ್ಟೇ ಅಲ್ಲ ಮೋಟೋ ಇ4 ಪ್ಲಸ್ 32GB ಇಂಟರ್ನಲ್ ಸ್ಟೋರೇಜ್ ಇದ್ದು 128 ಜಿಬಿ ವರೆಗೆ ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ಕ್ಯಾಮರಾ ಬಗ್ಗೆ ಮಾತನಾಡುವುದಾದರೆ 13-ಮೆಗಾ ಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 5-ಮೆಗಾ ಪಿಕ್ಸಲ್ ನ ಸೆಕೆಂಡರಿ ಸೆಲ್ಫೀ ಕ್ಯಾಮರಾ ಈ ಫೋನಿನಲ್ಲಿದೆ.ಒಟ್ಟಾರೆ ಹೇಳಬೇಕು ಎಂದರೆ 4G VoLTE ಮೊಬೈಲ್ ಗಳಲ್ಲಿ 10,000 ರುಪಾಯಿ ಒಳಗೆ ಸಿಗುವ 2018 ರ ಮೊಬೈಲ್ ಗಳ ಸಾಲಿನಲ್ಲಿ ಮೋಟೋ ಇ4 ಪ್ಲಸ್ ಕೂಡ ಸೇರುತ್ತದೆ.

Best Mobiles in India

English summary
Top 10 Best Android 4G VoLTE Mobiles Under 10000. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X