ಆಪಲ್ ಬಿಟ್ಟು ಒಪ್ಪೋ F7 ಸ್ಮಾರ್ಟ್‌ಫೋನ್ ಖರೀದಿಸಲು ಈ 7 ಕಾರಣಗಳು ಸಾಕು...!

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ ಬಿಡುಗಡೆ ಮಾಡಿರುವ ಒಪ್ಪೋ F7 ಸ್ಮಾರ್ಟ್‌ಫೋನ್ ಕುರಿತು ಟಾಕ್‌ಗಳು ಹೆಚ್ಚಾಗಿದ್ದು, ಕೆಲವೇ ದಿನಗಳಲ್ಲಿ ಗ್ರಾಹಕರ ಕೈಗೆ ಸೇರಲಿರುವ ಒಪ್ಪೋ F7 ಸ್ಮಾರ್ಟ್‌ಫೋನ್ ವಿಶೇಷತೆಗಳು ಈಗಾಗಲೇ ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚುಗೆ ಪಾತ್ರವಾಗಿದೆ. ಹೆಚ್ಚಾಗಿ ಈ ಸ್ಮಾರ್ಟ್‌ಫೋನಿನಲ್ಲಿರುವ ಸೆಲ್ಫಿ ಆಯ್ಕೆಯನ್ನು ಹೆಚ್ಚಿನ ಜನರು ಮೆಚ್ಚುಕೊಂಡಿದ್ದರೆ, ಹಲವು ಮಂದಿ ಐಫೋನ್ X ಮಾದರಿಯ ಡಿಸ್‌ಪ್ಲೇ ನೋಚ್ ಅನ್ನು ಇಷ್ಟಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ನೀವು ಕೊಡುವ ಬೆಲೆಗೆ ಒಪ್ಪೋ F7 ಸ್ಮಾರ್ಟ್‌ಫೋನ್ ಬೆಸ್ಟ್ ಏಕೆ ಎನ್ನುವ ಕುರಿತು ಮಾಹಿತಿಯೂ ಇಲ್ಲಿದೆ.

ಆಪಲ್ ಬಿಟ್ಟು ಒಪ್ಪೋ F7 ಸ್ಮಾರ್ಟ್‌ಫೋನ್ ಖರೀದಿಸಲು ಈ 7 ಕಾರಣಗಳು ಸಾಕು...!

ಫುಲ್ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳುವ ಒಪ್ಪೋ F7 ಸ್ಮಾರ್ಟ್‌ಫೋನ್, 25MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಕೃತಕ ಬುದ್ದಿಮತ್ತೆಯ ಸಹಾಯದಿಂದ ನಿಮ್ಮ ಫೋಟೋಗಳನ್ನು ಸುಂದರವಾಗಿ ಸೆರೆಹಿಡಿಯಲು ಶಕ್ತವಾಗಿದೆ. ಉತ್ತಮ ಸಾಫ್ಟ್‌ವೇರ್ ಫರ್ಫಾರ್ಮೆಂಸ್ ಹೊಂದಿರುವ ಒಪ್ಪೋ F7 ಸ್ಮಾರ್ಟ್‌ಫೋನ್ ಬೆಸ್ಟ್‌ ಎನ್ನುವುದಕ್ಕೆ ಈ 7 ಫೀಚರ್‌ಗಳು ಕಾರಣ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒಪ್ಪೋ F7 ಸ್ಮಾರ್ಟ್‌ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದವರಿಗೆ ಈ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಹೈಎಂಡ್ 25MP ಸೆಲ್ಫಿ ಕ್ಯಾಮೆರಾದೊಂದಿಗೆ ಕೃತಕಬುದ್ದಿಮತ್ತೆ..!

ಹೈಎಂಡ್ 25MP ಸೆಲ್ಫಿ ಕ್ಯಾಮೆರಾದೊಂದಿಗೆ ಕೃತಕಬುದ್ದಿಮತ್ತೆ..!

ಈಗಾಗಲೇ ಮಾರುಕಟ್ಟೆಯಲ್ಲಿ ಸೆಲ್ಫಿ ಎಕ್ಸಪರ್ಟ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಒಪ್ಪೋ, ಈ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿಯೇ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ 25MP ಕ್ಯಾಮೆರಾವನ್ನು ಅಳವಡಿಸಿದೆ. ಅಲ್ಲದೇ ನೀವು ಸೆರೆಹಿಡಿಯವು ಸೆಲ್ಫಿಯೂ ಉತ್ತಮವಾಗಿ ಮೂಡಿ ಬರುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ರಿಯಲ್ ಟೈಮಿನಲ್ಲಿ HDR ಫೋಟೋಗಳನ್ನು ಈ ಸೆಲ್ಪಿ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಬಹುದಾಗಿದೆ. ಇದಕ್ಕಾಗಿಯೇ ಬ್ಯೂಟಿ 2.0ವನ್ನು ನೀಡಲಾಗಿದೆ. ಅಲ್ಲದೇ ಕೃತಕ ಬುದ್ದಿಮತ್ತೆಯೂ ನಿಮ್ಮ ಮುಖ 296 ಪಾಯಿಂಟ್ ಗಳನ್ನು ಗುರುತಿಸಿ, ಫೋಟೋವನ್ನು ಸುಂದರವಾಗಿಸಲಿದೆ.

ಸೂಪರ್ ಫುಲ್‌ವ್ಯೂ 2.0 ದೊಂದಿಗೆ 19:9 ಅನುಪಾತದ ಡಿಸ್‌ಪ್ಲೇ:

ಸೂಪರ್ ಫುಲ್‌ವ್ಯೂ 2.0 ದೊಂದಿಗೆ 19:9 ಅನುಪಾತದ ಡಿಸ್‌ಪ್ಲೇ:

ಇದಲ್ಲದೇ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ 6.2 ಇಂಚಿನ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು FHD ಪ್ಲಸ್ ಗುಣಮಟ್ಟವನ್ನು ಹೊಂದಿದ್ದು, ವಿಡಿಯೋಗಳನ್ನು ನೋಡುವ ಅನುಭವನ್ನು ಹೆಚ್ಚು ಮಾಡಲಿದೆ. ಇದಲ್ಲದೇ 19:9 ಅನುಪಾತದ ಡಿಸ್‌ಪ್ಲೇ ಇದಾಗಿದ್ದು, ನೋಡಲು ಇಷ್ಟು ದೊಡ್ಡದಾಗಿ ಕಾಣಿಸಲಿದೆ. ಅಲ್ಲದೇ ಮುಂಭಾಗದಲ್ಲಿರುವ ಕ್ಯಾಮೆರಾ ನೋಚ್ ಹೊಸ ಲುಕ್ ನೀಡುತ್ತಿದೆ.

ಹಿಂಭಾಗದ ಕ್ಯಾಮೆರಾವೇನು ಕಮ್ಮಿ ಇಲ್ಲ:

ಹಿಂಭಾಗದ ಕ್ಯಾಮೆರಾವೇನು ಕಮ್ಮಿ ಇಲ್ಲ:

ಇದಲ್ಲದೇ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿರುವ ಹಿಂಬದಿಯ ಕ್ಯಾಮೆರಾವೂ ಉತ್ತಮವಾಗಿದ್ದು, 16MPಯದ್ದಾಗಿದ್ದು, f/1.8 ಅಪರ್ಚರ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ ಲೋಲೈಟ್ ಕಂಡಿಷನ್ ನಲ್ಲಿ ಪೋಟೋಗಳನ್ನು ಸೆರೆಹಿಡಿಯಲಿದೆ. ಅಲ್ಲದೇ ಉತ್ತಮ ಫೋಟ್ರೆಟ್ ಗಳನ್ನು ಇದರಲ್ಲಿ ಕ್ಲಿಕ್ ಮಾಡಬುದು. ಇದಕ್ಕಾಗಿ ಕೃತಕಬುದ್ದಿಮತ್ತೆ ಸಹಾಯವನ್ನು ಮಾಡಲಿದೆ. ಅಲ್ಲದೇ LED ಫ್ಲಾಷ್ ಲೈಟ್ ಸಹ ಕಾಣಬಹುದಾಗಿದೆ.

ಕಲರ್ ಒಎಸ್ ಆಂಡ್ರಾಯ್ಡ್ ನೊಂದಿಗೆ:

ಕಲರ್ ಒಎಸ್ ಆಂಡ್ರಾಯ್ಡ್ ನೊಂದಿಗೆ:

ಒಪ್ಪೋ F7 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಅನುಭವನ್ನು ಉತ್ತಮ ಪಡಿಸುವಸಲುವಾಗಿ ಕಲರ್ OS 5.0ವನ್ನು ಒಪ್ಪೋ ಈ ಸ್ಮಾರ್ಟ್‌ಫೋನಿನಲ್ಲಿ ನೀಡಲು ಮುಂದಾಗಿದೆ. ಇದು ಉತ್ತಮ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿದ್ದು, ಫೇಸ್‌ಅನ್‌ಲಾಕ್ ಸೇರಿಂದತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.

ಉತ್ತಮ RAM ಮತ್ತು CPU

ಉತ್ತಮ RAM ಮತ್ತು CPU

ಒಪ್ಪೋ F7 ಸ್ಮಾರ್ಟ್‌ಫೋನ್ ಹೆಚ್ಚಿನ ಗ್ರಾಫಿಕ್ಸ್ ಗಳನ್ನು ಪ್ರದರ್ಶಿಸಲಿದ್ದು, ಇದಕ್ಕಾಗಿಯೇ 4GB/6GB RAM ಅನ್ನು ನೀಡಲಾಗಿದೆ. ಇದರೊಂದಿಗೆ ಹೆಲಿಯೊ P60 CPU ವನ್ನು ನೀಡಲಾಗಿದೆ. ಇದು ಈ ಸ್ಮಾರ್ಟ್‌ಫೋನ್ ಅನ್ನು ಸುಲಭವಾಗಿ ಕಾರ್ಯನಿರ್ವಹಿಸುವಂತೆ ಮಾಡಲಿದೆ ಅಲ್ಲದೇ ಹೈ ಎಂಡ್ ಗೇಮ್‌ಗಳನ್ನು ಸುಲಭವಾಗಿ ಇದರಲ್ಲಿ ಆಡಬಹುದು.

ಹೈಬ್ರಿಡ್ ಸಿಮ್ ಸ್ಲಾಟ್:

ಹೈಬ್ರಿಡ್ ಸಿಮ್ ಸ್ಲಾಟ್:

ಒಪ್ಪೋ F7 ಸ್ಮಾರ್ಟ್‌ಫೋನ್ ಫೋನಿನಲ್ಲಿ ಹೈಬ್ರಿಡ್ ಸಿಮ್ ಸ್ಲಾಟ್ ಅನ್ನು ನೋಡಬಹುದಾಗಿದೆ. ಆದರೆ ಇದರಲ್ಲಿ ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಮೂರು ಸ್ಲಾಟ್ ಗಳನ್ನು ಬಳಕೆದಾರರಿಗೆ ನೀಡಲಾಗಿದೆ.

Here's how the Face ID of the newly launched Oppo A83 works (KANNADA)
ಹೈ ಪವರ್ ಬ್ಯಾಟರಿ:

ಹೈ ಪವರ್ ಬ್ಯಾಟರಿ:

ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ 3400mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಎರಡು ದಿನದ ಬಾಳಿಕೆಯನ್ನು ನೀಡಲಿದೆ ಎಂದು ಕಂಪನಿಯೂ ಹೇಳಿಕೊಂಡಿದೆ. ಅಲ್ಲದೇ ಇದರಲ್ಲಿರುವ ಒಎಸ್ ಬ್ಯಾಟರಿ ಬಾಳಿಕೆಯನ್ನು ಉತ್ತಮಪಡಿಸಲಿದೆ ಎನ್ನಲಾಗಿದ್ದು, ಎಪ್ರಿಲ್ 2 ರಂದು ಒಪ್ಪೋ F7 ಸ್ಮಾರ್ಟ್‌ಫೋನ್ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Top features that make OPPO F7 the best-in-class Android smartphone in its price-point. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X