Subscribe to Gizbot

ಜಗತ್ತು ನಿಬ್ಬೆರಗಾಗುವ ಮತ್ತೊಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!!.ಕೇವಲ 12 ಸಾವಿರಕ್ಕೆ!!

Written By:

ಬಹುತೇಕ ನೀವು ಹೆಸರೇ ಕೇಳಿಲ್ಲದ ಚೀನಾದ ಮತ್ತೊಂದು ಕಂಪೆನಿಯೊಂದು ಮೊಬೈಲ್ ಜಗತ್ತಿಗೆ ಶಾಕ್ ನೀಡುವಂತಹ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ಶಿಯೋಮಿ, ಒನ್‌ಪ್ಲಸ್‌ನಂತಹ ಚೀನಾದ ಕಂಪೆನಿಗಳಿಗೆ ಸೆಡ್ಡು ಹೊಡೆಯುವ "ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಈ "ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ 6080mAh ಬ್ಯಾಟರಿ, 6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹಾಗೂ 4 ಕ್ಯಾಮೆರಾಗಳಂತಹ ಎಲ್ಲಾ ಹೈ ಎಂಡ್ ಫೀಚರ್‌ಗಳನ್ನು ಹೊಂದಿದ್ದು, ಬೆಲೆ ಮಾತ್ರ ಶಿಯೋಮಿಗೆ ಸೆಡ್ಡುಹೊಡೆಯುವಂತಿದೆ.!! ಹಾಗಾದರೆ, 'ಯುಲೆಫೊನ್ ಪವರ್ 3" ಞಫೋನ್ ಫೀಚರ್ಸ್ ಏನು? ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6080mAh ಬಿಗ್ ಬ್ಯಾಟರಿ!!

6080mAh ಬಿಗ್ ಬ್ಯಾಟರಿ!!

ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಯಾವ ಮೊಬೈಲ್ ಹೊಂದಿರದ ಬ್ಯಾಟರಿ ಶಕ್ತಿಯನ್ನು ಹೊತ್ತು "ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.! ಇಷ್ಟು ದೊಡ್ಡ ಬ್ಯಾಟರಿ 5V/3A ಫಾಸ್ಟ್ ಚಾರ್ಜಗಿಂಗ್ ಮೂಲಕ ಕೇವಲ 120 ನಿಮಿಷಕ್ಕೆ ಪೂರ್ತಿ ಚಾರ್ಜ್ ಆಗಲಿದೆ ಎಂದು ಕಂಪೆನಿ ತಿಳಿಸಿದ್ದು, ಸ್ಮಾರ್ಟ್‌ಫೋನ್ 4 ದಿನಗಳಿಗಿಂತ ಹೆಚ್ಚು ಕಾರ್ಯನಿರ್ವಹಣೆ ನೀಡಲಿದದೆ.!!

6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ

6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ

ದೊಡ್ಡ ಡಿಸ್‌ಪ್ಲೇ ಇಷ್ಟ ಪಡುವವರಿಗಾಗಿಯೇ ''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ 6 ಇಂಚ್ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.! ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಹೊಂದಿರದ 2160 x 1080 ಪಿಕ್ಸೆಲ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಮಲ್ಟಿಮೀಡಿಯಾ ಪ್ರಿಯರಿಗೂ ಹೇಳಿ ಮಾಡಿಸಿದಂತಿದೆ.!!

ಕ್ಯಾಮೆರಾಗೆ ಎಲ್ಲರೂ ಫಿದಾ!!

ಕ್ಯಾಮೆರಾಗೆ ಎಲ್ಲರೂ ಫಿದಾ!!

''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಟಾಂಗ್ ನೀಡಿದೆ. ಈ ಫೋನ್ ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, 16MP ಮತ್ತು 5MPಯ ಎರಡು ರಿಯರ್ ಕ್ಯಾಮೆರಾ ಹಾಗೂ 21MP ಮತ್ತು 5MPಯ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಡಿಸ್‌ಎಲ್‌ಆರ್ ರೀತಿಯ ಬೊಕ್ಕೆ ಚಿತ್ರಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ತೆಗೆಯಬಹುದಂತೆ!!

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

ಮೀಡಿಯಾಟೆಕ್ ಹೀಲಿಯೋ ಪಿ23 (64ಬಿಟ್) ಪ್ರೊಸೆಸರ್ ಅನ್ನು ''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.!! ಇನ್ನು 6GB RAM ಮತ್ತು 64GB ಮೆಮೊರಿ ಸ್ಮಾರ್ಟ್‌ಫೋನ್‌ನಲ್ಲಿದ್ದು, ಆಂಡ್ರಾಯ್ಡ್ 8.0 ಮೂಲಕ ಸ್ಮಾರ್ಟ್‌ಫೋನ್ ರನ್ ಆಗಲಿದೆ.!!

ಇತರ ಫೀಚರ್ಸ್ ಮತ್ತು ಬೆಲೆ!!

ಇತರ ಫೀಚರ್ಸ್ ಮತ್ತು ಬೆಲೆ!!

''ಯುಲೆಫೊನ್ ಪವರ್ 3" ಸ್ಮಾರ್ಟ್‌ಫೋನ್ ಫೇಸ್‌ಐಡಿ, ಆಂಡ್ರಾಯ್ಡ್ ಓಡಿಯೋ ಅಪ್‌ಡೇಟ್, 90.7%ಬಾಡಿ ರೇಷ್ಯೂ ಹಾಗೂ ಫಿಂಗರ್‌ಪರಿಂಟ್ ಫೀಚರ್‌ನಂತಹ ಎಲ್ಲಾ ಅತ್ಯುತ್ತಮ ಫೀಚರ್‌ಗಳನ್ನು ಹೊಂದಿದೆ.!! ಈ ಎಲ್ಲಾ ಫೀಚರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 12,000 ರೂಪಾಯಿಗಳ ಆಸುಪಾಸಿನಲ್ಲಿದೆ.!!

ಓದಿರಿ:ಇಂಟರ್‌ನೆಟ್ ಇಲ್ಲದೆಯೂ ವೆಬ್‌ಸೈಟ್ ಪೇಜ್ ತೆರೆದು ಓದುವುದು ಹೇಗೆ?..ಸಿಂಪಲ್ ಟ್ರಿಕ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Ulefone Power 3 With a Huge 6080mAh Battery, 6-inch Full HD+ Display Officially Launched. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot