ಸ್ವದೇಶಿ ಜಿಪಿಎಸ್‌ ನಾವಿಕ್‌..! ಭಾರತದ ಜಿಪಿಎಸ್‌ನಲ್ಲಿ ಏನಿದೆ ವಿಶೇಷ..?

By Gizbot Bureau
|

ಭಾರತ ಈಗ ತನ್ನದೇ ಆದ ಜಿಪಿಎಸ್‌ ತಂತ್ರಜ್ಞಾನ ಹೊಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದ ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ (ನಾವಿಕ್) ಜಿಪಿಎಸ್‌ಗೆ ಪರ್ಯಾಯವಾಗಿದೆ. ಅಮರಿಕ ಜಿಪಿಎಸ್‌ ಹೊಂದಿದ್ದರೆ, ರಷ್ಯಾ ಗ್ಲೋನಾಸ್ ಹೊಂದಿದ್ದು, ಯುರೋಪಿಯನ್ ಯೂನಿಯನ್ ಗೆಲಿಲಿಯೋವನ್ನು ಬಳಸುತ್ತಿದೆ, ಇನ್ನು, ಚೀನಾ ಬೀಡೋ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಬಿಡಿಎಸ್) ಹೊಂದಿದ್ದು, ಈ ಸಾಲಿಗೆ ಭಾರತವು ನಾವಿಕ್‌ನೊಂದಿಗೆ ಸ್ಥಾನ ಪಡೆದಿದೆ. ಈಗ ಕ್ವಾಲ್‌ಕಾಮ್‌ನಿಂದ ಬಿಡುಗಡೆಯಾಗುವ ಮೂರು ಹೊಸ 4 ಜಿ-ಆಧಾರಿತ ಮೊಬೈಲ್ ಪ್ರೊಸೆಸರ್‌ಗಳಲ್ಲಿ ನಾವಿಕ್‌ ತಂತ್ರಜ್ಞಾನ ಬರಲಿದೆ. ಈ ಪ್ರೊಸೆಸರ್‌ಗಳು ದೇಶದಲ್ಲಿ ಕೈಗೆಟುಕುವ ಆಂಡ್ರಾಯ್ಡ್ ಫೋನ್‌ಗಳಿಗೆ ಶಕ್ತಿ ತುಂಬುತ್ತಿದ್ದು, ಬಳಕೆದಾರರನ್ನು ಆಕರ್ಷಿಸುತ್ತವೆ.

ಕ್ವಾಲ್‌ಕಾಮ್‌ ಹೊಸ ಸರಣಿ ಲಾಂಚ್‌

ಕ್ವಾಲ್‌ಕಾಮ್‌ ಹೊಸ ಸರಣಿ ಲಾಂಚ್‌

ಕ್ವಾಲ್‌ಕಾಮ್ ಹೊಸ ಸರಣಿಯ ಮೊಬೈಲ್‌ ಪ್ರೊಸೆಸರ್‌ಗಳನ್ನು ಲಾಂಚ್‌ ಮಾಡಿದ್ದು, ಮೂರು ಪ್ರೊಸೆಸರ್‌ಗಳು ನಾವಿಕ್‌ ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡುತ್ತವೆ. ಸ್ನಾಪ್‌ಡ್ರಾಗನ್ 720ಜಿ, 662 ಮತ್ತು 460 ಮೊಬೈಲ್ ಚಿಪ್‌ಸೆಟ್‌ಗಳು ಇಸ್ರೋ ನಿರ್ಮಿಸಿದ ನಾವಿಕ್‌ನ್ನು ಬೆಂಬಲಿಸುತ್ತವೆ.

ರಿಯಲ್‌ಮಿ, ಶಿಯೋಮಿ ಪೈಪೋಟಿ

ರಿಯಲ್‌ಮಿ, ಶಿಯೋಮಿ ಪೈಪೋಟಿ

ನಾವಿಕ್ ಬೆಂಬಲದ ಹೊಸ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ರಿಯಲ್‌ಮಿ ಮತ್ತು ಶಿಯೋಮಿ ಪೈಪೋಟಿ ನಡೆಸಿದ್ದು, ಎರಡು ಕಂಪನಿಗಳು ನಾವಿಕ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಮೊದಲು ಬಿಡುಗಡೆ ಮಾಡಲಿವೆ.

ಜಿಪಿಎಸ್‌ಗಿಂತ ನಿಖರ

ಜಿಪಿಎಸ್‌ಗಿಂತ ನಿಖರ

ನಾವಿಕ್‌ ತಂತ್ರಜ್ಞಾನ ಜಿಪಿಎಸ್‌ಗಿಂತ ನಿಖರವಾಗಿದ್ದು, 5 ಮೀಟರ್ ಸ್ಥಾನದ ನಿಖರತೆ ಹೊಂದಿದೆ. ಅಲ್ಲದೆ, ನಾವಿಕ್‌ನಲ್ಲಿ ಡ್ಯುಯಲ್ ಫ್ರೀಕ್ವೆನ್ಸಿ (ಎಸ್ ಮತ್ತು ಎಲ್ ಬ್ಯಾಂಡ್‌ಗಳು) ಬಳಸಲಾಗುತ್ತದೆ. ಆದರೆ, ಜಿಪಿಎಸ್‌ನಲ್ಲಿ ಕೇವಲ ಎಲ್ ಬ್ಯಾಂಡ್ ಮಾತ್ರ ಬಳಕೆ ಮಾಡಲಾಗುತ್ತದೆ.

8 ಉಪಗ್ರಹಗಳು

8 ಉಪಗ್ರಹಗಳು

ನಾವಿಕ್‌ ತಂತ್ರಜ್ಞಾನವನ್ನು ಮತ್ತಷ್ಟು ಶಕ್ತಗೊಳಿಸಲು ಇಸ್ರೋ ಬರೋಬ್ಬರಿ 8 IRNS ಉಪಗ್ರಹಗಳನ್ನು ಬಳಸಿಕೊಳ್ಳುತ್ತಿದೆ.

ನಿಖರ ನಿರ್ದೇಶನ

ನಿಖರ ನಿರ್ದೇಶನ

ಕ್ವಾಲ್‌ಕಾಮ್‌ ಚಿಪ್‌ನಲ್ಲಿನ ನಾವಿಕ್ ತಂತ್ರಜ್ಞಾನ ನಿಖರ ನಿರ್ದೇಶನ ನೀಡುವ ಸಾಮರ್ಥ್ಯ ಹೊಂದಿದೆ. ಕಟ್ಟಡದಿಂದ ನೀವು ಹೊರಬಂದಾಗ ಬಲಕ್ಕೆ ಅಥವಾ ಎಡಕ್ಕೆ ತಿರುಗಬೇಕೇ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡುತ್ತದೆ.

ಭಾರತಕ್ಕಾಗಿಯೇ ನಾವಿಕ್‌

ಭಾರತಕ್ಕಾಗಿಯೇ ನಾವಿಕ್‌

ನಾವಿಕ್‌ನ್ನು ಭಾರತಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಜನನಿಬಿಡ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು ಮತ್ತಿತರ ವಿಶಿಷ್ಷ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಇಸ್ರೋ ನಾವಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ವಾಯುಪಡೆಯಲ್ಲಿ ಬಳಕೆ

ವಾಯುಪಡೆಯಲ್ಲಿ ಬಳಕೆ

ಸುಧಾರಿತ ಜಿಪಿಎಸ್‌ಗಾಗಿ ಭಾರತೀಯ ವಾಯುಪಡೆಯಲ್ಲಿ ನಾವಿಕ್‌ ಬಳಸಲಾಗುತ್ತಿದೆ. ವಾಯುಪಡೆಯ ಯುದ್ಧ ವಿಮಾನಗಳಲ್ಲಿ ನಾವಿಕ್‌ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ನಾವಿಕ್‌ ಟ್ರಾಕರ್‌ ತಯಾರು

ನಾವಿಕ್‌ ಟ್ರಾಕರ್‌ ತಯಾರು

ತೈವಾನೀಸ್ ಸ್ಕೈಟ್ರಾಕ್ ಅಭಿವೃದ್ಧಿಪಡಿಸಿದ ಇಸ್ರೋ ಮಲ್ಟಿಚಿಪ್ ಮಾಡ್ಯೂಲ್ (ಎಂಸಿಎಂ) ಅನ್ನು ಖರೀದಿಸಿದ ನಂತರ ಕನಿಷ್ಠ 30 ಭಾರತೀಯ ಕಂಪನಿಗಳು ವಾಹನಗಳಿಗಾಗಿ ನಾವಿಕ್ ಟ್ರ್ಯಾಕರ್‌ಗಳನ್ನು ತಯಾರಿಸುತ್ತಿವೆ. 2019ರ ಏಪ್ರಿಲ್ 1ರ ನಂತರ ನೋಂದಾಯಿತ ವಾಣಿಜ್ಯ ವಾಹನಗಳು ನಾವಿಕ್ ಟ್ರ್ಯಾಕರ್‌ಗಳನ್ನು ಹೊಂದಬಹುದು.

Best Mobiles in India

English summary
Upcoming Smartphones In India Will Have A ISRO Made Technology

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X