ವಿವೋ ವಿ11 ಪ್ರೋ ಸೂಪರ್ ನೋವಾ ರೆಡ್ ವೇರಿಯಂಟ್ ಪ್ರಕಟ: ಬೆಲೆ,ಆಫರ್,ವೈಶಿಷ್ಟ್ಯತೆ ಹೇಗಿದೆ ಗೊತ್ತಾ?

|

ಚೈನೀಸ್ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ವಿವೋ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವಿವೋ ವಿ11 ಪ್ರೋ ಸ್ಮಾರ್ಟ್ ಫೋನಿನ ಮತ್ತೊಂದು ಬಣ್ಣದ ಆಯ್ಕೆಯ ಫೋನ್ ನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದೀಗ ಈ ಹ್ಯಾಂಡ್ ಸೆಟ್ ಸೂಪರ್ ನೋವಾ ರೆಡ್ ಕಲರ್ ವೇರಿಯಂಟ್ ನಲ್ಲೂ ಲಭ್ಯವಿದೆ. ಹಿಂದಿನ ಎಲ್ಲಾ ಮಾಡೆಲ್ ನಲ್ಲಿರುವ ವೈಶಿಷ್ಟ್ಯತೆಗಳನ್ನು ಮತ್ತು ಬೆಲೆಯನ್ನೇ ಈ ಹೊಸ ಮಾಡೆಲ್ ಕೂಡ ಹೊಂದಿದೆ.

ವಿವೋ ವಿ11 ಪ್ರೋ ಸೂಪರ್ ನೋವಾ ರೆಡ್ ವೇರಿಯಂಟ್ ಪ್ರಕಟ

ವಿವೋ ವಿ11 ಪ್ರೋ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸಲಾಗಿರುವ ಫೋನ್ ಆಗಿದ್ದು 6.41-ಇಂಚಿನ FHD+ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್ ಇದೆ ಮತ್ತು 3400mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ವಿ11 ಪ್ರೋ ಸೂಪರ್ ನೋವಾ ರೆಡ್ : ಬೆಲೆ ಮತ್ತು ಲಭ್ಯತೆ

ವಿ 11 ಪ್ರೋ ಸೂಪರ್ ನೋವಾ ರೆಡ್ ನ ಬೆಲೆ 25,990 ರುಪಾಯಿಗಳು ಮತ್ತು ಅಮೇಜಾನ್, ಫ್ಲಿಪ್ ಕಾರ್ಟ್, ಪೇಟಿಎಂ ಮಾಲ್ ಮತ್ತು ವಿವೋ ಇ-ಸ್ಟೋರ್ ಗಳಲ್ಲಿ ಇಂದಿನಿಂದ ಮಾರಾಟಕ್ಕೆ ಲಭ್ಯವಿದೆ. ಆಫ್ ಲೈನ್ ರೀಟೈಲ್ ಸ್ಟೋರ್ ಗಳಲ್ಲೂ ಕೂಡ ಮಾರಾಟ ಮಾಡಲಾಗುತ್ತಿದೆ. ಹೊಸ ಮಾಡೆಲ್ ಗೆ ಕೆಲವು ಆಫರ್ ಗಳನ್ನು ಕೂಡ ಕಂಪನಿ ಪ್ರಕಟಿಸಿದೆ.ಅವುಗಳೆಂದರೆ

- ಬಜಾಜ್ ಫಿನ್ ಸರ್ವ್ ಕಾರ್ಡ್ ಗಳಳ್ಲಿ ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಸುಲಭದ ಇಎಂಐ ಆಯ್ಕೆ, ಯಾವುದೇ ಬಡ್ಡಿ ಇಲ್ಲ ಮತ್ತು ಯಾವುದೇ ಪ್ರೊಸೆಸಿಂಗ್ ಫೀಸ್ ಕೂಡ ಇಲ್ಲ

-ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ರೆಗ್ಯುಲರ್ ಅಥವಾ ಇಎಂಐ ಆಯ್ಕೆ ಬಳಸಿ ಖರೀದಿಸಿದವರಿಗೆ 5% ಕ್ಯಾಷ್ ಬ್ಯಾಕ್

- ಇಎಂಐ ಆಯ್ಕೆ 1,733 ರುಪಾಯಿ ಪ್ರತಿ ತಿಂಗಳಿನ ಆಯ್ಕೆಯಿಂದ ಆರಂಭ

- ಪೇಟಿಎಂನಲ್ಲಿ 2,000 ರುಪಾಯಿ ಕ್ಯಾಷ್ ಬ್ಯಾಕ್

- ಫ್ಲಿಪ್ ಕಾರ್ಟ್ ,ಅಮೇಜಾನ್, ಪೇಟಿಎಂ ಮಾಲ್ ನಲ್ಲಿ 18,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ – ರಿಲಯನ್ಸ್ ಜಿಯೋ ಮೂಲಕ 4,000 ರುಪಾಯಿ ವರೆಗೆ 3TB ಡಾಟಾ ಕೂಡ ಉಚಿತ

ವಿ11 ಪ್ರೋ ಸೂಪರ್ ನೋವಾ ರೆಡ್: ವೈಶಿಷ್ಟ್ಯತೆಗಳು

ವಿ11 ಪ್ರೋ ಸೂಪರ್ ನೋವಾ ರೆಡ್ ಪ್ಯಾಕ್ 6GB RAM ಮತ್ತು 64GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೂ ಹಿಗ್ಗಿಸಿಕೊಳ್ಳಲು ಅವಕಾಶವಿದೆ. ಇದು 6.41-ಇಂಚಿನ FHD+ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್ ನ್ನು ಹೊಂದಿದೆ ಜೊತೆಗೆ 2340x1080 ಪಿಕ್ಸಲ್ ರೆಸಲ್ಯೂಷನ್ ಹೊಂದಿದೆ. 403 ppi ಪಿಕ್ಸಲ್ ಡೆನ್ಸಿಟಿ ಮತ್ತು 19.5:9 ಅನುಪಾತವನ್ನು ಹೊಂದಿದೆ.

ಆಂಡ್ರಾಯ್ಡ್ ವಿ8.1 ಓರಿಯೋ ಆಧಾರಿತ ಫನ್ ಟಚ್ 4.5 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660AIE ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದೆ. ಡಿವೈಸ್ ನಲ್ಲಿ 25 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾವಿದೆ ಮತ್ತು ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿದ್ದು 12ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸೆನ್ಸರ್ ನ್ನು ಒಳಗೊಂಡಿದೆ . 3400mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
The Vivo V11 Pro Supernova Red colour variant carries a price tag of Rs 25,990 and the device will be up for grabs on various offline and online stores including Vivo e-store and other popular e-commerce stores such as Amazon, Flipkart and PayTM mall.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X