ಭಾರತದಲ್ಲಿ ಬೆಲೆ ಇಳಿಕೆ ಕಂಡ ವಿವೋ ವಿ15

By Gizbot Bureau
|

ಕಳೆದ ತಿಂಗಳು ವಿವೋ ತನ್ನ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಫೋನ್ ವಿವೋ ವಿ15 ನ್ನು ಬಿಡುಗಡೆಗೊಳಿಸಿದೆ. 23,990 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಿದ್ದ ಈ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ ಇದೀಗ ಇಳಿಕೆಯಾಗಿದೆ. ಮುಂಬೈ ಆಧಾರಿತ ಮಹೇಶೇ ಟೆಲಿಕಾಂ ವರದಿಯು ತಿಳಿಸುವ ಪ್ರಕಾರ ವಿವೋ ವಿ15 ಗೆ ಸುಮಾರು 2,000 ರುಪಾಯಿ ಇಳಿಕೆಯಾಗಿದೆ ಮತ್ತು ಇದೀಗ 21,990 ರುಪಾಯಿಗೆ ಲಭ್ಯವಾಗುತ್ತದೆ. ಇದರ ಜೊತೆಗೆ ಎಸ್ ಬಿಐ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕಿನ ಗ್ರಾಹಕರಿಗೆ 5% ಕ್ಯಾಷ್ ಬ್ಯಾಕ್ ಆಫರ್ ಕೂಡ ಈ ಸ್ಮಾರ್ಟ್ ಫೋನ್ ಖರೀದಿಯಲ್ಲಿ ಸಿಗುತ್ತದೆ.

ವಿವೋ ವಿ15 ಫೋನಿನ ವೈಶಿಷ್ಟ್ಯತೆಗಳು:

ವಿವೋ ವಿ15 ಫೋನಿನ ವೈಶಿಷ್ಟ್ಯತೆಗಳು:

ವಿವೋ ವಿ15 ನಲ್ಲಿ 6.53-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2340 ಪಿಕ್ಸಲ್ ರೆಸಲ್ಯೂಷನ್ ಮತ್ತು 19:5:9 ಅನುಪಾತವಿದೆ. ಡಿಸ್ಪ್ಲೇ ಕೂಡ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಸುಭದ್ರವಾಗಿಸಲಾಗಿದೆ.

ಈ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 ಪ್ರೊಸೆಸರ್ ನಿಂದ ಕೂಡಿದೆ ಮತ್ತು ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. ತನ್ನದೇ ಕಂಪೆನಿಯ ಸ್ವಂತ ಫನ್ ಟಚ್ ಲೇಯರ್ ನ ಕಸ್ಟಮೈಸೇಷನ್ ನ್ನು ಹೊಂದಿದೆ.

ವಿವೋ ವಿ15 ಕ್ಯಾಮರಾ

ವಿವೋ ವಿ15 ಕ್ಯಾಮರಾ

ಈ ಹ್ಯಾಂಡ್ ಸೆಟ್ ನಲ್ಲಿ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ. ಈ ಡಿವೈಸ್ ನಲ್ಲಿ ಡುಯಲ್ ಸಿಮ್ ಕಾರ್ಡ್ ಗೆ ಅವಕಾಶವಿದ್ದು ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಕೂಡ ಅಳವಡಿಸಲಾಗಿದೆ.

ವಿವೋ ವಿ15 ನಲ್ಲಿ ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಈ ಡಿವೈಸ್ ನಲ್ಲಿ 12MP ಡುಯಲ್ ಪಿಕ್ಸಲ್ ಪ್ರೈಮರಿ ಸೆನ್ಸರ್ ಜೊತೆಗೆ f/1.78 ಅಪರ್ಚರ್ ಇದೆ. 5MP ಡೆಪ್ತ್ ಸೆನ್ಸರ್ ಜೊತೆಗೆ f/2.4 ಅಪರ್ಚರ್ ಇದೆ ಮತ್ತು 8MP ವೈಡ್ ಆಂಗಲ್ ಲೆನ್ಸ್ ನ ಸೆನ್ಸರ್ ಜೊತೆಗೆ f/2.2 ಅಪರ್ಚರ್ ಮತ್ತು LED ಪ್ಲ್ಯಾಶ್ ವ್ಯವಸ್ಥೆಯನ್ನು ಹೊಂದಿದೆ. ಮೇಲೆ ತಿಳಿಸಿರುವಂತೆ ಸ್ಮಾರ್ಟ್ ಫೋನ್ ನಲ್ಲಿ 32MP ಪಾಪ್ ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದೆ ಜೊತೆಗೆ f/2.0 ಅಪರ್ಚರ್ ಇದೆ.

ಈ ಡಿವೈಸ್ ನಲ್ಲಿ 4000mAh ಬ್ಯಾಟರಿ ಮತ್ತು ಡುಯಲ್ ಇಂಜಿನ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಇದರಲ್ಲಿ ಡುಯಲ್ 4ಜಿ, VoLTE, 3ಜಿ, ವೈ-ಫೈ,ಬ್ಲೂಟೂತ್ ಮತ್ತು GPS ವ್ಯವಸ್ಥೆ ಇದೆ.

ವಿವೋ ವೈ17:

ವಿವೋ ವೈ17:

ಇತ್ತೀಚೆಗೆ ವಿವೋ ಹೊಸದಾಗಿ ಮಿಡ್ ರೇಂಜಿನ ವಿವೋ ವೈ17 ನ್ನು ಇಂಡಿಯಾದಲ್ಲಿ 17,990 ರುಪಾಯಿಗೆ ಬಿಡುಗಡೆಗೊಳಿಸಿದೆ. ಎರಡು ವಿಭಿನ್ನ ಕಲರ್ ನಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. ಎಲ್ಲಾ ಆಫ್ ಲೈನ್ ಸ್ಟೋರ್ ಗಳಲ್ಲಿ ಈ ಫೋನ್ ಖರೀದಿಗೆ ಲಭ್ಯವಿದ್ದು ಟ್ರಿಪಲ್ ಕ್ಯಾಮರಾ ವ್ಯವಸ್ಥೆಯನ್ನು ಈ ಫೋನ್ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ವ್ಯವಸ್ಥೆ ಈ ಫೋನಿನಲ್ಲಿದೆ.

Best Mobiles in India

Read more about:
English summary
Vivo V15 gets a price cut in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X