ಲೀಕ್ ಆಗಿದೆ ಗ್ಯಾಲಕ್ಸಿ ಎಸ್‌8 ಪಿಕ್!!...ಸ್ಮಾರ್ಟ್‌ಫೋನ್ ಹೇಗಿದೆ ಗೊತ್ತಾ?

Written By:

2017 ನೇ ವ‍ರ್ಷದಲ್ಲಿ ಹೆಚ್ಚು ಟ್ರೆಂಡ್ ಸೃಷ್ಟಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌8 ಇದೇ ವರ್ಷ ಬಿಡುಗಡೆಯಾಗುತ್ತದೆ ಎನ್ನುವ ರೂಮರ್ಸ್ ಹರಿದಾಡಿದೆ.! ಇದಕ್ಕೆ ಪೂರಕವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಫೋಟೊ ಮತ್ತು ಫೀಚರ್ಸ್‌ ಲೀಕ್‌ ಆಗಿದೆ.!!

ಗ್ಯಾಲಾಕ್ಸಿ ಸರಣಿ ಸ್ಮಾರ್ಟ್‌ಫೋನ್‌ಗಳಂತೆ 2017 ನೇ ನವೆಂಬರ್‌ ತಿಂಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌8 ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ ಬ್ಯಾಟರಿ ಸಮಸ್ಸೆ ಎದುರಿಸಿದ್ದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 7 ನಂತರ ಇದೀಗ ಗ್ಯಾಲಕ್ಸಿ ಎಸ್‌8 ನಲ್ಲಿ ಸ್ಯಾಮ್‌ಸಂಗ್ ತನ್ನ ಗ್ಯಾಲಾಕ್ಸಿ ಸೀರಿಸ್‌ ಗುಣಮಟ್ಟವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ.

ಅಮೆರಿಕಾಕ್ಕೆ ತಲೆನೋವಾದ ಟ್ರಂಪ್ ಸ್ಮಾರ್ಟ್‌ಫೋನ್!!

ಪ್ರತಿಬಾರಿಯೂ ಅತ್ಯದ್ಬುತ ಎನ್ನುವ ಫೀಚರ್‌ಗಳನ್ನು ಹೋಂದು ಬರುವ ಗ್ಯಾಲಾಕ್ಸಿ ಸೀರಿಸ್‌ನ ನೂತನ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್‌ಗಳು ಯಾವುವು? ಮತ್ತು ಗ್ಯಾಲಕ್ಸಿ ಎಸ್‌8 ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ ಎಸ್‌8 ಹೊಂದಿದೆ ಭವ್ಯವಾದ ಡಿಸ್‌ಪ್ಲೇ !!

ಗ್ಯಾಲಕ್ಸಿ ಎಸ್‌8 ಹೊಂದಿದೆ ಭವ್ಯವಾದ ಡಿಸ್‌ಪ್ಲೇ !!

ಮಾಹಿತಿ ಪ್ರಕಾರ ಗ್ಯಾಲಕ್ಸಿ ಎಸ್‌8 ಎರಡು ಮಾದರಿಯಲ್ಲಿ ಬಿಡುಗಡೆಯಾಗುತ್ತದೆ ಎನ್ನುವ ರೂಮರ್ಸ್ ಇದೆ. ದೊಡ್ಡ ಡಿಸ್‌ಪ್ಲೇ ಕಡೆಗೆ ಮುಖ ಮಾಡಿರುವ ಸ್ಯಾಮ್‌ಸಂಗ್ 5.8 ಇಂಚ್ ಮತ್ತು 6.2 ಇಂಚ್‌ ಅಮೊಲೆಡ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಡಿಸ್‌ಪ್ಲೇ ಸ್ಕ್ರೀನ್‌ ಶೇ. 83 ರಷ್ಟಿರುತ್ತದೆ ಎನ್ನಲಾಗಿದೆ.!!

3D ಟಚ್‌ ಫೀಚರ್ಸ್!!

3D ಟಚ್‌ ಫೀಚರ್ಸ್!!

ಸ್ಯಾಮ್‌ಸಂಗ್ ಇದೇ ಮೊದಲ ಬಾರಿಗೆ ಗ್ಯಾಲಕ್ಸಿ ಎಸ್‌8 ಮೂಲಕ 3D ಟಚ್‌ ಸ್ಕ್ರೀನ್ ಹೊಂದಿ ಬರುತ್ತಿದೆ. ಆಪಲ್‌ನಲ್ಲಿನ ಫೀಚರ್‌ ಹೊಂದಿರುವ ಗ್ಯಾಲಕ್ಸಿ ಎಸ್‌8, ಬಳಕೆಗೆ ಅತ್ಯದ್ಬುತ ಎನ್ನುವ ಫೀಲ್ ನೀಡಲಿದೆ.!!

ಗ್ಯಾಲಕ್ಸಿ ಎಸ್‌8ಗೆ ಬೇರೆ ಸಾಟಿ ಇಲ್ಲ!!

ಗ್ಯಾಲಕ್ಸಿ ಎಸ್‌8ಗೆ ಬೇರೆ ಸಾಟಿ ಇಲ್ಲ!!

ಕ್ವಾಲ್ಕಮ್‌ನ ನೂತನ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ ಹೊಂದಿರುವ ಗ್ಯಾಲಕ್ಸಿ ಎಸ್‌8, 8GB RAM ಮತ್ತು 6GB RAMನ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು 64 GB ಮತ್ತು 128GB ಆಂತರಿಕ ಮೆಮೊರಿ ಹೊಂದಿರುತ್ತದೆ ಎಂದು ಮಾಹಿತಿ ಹರಿದಾಡಿದೆ.

ಕ್ಯಾಮೆರಾ ಮತ್ತು ಬ್ಯಾಟರಿ ಹೇಗಿದೆ?

ಕ್ಯಾಮೆರಾ ಮತ್ತು ಬ್ಯಾಟರಿ ಹೇಗಿದೆ?

ಸ್ಯಾಮ್‌ಸಂಗ್ ಹೆಚ್ಚು ಅಪ್‌ಡೇಟ್‌ ಆಗದ ಫೀಚರ್‌ಗಳು ಎಂದರೆ ಕ್ಯಾಮೆರಾ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ. 20 ರಿಂದ 25 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೊನ್‌ಗಳು ಇರುವ ಇಂದಿನ ದಿನಗಳಲ್ಲಿ ಸ್ಯಾಮ್‌ಸಂಗ್ 13 ಮತ್ತು 8 ಮೆಗಾಪಿಕ್ಸೆಲ್‌ಗಳಿಗೆ ಹೆಚ್ಚು ಸೀಮಿತವಾಗಿದ್ದು, ಗ್ಯಾಲಕ್ಸಿ ಎಸ್‌8 ಸಹ 13 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ ಎನ್ನಲಾಗಿದೆ. ಇನ್ನು 3000mAh ನಿಂದ 3500mAh ಬ್ಯಾಟರಿ ಶಕ್ತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Oh boy, it can’t get any more interesting! to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot