ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

By Shwetha
|

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಾಗಿ ಬಳಸಲಾಗುತ್ತಿದೆ. ಮೊಬೈಲ್ ಫೋನ್‌ಗಳನ್ನು ಬಳಸುವಾಗ ಎಚ್ಚರಿಕೆಯನ್ನು ಪಾಲಿಸದೇ ಇದ್ದರೆ ಅವುಗಳು ಉಂಟುಮಾಡುವ ಅವಘಡಗಳನ್ನು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಹಾಗಿದ್ದರೆ ಈ ಅವಘಡಗಳನ್ನು ತಡೆಯುವುದು ಹೇಗೆ? ಫೋನ್ ಸ್ಫೋಟಗೊಳ್ಳಲು ಕಾರಣಗಳೇನು ಎಂಬ ಅಂಶಗಳನ್ನು ಇಂದಿನ ಲೇಖನದಲ್ಲಿ ನೋಡೋಣ.

ಓದಿರಿ: ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಆಪಲ್ ಉತ್ಪನ್ನಗಳಾವುವು?

ಮೊಬೈಲ್ ಖರೀದಿ

ಮೊಬೈಲ್ ಖರೀದಿ

ಸಾಧ್ಯವಾದಷ್ಟು ಬ್ರ್ಯಾಂಡ್ ಫೋನ್‌ಗಳನ್ನೇ ಖರೀದಿಸಿ. ಫೋನ್ ನಿಖರವಾದ IMEI ಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಪ್ರತೀ ಫೋನ್ ಅನ್ನು ಗುರುತಿಸುವ ಕೋಡ್ ಇದಾಗಿದೆ.ಇನ್ನು ಫೋನ್‌ನೊಂದಿಗೆ ಬರುವ ಪ್ರತಿಯೊಂದು ಸಲಕರಣೆಗಳು ಅಂದರೆ ಇಯರ್ ಫೋನ್‌ಗಳು, ಬ್ಯಾಟರಿ ಮತ್ತು ಚಾರ್ಜರ್ ಅನ್ನು ಪರಿಶೀಲಿಸಿಕೊಳ್ಳಿ.

ಮೊಬೈಲ್ ಸ್ಫೋಟ

ಮೊಬೈಲ್ ಸ್ಫೋಟ

ಚಾರ್ಜ್‌ನಲ್ಲಿದ್ದಾಗ ಫೋನ್ ಅನ್ನು ಬಳಸುವುದು ಮೊಬೈಲ್ ಫೋನ್‌ನ ಸ್ಫೋಟಕ್ಕೆ ಕಾರಣವಾಗಿದೆ. ಫೋನ್‌ನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡವನ್ನು ಹಾಕುತ್ತದೆ, ಈ ಸಮಯದಲ್ಲಿ ಫೋನ್ ಅನ್ನು ಬಳಸುವುದು ಒತ್ತಡವನ್ನು ಹೆಚ್ಚಿಸುತ್ತದೆ. ಮೊಬೈಲ್‌ಗಳಲ್ಲಿ ಬಳಸುವ ಕಡಿಮೆ ಗುಣಮಟ್ಟದ ಇಲೆಕ್ಟ್ರಾನಿಕ್ ಬಿಡಿಭಾಗಗಳು ಒಮ್ಮೊಮ್ಮೆ ಇದಕ್ಕೆ ಕಾರಣವಾಗುತ್ತದೆ.

ಫೋನ್‌ಗೆ ಹೆಚ್ಚು ಒತ್ತಡ

ಫೋನ್‌ಗೆ ಹೆಚ್ಚು ಒತ್ತಡ

ಫೋನ್‌ ಚಾರ್ಜ್‌ನಲ್ಲಿರುವಾಗ ಆದಷ್ಟು ಫೋನ್ ಬಳಸುವುದನ್ನು ಕಡಿಮೆ ಮಾಡಿ. ಈ ಸಮಯದಲ್ಲಿ ಫೋನ್ ಸ್ವೀಕರಿಸಬೇಕೆಂದಾದಲ್ಲಿ, ಫೋನ್ ಅನ್ನು ಚಾರ್ಜರ್‌ನಿಂದ ಡಿಸ್‌ಕನೆಕ್ಟ್ ಮಾಡಿ ನಂತರ ಫೋನ್ ಕರೆ ಸ್ವೀಕರಿಸಿ. ಫೋನ್ ಚಾರ್ಜಿಂಗ್ ಚಾರ್ಜ್ ಮಿತಿಯನ್ನು ಮೀರಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಬ್ಯಾಟರಿ ಮೆತ್ತಗಾಗಿದೆ ಅಥವಾ ಸೋರಿಕೆಯುಂಟಾಗುತ್ತಿದೆ ಎಂದಾದಲ್ಲಿ ಅದನ್ನು ಬದಲಾಯಿಸಿ.

ಕಡಿಮೆ ದರದ ಫೋನ್‌

ಕಡಿಮೆ ದರದ ಫೋನ್‌

ಹೆಚ್ಚಿನ ಕಡಿಮೆ ದರದ ಫೋನ್‌ಗಳು ಅಂದರೆ ಹೆಚ್ಚಾಗಿ ಚೀನಾ ತಯಾರಿಯ ಫೋನ್‌ಗಳ ಹಾರ್ಡ್‌ವೇರ್ ಮತ್ತು ಬಿಡಿಭಾಗಗಳು ಬ್ರ್ಯಾಂಡೆಡ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇಂಟರ್ನೆಟ್ ಬಳಕೆ ಬೇಡ

ಇಂಟರ್ನೆಟ್ ಬಳಕೆ ಬೇಡ

ಮೊಬೈಲ್ ಫೋನ್‌ಗಳಲ್ಲಿರುವ ಆಂಟಿ ವೈರಸ್ ಸಾಫ್ಟ್‌ವೇರ್‌ಗಳು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದಲೇ ಬೇರೆ ವೆಂಡೋರ್‌ಗಳಿಂದ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಆಪರೇಟಿಂಗ್ ಸಿಸ್ಟಮ್ ಒದಗಿಸಿರುವ ಸೇವೆಯನ್ನು ಆದಷ್ಟು ಬಳಸಿ.

ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು

ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು

ಫೋನ್‌ನಲ್ಲಿ ನೀವು ಸಂವಹನವನ್ನು ನಡೆಸುತ್ತಿರುವಾಗ, ಆದಷ್ಟು ನಿಮ್ಮ ದೇಹದಿಂದ ಫೋನ್ ಅನ್ನು ದೂರವಾಗಿರಿಸಿ. ಇದು ರೇಡಿಯೇಶನ್‌ನ ಇಲೆಕ್ಟ್ರೊ ಮ್ಯಾಗ್ನಟಿಕ್ ಕ್ಷೇತ್ರದ ಬಲವನ್ನು ಕಡಿಮೆ ಮಾಡಬಹುದು. ಆದಷ್ಟು ಸ್ಪೀಕರ್ ಫೋನ್ ಇಲ್ಲವೇ ವೈರ್‌ಲೆಸ್ ಬ್ಲ್ಯೂಟೂತ್ ಹೆಡ್‌ಸೆಟ್‌ಗಳ ಬಳಕೆ ಮಾಡಿ. ಇನ್ನು ಸುದೀರ್ಘ ಸಂವಹನಕ್ಕಾಗಿ ಲ್ಯಾಂಡ್ ಲೈನ್ ಫೋನ್‌ಗಳನ್ನು ಬಳಸಿ.

ಫೋನ್ ಒದ್ದೆಯಾದಾಗ ಏನು ಮಾಡಬೇಕು?

ಫೋನ್ ಒದ್ದೆಯಾದಾಗ ಏನು ಮಾಡಬೇಕು?

ನೀರಿನಿಂದ ಫೋನ್ ಅನ್ನು ತೆಗೆದ ನಂತರ, ಅದರ ಬ್ಯಾಟರಿಯನ್ನು ಹೊರತೆಗೆಯಿರಿ, ಜೊತೆಗೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹೊರತೆಗೆದು ಸ್ವಿಚ್ ಆಫ್ ಮಾಡಿ. ಎಲ್ಲಾ ಉಪಕರಣಗಳನ್ನು ಒಣಗಿಸಿ. ನಂತರ ಇವುಗಳನ್ನು ಅಕ್ಕಿಯಲ್ಲಿ ಹುದುಗಿಸಿಡಿ.

ನಿಮ್ಮ ಬಾಯಿಯ ಸಮೀಪ ಫೋನ್ ಅನ್ನು ಏಕೆ ಇರಿಸಬಾರದು?

ನಿಮ್ಮ ಬಾಯಿಯ ಸಮೀಪ ಫೋನ್ ಅನ್ನು ಏಕೆ ಇರಿಸಬಾರದು?

ನಿಮ್ಮ ಬಾಯಿಗೆ ಹತ್ತಿರವಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಇದು ಬಾಯಿಯ ಕ್ಯಾನ್ಸರ್ ಅಥವಾ ಟ್ಯೂಮರ್‌ಗೆ ಕಾರಣವಾಗುತ್ತದೆ. ಇನ್ನು ನಿಯಮಿತವಾಗಿ ಫೋನ್‌ನಲ್ಲಿ ಸಂಭಾಷಣೆಯನ್ನು ನಡೆಸುವವರು ನಿದ್ದೆಯ ಕೊರತೆ, ಮೈಗ್ರೇನ್ ಮತ್ತು ತಲೆನೋವಿನಿಂದ ಬಳಲುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

Best Mobiles in India

English summary
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಾಗಿ ಬಳಸಲಾಗುತ್ತಿದೆ. ಮೊಬೈಲ್ ಫೋನ್‌ಗಳನ್ನು ಬಳಸುವಾಗ ಎಚ್ಚರಿಕೆಯನ್ನು ಪಾಲಿಸದೇ ಇದ್ದರೆ ಅವುಗಳು ಉಂಟುಮಾಡುವ ಅವಘಡಗಳನ್ನು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಹಾಗಿದ್ದರೆ ಈ ಅವಘಡಗಳನ್ನು ತಡೆಯುವುದು ಹೇಗೆ? ಫೋನ್ ಸ್ಫೋಟಗೊಳ್ಳಲು ಕಾರಣಗಳೇನು ಎಂಬ ಅಂಶಗಳನ್ನು ಇಂದಿನ ಲೇಖನದಲ್ಲಿ ನೋಡೋಣ.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X