Subscribe to Gizbot

ಬಳಕೆದಾರ ಸ್ನೇಹಿ ಲೀ ಸೂಪರ್ ಫೋನ್ ವಿಶೇಷತೆಗಳೇನು

Written By:

ಲೀ ಸೂಪರ್ ಫೋನ್‌ಗಳು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮಾತ್ರವೇ ಸಂಚಲವನ್ನುಂಟು ಮಾಡದೇ ಬಳಕೆದಾರರ ಪ್ರಿಯ ಗ್ಯಾಜೆಟ್ ಎಂದೆನಿಸಿದೆ. ಅಂತೂ ಇಂತೂ ಫೋನ್ ಬಳಕೆದಾರರಿಗೆ ಉತ್ತಮ ಫೋನ್ ಕೈಗೆ ದೊರಕಿದಂತಾಗಿದೆ. ಬಜೆಟ್ ಬೆಲೆಯ ಈ ಫೋನ್ ಬಳಕೆದಾರರಿಗೆ ಪ್ರಿಯವಾಗಿರುವುದರ ಹಿಂದೆ ಒಂದು ಸಾಹಸಗಾಥೆಯೇ ಅಡಗಿದೆ.

ಬಜೆಟ್ ಬೆಲೆ ಅತ್ಯುತ್ತಮ ಫೀಚರ್ ಲೀ ಸೂಪರ್ ಫೋನ್‌ಗಳ ವಿಶೇಷತೆ ಎಂದೆನಿಸಿದ್ದು ಬಳಕೆದಾರರಿಗೆ ಹೇಗೆ ಪ್ರಿಯವಾಗಿರುವುದು ಎಂಬ ಅಂಶಗಳನ್ನು ಅರಿತುಕೊಂಡೇ ಈ ಸೂಪರ್ ಫೋನ್ ತನ್ನ ಸ್ಥಳವನ್ನು ಮಾರುಕಟ್ಟೆಯಲ್ಲಿ ಮಾಡಿಕೊಂಡಿದೆ. ಮನೆಯಲ್ಲಿರುವ ಪ್ರತಿಯೊಬ್ಬರ ಸದಸ್ಯರಿಗೆ ಈ ಫೋನ್ ಉತ್ತಮ ಸಂಗಾತಿ ಎಂದೆನಿಸಿದ್ದು ಬ್ಯುಸಿಯಾಗಿರುವವರಿಗೂ ಇದು ಬೆಸ್ಟ್ ಫ್ರೆಂಡ್ ಎಂಬಂತಿದೆ. ಎಲ್ಲಾ ಕೊಡುಗೆಗಳನ್ನೇ ಒಳಗೊಂಡು ಬಂದಿರುವ ಈ ಫೋನ್ ಪ್ರತಿಯೊಬ್ಬರಿಗೂ ಅತ್ಯುತ್ತಮ ಬಳಕೆದಾರ ಸ್ನೇಹಿ

ಇಂದಿನ ಲೇಖನದಲ್ಲಿ ಲೀ ಸೂಪರ್ ಫೋನ್‌ಗಳ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ಕುಟುಂಬದ ಪ್ರತಿಯೊಬ್ಬರೂ ಈ ಡಿವೈಸ್ ಏಕೆ ಮೆಚ್ಚಿಕೊಳ್ಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೃತ್ತಿಪರರಿಗೆ

#1

ಭಾರತೀಯ ವಿವಾಹಿತ ಮಹಿಳೆಯರಿಗೆ, ಪುರುಷರಿಗೆ, ವೃತ್ತಿಪರರಿಗೆ ಈ ಫೋನ್ ಅತ್ಯುತ್ತಮ ಕೊಡುಗೆ ಎಂದೆನಿಸಿದೆ. ಫೋನ್ ಚಾರ್ಜ್ ಅನ್ನು ಹಿಡಿದಿಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಅಪ್ಲಿಕೇಶನ್ ಬಳಕೆ ಮಿತಿಮೀರಿದರೂ ಚಾರ್ಜ್ ಕೈಗೊಡುವುದಿಲ್ಲ. ಫೋನ್‌ನ ಪಾಯಿಂಟ್ ಟು ಟಾಪ್ ಫಂಕ್ಶನ್ ಥಟ್ಟನೆ ನಿಮಗೆ ಬಂದಿರುವ ಮೇಲ್ ಮಾಹಿತಿ ತಿಳಿಸುತ್ತದೆ ಇದಕ್ಕಾಗಿ ಸ್ಕ್ರಾಲ್ ಡೌನ್ ಮಾಡುವ ಅವಶ್ಯಕತೆ ಇಲ್ಲ.

ಮನೆಯೊಡತಿಯರಿಗೆ

#2

ಲೀ ಸೂಪರ್ ಫೋನ್ಸ್ ಅನನ್ಯ ಸ್ಕ್ರಾಚ್ ವಿರೋಧಿ ಮಿರರ್ ಸರ್ಫೇಸ್ ಅನ್ನು ಒಳಗೊಂಡಿದ್ದು ಬೆರಳಚ್ಚು ಗುರುತಿಸುವಿಕೆ ವಿಶೇಷತೆಯನ್ನು ಪಡೆದುಕೊಂಡಿದೆ. ಇದರಿಂದ ಮನೆಯೊಡತಿಯರ ಬ್ಯುಸಿ ಕೆಲಸಗಳಲ್ಲೂ ಈ ಫೋನ್ ಬಳಕೆಯನ್ನು ಸುಲಭವಾಗಿ ಮಾಡಬಹುದು. ಇನ್ನು ಈ ಫೋನ್ ಅನ್ನು ಕನ್ನಡಿಯಂತೆ ಕೂಡ ಬಳಸಬಹುದು. ಲೀ ಟಚ್ ತಂತ್ರಜ್ಞಾನ ಇದರಲ್ಲಿದ್ದು, ಲೀ 1 ಎಸ್ ಫಿಂಗರ್ ಪ್ಟಿಂಟ್ ಸೆನ್ಸಾರ್ 0.15 ಸೆಕೆಂಡ್‌ಗಳಲ್ಲಿ 99.3% ನಿಖರ ಗುರುತಿಸುವಿಕೆಯನ್ನು ಒದಗಿಸುತ್ತದೆ.

ರಿಮೋಟ್ ಕಂಟ್ರೋಲ್‌

#3

ಲೀಕೊದ ಪ್ರೀಮಿಯಮ್ ಕಂಟೆಂಟ್ ಲೀ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಮನೆಕೆಲಸಗಳನ್ನು ಮುಗಿಸಿಕೊಂಡ ನಂತರ, ಆರಾಮವಾಗಿ ಕುಳಿತುಕೊಂಡು ಫೋನ್‌ನಲ್ಲಿ ಚಲನಚಿತ್ರ, ಧಾರವಾಹಿಗಳ ವೀಕ್ಷಣೆಯನ್ನು ಮಾಡಬಹುದು. ಅಂತೆಯೇ ಫೋನ್ ಅನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸಿಕೊಂಡು ಅಡುಗೆಮನೆಯಿಂದಲೇ ಟಿವಿಯನ್ನು ನಿಯಂತ್ರಿಸಬಹುದು.

ವಿದ್ಯಾರ್ಥಿಗಳಿಗೆ

#4

ವಿದ್ಯಾರ್ಥಿಗಳಿಗೆ ಜ್ಞಾನ, ವಿನೋದ ಮತ್ತು ಸಂಪರ್ಕವನ್ನು ಒದಗಿಸಿಕೊಡುವ ಸೂಪರ್ ಫೋನ್ ಇದಾಗಿದ್ದು ಅವರುಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಾಯ್ಸ್ ಸರ್ಚ್ ಮತ್ತು ಲೀ ವ್ಯೂನಿಂದ ಅವರು ಮನರಂಜನೆಗಿಂತಲೂ ತಿಳುವಳಿಕೆಗೆ ಹೆಚ್ಚು ಗಮನ ನೀಡುತ್ತಾರೆ.

ಕಂಟೆಂಟ್ ಇಕೋ ಸಿಸ್ಟಮ್ ಫೀಚರ್

#5

ಲೀ 1 ಎಸ್ ಮನರಂಜನೆ ಮತ್ತು ಅರಿವಿನ ಮಹಾಪೂರವನ್ನೇ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಕಂಟೆಂಟ್ ಇಕೋ ಸಿಸ್ಟಮ್ ಫೀಚರ್ ಅನ್ನು ತನ್ನ ಆಂಡ್ರಾಯ್ಡ್ ಆಧಾರಿತ eUI ಸಿಸ್ಟಮ್‌ಗೆ ಅಪ್‌ಲೋಡ್ ಮಾಡಿದ್ದು ಅದೂ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಡೆದಿದೆ.

ಒಪ್ಪಂದ

#6

ಲೀಕೊ ಈಗಾಗಲೇ ಈರೋಸ್ ಮತ್ತು ಯಪ್ ಟಿವಿ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು ವೀಡಿಯೊ ಆನ್ ಡಿಮಾಂಡ್ ಮತ್ತು ಟಿವಿ ಕಂಟೆಂಟ್ ಸ್ಟ್ರೀಮಿಂಗ್ ಅನ್ನು ನಡೆಸಲಿದೆ.

ಪ್ರಯಾಣಿಸುವವರಿಗೆ

#7

ಲೀ ಸ್ಮಾರ್ಟ್‌ಫೋನ್ ಪ್ರಯಾಣಿಸುವವರಿಗೆ ಎಲ್ಲಾ ಸೌಲಭ್ಯವನ್ನು ಒದಗಿಸುವುದರ ಮೂಲಕ ಅವರ ಸಂಗಾತಿ ಎಂದೆನಿಸಿದೆ. ಕ್ಯಾಮೆರಾ, ಫ್ಲ್ಯಾಶ್ ಲೈಟ್, ಮ್ಯೂಸಿಕ್ ಪ್ಲೇಯರ್ ಹೀಗೆ ಎಲ್ಲಾ ಸೌಲಭ್ಯಗಳೊಂದಿಗೆ ಈ ಡಿವೈಸ್ ಬಂದಿದೆ. ದೊಡ್ಡ ಡಿಸ್‌ಪ್ಲೇ ಮತ್ತು ದೊಡ್ಡದಾದ ರಿಯಾಲಿಟಿಯನ್ನು ಇದು ಪಡೆದುಕೊಂಡಿದೆ. 5.5 ಇಂಚಿನ ಸ್ಮಾರ್ಟ್‌ಫೋನ್ ಇದಾಗಿದ್ದು 75 ಶೇಕಡಾ ಬಾಡಿ ಟು ಸ್ಕ್ರೀನ್ ರೇಶಿಯೊ ಇದರಲ್ಲಿದೆ

24*7 ಸೇವೆ

#8

ಇದಲ್ಲದೆ ಫೋನ್ 555 ಸರ್ವೀಸ್ ಸ್ಟೇಶನ್‌ಗಳು ಮತ್ತು 24*7 ಸೇವೆಗಳನ್ನು 10 ಭಾಷೆಗಳಲ್ಲಿ ಒದಗಿಸುತ್ತಿದೆ ವಾಯ್ಸ್ ಕಾಲ್, ಲೈವ್ ಚಾಟ್ ಮತ್ತು ಸೋಶಿಯಲ್ ಮೀಡಿಯಾ ಇದರಲ್ಲಿದೆ ಇದೆಲ್ಲಾ ಕೊಡುಗೆಗಳು ಲೀಕೊ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಎಲ್ಲಾ ಕ್ಷೇತ್ರದಲ್ಲೂ ತನ್ನ ಹೆಸರನ್ನು ಮೂಡಿಸಿಕೊಂಡ ಸಂಸ್ಥೆ

#9

ಲೀಕೊ, ಲೀಟಿವಿ ಎಂಬ ಹೆಸರನ್ನು ಪಡೆದುಕೊಂಡಿದ್ದು, ಇದು ಎಲ್ಲಾ ಕ್ಷೇತ್ರದಲ್ಲೂ ತನ್ನ ಹೆಸರನ್ನು ಮೂಡಿಸಿಕೊಂಡ ಸಂಸ್ಥೆಯಾಗಿದೆ. ನವೆಂಬರ್ 2004 ರಂದು ಸ್ಥಾಪನೆಯಾದ ಇದು ಲೀಕೊ 10,000 ಜನರನ್ನು ಉದ್ಯೋಗಿಯಾಗಿ ಹೊಂದಿದೆ ಮತ್ತು ಇದು ವಿಶ್ವದ ಪ್ರಥಮ ವೀಡಿಯೊ ಕಂಪೆನಿ ಎಂದೆನಿಸಿದ್ದು ಬೀಜಿಂಗ್ ಚೀನಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ.

ವ್ಯವಹಾರವನ್ನು ಅಭಿವೃದ್ಧಿ

#10

ಲೀಕೊ ಇದೀಗ ತನ್ನ ವ್ಯವಹಾರವನ್ನು ಅಭಿವೃದ್ಧಿಪಡಿಸಿದ್ದು ಇಂಟರ್ನೆಟ್ ಟಿವಿ, ಸ್ಮಾರ್ಟ್‌ಫೋನ್, ವೀಡಿಯೊ ಉತ್ಪಾದನೆ ಮತ್ತು ವಿತರಣೆಯನ್ನು ಇದೀಗ ಮಾಡುತ್ತಿದೆ. ಇಷ್ಟಲ್ಲದೆ ಕಂಪೆನಿಯು ವಿಶ್ವದ ಅತಿದೊಡ್ಡ ಕಂಟೆಂಟ್ ಲೈಬ್ರರಿಯನ್ನು ಹೊಂದಿದ್ದು ಸೂಪರ್ ಇಲೆಕ್ಟ್ರಿಕ್ ಕಾರುಗಳಿಗೆ ಸಂಪರ್ಕವನ್ನು ಪಡೆದುಕೊಂಡಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಲೀಕೊ ಸೂಪರ್ ಫೋನ್ ಯಶಸ್ಸಿನ ಗುಟ್ಟೇನು?
2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್
ವಿಶ್ವದ ಪ್ರಥಮ ಮಿರರ್ ಸರ್ಫೇಸ್ ಫೋನ್: ಲೀಕೊ
ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್

ಭೇಟಿ ನೀಡಿ

ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Le Superphones have not only disrupted the smartphone industry, but even the buyers' spending habits.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot