ಆಂಡ್ರಾಯ್ಡ್ ಪೈ ಒಎಸ್‌ಗೆ ಅಪ್‌ಡೇಟ್ ಆಗುವ ಸ್ಮಾರ್ಟ್‌ಫೋನ್‌ಗಳು ಯಾವುವು..!

By GizBot Bureau
|

ಆಂಡ್ರಾಯ್ಡ್ 9 ಪೈ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ನಿಮ್ಮ ಪೋನಿಗೆ ಯಾವಾಗ ಹೊಸ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಲಭ್ಯವಾಗಬಹುದು ಎಂದು ನೀವೇನಾದರೂ ಊಹಿಸುತ್ತಿದ್ದರೆ ಅದಕ್ಕೆ ಉತ್ತರ ಈ ಲೇಖನದಲ್ಲಿ ಸಿಗುತ್ತದೆ. ಈ ಭೂಮಿಯಲ್ಲಿ ಬಳಸುತ್ತಿರುವ ಒಟ್ಟು ಸ್ಮಾರ್ಟ್ ಫೋನ್ ಗಳ ಪೈಕಿ ಶೇಕಡಾ 90 ರಷ್ಟು ಮೊಬೈಲ್ ಕೆಲಸ ಮಾಡುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಿಂದಲೇ ಆಗಿದೆ.

ಹೊಸ ಆಪರೇಟಿಂಗ್ ಸಿಸ್ಟಂ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರಮುಖವಾಗಿ ನೇವಿಗೇಷನ್ ಗೆಷ್ಚರ್ ಮತ್ತು ಎಐ ಬೇಸ್ಡ್ ಆಯ್ಕೆಗಳು ಇತ್ಯಾದಿಗಳು ಒಳಗೊಂಡಿವೆ. ಆದರೆ ಗೂಗಲ್ ತನ್ನ ಡಿವೈಸ್ ಅಪ್ ಗ್ರೇಡ್ ವಿಚಾರದಲ್ಲಿ ಕಡಿಮೆ ದರವನ್ನು ಹೊಂದಿದೆ. ಓರಿಯೋ ಮೂಲಕ ಕೆಲವೇ ಕೆಲವು ಡಿವೈಸ್ ಗಳು ರನ್ ಆಗುತ್ತದೆ ಮತ್ತು ಗೂಗಲ್ ಆಂಡ್ರಾಯ್ಡ್ ಪೈಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾವಿಸುತ್ತೇವೆ.

ಆಂಡ್ರಾಯ್ಡ್ ಪೈ ಒಎಸ್‌ಗೆ ಅಪ್‌ಡೇಟ್ ಆಗುವ ಸ್ಮಾರ್ಟ್‌ಫೋನ್‌ಗಳು ಯಾವುವು..!

ನಾವಿಲ್ಲಿ ಯಾವೆಲ್ಲ ಡಿವೈಸ್ ಗಳು ಆಂಡ್ರಾಯ್ಡ್ ಪೈ ಗೆ ಅಪ್ ಗ್ರೇಡ್ ಆಗಲಿವೆ ಎಂಬ ಸಂಪೂರ್ಣ ವಿವರವನ್ನು ನೀಡುತ್ತಿದ್ದೇವೆ.

ಆಂಡ್ರಾಯ್ಡ್ ಪೈ ಗೆ ಅಪ್ ಗ್ರೇಡ್ ಆಗುವ ಸ್ಮಾರ್ಟ್ ಫೋನ್ ಗಳು

ಗೂಗಲ್ ಪಿಕ್ಸಲ್ ಡಿವೈಸ್ ಗಳು ಮತ್ತು ಎಸೆನ್ಸಿಯಲ್ ಫೋನ್ ಗಳಲ್ಲಿ ಈಗಾಗಲೇ ಆಂಡ್ರಾಯ್ಡ್ ಪೈ ಅಪ್ ಡೇಟ್ ಲಭ್ಯವಾಗುತ್ತಿದೆ.

ಶಿಯೋಮಿ

ಶಿಯೋಮಿ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಪ್ರಮುಖ ಸ್ಮಾರ್ಟ್ ಫೋನ್ ಗಳಲ್ಲಿ ಒಂದೆನಿಸಿರುವ ಶಿಯೋಮಿ ಯಾವೆಲ್ಲ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ನ್ನು ಕಾಣಲಿವೆ ಎಂಬ ಪಟ್ಟಿ ಇಲ್ಲಿದೆ ನೋಡಿ.

• ಶಿಯೋಮಿ ಎಂಐ ಮಿಕ್ಸ್

• ಶಿಯೋಮಿ ಎಂಐ ಮಿಕ್ಸ್ 2

• ಶಿಯೋಮಿ ರೆಡ್ಮಿ 5

• ಶಿಯೋಮಿ ರೆಡ್ಮಿ ನೋಟ್ 5 ಪ್ರೋ

• ಶಿಯೋಮಿ ರೆಡ್ಮಿ ನೋಟ್ 5

• ಶಿಯೋಮಿ ಎಂಐ ಎ2

• ಶಿಯೋಮಿ ಎಂಐ ಎ1

ಶಿಯೋಮಿ ಡಿವೈಸ್ ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ 2018 ರ ವರ್ಷಾಂತ್ಯದಲ್ಲಿ ಆಗುವ ಸಾಧ್ಯತೆ ಇದೆ.

ಸ್ಯಾಮ್ ಸಂಗ್

ಸ್ಯಾಮ್ ಸಂಗ್

ಭಾರತದ ಎರಡನೇ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್ ಗಳಲ್ಲಿ ಸ್ಯಾಮ್ ಸಂಗ್ ಆಗಿದ್ದು, ಯಾವೆಲ್ಲ ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ಸ್ಯಾಮ್ ಸಂಗ್ ಅಪ್ ಡೇಟ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.

• ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

• ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಮತ್ತು ಎಸ್9 ಪ್ಲಸ್

• ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್8 ಮತ್ತು ಎಸ್8 ಪ್ಲಸ್

• ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8

• ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8

• ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6

• ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 ಪ್ಲಸ್

• ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6

• ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

2019 ರ ಮಧ್ಯದಲ್ಲಿ ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗುವ ಸಾಧ್ಯತೆ ಇದೆ.

ನೋಕಿಯಾ

ನೋಕಿಯಾ

ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗಲಿದೆ ಎಂದು ಮೊದಲು ಅಧಿಕೃತವಾಗಿ ಪ್ರಕಟ ಪಡಿಸಿದ ಕಂಪೆನಿ ನೋಕಿಯಾ.ನೋಕಿಯಾದ ಯಾವೆಲ್ಲ ಮೊಬೈಲ್ ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

• ನೋಕಿಯಾ 8 Sirocco

• ನೋಕಿಯಾ 8

• ನೋಕಿಯಾ 7 ಪ್ಲಸ್

• ನೋಕಿಯಾ 6.1

• ನೋಕಿಯಾ 6

• ನೋಕಿಯಾ ಎಕ್ಸ್6 (ನೋಕಿಯಾ 6.1 ಪ್ಲಸ್)

• ನೋಕಿಯಾ 5.1

• ನೋಕಿಯಾ 5

• ನೋಕಿಯಾ 3.1

• ನೋಕಿಯಾ 3

• ನೋಕಿಯಾ 2.1

• ನೋಕಿಯಾ 2

• ನೋಕಿಯಾ 1

ಈ ವರ್ಷದ ಸೆಪ್ಟೆಂಬರ್ ಅಂತ್ಯದೊಳಗೆ ನೋಕಿಯಾ ಪೋನ್ ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗುವ ಸಾಧ್ಯತೆ ಇದೆ.

ಒನ್ ಪ್ಲಸ್

ಒನ್ ಪ್ಲಸ್

ಒನ್ ಪ್ಲಸ್ 6 ನಲ್ಲಿ ಈಗಾಗಲೇ ಆಂಡ್ರಾಯ್ಡ್ ಪೈ ಗೆ ಆಕ್ಸಿಸ್ ಇದೆ. ಇನ್ನುಳಿದಂತೆ ಒನ್ ಪ್ಲಸ್ ತನ್ನೆಲ್ಲಾ ಫೋನ್ ಗಳಲ್ಲೂ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗುವ ಬಗ್ಗೆ ಸೂಚನೆ ನೀಡಿದೆ. ಓರಿಯೋ 8.1 1 ಹೊರತುಪಡಿಸಿ ಮತ್ತೆಲ್ಲಾ ಒನ್ ಪ್ಲಸ್ ಡಿವೈಸ್ ಗಳು ಇದಕ್ಕೆ ಅಪ್ ಡೇಟ್ ಆಗಲಿದೆ.

• ಒನ್ ಪ್ಲಸ್ 6

• ಒನ್ ಪ್ಲಸ್ 5ಟಿ

• ಒನ್ ಪ್ಲಸ್ 5

• ಒನ್ ಪ್ಲಸ್ 3ಟಿ

• ಒನ್ ಪ್ಲಸ್ 3

ಈ ವರ್ಷದ ನವೆಂಬರ್ ನಲ್ಲಿ ಒನ್ ಪ್ಲಸ್ ನ ಎಲ್ಲಾ ಮೊಬೈಲ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗುವ ಸಾಧ್ಯತೆ ಇದೆ.

ಮೋಟೊರೋಲಾ

ಮೋಟೊರೋಲಾ

ಲೆನೊವಾ ಮಾಲೀಕತ್ವದ ಮೋಟೊರೋಲಾ ಕೂಡ ಈಗಾಗಲೇ ತನ್ನ ನೂತನ ಡಿವೈಸ್ ಗಳಲ್ಲಿ AOSP (Android Open Source Project) ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗಲಿದೆ ಎಂಬುದನ್ನು ಖಾತ್ರಿಗೊಳಿಸಿದೆ. ಹಾಗಾದ್ರೆ ಯಾವೆಲ್ಲ ಮೋಟೋ ಡಿವೈಸ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ಪಡೆಯಲಿವೆ ಎಂಬುದನ್ನು ಇಲ್ಲಿ ಗಮನಿಸಿ.

• ಮೋಟೊ ಝಡ್ 3

• ಮೋಟೊ ಝಡ್ 3 ಪ್ಲೇ

• ಮೋಟೊ ಝಡ್2 ಪ್ಲೇ

• ಮೋಟೊ ಎಕ್ಸ್4

• ಮೋಟೊ ಜಿ6 ಪ್ಲಸ್

• ಮೋಟೊ ಜಿ6

• ಮೋಟೊ ಜಿ6 ಪ್ಲೇ

2019 ರ ಆರಂಭದಲ್ಲಿ ಮೋಟೊ ಡಿವೈಸ್ ಗಳು ಆಂಡ್ರಾಯ್ಡ್ ಅಪ್ ಡೇಟ್ ಕಾಣುವ ನಿರೀಕ್ಷೆ ಇದೆ.

ವಿವೋ

ವಿವೋ

ಚೀನಾದ ವಿವೋ ಕಂಪೆನಿ ಕೂಡ ತನ್ನ ವಿವೋ ಡಿವೈಸ್ ಗಳಲ್ಲಿ ಆಂಡ್ರಾಯ್ಡ್ ಪೈ ಅಪ್ ಡೇಟ್ ಆಗಲಿದೆ ಎಂಬುದನ್ನು ತಿಳಿಸಿದ್ದು, ಯಾವೆಲ್ಲ ಡಿವೈಸ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ಕಾಣಲಿದೆ ಎಂಬ ವಿವರ ಇಲ್ಲಿದೆ ನೋಡಿ.

• ವಿವೋ ಎಕ್ಸ21

• ವಿವೋ ಎಕ್ಸ್21 ಯುಡಿ

• ವಿವೋ ನೆಕ್ಸ್

• ವಿವೋ ವಿ9

2018 ರ ಅಂತ್ಯದಲ್ಲಿ ವಿವೋ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ಕಾಣಲಿವೆ.

ಓಪೋ

ಓಪೋ

ಆಂಡ್ರಾಯ್ಡ್ ಪೈ ಅಪ್ ಡೇಟ್ ಬಗ್ಗೆ ಇದುವರೆಗೂ ಯಾವುದೇ ವಿಚಾರವನ್ನು ಓಪೋ ಪ್ರಕಟಪಡಿಸಿಲ್ಲ. ಆದರೆ ಕೆಲವು ವಿವೋ ಹೊಸ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ನ್ನು ಕಾಣಲಿದೆ. ಯಾಕೆಂದರೆ ಓಪೋ ಆರ್ 15 ಗುಗಲ್ ನ ಬೆಟಾ ಪ್ರೊಗ್ರಾಮ್ ನ ಒಂದು ಭಾಗವಾಗಿದೆ.

ಯಾವೆಲ್ಲಾ ಓಪೋ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ನ್ನು ಕಾಣಲಿದೆ ಎಂಬ ಪಟ್ಟಿ ಇಲ್ಲಿದೆ.

• ಓಪೋ ಫೈಂಡ್ ಎಕ್ಸ್

• ಓಪೋ ಆರ್ 15

• ಓಪೋ ಆರ್ 15 ಪ್ರೋ

2019 ರ ಆರಂಭದಲ್ಲಿ ಓಪೋ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ನ್ನು ಕಾಣುವ ನಿರೀಕ್ಷೆ ಇದೆ.

ಹುವಾಯಿ

ಹುವಾಯಿ

ಹುವಾಯಿ ಮತ್ತು ಅದರ ಸಹ ಬ್ರ್ಯಾಂಡ್ ಆಗಿರುವ ಹಾನರ್ ಇತ್ತೀಚೆಗಿನ ಟಾಪ್ 5 ಸ್ಮಾರ್ಟ್ ಪೋನ್ ಗಳ ಪಟ್ಟಿಯನ್ನು ಸೇರಿದೆ. ಚೀನಾದ ಈ ಕಂಪೆನಿಯ ಮಾರುಕಟ್ಟೆಯ ಪಾಲುದಾರಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಗತ್ತಿನ ಎರಡನೇ ಅತೀ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಯಾಗಿ ಕೂಡ ಇದು ಹೊರಹೊಮ್ಮಿದೆ. ಹಾನರ್ ಮತ್ತು ಹುವಾಯಿಯ ಯಾವೆಲ್ಲ ಫೋನ್ ಗಳು ಆಂಡ್ರಾಯ್ಡ್ ಪೈ ಅಪ್ ಡೇಟ್ ಕಾಣಲಿವೆ ಎಂಬ ಪಟ್ಟಿ ಇಲ್ಲಿದೆ.

• ಹುವಾಯಿ ನೋವಾ 3

• ಹುವಾಯಿ ನೋವಾ 3ಐ

• ಹಾನರ್ ಪ್ಲೇ

• ಹಾನರ್ 9

• ಹಾನರ್ 10

• ಹಾನರ್ ವ್ಯೂ 10

• ಹುವಾಯಿ ಪಿ20

• ಹುವಾಯಿ ಪಿ20 ಲೈಟ್

• ಹಾನರ್ 7ಎ

• ಹಾನರ್ 7ಸಿ

• ಹಾನರ್ 9 ಲೈಟ್

2019 ರ ಆರಂಭದಲ್ಲಿ ಹುವಾಯಿ ಮತ್ತು ಹಾನರ್ ನ ಫೋನ್ ಗಳು ಆಂಡ್ರಾಯ್ಡ್ ಅಪ್ ಡೇಟ್ ಕಾಣುವ ನಿರೀಕ್ಷೆ ಇದೆ.

ಆಸೂಸ್

ಆಸೂಸ್

ಥೈವಾನಿನ ಈ ಕಂಪೆನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ಫೋನ್ ಗಳ ಮಾರಾಟದಲ್ಲಿ ದುಪ್ಪಟ್ಟು ಏರಿಕೆಯನ್ನು ಕಂಡಿದೆ. ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ಮತ್ತು ಆಸೂಸ್ ಝೆನ್ ಫೋನ್ 5ಝಡ್ ಆಂಡ್ರಾಯ್ಡ್ ಪೈ ಅಪ್ ಡೇಟ್ ನ್ನು ಕಾಣುತ್ತದೆ ಎಂಬುದನ್ನು ಕಂಪೆನಿಯೇ ಅಧಿಕೃತವಾಗಿ ತಿಳಿಸಿದ್ದು ಈ ವರ್ಷದ ಅಂತ್ಯದೊಳಗೆ ಆಗುವ ಸಾಧ್ಯತೆ ಇದೆ.

ಬ್ಲಾಕ್ ಬೆರ್ರಿ

ಬ್ಲಾಕ್ ಬೆರ್ರಿ

2018 ರ ಅಂತ್ಯ ಅಥವಾ 2019 ರ ಆರಂಭದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಬ್ಲಾಕ್ ಬೆರಿ ಕೀ 2 ಫೋನ್ ಆಂಡ್ರಾಯ್ಡ್ ಪೈ ಅಪ್ ಡೇಟ್ ಕಾಣುವ ಸಾಧ್ಯತೆ ಇದೆ.

Best Mobiles in India

English summary
Will Your Phone Get Android 9 Pie Update? Check The Complete List!. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X