ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಲಾಂಚ್‌..!

|

ಮಡಚಬಹುದಾದ ಸ್ಮಾರ್ಟ್‌ಫೋನ್‌ ಬಿಡುಗಡೆಗೆ LG, ಸ್ಯಾಮ್‌ಸಂಗ್‌ ಮತ್ತು ಹುವಾವೆ ಕಂಪನಿಗಳು ಸ್ಪರ್ಧೆಗೆ ಬಿದ್ದಿರುವಾಗ ಚೀನಾದಲ್ಲಿ ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ನ್ನು ಕಂಪನಿಯೊಂದು ಸದ್ದಿಲ್ಲದೆ ಬಿಡುಗಡೆ ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಶಾಕ್‌ ನೀಡಿದೆ. ಬುಧವಾರ ತಾನೇ LG ಕಂಪನಿ 2019ರ ಆರಂಭದಲ್ಲಿ ಮಡಚಬಹುದಾದ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತೇವೆ ಎಂದು ಖಚಿತ ಪಡಿಸಿತ್ತು.

ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಲಾಂಚ್‌..!

ಹೌದು, ಚೀನಾದ ರೋಯು ಟೆಕ್ನಾಲಜಿ ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸಿ ಫ್ಲೆಕ್ಸ್‌ಪೈ ಎಂದು ಹೆಸರಿಟ್ಟಿದೆ. ಈ ಮೂಲಕ ನಿಯಮಿತವಾಗಿ ಫ್ಲೆಕ್ಸಿಬಲ್‌ ಸ್ಮಾರ್ಟ್‌ಫೋನ್‌ನ್ನ ವಿನ್ಯಾಸಗಳನ್ನು ಬಿಡುಗಡೆ ಮಾಡುತ್ತಾ ಬಂದಿದ್ದ ಸ್ಯಾಮ್‌ಸಂಗ್‌ಗೆ ಟಾಂಗ್‌ ನೀಡಿದೆ. ಗುರುವಾರದಿಂದಲೇ ಈ ಸ್ಮಾರ್ಟ್‌ಫೋನ್‌ ಚೀನಾ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಆಗಿದ್ದರೆ, ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ ಹೇಗಿದೆ..? ಬೆಲೆ ಎಷ್ಟು..? ಏನೇಲ್ಲಾ ಹೊಂದಿದೆ ಎಂಬುದರ ಕುರಿತು ಒಂದು ಸುತ್ತು ಹಾಕಿ ಬರೋಣ ಬನ್ನಿ..

ಸ್ನಾಪ್‌ಡ್ರಾಗನ್‌ 8150 ಪ್ರೊಸೆಸರ್‌

ಸ್ನಾಪ್‌ಡ್ರಾಗನ್‌ 8150 ಪ್ರೊಸೆಸರ್‌

ಐಸ್‌ ಯುನಿವರ್ಸ್‌ ತನ್ನ ಟ್ವಿಟ್ಟರ್‌ನಲ್ಲಿ ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ ಬಗ್ಗೆ ವಿವರಣೆಯನ್ನು ನೀಡಿದೆ. ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ ಮೊದಲ ಬಾರಿಗೆ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 8150 ಪ್ರೊಸೆಸರ್ ಹೊಂದಿದೆ. ಇದನ್ನು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 855 ಪ್ರೊಸೆಸರ್‌ ಎಂದು ಕೂಡ ಕರೆಯುವವರು. ಅದಲ್ಲದೇ ಲಾಂಚ್‌ ಇವೆಂಟ್‌ನಲ್ಲಿ ಕಂಪನಿ ಹೇಳಿರುವಂತೆ 7nm ಪ್ರಕ್ರಿಯೆ ಹೊಂದಿರುವ AI ಪ್ಲಾಟ್‌ಫಾರ್ಮ್‌ನ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದ್ದು, 5G ನೆಟ್‌ವರ್ಕ್‌ಗೆ ಬೆಂಬಲ ನೀಡುತ್ತದೆ.

ಡಿಸ್‌ಪ್ಲೇ ಹೇಗಿದೆ..?

ಡಿಸ್‌ಪ್ಲೇ ಹೇಗಿದೆ..?

ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ 7.8 ಇಂಚ್‌ AMOLED ಡಿಸ್‌ಪ್ಲೇ ಹೊಂದಿದ್ದು, 4.3 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ. ಮಡಚಿದಾಗ 4 ಇಂಚಿನ ಡಿಸ್‌ಪ್ಲೇ ಆಗಿ ಬದಲಾಗುತ್ತದೆ. ಆದರೆ ಯುನಿವರ್ಸ್‌ ಐಸ್‌ ತನ್ನ ಟ್ವಿಟ್ಟರ್‌ನಲ್ಲಿ ಹೇಳಿರುವಂತೆ ಒರಟಾದ ವಿನ್ಯಾಸ ಹೊಂದಿದ್ದು, ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ ಎಂಬ ಸ್ಥಾನ ಪಡೆಯಲು ಬಿಡುಗಡೆ ಮಾಡಲಾಗಿದೆ. ಆದರೆ, ಇದು ಭವಿಷ್ಯದ ಉತ್ಪನ್ನ ಎಂದು ಹೇಳಿದೆ.

ಪರಿಪೂರ್ಣ ಸ್ಮಾರ್ಟ್‌ಫೋನ್‌ ಅಲ್ಲ

ಪರಿಪೂರ್ಣ ಸ್ಮಾರ್ಟ್‌ಫೋನ್‌ ಅಲ್ಲ

ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ ಪರಿಪೂರ್ಣ ವಿನ್ಯಾಸವನ್ನು ಹೊಂದಿಲ್ಲ ಮತ್ತು ತುಂಬಾ ದೊಡ್ಡದಾಗಿದೆ. ಸ್ಯಾಮ್‌ಸಂಗ್‌ ಮತ್ತು ಹುವಾವೆ ಕಂಪನೆಗಳು ಪಾಕೆಟ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಮತ್ತು ಹೆಚ್ಚು ನಯವಾದ ಮಡಚುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಬಹುದು. ಅಲ್ಲಿಯವರೆಗೂ ಕಾಯುವುದು ಉತ್ತಮ.

ಕಾರ್ಯನಿರ್ವಹಣೆ

ಕಾರ್ಯನಿರ್ವಹಣೆ

ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ ವಾಟರ್‌ ಒಎಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್‌ನಂತೆಯೇ ಕಾರ್ಯನಿರ್ವಹಿಸುವ ಕಸ್ಟಮ್‌ ಆಪರೇಟಿಂಗ್‌ ಸಿಸ್ಟಮ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ 6 GB / 8 GB RAM ಬೆಂಬಲದೊಂದಿಗೆ 128 GB / 256 GB / 512 GB ಆಂತರಿಕ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ.

ಒಂದೇ ಡ್ಯುಯಲ್‌ ಕ್ಯಾಮೆರಾ

ಒಂದೇ ಡ್ಯುಯಲ್‌ ಕ್ಯಾಮೆರಾ

ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ ಒಂದೇ ಒಂದು ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿದೆ. ಇದನ್ನೆ ಬಳಸಿಕೊಂಡು ಸಾಮಾನ್ಯ ಫೋಟೋಗಳನ್ನು ಮತ್ತು ಸೆಲ್ಫೀಗಳನ್ನು ತೆಗೆದುಕೊಳ್ಳಬಹುದು. ಈ ಕ್ಯಾಮೆರಾ16 MP ವೈಡ್‌ ಆಂಗಲ್‌ ಪ್ರಾಥಮಿಕ ಸೆನ್ಸಾರ್‌ ಹೊಂದಿದ್ದರೆ, 20 MP ಸೆಕೆಂಡರಿ ಟೆಲಿಪೋಟೋ ಸೆನ್ಸಾರ್‌ ಹೊಂದಿದ್ದು, ಉತ್ತಮ ಫೋಟೋಗ್ರಾಫಿಯನ್ನು ಮಾಡುವ ಆಯ್ಕೆ ಸಿಕ್ಕೆ ಸಿಗುತ್ತದೆ.

ಬ್ಯಾಟರಿ ಎಷ್ಟು ಗೊತ್ತಾ..?

ಬ್ಯಾಟರಿ ಎಷ್ಟು ಗೊತ್ತಾ..?

ಕಂಪನಿಯು ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ನ ಬ್ಯಾಟರಿಯ ವಿವರಗಳನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ. ಆದರೆ, ಕಂಪನಿ Ro-Charge ವೇಗದ ಚಾರ್ಜಿಂಗ್‌ ವ್ಯವಸ್ಥೆಯನ್ನು ಈ ಡಿವೈಸ್‌ ಹೊಂದಿದೆ ಎಂದು ಹೇಳಿದೆ. ಈ ತಂತ್ರಜ್ಞಾನದ ಮೂಲಕ ಒಂದು ಗಂಟೆಯಲ್ಲಿ ಸ್ಮಾರ್ಟ್‌ಫೋನ್‌ನ ಖಾಲಿ ಬ್ಯಾಟರಿಯನ್ನು ಶೇ.80ರಷ್ಟು ಚಾರ್ಜ್‌ ಮಾಡಬಹುದಾಗಿದೆ ಎಂದು ಹೇಳಿದೆ.

ಬೆಲೆ ಕೇಳಿದರೆ ಖಂಡಿತ ಶಾಕ್‌..!

ಬೆಲೆ ಕೇಳಿದರೆ ಖಂಡಿತ ಶಾಕ್‌..!

ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ ಆಗಿರುವ ಫ್ಲೆಕ್ಸ್‌ಪೈ ಬೆಲೆ ಕೇಳಿದರೆ ಶಾಕ್‌ ಆಗುವುದು ಖಂಡಿತ. ವರಟಾದ ವಿನ್ಯಾಸ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬೆಲೆ ಚೀನಾದಲ್ಲಿ 9,000 CNY ಅಂದರೆ, ಭಾರತದ ರೂಪಾಯಿಗೆ ಪರಿವರ್ತಿಸಿದರೆ ಅಂದಾಜು ರೂ.95,300 ಆಗಲಿದೆ.

LG ಪ್ಲಾನ್‌ ಮಾಡಿತ್ತು..!

ಜನಪ್ರಿಯ ಸಲಹೆಗಾರ ಇವಾನ್ ಬ್ಲಾಸ್‌ ಬುಧವಾರ ತಮ್ಮ ಟ್ವೀಟ್‌ನಲ್ಲಿ LG ಯೋಜನೆಗಳ ಬಗ್ಗೆ ಚರ್ಚಿಸಿದ್ದರು. ಅಮೇರಿಕಾದ ಲಾಸ್‌ ವೆಗಾಸ್‌ನಲ್ಲಿ ಜನೇವರಿ 8 ರಿಂದ 11ರವರೆಗೆ ನಡೆಯುವ CES 2019 ಕಾರ್ಯಕ್ರಮದಲ್ಲಿ ಮಡಚಬಹುದಾದ ಸ್ಮಾರ್ಟ್‌ಫೋನ್‌ನ್ನು ವಿಶ್ವದ ಮುಂದೆ ಇಡುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದ್ದರು.

LGಯಿಂದಲೂ ಪರೋಕ್ಷ ಸುಳಿವು

LGಯಿಂದಲೂ ಪರೋಕ್ಷ ಸುಳಿವು

ಈ ಟ್ವೀಟ್‌ಗೆ LGಯ ಜಾಗತಿಕ ಕಾರ್ಪೋರೆಟ್‌ ಸಂವಹನದ ಮುಖ್ಯಸ್ಥ ಕೆನ್‌ ಹಾಂಗ್‌ CESನಲ್ಲಿ ಏನಾದರೂ ಆಗಬಹುದೆಂದು ಎಂದು ಹೇಳಿ ಪರೋಕ್ಷವಾಗಿ ಮಡಚುವ ಸ್ಮಾರ್ಟ್‌ಫೋನ್‌ ಬಿಡುಗಡೆಯ ಸುಳಿವು ನೀಡಿದ್ದರು. ಆದರೆ, ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಶ್ರೇಯವನ್ನು ಚೀನಾದ ರೋಯು ಟೆಕ್ನಾಲಜಿ ಪಡೆದಿದ್ದು, LGಗೆ ನುಂಗಲಾರದ ತುತ್ತು ಎಂದರೂ ತಪ್ಪಲ್ಲ.

ಆನ್‌ಲೀಕ್ಸ್‌ ಟ್ವೀಟ್‌

ಫ್ಲೆಕ್ಸ್‌ಪೈ ಸ್ಮಾರ್ಟ್‌ಫೋನ್‌ ಹೇಗಿದೆ ನೋಡಿ..?

ಯುನಿವರ್ಸ್‌ ಐಸ್‌ ಟ್ವೀಟ್‌

ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ ಹೇಗಿದೆ ನೋಡಿ..?

Best Mobiles in India

English summary
World’s first flexible smartphone, FlexPai launched in China. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X