ಶಿಯೋಮಿ ಬಳಕೆದಾರರಿಗೆ ಸಿಹಿಸುದ್ದಿ!!..30 ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿದೆ ನೂತನ ವೈಶಿಷ್ಟ್ಯ!!

ಭಾರತದಲ್ಲಿಯೇ ಅತ್ಯದಿಕ ಸ್ಮಾರ್ಟ್‌ಫೋನ್ ಮಾರಾಟಗಾರ ಮೊಬೈಲ್ ಕಂಪೆನಿ ಶಿಯೋಮಿ ತನ್ನ ಮೊಬೈಲ್ ಬಳಕೆದಾರರಿಗೊಂದು ಗುಡ್‌ನ್ಯೂಸ್ ನೀಡಿದೆ.!!

|

ಭಾರತದಲ್ಲಿಯೇ ಅತ್ಯದಿಕ ಸ್ಮಾರ್ಟ್‌ಫೋನ್ ಮಾರಾಟಗಾರ ಮೊಬೈಲ್ ಕಂಪೆನಿ ಶಿಯೋಮಿ ತನ್ನ ಮೊಬೈಲ್ ಬಳಕೆದಾರರಿಗೊಂದು ಗುಡ್‌ನ್ಯೂಸ್ ನೀಡಿದೆ.!! ಶಿಯೋಮಿಯ ಮುಂಬರುವ MIUI 9.5 ಫರ್ಮ್ವೇರ್ ಅಪ್‌ಡೇಟ್‌ಗೆ ಅಪ್‌ಡೇಟ್ ಆಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಪಟ್ಟಿಯನ್ನು ಶಿಯೋಮಿ ಕಂಪೆನಿ ಪ್ರಕಟಿಸಿದೆ.!!

ಶಿಯೋಮಿಯ MIUI 9.5 ಜಾಗತಿಕ ಸ್ಥಿರವಾದ ROM ಶಿಯೋಮಿಯ ಬಹುತೇಕ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್ ಆಗುತ್ತಿದ್ದು, MIUI 9.5 ಆಂಡ್ರಾಯ್ಡ್ ನೌಗಟ್ ಅನ್ನು ಆಧರಿಸಿ ಹೆಚ್ಚು ನಿರೀಕ್ಷಿತ ವೈಶಿಷ್ಟ್ಯವನ್ನು ಒಳಗೊಂಡಂತೆ ಮಹತ್ವದ UI ಸುಧಾರಣೆಗಳೊಂದಿಗೆ ಬರುತ್ತಿದೆ. ರೆಡ್ಮಿ, ಮಿ ಮತ್ತು ಮಿ ಮ್ಯಾಕ್ಸ್ ಸರಣಿ ಸ್ಮಾರ್ಟ್‌ಫೋನ್‌ಗಳು ಸಹ ಅಪ್‌ಡೇಟ್ ಲೀಸ್ಟ್‌ನಲ್ಲಿವೆ.!!

30 ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿದೆ  ನೂತನ ವೈಶಿಷ್ಟ್ಯ!!

ಶಿಯೋಮಿ ತನ್ನ ಬಳಕೆದಾರರಿಗೆ ಕೆಲವು ವಿಶೇಷ ಸೆಟ್ಟಿಂಗ್ಸ್‌ಗಳನ್ನು ನೀಡಲು ಮುಂದಾಗಿರುವುದರಿಂದ MIUI 9.5 ಜಾಗತಿಕ ಸ್ಥಿರ ಅಪ್‌ಡೇಟ್ ಅನ್ನು ನೀಡುತ್ತಿದೆ. ಹಾಗಾದರೆ, ಶಿಯೋಮಿ MIUI 9.5 ಅಪ್‌ಡೇಟ್ ಪಡೆಯುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು? ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

MIUI 9.5 ಅಪ್‌ಡೇಟ್ ಫೀಚರ್ಸ್!!

MIUI 9.5 ಅಪ್‌ಡೇಟ್ ಫೀಚರ್ಸ್!!

MIUI 9.5 ಅಪ್‌ಡೇಟ್ ಪಡೆಯುವ ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸಾಫ್ಟ್‌ವೇರ್‌ನಲ್ಲಿ ಭಾರೀ ಬದಲಾವಣೆಗಳನ್ನು ಕಾಣುತ್ತಾರೆ. MIUI 9.5 ಅಪ್‌ಡೇಟ್‌ನಿಂದ ಸ್ಮಾರ್ಟ್‌ಫೋನ್ UI ಸುಧಾರಣೆಗಳೊಂದಿಗೆ ಭಾರೀ ನಿರೀಕ್ಷಿತ ನೋಟಿಫಿಕೇಷನ್ ಶೇಡ್ ಫೀಚರ್, ಆಪ್ ತೆರೆಯದೇ ರಿಪ್ಲೈ ಮಾಡಬಹುದಾದ ಹಲವು ಆಯ್ಕೆಗಳನ್ನು ತರುತ್ತಿದೆ.!!

ಈಗ ಅಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ಈಗ ಅಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ಶಿಯೋಮಿ ಬಿಡುಗಡೆ ಮಾಡಿರುವ ಪಟ್ಟಿಯಂತೆ ರೆಡ್‌ಮಿ ನೋಟ್ 3 (Qualcomm SoC ಆವೃತ್ತಿ), ರೆಡ್‌ಮಿ ನೋಟ್ 3 ವಿಶೇಷ ಆವೃತ್ತಿ, ರೆಡ್‌ಮಿ ನೋಟ್ 4 (Qualcomm SoC ಆವೃತ್ತಿ) ರೆಡ್‌ಮಿ 4A, ರೆಡ್ಮಿ 5 ಪ್ಲಸ್, ಮಿ ಮ್ಯಾಕ್ಸ್ ಮತ್ತು ಮಿ ಮ್ಯಾಕ್ಸ್ ಪ್ರೈಮ್ ಸ್ಮಾರ್ಟ್‌ಫೋನ್‌ಗಳು ಬಹುಬೇಗ MIUI 9.5 ಓವರ್-ದಿ-ಏರ್ (OTA) ಅಪ್ಡೇಡ್ ಪಡೆಯುತ್ತಿವೆ.!!

ಮಾರ್ಚ್ ಅಂತ್ಯಕ್ಕೆ ಅಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ಮಾರ್ಚ್ ಅಂತ್ಯಕ್ಕೆ ಅಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ಶಿಯೋಮಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರೆಡ್ಮಿ 3S, ರೆಡ್ಮಿ 4 ಪ್ರೈಮ್, ಮತ್ತು ರೆಡ್‌ಮಿ ನೋಟ್ 4 (ಮೀಡಿಯಾ ಟೆಕ್ SoC ಆವೃತ್ತಿ) ಸ್ಮಾರ್ಟ್‌ಫೋನ್‌ಗಳು ಮಾರ್ಚ್ ಅಂತ್ಯದ ವೇಳೆಗೆ MIUI 9.5 ಅಪ್ಡೇಟ್ ಅನ್ನು ಸ್ವೀಕರಿಸುತ್ತವೆ ಎಂದು ಶಿಯೋಮಿ ತಿಳಿಸಿದೆ.! ಹಾಗಾಗಿ, ರೆಡ್ಮಿ 3S, ರೆಡ್ಮಿ 4 ಪ್ರೈಮ್ ಬಳಕೆದಾರರು ನೂತನ ಅಪ್‌ಡೇಟ್‌ಗೆ ಸ್ವಲ್ಪ ದಿನ ಕಾಯಬೇಕಿದೆ.!!

ಏಪ್ರಿಲ್‌ನಲ್ಲಿ ಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ಏಪ್ರಿಲ್‌ನಲ್ಲಿ ಪ್‌ಡೇಟ್ ಪಡೆಯುತ್ತಿರುವ ಫೋನ್‌ಗಳು!!

ರೆಡ್ಮಿ Y1, ರೆಡ್ಮಿ ನೋಟ್ 5A ಪ್ರೈಮ್, ರೆಡ್ಮಿ Y1 ಲೈಟ್ ಆಕಾ ರೆಡ್ಮಿ ನೋಟ್ 5A, ರೆಡ್ಮಿ 5 ಎ, ರೆಡ್ಮಿ 5, ರೆಡ್ಮಿ 5 ಪ್ಲಸ್, ರೆಡ್ಮಿ ನೋಟ್ 5, ರೆಡ್ಮಿ 4 ಎಕ್ಸ್, ಮಿ ಮ್ಯಾಕ್ಸ್ 2, ಮಿ 5, ಮಿ 6 ಮತ್ತು ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್‌ಗಳು ಏಪ್ರಿಲ್ ಆರಂಭದಲ್ಲಿ MIUI 9.5 ಅಪ್ಡೇಟ್ ಅನ್ನು ಪಡೆಯುವ ಸಾಧ್ಯತೆಯಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದು ಹೇಗೆ?

MIUI 9.5 ಓವರ್-ದಿ-ಏರ್ (OTA) ಅಪ್‌ಡೇಟ್ ಬಗ್ಗೆ ಶಿಯೋಮಿ ಕಂಪೆನಿ ಕಳುಹಿಸುವ ನೋಟಿಫಿಕೇಷನ್‌ಗಳನ್ನು ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರು ಗಮನಿಸಬೇಕಾಗುತ್ತದೆ. ಅಥವಾ ನೀವೆ ಸೆಟ್ಟಿಂಗ್ಸ್ ತೆರೆದು-ಸೆಟ್ಟಿಂಗ್ಸ್-ಅಬೌಟ್ ಫೋನ್- ಸಿಸ್ಟಂ ನವೀಕರಣ ಚೆಕ್ ಅನ್ನು ಟ್ಯಾಪ್ ಮಾಡಿ ಸ್ಮಾರ್ಟ್‌ಫೋನ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.!!

Best Mobiles in India

English summary
MIUI 9.5: The rollout is happening incrementally, which means that some users will get MIUI 9.5 update before other users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X