ಜನವರಿಯಲ್ಲಿ 48ಎಂಪಿ ಕ್ಯಾಮರಾವಿರುವ ಶಿಯೋಮಿ ಫೋನ್ ಬಿಡುಗಡೆ!

|

ಮೆಗಾಪಿಕ್ಸಲ್ ನ ಕ್ಯಾಮರಾವನ್ನು ಬಿಡುಗಡೆಗೊಳಿಸುವ ಸ್ಪರ್ಧೆ ಮತ್ತೆ ಪುನರಾರಂಭವಾಗುವಂತೆ ಕಾಣುತ್ತಿದೆ. ಕಳೆದ ಹಲವು ಸಮಯದಿಂದ ಎಲ್ಲಾ ಫ್ಲ್ಯಾಗ್ ಶಿಪ್ ನ ಆಂಡ್ರಾಯ್ಡ್ ಫೋನ್ ಗಳು ಮತ್ತು ಐಫೋನ್ ಗಳು 12 ಮೆಗಾಪಿಕ್ಸಲ್ ನ ಇಮೇಜ್ ಸೆನ್ಸರ್ ನ್ನು ಬಳಕೆ ಮಾಡಿದ್ದು ಪ್ರೈಮರಿ ಫೋನ್ ಗಳಿಗೆ ಹೋಲಿಸಿದರೆ ಇದು ಬಹಳ ದೊಡ್ಡ ಗಾತ್ರದ್ದಾಗಿದೆ.

48ಮೆಗಾಪಿಕ್ಸಲ್ ನ ಕ್ಯಾಮರಾ:

48ಮೆಗಾಪಿಕ್ಸಲ್ ನ ಕ್ಯಾಮರಾ:

ಇದೀಗ ಇನ್ನು ಹೆಚ್ಚಿನ ರೆಸಲ್ಯೂಷನ್ನಿನ ಕ್ಯಾಮರಾಗಳು ಸ್ಮಾರ್ಟ್ ಫೋನ್ ನಲ್ಲಿ ಕಾಣಿಸಿಕೊಳ್ಳುವ ದಿನಗಳು ಹತ್ತಿರವಾಗುತ್ತಿದೆ. ಶಿಯೋಮಿ ಹೊಸ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಲಿದ್ದು ಅದರಲ್ಲಿ 48 ಮೆಗಾಪಿಕ್ಸಲ್ ನ ಕ್ಯಾಮರಾವಿರಲಿದೆ ಎಂದು ತಿಳಿಸಿದೆ.

ಇದೀಗ ಹುವಾಯಿ ಹೆಚ್ಚೆಚ್ಚು ಪಿಕ್ಸಲ್ ಇರುವ ಸೆನ್ಸರ್ ಗಳನ್ನು ಬಳಕೆ ಮಾಡುತ್ತಿದೆ. ಹುವಾಯಿ ಮೇಟ್ 20 ಪ್ರೋ ಮತ್ತು ಹುವಾಯಿ ಪಿ20 ಪ್ರೋ ಎರಡರಲ್ಲೂ ಕೂಡ 40 ಮೆಗಾಪಿಕ್ಸಲ್ ನ ಇಮೇಜ್ ಸೆನ್ಸರ್ ಅವುಗಳ ಪ್ರೈಮರಿ ಕ್ಯಾಮರಾದಲ್ಲಿ ಇದೆ.

ಇತರೆ ಮಾಹಿತಿಗಳು ಅಸ್ಪಷ್ಟ:

ಇತರೆ ಮಾಹಿತಿಗಳು ಅಸ್ಪಷ್ಟ:

ಸಾಮಾಜಿಕ ಜಾಲತಾಣದಲ್ಲಿ ಶಿಯೋಮಿ ತನ್ನ ಮುಂಬರುವ 48 ಮೆಗಾಪಿಕ್ಸಲ್ ಕ್ಯಾಮರಾದ ಟೀಸರ್ ನ್ನು ಬಿಡುಗಡೆಗೊಳಿಸಿದೆ ಆದರೆ ಇದನ್ನು ಹೊರತು ಪಡಿಸಿ ಇತರೆ ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ:

ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ:

ಕಂಪೆನಿಯ ಹಿರಿಯ ಎಕ್ಸಿಕ್ಯೂಟೀವ್ ಗಳು ಈ ರೀತಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ್ದು ಇದರಲ್ಲಿ ಅಟ್ ಲೀಸ್ಟ್ ಒಂದು ಲೆನ್ಸ್ ಮತ್ತು ಕ್ಯಾಮರಾ ಫ್ಲ್ಯಾಶ್ ನ್ನು ತೋರಿಸಲಾಗಿದೆ. ಆದರೆ ಇದು 48 ಮೆಗಾಪಿಕ್ಸಲ್ ಸೆನ್ಸರ್ ಆಗಿದ್ದು ಜುಲೈ ನಲ್ಲಿ ಪ್ರಕಟಿಸಿರುವಂತೆ ಸೋನಿಯ IMX586 ಆಗಿರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಭಾರೀ ಗಾತ್ರದ ಸೆನ್ಸರ್, ಅತೀ ಸಣ್ಣ ಪಿಕ್ಸಲ್ ಸೈಜ್:

ಭಾರೀ ಗಾತ್ರದ ಸೆನ್ಸರ್, ಅತೀ ಸಣ್ಣ ಪಿಕ್ಸಲ್ ಸೈಜ್:

IMX586 48 ಮೆಗಾಪಿಕ್ಸಲ್ ನ ಸೆನ್ಸರ್ ಆದರೆ ದೊಡ್ಡ ಸಂಖ್ಯೆಯ ಪಿಕ್ಸಲ್ ನ್ನು ಇದರಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದು ಪಿಕ್ಸಲ್ ನ ಸೈಜ್ ಬಹಳ ಸಣ್ಣದು ಅಂದರೆ ಕೇವಲ 0.8um. ಇದು ಫೋಟೋದ ಹೆಚ್ ಡಿಆರ್ ವಿಚಾರದಲ್ಲಿ ನೋಡುವುದಾದರೆ ಒಳ್ಳೆಯ ಬೆಳವಣಿಗೆ ಅಲ್ಲ ಅಥವಾ ಕಡಿಮೆ ಬೆಳಕಿನ ಫೋಟೋಗ್ರಫಿಗೆ ಇದು ಅಷ್ಟೇನು ಪ್ರಯೋಜನಕಾರಿಯಾಗಿರುವುದಿಲ್ಲ. ಆದರೆ ಹುವಾಯಿ ಈಗಾಗಲೇ ಮೆಟ್ 20 ಪ್ರೋ ಮತ್ತು ಪಿ20 ಪ್ರೋ ದಲ್ಲಿ 4 ಮೆಗಾಪಿಕ್ಸಲ್ ಕ್ಯಾಮರಾವನ್ನು ತೋರಿಸಿದೆ. ಈ ಸಮಸ್ಯೆಯನ್ನು ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನದಿಂದ ಪರಿಹರಿಸಬಹುದು ಎಂಬುದನ್ನು ತಿಳಿಸಿದೆ.

ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನ ಅಳವಡಿಕೆ

ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನ ಅಳವಡಿಕೆ

ಕೆಲವು ರೀತಿಯ ಫೋಟೋಗ್ರಫಿಗಾಗಿ ಶಿಯೋಮಿಯ ಮುಂದಿನ ಫೋನ್ ನಲ್ಲಿ 48 ಮೆಗಾಪಿಕ್ಸಲ್ ಸೆನ್ಸರ್ ನ ಜೊತೆಗೆ ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನವೂ ಕೂಡ ಇರುತ್ತದೆ ಎಂದು ಊಹಿಸಲಾಗುತ್ತಿದೆ. ಉತ್ತಮ ಬೆಳಕಿನಲ್ಲಿ ಫೋನ್ 48 ಮೆಗಾಪಿಕ್ಸಲ್ ಇಮೇಜ್ ನ್ನು ಕ್ಲಿಕ್ಕಿಸುತ್ತದೆ. ಆದರೆ ಕಡಿಮೆ ಬೆಳಕಿನಲ್ಲಿ 4 ಮೆಗಾಪಿಕ್ಸಲ್ ನ್ನು ಸೇರಿಸಿ ಸೂಪರ್ ಫಿಕ್ಸಲ್ಸ್ ಮಾಡಲಾಗುತ್ತದೆ. 12 ಮೆಗಾಪಿಕ್ಸಲ್ ಇಮೇಜ್ ನಲ್ಲಿ ಹೆಚ್ಚು ಬೆಳಕು, ಹೆಚ್ಚಿನ ವಿವರ ಮತ್ತು ಕಾಂಟ್ರಾಸ್ಟ್ ಕೂಡ ಅಧಿಕವಿರುತ್ತದೆ.

ಮಾರುಕಟ್ಟೆಯಲ್ಲಿ ಹೊಸ ರೀತಿಯ ಸ್ಪರ್ಧೆ:

ಮಾರುಕಟ್ಟೆಯಲ್ಲಿ ಹೊಸ ರೀತಿಯ ಸ್ಪರ್ಧೆ:

ಒಂದು ವೇಳೆ ಶಿಯೋಮಿ IMX586 ನ್ನು ಉತ್ತಮ ರೀತಿಯಲ್ಲಿ ಜಾರಿಗೆ ತಂದರೆ ಖಂಡಿತ ಮಾರುಕಟ್ಟೆಯಲ್ಲಿ ಮೆಗಾಪಿಕ್ಸಲ್ ರೇಸ್ ಪುನರಾರಂಭವಾಗುತ್ತದೆ. ಒನ್ ಪ್ಲಸ್, ನೋಕಿಯಾ, ಓಪ್ಪೋ, ವಿವೋ ಮತ್ತು ಹುವಾಯಿ ಕೂಡ ಇದನ್ನು ಅನುಸರಿಸುತ್ತದೆ ಮತ್ತು 48 ಮೆಗಾಪಿಕ್ಸಲ್ ನ್ನು ತಮ್ಮ ಫೋನ್ ಗಳಲ್ಲಿ ಅಳವಡಿಸುವುದಕ್ಕೆ ಮುಂದಾಗುತ್ತದೆ.

ಇತರೆ ವೈಶಿಷ್ಟ್ಯತೆಗಳು ಏನಿರಲಿದೆ?

ಇತರೆ ವೈಶಿಷ್ಟ್ಯತೆಗಳು ಏನಿರಲಿದೆ?

ಹೊಸ ಸೆನ್ಸರ್ ನ್ನು ಹೊರತು ಪಡಿಸಿ, ಮುಂಬರುವ ಶಿಯೋಮಿ ಫೋನ್ ನಲ್ಲಿ ಹೊಸದಾಗಿ ಪ್ರಕಟಿಸಲಾಗಿರುವ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಇರಲಿದೆ ಎನ್ನಲಾಗಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಶಿಯೋಮಿ ದೊಡ್ಡ ಫೋನ್ ಬ್ರ್ಯಾಂಡ್ ಆಗಿದೆ.

ಭಾರತದಲ್ಲಿ ಬಿಡುಗಡೆ ಆಗಲಿದೆಯೇ?

ಭಾರತದಲ್ಲಿ ಬಿಡುಗಡೆ ಆಗಲಿದೆಯೇ?

48 ಮೆಗಾಪಿಕ್ಸಲ್ ನ ಹೊಸ ಫೋನ್ ಭಾರತಕ್ಕೆ ಬರಲಿದೆಯಾ ಎಂಬ ಬಗ್ಗೆ ಖಚಿತತೆ ಇಲ್ಲ.ಸಾಂಪ್ರದಾಯಿಕವಾಗಿ ಹೇಳುವುದಾದರೆ ತನ್ನ ಟಾಪ್ ಎಂಡ್ ಫೋನ್ ಗಳನ್ನು ಕಂಪೆನಿ ಯಾವಾಗಲೂ ಕೂಡ ಭಾರತದಿಂದ ದೂರವೇ ಇರಿಸಿದೆ.ರೆಡ್ಮಿ ಫೋನ್ ಗಳು ಆ ನಿಟ್ಟಿನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಉತ್ತಮವಾಗಿರುವ ಹಾರ್ಡ್ ವೇರ್ ಗಳು ಮತ್ತು ಕಡಿಮೆ ಬೆಲೆಯಲ್ಲಿ ಉತ್ತಮ ಪ್ರೊಡಕ್ಟ್ ನ್ನು ನೀಡುವ ನಿಟ್ಟಿನಲ್ಲಿ ಇದು ಪ್ರಸಿದ್ಧಿಯಾಗಿದೆ.

Best Mobiles in India

Read more about:
English summary
Xiaomi confirms it will launch phone with 48-megapixel camera in January

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X