ಶಿಯೋಮಿ ಸ್ವಾತಂತ್ರ್ಯ ದಿನಾಚರಣೆ ಸೇಲ್ 2019: ಬೆಸ್ಟ್ ಡೀಲ್ಸ್ ಮತ್ತು ಆಫರ್ಸ್!

By Gizbot Bureau
|

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಎಲ್ಲಾ ಇ-ಕಾಮರ್ಸ್ ಸೈಟ್ ನಲ್ಲಿ ಭರ್ಜರಿ ರಿಯಾಯಿತಿ ಸೇಲ್ ನಡೆಯುತ್ತಿದೆ. ಹಲವಾರು ಬ್ರ್ಯಾಂಡ್ ಗಳು ಅತ್ಯುತ್ತಮ ಆಫರ್ ನ್ನು ನೀಡುತ್ತಿವೆ. ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಗಳು, ಪೀಠೋಪಕರಣಗಳು, ದಿನಸಿ ವಸ್ತುಗಳು ಇತ್ಯಾದಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

ಶಿಯೋಮಿ ಸ್ವಾತಂತ್ರ್ಯ ದಿನಾಚರಣೆ ಸೇಲ್ 2019: ಬೆಸ್ಟ್ ಡೀಲ್ಸ್ ಮತ್ತು ಆಫರ್ಸ್!

ಅಮೇಜಾನ್, ಫ್ಲಿಪ್ ಕಾರ್ಟ್ ನಲ್ಲಿ ಕೂಡ ಸೇಲ್ ನಡೆಯುತ್ತಿದ್ದು ಅಗಸ್ಟ್ 11 ರ ವರೆಗೆ ಈ ಸೇಲ್ ನಡೆಯಲಿದೆ. ಇದೀಗ ಶಿಯೋಮಿ ಕೂಡ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ರಿಯಾಯಿತಿ ಮಾರಾಟವನ್ನು ಆರಂಭಿಸಿದ್ದು ಅಗಸ್ಟ್ 7 ರಿಂದ ಅಗಸ್ಟ್ 11 ರ ವರೆಗೆ ಈ ಸೇಲ್ ನಡೆಯುತ್ತಿದೆ. ಈ ಸೇಲ್ ನ ಅಡಿಯಲ್ಲಿ ಕಂಪೆನಿಯು ಹಲವು ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಬೆಲೆ ನೀಡುತ್ತಿದೆ. ಯಾವೆಲ್ಲಾ ಫೋನ್ ಗಳು ರಿಯಾಯಿತಿಯಲ್ಲಿ ಸಿಗುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ಶಿಯೋಮಿ ಇಂಡಿಪೆಂಡೆನ್ಸ್ ಡೇ ಸೇಲ್ 2019 ರ ಆಫರ್ ಗಳು

ರೆಡ್ಮಿ 7

ರೆಡ್ಮಿ 7

ಶಿಯೋಮಿ ರೆಡ್ಮಿ 7 ನ ಬೇಸ್ ವೇರಿಯಂಟ್ 2ಜಿಬಿ ಮೆಮೊರಿ ಮತ್ತು 32 ಜಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಫೋನಿಗೆ ಈ ಸೇಲ್ ನಲ್ಲಿ 7,499 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. 3GB RAM ಜೊತೆಗೆ 32GB ಸ್ಟೋರೇಜ್ ಮಾಡೆಲ್ ನ್ನು 8,499 ರುಪಾಯಿಗೆ ಸಿಗುತ್ತದೆ. ಎರಡೂ ವೇರಿಯಂಟ್ ಗೂ ಕೂಡ ಕಂಪೆನಿ 500 ರುಪಾಯಿಯ ರಿಯಾಯಿತಿಯನ್ನು ನೀಡುತ್ತಿದೆ.

ಈ ಸ್ಮಾರ್ಟ್ ಫೋನ್ 6.26-ಇಂಚಿನ HD+ ಡಿಸ್ಪ್ಲೇ ಜೊತೆಗೆ 19:9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ.ಇದು ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 632 SoC ನ್ನು ಹೊಂದಿದ್ದು ಮೇಲೆ ತಿಳಿಸಿರುವ ಮೆಮೊರಿ ವೇರಿಯಂಟ್ ನೊಂದಿಗೆ ಜೋಡಣೆಗೊಂಡಿರುತ್ತದೆ. ರೆಡ್ಮಿ 7 ಆಂಡ್ರಾಯ್ಡ್ 9 ಪೈ ಆಧಾರಿತ MIUI 10 ನಲ್ಲಿ ರನ್ ಆಗುತ್ತದೆ.

ಇದು 12MP+2MP ಡುಯಲ್ ಹಿಂಭಾಗದ ಕ್ಯಾಮರಾ ಸೆನ್ಸರ್ ಹೊಂದಿದೆ ಜೊತೆಗೆ LED ಫ್ಲ್ಯಾಶ್ ವ್ಯವಸ್ಥೆ ಹೊಂದಿದೆ. ಸೆಲ್ಫೀ ತೆಗೆದುಕೊಳ್ಳುವುದಕ್ಕೆ 8MP ಕ್ಯಾಮರಾ ಸೆನ್ಸರ್ ಮುಂಭಾಗದಲ್ಲಿದೆ.

ಶಿಯೋಮಿ ರೆಡ್ಮಿ ವೈ 3

ಶಿಯೋಮಿ ರೆಡ್ಮಿ ವೈ 3

ಈ ಸೇಲ್ ನಲ್ಲಿ ಶಿಯೋಮಿ ರೆಡ್ಮಿ ವೈ3 ಫೋನಿಗೆ ರಿಯಾಯಿತಿ ಬೆಲೆ ನೀಡುತ್ತಿದ್ದು Rs. 8,999 ಕ್ಕೆ ಖರೀದಿಸುವ ಅವಕಾಶವಿದೆ. 2019 ರ ಎಪ್ರಿಲ್ ನಲ್ಲಿ ಈ ಸ್ಮಾರ್ಟ್ ಫೋನ್ ನ್ನು 9,990 ರುಪಾಯಿಯ ಮುಖಬೆಲೆಗೆ ಬಿಡುಗಡೆಗೊಳಿಸಲಾಗಿತ್ತು. ಟಾಪ್ ಎಂಡ್ ವೇರಿಯಂಟ್ ನ ಬೆಲೆ 11,999 ರುಪಾಯಿಗಳು.

ಎಂಐ ಎಕ್ಸ್ ಚೇಂಜಿಗೆ ಈ ಸೇಲ್ ನಲ್ಲಿ ಕಂಪೆನಿಯು ಹೆಚ್ಚುವರಿಯಾಗಿ 1,000 ರುಪಾಯಿ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ಗ್ರಾಹಕರು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಏರ್ ಟೆಲ್ ಬಳಕೆದಾರರು 1120ಜಿಬಿ 4ಜಿ ಡಾಟಾ ಮತ್ತು ಅನಿಯಮಿತ ಕರೆಗಳ ಬೆನಿಫಿಟ್ ನ್ನು ಪಡೆದುಕೊಳ್ಳಲಿದ್ದಾರೆ.

ಶಿಯೋಮಿ ರೆಡ್ಮಿ ವೈ3 6.26-ಇಂಚಿನ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್ ಮತ್ತು 19:9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 632 SoC ಸಾಕೆಟ್ ಅಡ್ರೆನೋ 506 ನೊಂದಿಗೆ ಕ್ಲಬ್ ಆಗಿದೆ.

ಸ್ಮಾರ್ಟ್ ಫೋನ್ 3GB/4GB RAM ಜೊತೆಗೆ 32GB/64GB ಸ್ಟೋರೇಜ್ ವ್ಯವಸ್ಥೆಯನ್ನು ಕ್ರಮವಾಗಿ ಹೊಂದಿದೆ. ಇದು ಆಂಡ್ರಾಯ್ಡ್ 9 ಪೈ ನಲ್ಲಿ ರನ್ ಆಗುತ್ತದೆ ಮತ್ತು 4,000mAh ಬ್ಯಾಟರಿ ವ್ಯವಸ್ಥೆಯೊಂದಿಗಿದೆ.

ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಹೊಂದಿದ್ದು 12MP+2MP ಕ್ಯಾಮರಾ ಸೆನ್ಸರ್ ನ್ನು ಒಳಗೊಂಡಿದೆ. ಮುಂಭಾಗದಲ್ಲಿ 32MP ಕ್ಯಾಮರಾ ಸೆನ್ಸರ್ ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿದೆ.

ರೆಡ್ಮಿ ನೋಟ್ 7ಎಸ್

ರೆಡ್ಮಿ ನೋಟ್ 7ಎಸ್

ಕಳೆದ ತಿಂಗಳು ರೆಡ್ಮಿ ನೋಟ್ 7ಎಸ್ ನ್ನು ಬಿಡುಗಡೆಗೊಳಿಸಿದೆ. ಇದೀಗ ಹೊಸದಾಗಿ ಬಿಡುಗಡೆಗೊಳಿಸಿರುವ ಪೋನಿಗೆ ರಿಯಾಯಿತಿ ಬೆಲೆ ನೀಡುತ್ತಿದೆ. ಈ ಸೇಲ್ ನಲ್ಲಿ ರೆಡ್ಮಿ ನೋಟ್ 7ಎಸ್ ನ 3GB RAM ಮತ್ತು 32GB ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು 10,999 ರುಪಾಯಿಗೆ ಖರೀದಿಸಬಹುದು. 4GB RAM+64GB ROM ವೇರಿಯಂಟ್ ನ್ನು 12,999 ರುಪಾಯಿಗೆ ಖರೀದಿಸುವ ಅವಕಾಶವಿದೆ.

ಈ ಸ್ಮಾರ್ಟ್ ಫೋನ್ 6.3-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್ ವ್ಯವಸ್ಥೆ ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಮತ್ತು ಆಂಡ್ರಾಯ್ಡ್ 9 ಪೈ ನಲ್ಲಿ ರನ್ ಆಗುತ್ತದೆ.

ಇದರಲ್ಲಿ ಡುಯಲ್ ಎಐ ಕ್ಯಾಮರಾ ಸೆಟ್ ಇದ್ದು 48 MP + 5 MP ಕ್ಯಾಮರಾ ಸೆನ್ಸರ್ ಜೊತೆಗೆ LED ಫ್ಲ್ಯಾಶ್ ವ್ಯವಸ್ಥೆ ಇದೆ. ಮುಂಭಾಗದಲ್ಲಿ ಸೆಲ್ಫೀ ತೆಗೆದುಕೊಳ್ಳಲು 13MP ಕ್ಯಾಮರಾ ವ್ಯವಸ್ಥೆ ಇದೆ. 4,000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 4 ಗೆ ಬೆಂಬಲ ನೀಡುತ್ತದೆ.

ಪೋಕೋ ಎಫ್ 1

ಪೋಕೋ ಎಫ್ 1

ಕಂಪೆನಿಯು ಪೋಕೋ ಎಫ್ 1 ನ 6ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವೇರಿಯಂಟ್ ಗೆ 17,999 ರುಪಾಯಿ ಆಫರ್ ಬೆಲೆ ನೀಡುತ್ತಿದೆ. 6GB RAM +128GB ROM ವೇರಿಯಂಟ್ ಗೆ 18,999 ಮತ್ತು ಟಾಪ್ ಎಂಡ್ 8GB RAM + 256GB ಸ್ಟೋರೇಜ್ ವ್ಯವಸ್ಥೆಯ ಫೋನಿಗೆ 22,999 ರುಪಾಯಿ ಬೆಲೆ ನಿಗದಿಗೊಳಿಸಿದೆ.

ಈ ಸ್ಮಾರ್ಟ್ ಫೋನ್ 5.99-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2248 ಪಿಕ್ಸಲ್ಸ್ ರೆಸಲ್ಯೂಷನ್ ಹೊಂದಿದೆ ಜೊತೆಗೆ 19:9 ಆಸ್ಪೆಕ್ಟ್ ಅನುಪಾತವಿದೆ. ಪೋಕೋ ಎಫ್1 ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಹೊಂದಿದೆ.

ಕ್ಯಾಮರಾ ವಿಚಾರಕ್ಕೆ ಬಂದರೆ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 12MP+5MP ಕ್ಯಾಮರಾ ಸೆನ್ಸರ್ ನ್ನು ಹಿಂಭಾಗದಲ್ಲಿ ಹೊಂದಿದೆ. ಮುಂಭಾಗದಲ್ಲಿ ಸೆಲ್ಫೀ ತೆಗೆದುಕೊಳ್ಳುವುದಕ್ಕೆ 20MP ಕ್ಯಾಮರಾ ಸೆಟ್ ಅಪ್ ಇದೆ.

ಶಿಯೋಮಿ ಎಂಐ ಎ2

ಶಿಯೋಮಿ ಎಂಐ ಎ2

ಶಿಯೋಮಿ ಇಂಡಿಪೆಂಡೆನ್ಸ್ ಡೇ ಸೇಲ್ ನಲ್ಲಿ ಎಂಐ ಎ2 4GB RAM +64GB ROM ನ್ನು Rs. 9,999ಗೆ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

ಈ ಸ್ಮಾರ್ಟ್ ಫೋನ್ 5.99-ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಸಾಕೆಟ್ ಮತ್ತು ಆಂಡ್ರ್ಯಾಯ್ಡ್ ಔಟ್-ಆಪ್-ದಿ-ಬಾಕ್ಸ್ ನಲ್ಲಿ ರನ್ ಆಗುತ್ತದೆ.

ಎಂಐ ಎ2 ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿದ್ದು 12MP + 20MP ಕ್ಯಾಮರಾ ಸೆನ್ಸರ್ ಜೊತೆಗೆ LED ಫ್ಲ್ಯಾಶ್ ವ್ಯವಸ್ಥೆ ಇದೆ. ಮುಂಭಾಗದಲ್ಲಿ ಸೆಲ್ಫೀ ಮತ್ತು ವೀಡಿಯೋ ಕರೆಗಳಿಗಾಗಿ 20MP ಕ್ಯಾಮರಾ ವ್ಯವಸ್ಥೆಯನ್ನು ಈ ಫೋನ್ ಹೊಂದಿದೆ.

Best Mobiles in India

Read more about:
English summary
Xiaomi announces Independence Day Sale 2019 starting from August 7 and lasts until August 11. Here are the deals and offers on smartphones which you don't want to miss.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X