ನೋಟ್ 5 ಮಾತ್ರವಲ್ಲ..! ಶಿಯೋಮಿಯಿಂದ ಮತ್ತೇ ಮೂರು ಫೋನ್...!
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹವಾ ಎಬ್ಬಿಸಿರುವ ಚೀನಾ ಮೂಲದ ಶಿಯೋಮಿ, ಈಗಾಗಲೇ ಮಾರುಕಟ್ಟೆಗೆ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಮೂಲಕ ಹೊಸದೊಂದು ಭಾಷ್ಯ ಬರೆಯಲು ಮುಂದಾಗಿದೆ. ಸದ್ಯ ಇದರೊಂದಿಗೆ ಮಾರುಕಟ್ಟೆಗೆ ಮತ್ತೇ ಮೂರು ಹೊಸ ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.
ಹೊಸ ಶಿಯೋಮಿ ಫೋನ್‌ಗಳ ಕುರಿತು ರೂಮರ್‌ಗಳು ಹೆಚ್ಚಾಗಿದ್ದು, ಕಂಪನಿಯೂ ಮಿ ಮ್ಯಾಕ್ಸ್ 2S, ಮಿ 7 ಮತ್ತು ಮಿ A2 ಸ್ಮಾರ್ಟ್‌ಫೋನ್‌ಗಳು ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್‌ಗಳ ಮೊದಲ ಅವತರಣಿಕೆಯೂ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ವರ್ಲ್ಡ್ ಮೊಬೈಲ್ ಕಾಂಗ್ರೆಸ್:
ಬಾರ್ಸಿಲೋನಾದಲ್ಲಿ ನಡೆಯಲಿರುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಬಾರಿ ಶಿಯೋಮಿ ಹೆಚ್ಚಿನ ಗಮನವನ್ನು ಸೆಳೆಯಲಿದ್ದು, ಮಿ ಮ್ಯಾಕ್ಸ್ 2S, ಮಿ & ಮತ್ತು ಮಿ A2 ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಈ ಸ್ಮಾರ್ಟ್‌ಫೋನ್ ವಿಶೇಷತೆಗಳ ರೂಮರ್ಸ್ ಹೆಚ್ಚಾಗಿದೆ.

Mi A2 ಸ್ಮಾರ್ಟ್‌ಫೋನ್:
ಮಾರುಕಟ್ಟೆಯಲ್ಲಿ ಸದ್ಯ Mi A1 ಸ್ಮಾರ್ಟ್‌ಫೋನ್ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಮಂದಿನ ಭಾಗವಾಗಿ Mi A2 ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಶೀಘ್ರ ಮಾರುಕಟ್ಟೆಯನ್ನು ಹೊಸ ಅಲೆ ಎಬ್ಬಿಸಲಿದೆ.


Mi MIX 2S ಸ್ಮಾರ್ಟ್‌ಫೋನ್:
5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 18:9 ಅನುಪಾತದ್ದಾಗಿದೆ. ಅಲ್ಲದೇ ಇದರಲ್ಲಿ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಕಾಣಬಹುದಾಗಿದೆ. ಅಲ್ಲದೆ 3400mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಉತ್ತಮ ವಿನ್ಯಾಸವನ್ನು ಹೊಂದಿದೆ.

Mi 7 ಸ್ಮಾರ್ಟ್‌ಫೋನ್:
ಇದಲ್ಲದೇ ಶಿಯೋಮಿ ತನ್ನ Mi 7 ಸ್ಮಾರ್ಟ್‌ಫೋನ್‌ನಲ್ಲಿ 16 MP + 16 MP ಡ್ಯುಯಲ್ ಕ್ಯಾಮೆರಾ ಲೆನ್ಸ್ ಅನ್ನು ಹಿಂಭಾಗದಲ್ಲಿ ಅಳವಡಿಸಿದ್ದು, ಅಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಸಹ ನೀಡಿದೆ. ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಸಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಮಾರುಕಟ್ಟೆಯಲ್ಲಿ ಟಾಪ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ.


Click it and Unblock the Notifications








