ರಿಯಲ್ ಮಿ 2 ಪ್ರೋ ಪ್ರಭಾವ: ಶಿಯೋಮಿ ಎಂಐ ಎ2 ಬೆಲೆಯಲ್ಲಿ ಭಾರೀ ಕಡಿತ..!

|

ಶಿಯೋಮಿ ಸಂಸ್ಥೆ ತನ್ನ ಸೆಕೆಂಡ್ ಜನರೇಷನ್ನಿನ ಆಂಡ್ರಾಯ್ಡ್ ಒನ್ ಸರಣಿಯ ಸ್ಮಾರ್ಟ್ ಫೋನ್ ನ್ನು ಅಗಸ್ಟ್ ನಲ್ಲಿ ಬಿಡುಗಡೆಗೊಳಿಸಿತ್ತು. ಅದುವೇ ಶಿಯೋಮಿ ಎಂಐ ಎ2. ಸದ್ಯ ಭಾರತದಲ್ಲಿ ಕೇವಲ ಒಂದು ವೇರಿಯಂಟ್ ಮಾತ್ರ 16,999 ರುಪಾಯಿಗೆ ಲಭ್ಯವಾಗುತ್ತಿದೆ.ಒಂದೇ ಒಂದು ಫ್ಲ್ಯಾಶ್ ಸೇಲ್ ನ ನಂತರ ಇದೀಗ ಈ ಸ್ಮಾರ್ಟ್ ಫೋನ್ ಅಮೇಜಾನ್ ಇಂಡಿಯಾ ಮತ್ತು ಎಂಐ.ಕಾಮ್ ನಲ್ಲಿ ಮಾರಾಟಕ್ಕೆ ಯಾವಾಗಲೂ ಲಭ್ಯವಿದೆ.

ರಿಯಲ್ ಮಿ 2 ಪ್ರೋ ಪ್ರಭಾವ: ಶಿಯೋಮಿ ಎಂಐ ಎ2 ಬೆಲೆಯಲ್ಲಿ ಭಾರೀ ಕಡಿತ..!

ರಿಯಲ್ ಮಿ 2ಪ್ರೋ ಬಿಡುಗಡೆಯ ನಂತರ ಎಂಐ ಎ2 ಹೆಚ್ಚು ಸ್ಪರ್ಧೆಯನ್ನು ಎದುರಿಸಬೇಕಾಯಿತು ಯಾಕೆಂದರೆ ಹೆಚ್ಚು ಕಡಿಮೆ ಒಂದೇ ರೀತಿಯ ವೈಶಿಷ್ಟ್ಯತೆಯು ಕಡಿಮೆ ಬೆಲೆಯಲ್ಲಿ ರಿಯಲ್ ಮಿ ಪ್ರೋ ಮೂಲಕ ಗ್ರಾಹಕರಿಗೆ ಲಭ್ಯವಾಗಲು ಆರಂಭವಾಯಿತು. ಹೌದು ಎಂಐ ಎ2 ಮತ್ತು ರಿಯಲ್ ಮಿ 2 ಪ್ರೋ ಎರಡೂ ಕೂಡ ಒಂದೇ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿದೆ. ರಿಯಲ್ ಮಿ ಬೆಲೆ 14,000 ರುಪಾಯಿಗಳು.

ಆಫರ್ ಬೆಲೆ ನೀಡುತ್ತಿರುವ ಶಿಯೋಮಿ:

ಆಫರ್ ಬೆಲೆ ನೀಡುತ್ತಿರುವ ಶಿಯೋಮಿ:

ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸುವ ನಿಟ್ಟಿನಲ್ಲಿ ಎಂಐ ಎ2 ಕೂಡ ಇದೀಗ ತನ್ನ ಬೆಲೆಯನ್ನು ಇಳಿಕೆ ಮಾಡಿದ್ದು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಅಂದರೆ ಪೇಟಿಎಂ ಮಾಲ್ ನಲ್ಲಿ ಈ ಸ್ಮಾರ್ಟ್ ಫೋನ್ ನ್ನು 13,900 ರುಪಾಯಿಗೆ ಖರೀದಿಸಬಹುದು.

ಶಿಯೋಮಿ ಎಂಐ ಎ2 13,000 ರುಪಾಯಿ: ಪೇಟಿಎಂ ಮಾಲ್ ಆಫರ್

ಶಿಯೋಮಿ ಎಂಐ ಎ2 13,000 ರುಪಾಯಿ: ಪೇಟಿಎಂ ಮಾಲ್ ಆಫರ್

ಶಿಯೋಮಿ ಎಂಐ ಎ2 ಅಮೇಜಾನ್ ಮತ್ತು ಎಂಐ.ಕಾಮ್ ನ ಬದಲಾಗಿ ಎಕ್ಸ್ ಕ್ಲೂಸೀವ್ ಆಗಿ ಪೇಟಿಎಂ ಮಾಲ್ ನಲ್ಲಿ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಪೇಟಿಎಂ ಮಾಲ್ ನಲ್ಲಿ ಆಕರ್ಷಣೀಯವಾಗಿರುವ ಬೆಲೆ ಅಂದರೆ ಕೇವಲ 13,900 ರುಪಾಯಿಗೆ ಗ್ರಾಹಕರು ಖರೀದಿ ಮಾಡಬಹುದು. ಪೇಟಿಎಂ ಕ್ಯಾಷ್ ಬ್ಯಾಕ್ ಮತ್ತು ಐಸಿಐಸಿಐ ಬ್ಯಾಂಕಿನ ಕಾರ್ಡ್ ಬಳಕೆ ಮಾಡುವುದರ ಮೂಲಕ ಈ ಆಫರ್ ನ ಬೆಲೆಯನ್ನು ಗ್ರಾಹಕರು ಪಡೆಯಬಹುದು.

ಆಫರ್ ಬೆಲೆ ಪಡೆಯಲು ಏನು ಮಾಡಬೇಕು?

ಆಫರ್ ಬೆಲೆ ಪಡೆಯಲು ಏನು ಮಾಡಬೇಕು?

ಪೇಟಿಎಂ 10 ಶೇಕಡಾ ರಿಯಾಯಿತಿಯನ್ನು ನೀಡಿದರೆ, ಹೆಚ್ಚುವರಿ 10 ಶೇಕಡಾ ರಿಯಾಯಿತಿಯನ್ನು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು.

ಅಕ್ಟೋಬರ್ 5 ರ ವರೆಗೆ ಈ ಆಫರ್ ಪಡೆಯಲು ಗ್ರಾಹಕರಿಗೆ ಅವಕಾಶವಿದ್ದು MOB10 ಪ್ರೋಮೋ ಕೋಡ್ ಬಳಸಿ ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ಪೇಟಿಎಂ ಗ್ರಾಹಕರು ಪಡೆಯಬಹುದು. ಈ ಆಫರ್ ಮೂಲಕ ನೈಜ ಬೆಲೆಗಿಂತ 3000 ರುಪಾಯಿ ಕಡಿಮೆ ಬೆಲೆಗೆ ಶಿಯೋಮಿ ಎಂಐ ಎ2 ವನ್ನು ಖರೀದಿಸುವ ಅವಕಾಶ ಗ್ರಾಹಕರದ್ದು.

ಎಚ್ಚೆತ್ತ ಶಿಯೋಮಿ:

ಎಚ್ಚೆತ್ತ ಶಿಯೋಮಿ:

ಮಾರುಕಟ್ಟೆಯ ಏರುಪೇರುಗಳನ್ನು, ಸ್ಪರ್ಧೆಗಳನ್ನು ಶಿಯೋಮಿ ಬೇಗನೆ ಅರ್ಥೈಸಿಕೊಳ್ಳುತ್ತದೆ ಮತ್ತು ಅದಕ್ಕೊಂದು ತತ್ ಕ್ಷಣದ ಪರಿಹಾರವನ್ನು ಕಂಡುಕೊಳ್ಳುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ ಇರಬಹುದು. ಹೌದು ಶಿಯೋಮಿ ಎಂಐ ಎ2 ಮತ್ತು ರಿಯಲ್ ಮಿ 2 ಪ್ರೋ ಎರಡೂ ಫೋನ್ ಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿಯ ವೈಶಿಷ್ಟ್ಯತೆಗಳಿದೆ. ಆದರೆ ಶಿಯೋಮಿ ಬೆಲೆ ಹೆಚ್ಚು. ರಿಯಲ್ ಮಿ ಬೆಲೆ ಕಡಿಮೆ. ಸಹಜವಾಗಿಯೇ ಗ್ರಾಹಕ ಕಡಿಮೆ ಬೆಲೆಯಲ್ಲಿ ಹೆಚ್ಚು ವೈಶಿಷ್ಟ್ಯತೆಗಳಿರುವ ಫೋನ್ ಖರೀದಿಸಲು ಮುಂದಾಗುತ್ತಾನೆ.

ರಿಯಲ್‌ ಮಿ 2 ಪ್ರೋನಿಂದ ಕಠಿಣ ಸ್ಪರ್ಧೆ

ರಿಯಲ್‌ ಮಿ 2 ಪ್ರೋನಿಂದ ಕಠಿಣ ಸ್ಪರ್ಧೆ

ಶಿಯೋಮಿಯ ಸ್ಟೋರೇಜ್ ಕಾನ್ಫಿಗರೇಷನ್ ಕೇವಲ 14,000 ರುಪಾಯಿಗೆ ರಿಯಲ್ ಮಿ ಯಲ್ಲಿ ಲಭ್ಯವಾಗುವುದಾದರೆ ಯಾವ ಗ್ರಾಹಕ ತಾನೆ ಬಿಡುತ್ತಾನೆ ಹೇಳಿ. ಡಿಸ್ಪ್ಲೇ, ಬ್ಯಾಟರಿ ಎಲ್ಲವೂ ಕೂಡ ರಿಯಲ್ ಮಿಯಲ್ಲಿ ಶಿಯೋಮಿಯಲ್ಲಿರುವಂತೆಯೇ ಇದೆ. ಹಾಗಾಗಿ ಶಿಯೋಮಿ ಎಂಐ ಎ2 ತನ್ನ ಬೆಲೆಗೆ ತಕ್ಕ ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಯಿತು. ಆ ನಿಟ್ಟಿನಲ್ಲಿ ಸೋತ ಶಿಯೋಮಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಯಿತು.

ಹಾಗಾಗಿ ಒಂದೇ ವೈಶಿಷ್ಟ್ಯತೆಗಳಿರುವ ಫೋನಿಗೆ ಯಾವ ಗ್ರಾಹಕ ತಾನೆ ಹೆಚ್ಚುವರಿ 3000 ರುಪಾಯಿಗಳನ್ನು ಪಾವತಿಸಲು ರೆಡಿ ಇರುತ್ತಾನೆ. ಇದನ್ನು ಅರಿತ ಶಿಯೋಮಿ ಕೂಡಲೇ ಆಫರ್ ಬೆಲೆಯನ್ನು ನೀಡುತ್ತಿದೆ. ಆದರೆ ಕೆಲವೇ ದಿನಗಳಿಗೆ ಮಾತ್ರವೇ ಈ ಬೆಲೆಯನ್ನು ಪೇಟಿಎಂನಲ್ಲಿ ನೀಡಲಾಗುತ್ತಿದೆ? ಮುಂದೆ ಈ ಸ್ಪರ್ಧೆಯನ್ನು ಶಿಯೋಮಿ ಹೇಗೆ ಎದುರಿಸಲಿದೆ ಕಾದುನೋಡಬೇಕು.

Best Mobiles in India

English summary
Xiaomi Mi A2 Now Available At Rs 13,900, Is It Realme 2 Pro Effect?. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X