18:9 ಫುಲ್‌ಸ್ಕ್ರಿನ್, ಬಿಗ್‌ ಬ್ಯಾಟರಿ: ಬೆಲೆ ಬಜೆಟ್‌ನಲ್ಲಿ! ಯಾವುದು ಈ ಸ್ಮಾರ್ಟ್‌ಫೋನ್?

|

ಶಿಯೋಮಿ ರೆಡ್‌ಮಿ 5 ಮತ್ತು ಶಿಯೋಮಿ ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಚೀನಾದಲ್ಲಿ ಲಾಂಚ್ ಆಗಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು 18:9 ಅನುಪಾತದ ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ ಹಾಗೂ ಬ್ರಜಿಲ್ ಲೈನಸ್‌ ವಿನ್ಯಾಸವನ್ನು ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಡಿಸೆಂಬರ್‌ 12ರಿಂದ ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ.

18:9 ಫುಲ್‌ಸ್ಕ್ರಿನ್, ಬಿಗ್‌ ಬ್ಯಾಟರಿ: ಬೆಲೆ ಬಜೆಟ್‌ನಲ್ಲಿ! ಯಾವುದು ಈ ಫೋನ್?

ಓದಿರಿ: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮಾಹಿತಿ ಸರಿ ಇದ್ಯಾ ನೋಡಿಕೊಳ್ಳಿ: ಇಲ್ಲವೇ ಬದಲಾಯಿಸಿಕೊಳ್ಳಿ..!

ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಕಾಲಿಡಲಿದೆ. MIUI 9 ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ರನ್‌ ಆಗಲಿದ್ದು, ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಲಿದೆ ಎನ್ನಲಾಗಿದೆ. ಈಗಾಗಲೇ ರೆಡ್‌ಮಿ 5A ಸ್ಮಾರ್ಟ್‌ಫೋನ್ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಗಿದ್ದು, ಈ ಸ್ಮಾರ್ಟ್‌ಫೋನ್‌ಗಳು ಹೊಸ ದಾಖಲೆಯನ್ನು ನಿರ್ಮಿಸಲಿದೆ ಎನ್ನುವ ಅಭಿಪ್ರಾಯವಾಗಿದೆ.

ರೆಡ್‌ಮಿ 5 ಸ್ಮಾರ್ಟ್‌ಫೋನ್:

ರೆಡ್‌ಮಿ 5 ಸ್ಮಾರ್ಟ್‌ಫೋನ್:

ರೆಡ್‌ಮಿ 5 ಸ್ಮಾರ್ಟ್‌ಫೋನ್‌ನಲ್ಲಿ 5.7 ಇಂಚಿನ HD ಪ್ಲಸ್ ಗುಣಮಟ್ಟದ 18:9 ಅನುಪಾತದ ಸ್ಕ್ರಿನ್‌ ಅನ್ನು ಕಾಣಬಹುದು. ಇದರಲ್ಲಿ 1.8GHz ವೇಗದ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಮತ್ತು ಆಡ್ರಿನೋ 506 GPU ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 2GB RAM+ 16GB ಇಂಟರ್ನಲ್‌ ಮೆಮೊರಿಯ ಆವೃತ್ತಿ ಹಾಗೂ 3GB RAM+ 32GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ಲಭ್ಯವಿರಲಿದೆ. 3,300mAh ಬ್ಯಾಟರಿಯನ್ನು ರೆಡ್‌ಮಿ 5 ನಲ್ಲಿ ಕಾಣಬಹುದು.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್:

ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್:

ಈ ಸ್ಮಾರ್ಟ್‌ಫೋನ್‌ನಲ್ಲಿ 5.99 ಇಂಚಿನ FHD ಪ್ಲಸ್ ಗುಣಮಟ್ಟದ 18:9 ಅನುಪಾತದ ಸ್ಕ್ರಿನ್‌ ಅನ್ನು ಕಾಣಬಹುದು. ಇದರಲ್ಲಿ 2.0 GHz ವೇಗದ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಮತ್ತು ಆಡ್ರಿನೋ 506 GPU ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 3 GB RAM+ 32 GB ಇಂಟರ್ನಲ್‌ ಮೆಮೊರಿಯ ಆವೃತ್ತಿ ಹಾಗೂ 4 GB RAM+ 64 GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ಲಭ್ಯವಿರಲಿದೆ. 4,000mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದು.

ಕ್ಯಾಮೆರಾಗಳು ಹೇಗಿದೆ..?

ಕ್ಯಾಮೆರಾಗಳು ಹೇಗಿದೆ..?

ಈ ಎರಡು ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಜೊತೆಗೆ LED ಫ್ಲಾಷ್ ಲೈಟ್ ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಫೋನಿನ ಹಿಂಭಾಗದಲ್ಲಿ ನೀಡಲಾಗಿದೆ.

ಶಿಯೋಮಿ ರೆಡ್‌ಮಿ 5 ಮತ್ತು ಶಿಯೋಮಿ ರೆಡ್‌ಮಿ 5 ಪ್ಲಸ್  ಬೆಲೆ:

ಶಿಯೋಮಿ ರೆಡ್‌ಮಿ 5 ಮತ್ತು ಶಿಯೋಮಿ ರೆಡ್‌ಮಿ 5 ಪ್ಲಸ್ ಬೆಲೆ:

ಶಿಯೋಮಿ ರೆಡ್‌ಮಿ 5 ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 16 GB ಆವೃತ್ತಿ ರೂ.7,700ಕ್ಕೆ ಹಾಗೂ 32GB ಆವೃತ್ತಿ ರೂ. 8,700ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಇದರೊಂದಿಗೆ ಶಿಯೋಮಿ ರೆಡ್‌ಮಿ 5 ಪ್ಲಸ್ ಸಹ ಎರಡು ಆವೃತ್ತಿಯಲ್ಲಿ ಲಭ್ಯವಿರಲಿದ್ದು, 32GB ಆವೃತ್ತಿ ಬೆಲೆ ರೂ. 9,700ಕ್ಕೆ ಹಾಗೂ 64GB ಆವೃತ್ತಿ ರೂ. 12,600ಕ್ಕೆ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Xiaomi Redmi 5, Redmi 5 Plus launched in China: Price, features, and specifications. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X