ಶಿಯೋಮಿ 'ರೆಡ್‌ಮಿ ನೋಟ್ 5' ಫೋನ್ ಸುದ್ದಿಗೆ ಬೆಚ್ಚಿಬಿತ್ತು ಮೊಬೈಲ್ ಲೋಕ!!
ಚೀನಾದ ಪ್ರಸಿದ್ದ ಮೈಕ್ರೊ ಬ್ಲಾಗಿಂಗ್ 'ವಿಬೊ' ವೆಬ್‌ಸೈಟ್‌ನಲ್ಲಿ ಫೋಟೊ ಮತ್ತು ಮಾಹಿತಿ ಲೀಕ್ ಆಗಿರುವುದು ಇದೀಗ ವೈರೆಲ್ ಆಗಿದೆ.!!
ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡುಗಿಸಿದ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸುಧಾರಿತ ಆವೃತ್ತಿ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 5 ಬಿಡುಗಡೆಗೆ ಸನ್ನದ್ದವಾಗಿದೆ. ಚೀನಾದ ಪ್ರಸಿದ್ದ ಮೈಕ್ರೊ ಬ್ಲಾಗಿಂಗ್ 'ವಿಬೊ' ವೆಬ್‌ಸೈಟ್‌ನಲ್ಲಿ ಫೋಟೊ ಮತ್ತು ಮಾಹಿತಿ ಲೀಕ್ ಆಗಿರುವುದು ಇದೀಗ ಮೊಬೈಲ್ ಲೋಕ ಬೆಚ್ಚಿ ಬೀಳಲು ಕಾರಣವಾಗಿದೆ.!!
ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಸ್ ಮೂಲಕ ಜನರಿಗೆ ಹತ್ತಿರವಾಗಿದ್ದ ರೆಡ್‌ಮಿ ನೋಟ್ 4 ಫೋನ್ ಮೇಲಿನ ಭರವಸೆ ರೆಡ್‌ಮಿ ನೋಟ್ 5 ಮೇಲೂ ಇರುವುದರಿಂದ ಈಗಾಗಲೇ ಜನರ ನಿರೀಕ್ಷೆ ಹೆಚ್ಚಿಸಿದೆ.! ಹಾಗಾದರೆ, ರೆಡ್‌ಮಿ ನೋಟ್ 5 ಫೋನ್ ಏನೆಲ್ಲಾ ಫೀಚರ್ ಹೊಂದಿರಲಿದೆ? ಮತ್ತು ಬೆಲೆ ಎಷ್ಟಿರಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ರೆಡ್‌ಮಿ ನೋಟ್ 4 ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಯಾಗಿದ್ದು, ವಿಬೊ ನೀಡಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 1080 x 2160 ಪಿಕ್ಸೆಲ್ ರೆಸಲ್ಯೂಶನ್ ಹೈ ಹೆಚ್‌ಡಿ 5.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. 18:9 ರೆಷ್ಯೂ ಸ್ಕ್ರೀನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.!!

ಕ್ಯಾಮೆರಾಗೆ ಹೆಚ್ಚು ಒತ್ತು!!
ರೆಡ್‌ಮಿ ನೋಟ್ 5 ಕ್ಯಾಮೆರಾದಲ್ಲಿ ಭಾರಿ ಬದಲಾವಣೆಯಾಗಿದ್ದು, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ಇರಲಿವೆ.!! ಇದು ರೆಡ್‌ಮಿ ನೋಟ್ 4ನಲ್ಲಿದ ನೂನ್ಯತೆಗಳನ್ನು ಸರಿಪಡಿಸಲಿದೆ ಎಂದು ವಿಬೊ ವೆಬ್‌ಸೈಟ್ ಅಭಿಪ್ರಾಯ ವ್ಯಕ್ತಪಡಿಸಿದೆ!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!
ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿದೆ ವರದಿ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!

ಫೋನ್ ಬೆಲೆ ಎಷ್ಟಿರಬಹುದು?
ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಯಶಸ್ಸನ್ನು ರೆಡ್‌ಮಿ ನೋಟ್ 5 ಮೂಲಕವೂ ಉಳಿಸಿಕೊಳ್ಳುವ ಅಗತ್ಯತೆಯನ್ನು ಹೊಂದಿರುವ ಶಿಯೋಮಿ ಕಂಪೆನಿ ಕಡಿಮೆ ಬೆಲೆಗೆ ಈ ಪೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಕೇವಲ 10,000 ಕ್ಕೆ ಡ್ಯುಯಲ್ ಕ್ಯಾಮೆರಾ ಫೋನ್ ನಿಮ್ಮದಾಗಲಿದೆ.!!
image source: 99 mobiles


Click it and Unblock the Notifications








