ಶಿಯೋಮಿ ರೆಡ್ಮಿ ನೋಟ್ 7 ಮತ್ತು ನೋಟ್ 7 ಪ್ರೋ ಖರೀದಿಗೆ ಏರ್ ಟೆಲ್ ಡಾಟಾ ಫ್ರೀ

By Gizbot Bureau
|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರೆಡ್ಮಿ ನೋಟ್ 7 ಮತ್ತು ರೆಡ್ಮಿ ನೋಟ್ 7 ಪ್ರೋ ವನ್ನು ನಿನ್ನೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎರಡೂ ಸ್ಮಾರ್ಟ್ ಫೋನ್ ಗಳು ಕ್ರಮವಾಗಿ Rs 9,999 ಮತ್ತು Rs 13,999 ಬೆಲೆಯನ್ನು ಹೊಂದಿವೆ.ಇದೀಗ ಕಂಪೆನಿಯು ಟೆಲಿಕಾಂ ಪ್ರೊವೈಡರ್ ಏರ್ ಟೆಲ್ ಜೊತೆಗೆ ಕೈಜೋಡಿಸಿದ್ದು ಡಾಟಾ ಆಫರ್ ಮತ್ತು ಎಕ್ಸ್ ಕ್ಲೂಸೀವ್ ರಿಯಾಯಿತಿ ಬೆನಿಫಿಟ್ ಗಳನ್ನು ಖರೀದಿದಾರರಿಗೆ ನೀಡುತ್ತಿದೆ.

ಆಫರ್ ನ ಭಾಗವಾಗಿ ಏರ್ ಟೆಲ್ ಗ್ರಾಹಕರಿಗೆ 100% ಹೆಚ್ಚು ಡಾಟಾವನ್ನು ಆಯ್ದ ಪ್ರೀಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿದೆ. ಅಂದರೆ ಹೊಸ ಸ್ಮಾರ್ಟ್ ಫೋನ್ ಖರೀದಿಸುವವರು ಈ ಲಾಭವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಪ್ರೆಸ್ ರಿಲೀಸ್ ನಲ್ಲಿ ಕಂಪೆನಿ ತಿಳಿಸಿರುವ ಪ್ರಕಾರ ಗ್ರಾಹಕರು ಹೆಚ್ಚುವರಿಯಾಗಿ ಏರ್ ಟೆಲ್ ನಿಂದ 1120ಜಿಬಿ ಡಾಟಾವನ್ನು ಪಡೆಯಲಿದ್ದಾರೆ ಮತ್ತು ಏರ್ ಟೆಲ್ ಡಾಟಾ ಸೆಕ್ಯೂರ್ ಮತ್ತು ಉಚಿತ ಏರ್ ಟೆಲ್ ಟಿವಿಗೆ ಆಕ್ಸಿಸ್ ಕೂಡ ಲಭ್ಯವಾಗುತ್ತದೆ.

ಡಾಟಾ ಬೆನಿಫಿಟ್

ಡಾಟಾ ಬೆನಿಫಿಟ್

ಹೊಸ ಸ್ಮಾರ್ಟ್ ಫೋನ್ ಖರೀದಿಸಿದ ನಂತರ ಗ್ರಾಹಕರು ಮುಂದಿನ 10 ರಿಚಾರ್ಜ್ ಗಳಲ್ಲಿ ಈ ಹೆಚ್ಚುವರಿ ಡಾಟಾ ಬೆನಿಫಿಟ್ ನ್ನು ಪಡೆಯಬಹುದಾಗಿರುತ್ತದೆ ಅಥವಾ ಮೊದಲ 10 ತಿಂಗಳು ಈ ಸೌಲಭ್ಯವಿರುತ್ತದೆ. ಈ ಆಫರ್ ರೂ 249 ಮತ್ತು ರೂ.349 ರ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳಿಗೆ ಅನ್ವಯಿಸುತ್ತದೆ.

ರೆಡ್ಮಿ ನೋಟ್ 7 ಮತ್ತು ನೋಟ್ 7 ಪ್ರೋ ಸೇಲ್ ಡೇಟ್

ರೆಡ್ಮಿ ನೋಟ್ 7 ಮತ್ತು ನೋಟ್ 7 ಪ್ರೋ ಸೇಲ್ ಡೇಟ್

ರೆಡ್ಮಿ ನೋಟ್ 7 6.3-ಇಂಚಿನ ಫುಲ್ -HD+ (1080x2340 ಪಿಕ್ಸಲ್ಸ್) ಸ್ಕ್ರೀನ್ ಜೊತೆಗೆ 19.5:9 ಅನುಪಾತವನ್ನು ಹೊಂದಿದೆ. ಇದು ಆಂಡ್ರಾಯ್ಡ್ 9 ಪೈ ಆಧಾರಿತ MIUI 10 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. ರೆಡ್ಮಿ ನೋಟ್ 7 ಪ್ರೋ 6.3-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x1920 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675 ಪ್ರೊಸೆಸರ್ ಮತ್ತು MIUI 10 ಆಧಾರಿತ ಆಂಡ್ರಾಯ್ಡ್ ಪೈ ನಲ್ಲಿ ರನ್ ಆಗುತ್ತದೆ.

ಫ್ಲಿಪ್ ಕಾರ್ಟ್ ಮತ್ತು ಎಂಐ.ಕಾಮ್

ಫ್ಲಿಪ್ ಕಾರ್ಟ್ ಮತ್ತು ಎಂಐ.ಕಾಮ್

ಎರಡೂ ಹ್ಯಾಂಡ್ ಸೆಟ್ ಗಳನ್ನು ಫ್ಲಿಪ್ ಕಾರ್ಟ್ ಮತ್ತು ಎಂಐ.ಕಾಮ್ ವೆಬ್ ಸೈಟ್ ನಲ್ಲಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ. ರೆಡ್ಮಿ ನೋಟ್ 7 ಮಾರ್ಚ್ 6ರ ಮಧ್ಯಾಹ್ನ 12 ಘಂಟೆಯಿಂದ ಸೇಲ್ ಗೆ ಲಭ್ಯವಿರುತ್ತದೆ ಮತ್ತು ರೆಡ್ಮಿ ನೋಟ್ 7 ಪ್ರೋ ಮಾರ್ಚ್ 13 ರಿಂದ ಖರೀದಿಗೆ ಸಿಗುತ್ತದೆ.

ಉತ್ತಮ ನೆಟ್ ವರ್ಕ್ ಎಕ್ಸ್ ಪೀರಿಯನ್ಸ್ ನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದಾಗಿ ನಾವು ಶಿಯೋಮಿ ಜೊತೆಗೆ ಕೈಜೋಡಿಸಿದ್ದೇವೆ ಮತ್ತು ಈ ಆಫರ್ ತಮ್ಮ ಫೇವರೆಟ್ ಸ್ಮಾರ್ಟ್ ಫೋನ್ ಜೊತೆಗೆ ಉತ್ತಮ ಡಾಟಾ ನೀಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಭಾರತೀ ಏರ್ ಟೆಲ್ ನ ಚೀಫ್ ಬ್ರ್ಯಾಂಡ್ ಆಫೀಸರ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ಶುಶಾಂತ್ ಶರ್ಮಾ ತಿಳಿಸಿದ್ದಾರೆ.

Best Mobiles in India

English summary
Xiaomi Redmi Note 7 and Note 7 Pro buyers to get double data on Airtel’s Rs 249 and Rs 349 prepaid plans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X