ಐದನೇ ವಾರ್ಷಿಕೋತ್ಸವಕ್ಕಾಗಿ ಶಿಯೋಮಿ ಪ್ರಸಿದ್ಧ ಫೋನ್ ಬೆಲೆ 2000 ರುಪಾಯಿ ಇಳಿಕೆ

|

ಚೀನಾದ ತಂತ್ರಜ್ಞಾನ ಕಂಪೆನಿ ಶಿಯೋಮಿ ಭಾರತದಲ್ಲಿ ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪೆನಿ ಎನ್ನಿಸಿಕೊಂಡಿದ್ದು ಸದ್ಯ ಈ ಕಂಪೆನಿಯ ಪ್ರಸಿದ್ಧ ಫೋನ್ ರೆಡ್ಮಿ ನೋಟ್ ಪ್ರೋ ನ ಬೆಲೆಯಲ್ಲಿ ಇಳಿಕೆ ಆಗಿದೆ. ಈ ಬೆಲೆ ಇಳಿಕೆಯು ಕಂಪೆನಿಯಿಂದ ಸಿಗುತ್ತಿರುವ ಎರಡನೇ ಸಪ್ರೈಸ್ ಆಗಿದೆ. ಭಾರತದಲ್ಲಿ ಕಂಪೆನಿಯ ಐದನೇ ವರ್ಷದ ವಾರ್ಷಿಕೋತ್ಸವ ಪ್ರಮೋಷನ್ ಗಾಗಿ ಈ ಆಫರ್ ನ್ನು ನೀಡಲಾಗುತ್ತಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ನ ಹೊಸ ಬೆಲೆ ಮತ್ತು ಲಭ್ಯತೆ :

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ನ ಹೊಸ ಬೆಲೆ ಮತ್ತು ಲಭ್ಯತೆ :

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ನ ಎರಡೂ ವೇರಿಯಂಟ್ ಗೆ ಬೆಲೆ ಇಳಿಕೆಯಾಗಿದೆ. ಬೇಸ್ ವೇರಿಯಂಟ್ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿಗೆ Rs 1,000 ಮತ್ತು ಇದೀಗ ಈ ಫೋನ್ 12,999 ರುಪಾಯಿ ಬೆಲೆಗೆ ಲಭ್ಯವಿದೆ. ಮೊದಲು ಈ ವೇರಿಯಂಟ್ ಫೋನಿನ ಬೆಲೆ Rs 13,999 ಆಗಿತ್ತು. ಇನ್ನೊಂದೆಡೆ ಎರಡನೇ ವೇರಿಯಂಟ್ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು ಇದೀಗ 13,999 ರುಪಾಯಿ ಬೆಲೆಗೆ ಖರೀದಿಸಬಹುದು. ಅಂದರೆ ಈ ವೇರಿಯಂಟ್ ಗೆ Rs 2,000 ಬೆಲೆ ಇಳಿಕೆ ಆಗಿದೆ.

ಹೊಸ ಬೆಲೆ

ಹೊಸ ಬೆಲೆ

ಈ ಹೊಸ ಬೆಲೆಯು ಅಮೇಜಾನ್, ಫ್ಲಿಪ್ ಕಾರ್ಟ್ ಮತ್ತು ಶಿಯೋಮಿಯ ಸ್ವಂತ ಎಂಐ.ಕಾಮ್ ನಲ್ಲಿ ಈಗಾಗಲೇ ಲಭ್ಯವಿದೆ. ಅಷ್ಟೇ ಅಲ್ಲ ಆಫ್ ಲೈನ್ ರೀಟೈಲ್ ಸ್ಟೋರ್ ಗಳಲ್ಲೂ ಕೂಡ ಇಂದಿನಿಂದಲೇ ಲಭ್ಯವಿದೆ.

ಶಿಯೋಮಿ ರೆಡ್ಮಿ ನೋಟ್ 5 ವೈಶಿಷ್ಟ್ಯತೆಗಳು :

ಶಿಯೋಮಿ ರೆಡ್ಮಿ ನೋಟ್ 5 ವೈಶಿಷ್ಟ್ಯತೆಗಳು :

ಶಿಯೋಮಿ ರೆಡ್ಮಿ ನೋಟ್ 5 ಪ್ರೋ 5.99-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2160 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ ಮತ್ತು 18:9 ಅನುಪಾತದ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನ್ನು ಮೇಲ್ಬಾಗದಲ್ಲಿ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 625 ಪ್ರೊಸೆಸರ್ ಮತ್ತು MIUI 9 ಆಧಾರಿತ ಆಂಡ್ರಾಯ್ಡ್ 7.0 Nougat ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ. ಆದರೆ ಡಿವೈಸ್ ಈಗಾಗಲೇ OTA ಓರಿಯೋ ಆಧಾರಿತ ಅಪ್ ಡೇಟ್ ನ್ನು ಪಡೆದಿದೆ.

ಇದರಲ್ಲಿ ಎರಡು ಸ್ಟೋರೇಜ್ ವೇರಿಯಂಟ್ ಗಳು ಲಭ್ಯವಾಗುತ್ತದೆ -- 4GB+64GB ಮತ್ತು 6GB+64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಕ್ಯಾಮರಾ ವೈಶಿಷ್ಟ್ಯತೆಗಳನ್ನು ಪರಿಗಣಿಸಿದರೆ ಇದರಲ್ಲಿ 12MP ಮತ್ತು 5MP ಸೆನ್ಸರ್ ಗಳು ಹಿಂಭಾಗದಲ್ಲಿದೆ ಮತ್ತು 20MP ಸೆಲ್ಫೀ ಕ್ಯಾಮರಾ ಜೊತೆಗೆ LED ಫ್ಲ್ಯಾಶ್ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 4000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ ಮತ್ತು 4G, VoLTE, 3G, ವೈ-ಫೈ,ಬ್ಲೂಟೂತ್ ಮತ್ತು ಜಿಪಿಎಸ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದೆ.

Best Mobiles in India

English summary
Xiaomi’s ‘most popular’ smartphone, Redmi Note 5 Pro gets a price cut of Rs 2,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X