ಶಿಯೋಮಿ ನಿಮ್ಮನ್ನು ಹೇಗೆ ವಂಚಿಸುತ್ತಿದೆ ಗೊತ್ತಾ..? ಇಲ್ಲಿದೇ ಪ್ರತ್ಯಕ್ಷ ಸಾಕ್ಷಿ..!

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ತೀವ್ರಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ತುದಿಗಾಲಿನಲ್ಲಿ ನಿಂತಿವೆ, ಹೀಗಾಗಿ ಚೀನಾ ಮೂಲದ ಕಂಪನಿಗಳು ಹೆಚ್ಚಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಇದರಿಂದಾಗಿ ಮಾರುಕಟ್ಟೆಯಲ್ಲಿ ಇರುವ ಬೆಸ್ಟ್ ಬ್ರಾಂಡ್‌ಗಳಿಗೆ ಹಾನಿಯಾಗುತ್ತಿದೆ.

ಶಿಯೋಮಿ ನಿಮ್ಮನ್ನು ಹೇಗೆ ವಂಚಿಸುತ್ತಿದೆ ಗೊತ್ತಾ..? ಇಲ್ಲಿದೇ ಪ್ರತ್ಯಕ್ಷ ಸಾಕ್ಷಿ.

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಬಳಕೆದಾರರನ್ನು ಸೆಳೆಯಲು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಪ್ರಮಾಣ RAM ಹಾಗೂ ಇಂಟರ್ನಲ್ ಮೆಮೊರಿಯನ್ನು ನೀಡುವುದಲ್ಲದೇ ಪ್ರಮುಖವಾಗಿ ಕಾಣಿಸುವ ವಿಶೇಷತೆಗಳನ್ನು ಮಾತ್ರವೇ ತೋರಿಸಿ ಅದನ್ನೇ ಪ್ರೋಮೋಟ್ ಮಾಡಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ, ಆದರೆ ಒಂದು ವಿಭಾಗದ ಸ್ಮಾರ್ಟ್‌ಫೋನ್‌ಗಳು ಹೊಂದಬೇಕಾದ ಮಿನಿಮಮ್ ಕ್ವಾಲಿಟಿಗಳು ಅದರಲ್ಲಿ ಇರುವುದಿಲ್ಲ ಎನ್ನಲಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಶಿಯೋಮಿ ಲಾಂಚ್ ಮಾಡಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಪೊಕೊ F1 ಸ್ಮಾರ್ಟ್‌ಪೋನ್.

ಸುಳ್ಳು ಹೇಳುವ ಶಿಯೋಮಿ:

ಸುಳ್ಳು ಹೇಳುವ ಶಿಯೋಮಿ:

ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಮಾರುಕಟ್ಟೆಯಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಇಡುವ ಶಿಯೋಮಿ, ಇದಕ್ಕಾಗಿ ಗ್ರಾಹಕರಿಗೆ ಸುಳ್ಳು ಹೇಳಲಿದೆ. ಪ್ರೀಮಿಯಮ್ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇರಬೇಕಾದ ಮಿನಿಮಮ್ ವಿಶೇಷತೆಗಳನ್ನು ನೀಡದೆ ಆ ವಿಭಾಗದಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿದೆ.

ಕೇವಲ ಕಾಣುವ ವಿಶೇಷತೆ:

ಕೇವಲ ಕಾಣುವ ವಿಶೇಷತೆ:

ಮಧ್ಯಮ ಸರಣಿ ಸ್ಮಾರ್ಟ್‌ಫೋನ್ ಎಂದು ಮಾರಾಟ ಮಾಡುವ ಶಿಯೋಮಿ ಫೋನ್‌ಗಳೂ ಕೇವಲ RAM ಮತ್ತು ಸ್ಟೋರೆಜ್‌ ನೊಂದಿಗೆ ಪ್ರೋಸೆಸರ್ ಅನ್ನು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗುವುದನ್ನು ನೀಡಲಿದೆ. ಅದನ್ನು ಬಿಟ್ಟರೆ ಬಳಕೆದಾರರಿಗೆ ತಿಳಿಯದೇ ಒಳಗೆ ಇರಬೇಕಾದ ಬೇರೆ ಬೇರೆ ಅಂಶಗಳನ್ನು ಕಡಿಮೆ ಮಾಡಲಿದೆ. ಇದಕ್ಕಾಗಿಯೇ ಶಿಯೋಮಿ ಫೋನ್‌ಗಳು ಕಡಿಮೆ ಬೆಲೆಗೆ ದೊರೆಯುತ್ತಿವೆ.

ಸಾಕ್ಷಿ ಇಲ್ಲಿದೆ:

ಸಾಕ್ಷಿ ಇಲ್ಲಿದೆ:

ಶಿಯೋಮಿ ಮಾರುಕಟ್ಟೆಗೆ ಪೊಕೊ F1 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಇದನ್ನು ಪ್ರೀಮಿಯಮ್ ಸ್ಮಾರ್ಟ್‌ಫೋನ್ ಎಂದು ಬಿಂಬಿಸಿ ಮಾರುಕಟ್ಟೆಯಲ್ಲಿ ಯಾರು ನೀಡದ ಬೆಲೆಗೆ ಮಾರಾಟ ಮಾಡುತ್ತಿದೆ. ಇದರಲ್ಲಿ RAM, ಸ್ಟೋರೆಜ್ ಮತ್ತು ಪ್ರೋಸೆಸರ್ ಅನ್ನು ಮಾತ್ರವೇ ಪ್ರೀಮಿಯಮ್ ಗುಣಮಟ್ಟದನ್ನು ನೀಡುತ್ತಿದೆ. ಆದರೆ ಇದರಲ್ಲಿ ಇರಬೇಕಾದ ಆಯ್ಕೆಗಳು ಮಾತ್ರವೇ ಪ್ರೀಮಿಯಮ್ ಗುಣಮಟ್ಟದಲ್ಲ.

HD ವಿಡಿಯೋ ಪ್ಲೇ ಆಗುವುದಿಲ್ಲ:

HD ವಿಡಿಯೋ ಪ್ಲೇ ಆಗುವುದಿಲ್ಲ:

ಈ ಆಯ್ಕೆಯನ್ನು ನೀವು ಗಮನಿಸಲು ಹೋಗಿರುವುದಿಲ್ಲ. ಅಮೆಜಾನ್ ಪ್ರೈಮ್ ಮತ್ತು ನೆಟ್‌ಫಿಕ್ಸ್ ಸೇರಿದಂತೆ ಆನ್‌ಲೈನ್ ಸ್ಟೀಮಿಂಗ್ ಸೇವೆಯನ್ನು ನೀಡುವ ತಾಣಗಳಲ್ಲಿ ನೀವು ಪೊಕೊ F1 ಸ್ಮಾರ್ಟ್‌ಫೋನ್ ನಲ್ಲಿ HD ವಿಡಿಯೋಗಳನ್ನು ನೋಡಲು ಸಾಧ್ಯವಿಲ್ಲ. ಕಾರಣ ಪೊಕೊ F1 ಸ್ಮಾರ್ಟ್‌ಫೋನ್ L1 ಸರ್ಟಿಫಿಕೆಟ್ ಅನ್ನು ಹೊಂದಿಲ್ಲ ಎನ್ನಲಾಗಿದೆ.

ಏನೀದು..?

ಏನೀದು..?

ಮಾರುಕಟ್ಟೆಯಲ್ಲಿ ಗುಣಮಟ್ಟದ ಸ್ಮಾರ್ಟ್ಫೋನ್‌ಗಳು ಮಾತ್ರವೇ HD ಕಂಟೆಟ್ ಗಳನ್ನು ಸಪೋರ್ಟ್ ಮಾಡುವ ವೈಡ್ವಿನ್ (widevine) ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುತ್ತವೆ. ಇದರಲ್ಲಿ ಮೂರು ವಿಭಾಗಗಳಿದ್ದು Widevine L1, L2, L3 ಎಂದು ಗುರುತಿಸಬಹುದಾಗಿದೆ. ಇದರಲ್ಲಿ ಗುಣಮಟ್ಟದ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳು ಮಾತ್ರವೇ Widevine L1 ಸರ್ಟಿಫೀಕೆಟ್ ಪಡೆದುಕೊಳ್ಳುತ್ತವೆ, ಆದರೆ ಪೊಕೊ F1 ಸ್ಮಾರ್ಟ್‌ಫೋನ್ Widevine L3 ಅಂದರೆ ಕೊನೆ ಶ್ರೇಣಿಯ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದೆ.

ಹೇಗೆ ತಿಳಿಯುವುದು:

ಹೇಗೆ ತಿಳಿಯುವುದು:

Widevine L1 ಸರ್ಟಿಫೀಕೆಟ್ ಇಲ್ಲದ ಸ್ಮಾರ್ಟ್‌ಫೋನಿನಲ್ಲಿ ಗುಣಮಟ್ಟದ ವಿಡಿಯೋ ಪ್ಲೇ ಆಗುವುದಿಲ್ಲ, 1080p ಮತ್ತು 720p ಗುಣಮಟ್ಟದ ವಿಡಿಯೋ ಪ್ಲೇ ಆಗುವುದಿಲ್ಲ. ಇದರಿಂದಾಗಿ ಉತ್ತಮವಾದ ವಿಡಿಯೋಗಳನ್ನು ಎಂದಿಗೂ ನೋಡುವುದಿಲ್ಲ. ಉತ್ತಮ ಗುಣಮಟ್ಟವನ್ನು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ.

ಒನ್‌ಪ್ಲಸ್‌ನಲ್ಲಿಯೂ ಇರಲಿಲ್ಲ:

ಒನ್‌ಪ್ಲಸ್‌ನಲ್ಲಿಯೂ ಇರಲಿಲ್ಲ:

ಮೊದಲಿಗೆ ಒನ್‌ಪ್ಲಸ್ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಸೇವೆಯೂ ಇರಲಿಲ್ಲ. ಆದರೆ ಬಳಕೆದಾರರು ಡಿಮಾಂಡ್ ಮಾಡಿದ ಸಲುವಾಗಿ ಮತ್ತು ಬೇಡಿಕೆ ಕುಸಿಯುವ ಭಯದಿಂದ ಒನ್‌ಪ್ಲಸ್ ತನ್ನ ನೂತನ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ Widevine L1 ಸರ್ಟಿಫೀಕೆಟ್ ನೀಡಲು ಮುಂದಾಗಿದೆ.

ಯಾವುದರಲ್ಲಿ ಇರಲಿದೆ:

ಯಾವುದರಲ್ಲಿ ಇರಲಿದೆ:

Widevine L1 ಸರ್ಟಿಫೀಕೆಟ್ ಪಡೆದಿರುವ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ನೋಕಿಯಾ, ಸ್ಯಾಮ್‌ಸಂಗ್, ಮೊಟೊರೊಲಾ, ಆಪಲ್ ಮತ್ತು LG ಕಂಪನಿಯ ಹಲವು ಪೋನ್‌ಗಳು ಕಾಣಿಸಿಕೊಂಡಿದೆ. ಈ ಆಯ್ಕೆಯಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ ವಿಡಿಯೋ ನೋಡುವ ಅನುಭವ ಉತ್ತಮವಾಗಲಿದೆ.

Best Mobiles in India

English summary
Xiaomi's Poco F1 Does Not Support HD Video Streaming. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X