ಸೆಪ್ಟೆಂಬರ್ ತಿಂಗಳಲ್ಲಿ ಒಂದು ಕೋಟಿ ಸ್ಮಾರ್ಟ್‌ಫೋನ್ ಮಾರಾಟ ಮಾಡಿದ ಶಿಯೋಮಿ

ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಛಾಫು ಮೂಡಿಸುತ್ತಿರುವ ಈ ಕಂಪನಿ ಸೆಪ್ಟೆಂಬರ್ ಒಂದು ತಿಂಗಳಿನಲ್ಲಿಯೇ ಒಂದು ಕೋಟಿ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿಯೂ ಹೊಸದೊಂದು ದಾಖಲೆಯನ್ನು ಬರೆದಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಛಾಫು ಮೂಡಿಸುತ್ತಿರುವ ಈ ಕಂಪನಿ ಸೆಪ್ಟೆಂಬರ್ ಒಂದು ತಿಂಗಳಿನಲ್ಲಿಯೇ ಒಂದು ಕೋಟಿ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಒಂದು ಕೋಟಿ ಸ್ಮಾರ್ಟ್‌ಫೋನ್ ಮಾರಾಟ ಮಾಡಿದ ಶಿಯೋಮಿ

ಓದಿರಿ: ಶೀಘ್ರವೇ ಇವುಗಳೊಂದಿಗೆ ಆನ್‌ಲೈನ್‌ ನಲ್ಲಿ ಆಧಾರ್ ಲಿಂಕ್ ಮಾಡಿ: ಇಲ್ಲಾಂದ್ರೆ..?

ಈ ಕುರಿತು ಶಿಯೋಮಿ ಮುಖ್ಯಸ್ಥ ಲೀ ಜಾನ್ ಮಾಹಿತಿಯನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಕಂಪನಿಯೂ 10 ಮಿಲಿಯನ್ ಮಿ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ನಂ.೦1 ಸೇಲ್‌ ಆಗುವ ಸ್ಮಾರ್ಟ್‌ಫೋನ್ ಕೀರಿಟವು ಶಿಯೋಮಿ ಮುಡಿಯಲ್ಲೇ ಇದ್ದು, ಇದರೊಂದಿಗೆ 10 ಮಿಲಿಯನ್ ಸ್ಮಾರ್ಟ್‌ಫೋನ್ ಮಾರಾಟ ಮೈಲಿಗಲ್ಲು ಸ್ಥಾಪಿಸಿದೆ.

ಶಿಯೋಮಿ ಸಾಧನೆಗೆ ಕಾರಣ?

ಶಿಯೋಮಿ ಸಾಧನೆಗೆ ಕಾರಣ?

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಎಲ್ಲಾ ಆನ್‌ಲೈನ್ ಶಾಪಿಂಗ್ ತಾಣಗಳು ಒಟ್ಟಿಗೆ ದಸಾರ ಮತ್ತು ದೀಪಾವಳಿ ಸೇಲ್ ಆರಂಭಿಸಿದ್ದು, ಅಲ್ಲದೇ ಶಿಯೋಮಿ ಸಹ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕಡಿತ ಮಾಡಿದ್ದರಿಂದ ಈ ಪ್ರಮಾಣದಲ್ಲಿ ಮಾರಾಟವಾಗಲು ಕಾರಣವಾಗಿದೆ.

'ದೀಪಾವಳಿ ವಿಥ್ ಮಿ'

'ದೀಪಾವಳಿ ವಿಥ್ ಮಿ'

ಇದಲ್ಲದೇ ಶಿಯೋಮಿ ತನ್ನ ವೆಬ್‌ಸೈಟ್ ಮೂಲಕ ಮೊಬೈಲ್ ಖರೀದಿಸುವವರಿಗಾಗಿ 'ದೀಪಾವಳಿ ವಿಥ್ ಮಿ' ಆಫರ್ ನೀಡಿದ್ದು, ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ರೂ. 2000 ಕಡಿಮೆ ಮಾಡಿದ್ದು, ಸಹ ಒಂದು ಕೋಟಿ ಮೊಬೈಲ್ ಮಾರಾಟಕ್ಕೆ ಕಾರಣವಾಗಿದೆ.

ಹೊಸ ಫೋನ್‌ಗಳು:

ಹೊಸ ಫೋನ್‌ಗಳು:

ಇದರೊಂದಿಗೆ ಶಿಯೋಮಿ ತನ್ನ ಬಳಕೆದಾರರಿಗೆ ಹೊಸ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ್ದಲ್ಲದೇ, ಕಡಿಮೆ ಬೆಲೆಗೆ ಆಂಡ್ರಾಯ್ಡ್ ಒನ್ ಇರುವ ಡ್ಯುಯಲ್ ಕ್ಯಾಮೆರಾ ಫೋನ್ ಲಾಂಚ್ ಮಾಡಿದ್ದು, ಸಹ ಇದಕ್ಕೆ ಕಾರಣವಾಗಿರಬಹುದು.

Best Mobiles in India

English summary
Xiaomi's chief Lei Jun shared on his Wiebo account that the company has managed to sell 10 million Mi smartphones in September. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X