ಸ್ಯಾಮ್‌ಸಂಗ್ VS ಶಿಯೋಮಿ!..ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಾಖಲೆ!

|

2019ರ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ದಾಖಲೆ ನಿರ್ಮಿಸಿದೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್‌ನ (ಐಡಿಸಿ) ವರದಿಯು ತಿಳಿಸಿದೆ. 2019ರ ಎರಡನೇ ತ್ರೈಮಾಸಿಕದಲ್ಲಿ ದೇಶದಲ್ಲಿ 36.9 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಇದು ತ್ರೈಮಾಸಿಕ ಒಂದರಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟವಾದ ದಾಖಲೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ ತನ್ನ ವರದಿಯಲ್ಲಿ ಹೇಳಿದೆ.

ಸ್ಯಾಮ್‌ಸಂಗ್ VS ಶಿಯೋಮಿ!..ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಾಖಲೆ!

ಹೌದು, ಏಷ್ಯಾ / ಪೆಸಿಫಿಕ್ ತ್ರೈಮಾಸಿಕ ಮೊಬೈಲ್ ಫೋನ್ ಟ್ರ್ಯಾಕರ್" ವರದಿಯ ಪ್ರಕಾರ, ದೇಶದ ಎರಡನೇ ತ್ರೈಮಾಸಿಕದಲ್ಲಿ ಚೀನಾದ ಹ್ಯಾಂಡ್‌ಸೆಟ್ ತಯಾರಕ ಶಿಯೋಮಿಯ ಸಾಗಣೆಯ ಪ್ರಮಾಣವು ಶೇ 4.8 ರಷ್ಟು ಏರಿಕೆಯಾಗಿದೆ ಮತ್ತು ಸ್ಯಾಮ್‌ಸಂಗ್ ಶೇಕಡ 16.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಕಡಿಮೆ ಮತ್ತು ಮಧ್ಯ-ಬೆಲೆ ವಿಭಾಗಗಳ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ ಎಂದು ವರದಿಯು ಹೇಳಿದೆ.

2019ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟದ ಬೆಳವಣಿಗೆ ಶೇ. 14.8 ರಷ್ಟಾಗಿದ್ದರೆ, ಇದು ವರ್ಷಕ್ಕೆ 9.9 ಶೇಕಡಾ ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಈ ಬಾರಿಯೂ ಶಿಯೋಮಿ ಅಗ್ರ ಸ್ಥಾನದಲ್ಲಿದ್ದು, ಸ್ಯಾಮ್‌ಸಂಗ್ ಮತ್ತು ಶಿಯೋಮಿ ನಡುವಿನ ಅಂತರ ಕಡಿಮೆಯಾಗಿದೆ. ಹಾಗಾದರೆ, 2019ರ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ದೇಶದ ಮೊಬೈಲ್ ಮಾರುಕಟ್ಟೆ ಹೇಗಿದೆ?, ಯಾವ ಬ್ರ್ಯಾಂಡ್‌ಗಳು ಎಷ್ಟೆಷ್ಟು ಪಾಲು ಪಡೆದಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಈಗಲೂ ಶಿಯೋಮಿ ಫಸ್ಟ್

ಈಗಲೂ ಶಿಯೋಮಿ ಫಸ್ಟ್

2019ರ ಎರಡನೇ ತ್ರೈಮಾಸಿಕದಲ್ಲಿಯೂ ಶಿಯೋಮಿ ಮೊಬೈಲ್ ಕಂಪೆನಿ ದೇಶದ ದಿಗ್ಗಜ ಮೊಬೈಲ್ ಮಾರಾಟಗಾರನಾಗಿ ಹೊರಹೊಮ್ಮಿದೆ. ಕಳೆದ ಎರಡು ವರ್ಷಗಳಿಂದಲೂ ಸ್ಯಾಮ್‌ಸಂಗ್ ಕಂಪೆನಿಯನ್ನು ಹಿಂದಿಕ್ಕುತ್ತಲೇ ಬಂದಿರುವ ಶಿಯೋಮಿಯ ಅಂತರ ಸ್ವಲ್ಪ ಕಡಿಮೆಯಾಗಿದೆ. ಈ ತ್ರೈ ಮಾಸಿಕದಲ್ಲಿ ಶಿಯೋಮಿ 10.4 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.28.3 ರಷ್ಟು ಪಾಲನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಬೂಮ್

ಸ್ಯಾಮ್‌ಸಂಗ್ ಬೂಮ್

ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಬಜೆಟ್ ಸ್ಮಾರ್ಟ್‌ಫೋನ್‌ಗಳತ್ತ ವಾಲಿದ ಸ್ಯಾಮ್‌ಸಂಗ್ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಂತಹ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಸಹ ಶಿಯೋಮಿ ಕಂಪೆಯನ್ನು ಹಿಂದಿಕ್ಕುವಲ್ಲಿ ಕಂಪೆನಿ ಸೋತಿದೆ. ಈ ತ್ರೈ ಮಾಸಿಕದಲ್ಲಿ ಸ್ಯಾಮ್‌ಸಂಗ್ 9.3 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.25.3 ರಷ್ಟು ಪಾಲನ್ನು ಹೊಂದಿದೆ.

ವಿವೊಗೆ 3ನೇ ಸ್ಥಾನ

ವಿವೊಗೆ 3ನೇ ಸ್ಥಾನ

2019ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ವಿವೋ ಮತ್ತು ರಿಯಲ್‌ ಮಿ ಕಂಪೆನಿಗಳು ಬಲವಾದ ಬೆಳವಣಿಗೆಯನ್ನು ತೋರಿಸುತ್ತಿವೆ. 2019ರ ಎರಡನೇ ತ್ರೈಮಾಸಿಕದಲ್ಲಿ ವಿವೊ ಕಂಪೆನಿ 5.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲದ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಶೇ.15.1 ರಷ್ಟು ಪಾಲನ್ನು ಹೊಂದಿರುವ ಕಂಪೆನಿ ಶೇ. 40 ಕ್ಕಿಂತಲೂ ಹೆಚ್ಚು ಬೆಳವಣಿಗೆಯನ್ನು ಸಾಧಿಸಿದೆ.

4ನೇ ಸ್ಥಾನದಲ್ಲಿ ಒಪ್ಪೊ

4ನೇ ಸ್ಥಾನದಲ್ಲಿ ಒಪ್ಪೊ

2019ರ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಒಪ್ಪೊ ಮೊಬೈಲ್ ಕಂಪೆನಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 3.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವ ಒಪ್ಪೊ ಕಂಪೆನಿ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.9.7 ರಷ್ಟು ಪಾಲನ್ನು ಹೊಂದಿದೆ. ಒಪ್ಪೊ ರೆನೊ ಮತ್ತು ಒಪ್ಪೊ ಕೆ3 ಸ್ಮಾರ್ಟ್‌ಫೋನ್‌ಗಳು ಭರ್ಜರಿ ಯಶಸ್ಸನ್ನು ಗಳಿಸಿದರೂ ಸಹ, ಒಟ್ಟಾರೆ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಬೆಳವಣಿಗೆ ಶೆ.30 ರಷ್ಟಿದೆ.

ರಿಯಲ್‌ ಮಿ ಕಿಕ್!

ರಿಯಲ್‌ ಮಿ ಕಿಕ್!

ಒಪ್ಪೊ ಮೊಬೈಲ್ ಕಂಪೆನಿಯ ಸಹ ಬ್ರ್ಯಾಂಡ್ ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ. ಕಳೆದ ತ್ರೈ ಮಾಸಿಕದಲ್ಲಿ ಕೇವಲ ಶೇ 1.2 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದ ರಿಯಲ್‌ಮಿ ಕಂಪೆನಿ ಈ ಬಾರಿ ಶೇ. 7.7 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಈ ತ್ರೈ ಮಾಸಿಕದಲ್ಲಿ ಒಟ್ಟು 2.8 ಮಿಲಿಯನ್ ರಿಯಲ್‌ಮಿ ಸ್ಮಾರ್ಟ್‌ಪೋನ್‌ಗಳು ಮಾರಾಟವಾಗಿವೆ ಎಂದು ಐಡಿಸಿ ರಿಪೋರ್ಟ್ ತಿಳಿಸಿದೆ.

ಇತರೆ ಕಂಪೆನಿಗಳು

ಇತರೆ ಕಂಪೆನಿಗಳು

ದೇಶದ ಟಾಪ್ ಐದು ಮೊಬೈಲ್ ಕಂಪೆನಿಗಳ ಮುಂದೆ ಇತರೆ ಎಲ್ಲಾ ಮೊಬೈಲ್ ಕಂಪೆನಿಗಳು ನೆಲಕಚ್ಚಿವೆ. ಇತರೆ ಎಲ್ಲಾ ಮೊಬೈಲ್ ಕಂಪೆನಿಗಳು ಸೇರಿ ಕೇವಲ 5.1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ ಎಂದು ಐಡಿಸಿ ರಿಪೋರ್ಟ್ ತಿಳಿಸಿದೆ. ಇದು ಮೊಬೈಲ್ ಮಾರುಕಟ್ಟೆಯ ಪಾಲಿನಲ್ಲಿ ಶೇ.13.9 ರಷ್ಟು ಮಾತ್ರವಾಗುತ್ತದೆ. ಕಳೆದ ತ್ರೈ ಮಾಸಿಕಕ್ಕೆ ಹೋಲಿಸಿದರೆ, ಈ ತ್ರೈ ಮಾಸಿಕದಲ್ಲಿ ಬೆಳವಣಿಗೆ ಪ್ರಮಾಣ ಶೇ.39.1 ರಷ್ಟು ಕಡಿಮೆಯಾಗಿದೆ.

Best Mobiles in India

English summary
Indian Smartphone Market Sees Record Shipments in Q2, Vivo and Realme Show Strong Growth: IDC. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X