ಜೊಲೊ ಬಿಡುಗಡೆ ಮಾಡಿದೆ ಫಿಂಗರ್‌ಪ್ರಿಂಟ್ ಫೀಚರ್‌ ಹೊಂದಿರುವ ಸ್ಮಾರ್ಟ್‌ಫೋನ್!! ಬೆಲೆ ಎಷ್ಟು?

ಭಾರತೀಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಜೊಲೊ ಇದೇ ಮೊದಲ ಭಾರಿ ಫಿಂಗ್‌ಪ್ರಿಂಟ್ ಫೀಚರ್‌ ಹೊಂದಿರುವ "ಜೊಲೊ ಇರಾ 2 ಎಕ್ಸ್" ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡಿದೆ.!!

|

ಭಾರತೀಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಜೊಲೊ, ಇದೇ ಮೊದಲ ಭಾರಿ ಫಿಂಗ್‌ಪ್ರಿಂಟ್ ಫೀಚರ್‌ ಹೊಂದಿರುವ "ಜೊಲೊ ಇರಾ 2 ಎಕ್ಸ್" ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡಿದೆ.!! ಜನವರಿ 9 ರಿಂದ ಮಾರುಕಟ್ಟೆಗೆ ಕಾಲಿಡಲಿರುವ ಜೊಲೊ ಇರಾ 2 ಎಕ್ಸ್" ಫ್ಲಿಪ್‌ಕಾರ್ಟ್‌ನಲ್ಲಿ 6,666 ರೂಗಳಿಗೆ ಎಸ್‌ಕ್ಲೂಸಿವ್ ಸೇಲ್‌ನಲ್ಲಿ ದೊರೆಯಲಿದೆ.

ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತಿ ಕಡೆಮೆ ಬೆಲೆ ಹೊಂದಿರುವ "ಜೊಲೊ ಇರಾ 2 ಎಕ್ಸ್" ಸ್ಮಾರ್ಟ್‌ಫೋನ್ 2GB ಮತ್ತು 3GB ಸಾಮರ್ಥ್ಯದ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಕಡಿಮೆ ಬೆಲೆಗೆ ಒಂದು ಉತ್ತಮ 4G ಸ್ಮಾರ್ಟ್‌ಫೊನ್ ಎನ್ನಬಹದು.

ಜಿಯೋಯಿಂದ ಮತ್ತೊಂದು ಆಫರ್!..ಜಿಯೋಗೆ ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

ಹಾಗಾದರೆ ಜೊಲೊ ಇರಾ 2 ಎಕ್ಸ್ ಸ್ಮಾರ್ಟ್‌ಫೊನ್‌ ಹೊಂದಿರುವ ಇತರೆ ಫಿಚರ್‌ಗಳು ಯಾವುವು? ವಿಶೇಷತೆಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಜೊಲೊ ಇರಾ 2 ಎಕ್ಸ್  ಸ್ಮಾರ್ಟ್‌ಫೊನ್ ವಿನ್ಯಾಸ

ಜೊಲೊ ಇರಾ 2 ಎಕ್ಸ್ ಸ್ಮಾರ್ಟ್‌ಫೊನ್ ವಿನ್ಯಾಸ

ಜೊಲೊ ಇದೇ ಮೊದಲಭಾರಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದರೂ ವಿನ್ಯಾಸದಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಪ್ಲಾಸ್ಟಿಕ್ ಮತ್ತು ಫೈಬರ್ ಬಳಸಿ ಸ್ಮಾರ್ಟ್‌ಫೋನ್ ವಿನ್ಯಾಸ ಮಾಡಲಾಗಿದೆ. ಸ್ಟೀಲ್ ಎಡ್ಜ್ ನೀಡಲಾಗಿದೆ

ಪ್ರೊಸೆಸರ್ ಯಾವುದು? ಡಿಸ್‌ಪ್ಲೇ ಹೇಗಿದೆ?

ಪ್ರೊಸೆಸರ್ ಯಾವುದು? ಡಿಸ್‌ಪ್ಲೇ ಹೇಗಿದೆ?

ಜೊಲೊ ಇರಾ 2 ಎಕ್ಸ್ ಆಂಡ್ರಾಯ್ಡ್ 6.0 ಮಾರ್ಶಮಲ್ಲೊ ಸಿಸ್ಟಮ್ ಹೊಂದಿದ್ದು ,ಐದು ಇಂಚಿನ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದೆ. ಇನ್ನು 16 ವಿವಿಧ ಬಣ್ಣಗಳನ್ನು ಹೊಂದಿದ್ದು ನೋಡಲು ಆಕರ್ಶಕವಾಗಿ ಕಾಣುತ್ತದೆ.

RAM ಮತ್ತು ROM

RAM ಮತ್ತು ROM

ಜೊಲೊ ಇರಾ 2 ಎಕ್ಸ್" ಸ್ಮಾರ್ಟ್‌ಫೋನ್ 2GB ಮತ್ತು 3GB ಸಾಮರ್ಥ್ಯದ ಎರಡು ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 16GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.

ಕ್ಯಾಮೆರಾ ಮತ್ತು ಬ್ಯಾಟರಿ.

ಕ್ಯಾಮೆರಾ ಮತ್ತು ಬ್ಯಾಟರಿ.

ಜೊಲೊ ಇರಾ 2 ಎಕ್ಸ್ 8 ಮತ್ತು 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಉತ್ತಮ ಗುಣಮಟ್ಟದ್ದಾಗಿದೆ ಎನ್ನಬಹುದು. ಇನ್ನು 2500mAh ಶಕ್ತಿಯ ರಿಮುವೆಬೆಲ್ ಬ್ಯಾಟರಿ ಹೊಂದಿದ್ದು, ಎರಡು ದಿನಗಳು ಬ್ಯಾಕ್‌ಅಪ್‌ ನೀಡುತ್ತದೆ.

Best Mobiles in India

English summary
Xolo Era 2X brings a fingerprint scanner in sub Rs. 7,000 price point. Everything else about the smartphone seems outdated. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X