ಎಕ್ಸಪೀರಿಯಾ ಟಿಪೋ vs ಗ್ಯಾಲಾಕ್ಸಿ y ಡುಯ್ಯೋಸ್

By Super
|
ಎಕ್ಸಪೀರಿಯಾ ಟಿಪೋ vs ಗ್ಯಾಲಾಕ್ಸಿ y ಡುಯ್ಯೋಸ್

ಸೋನಿ, ಡುಯ್ಯಲ್ ಸಿಮ್ ಚಾಂಪಿಯನ್ ಗೆ ಸೆಡ್ಡು ಹೊಡೆಯ ಬಲ್ಲದೆ?

ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಅಗ್ಗದ ಡ್ಯುಯಲ್ ಸಿಮ್ ಫೋನ್‌ಗಳು ಸಿಹಿ ತಿನಿಸಿನಂತೆ ಮಾರಾಟ ವಾದುದ್ದನ್ನು ಕಂಡ ಸ್ಥಳೀಯ ಫೋನ್‌ ತಯಾರಿಕಾ ಸಂಸ್ಥೆಗಳು ಸಹ ಡ್ಯುಯಲ್‌ ಸಿಮ್ ಆಂಡ್ರಾಯಿಡ್‌ ಸ್ಮಾರ್ಟ್ ಫೋನ್‌ ತಯಾರಿಕೆಗೆ ಕೈ ಹಾಕಿ ಹಲವು ಮಾದರಿಗಳನ್ನು ಪರಿಚಯಿಸಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿವೆ.

ಇತ್ತೀಚಿಗೆ ಜಪಾನ್‌ ಮೂಲದ ದಿಗ್ಗಜ ತಯಾರಿಕಾ ಸಂಸ್ಥೆ ಸೋನಿ ತನ್ನಯ ನೊತನ ಮಾದರಿಯ ಸೋನಿ ಎಕ್ಷ್ಪೀರಿಯಾ ಟಿಪೋ ಡ್ಯುಯಲ್ ಸಿಮ್‌ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಅಗ್ಗದ ಬೆಲೆಯ ಡ್ಯುಯಲ್ ಸಿಮ್ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.10.299 ಬೆಲೆಗೆ flipcart.com ನಲ್ಲಿ ಖರೀಧಿ ಮಾಡಬಹುದಾಗಿದೆ.

ಆದರೆ ಟಿಪೋ ಈಗಾಗಲೆ ಮಾರುಕಟ್ಟೆಯಲ್ಲಿ ಇರುವಂತಹ ಇತರೆ ಡ್ಯುಯಲ್ ಫೋನ್‌ಗಳೊಂದಿಗೆ ಭಾರಿ ಪೈಪೋಟಿ ಎದುರಿಸ ಬೇಕಾಗಿದೆ.

ಸ್ಯಾಮ್ಸಂಗ್‌ ಈಗಾಗಲೆ ಭಾರತೀಯ ಡ್ಯುಯಲ್ ಸಿಮ್ ಮಾರುಕಟ್ಟೆಯಲ್ಲಿ ತನ್ನಯ ಅಧಿಪತ್ಯ ಸಾಧಿಸಿದ್ದು ಸ್ಪೈಸ್ ಹಾಗೂ ಮೈಕ್ರೋಮಾಕ್ಸ್ ಸಂಸ್ಥೆಗಳನ್ನು ಹಿಂದಿಕ್ಕಿದೆ.

ಗ್ಯಾಲಾಕ್ಸಿ y ನ ಯಶಸ್ಸಿನ ಬೆನ್ನಲ್ಲೇ ರೂ.8.490 ಬೆಲೆಯೊಂದಿಗೆ ಬಿಡುಗಡೆ ಮಾಡಲಾದ ಗ್ಯಾಲಾಕ್ಸಿ y ಡ್ಯುಯೋ ಈಗ ಗ್ರಾಹಕರ ಅತ್ಯಂತ ಬೇಡಿಕೆಯ ಫೋನ್‌ ಆಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಆದರೆ ವಿಮರ್ಶಕರುಗಳ ಪ್ರಕಾರ ಸೋನಿ ಎಕ್ಷ್ಪೀರಿಯಾ ಟಿಪೋ ಡ್ಯುಯೋ, ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ y ಡ್ಯುಯೋನ ಅಧಿಪತ್ಯವನ್ನು ಕಸಿದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಹಾಗಿದ್ದಲ್ಲಿ ಬನ್ನಿ ಒಮ್ಮೆ ಎರಡೂ ಫೋನ್‌ಗಳ ವಿಶೇಷತೆಗಳ ಕಡೆ ಒಂದು ಇಣುಕುಹಾಕಿ ಎರಡರ ನಡುವಿನ ವ್ಯತ್ಯಾಸ ಏನೆಂಬುದನ್ನು ತಿಳಿದುಕೊಳ್ಳೋಣ.

ದರ್ಶಕ ಹಾಗೂ ಅಳತೆ: ಗ್ಯಾಲಾಕ್ಸಿ y ಡುಯ್ಯೋಸ್ ನ ಸುತ್ತಳತೆ 109.8 x 60 x 12 mm ಹಾಗೂ 109 ಗ್ರಾಂ ತೂಕ ಕ್ಕಿಂತಲು ಎಕ್ಷ್ಪೀರಿಯಾ ಟಿಪೋ 103x57x13 mm ಸುತ್ತಳತೆ 99.4 ಗ್ರಾಂ ತೂಕಹೊಂದಿದ್ದು ಹಗುರ ಹಾಗೂ ತೆಳುವಾಗಿದೆ.

3.2 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌ ದರ್ಶಕದೊಂದಿಗೆ 320 x 480 ಸಾಮರ್ಥ್ಯದ ಪಿಕ್ಸೆಲ್ ರೆಸಲ್ಯೂಷನ್ ಹೊಂದಿರುವ ಎಕ್ಷ್ಪೀರಿಯಾ ಟಿಪೋ ಡ್ಯುಯಲ್ 188 ppi ಪಿಕ್ಸೆಲ್‌ ಸಾಂದ್ರತೆ ಹೊಂದಿದೆ. ಇದಲ್ಲದೆ ಸ್ಕ್ರಾಚೆಸ್‌ ತಡೆಯಬಲ್ಲ ಗಾಜಿನ ರಕ್ಷಣೆಯನ್ನು ಸಹ ಹೊಂದಿದೆ. ಮತ್ತೊಂದೆಡೆ ನೊಡಿದಲ್ಲಿ ಗ್ಯಾಲಾಕ್ಸಿ y ಡುಯ್ಯೋಸ್ 3.14 ಸಾಮರ್ಥ್ಯದ ಟಚ್‌ಸ್ಕ್ರೀನ್‌ ದರ್ಶಕದೊಂದಿಗೆ 240 x 320 ಪಿಕ್ಸೆಲ್ ರೆಸಲ್ಯೂಷನ್ ಹಾಗೂ 127 ppi ಪಿಕ್ಸೆಲ್‌ ಸಾಂದ್ರತೆಯಿಂದ ಕೂಡಿದೆ.

ಪ್ರೋಸೆಸರ್‌: ಎಕ್ಷ್ಪೀರಿಯಾ ಟಿಪೋ ಡ್ಯುಯಲ್ 800MHz ಕಾರ್ಟೆಕ್ಸ A5 ಪ್ರೋಸೆಸಾರ್‌ ಹೊಂದಿದ್ದರೆ, ಗ್ಯಾಲಾಕ್ಸಿ y ಡುಯ್ಯೋಸ್ ಅದಕ್ಕಿಂತಲು ಸ್ವಲ್ಪ ಉತ್ತಮವಾದ 832MHz ಪ್ರೋಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಈ ವಿಭಾಗದಲ್ಲಿ ಗ್ಯಾಲಾಕ್ಸಿ y ಡುಯ್ಯೋಸ್ ಆ೦ಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸಿದರೆ, ಎಕ್ಷ್ಪೀರಿಯಾ ಟಿಪೋ ಡ್ಯುಯಲ್ ಅದಕ್ಕಿಂತಲೂ ಅತ್ಯುತ್ತಮವಾದ ಆ೦ಡ್ರಾಯ್ಡ್ 4.0.3 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಕ್ಯಾಮೆರಾ: ಈ ವಿಚಾರದಲ್ಲಿ ಎರಡೂ ಫೋನ್‌ಗಳಲ್ಲಿಯೂ 3.15MP ಕ್ಯಾಮೆರಾ ಹೊಂದಿದ್ದು geo-taggig ವ್ಯವಸ್ಥೆ ಒಳಗೊಂಡಿದೆ. ಹಾಗೂ ಎರಡೂ ಫೋನ್‌ಗಳಲ್ಲಿಯೂ ಮುಂಬದಿಯ ಕ್ಯಾಮೆರಾಗಳಿಲ್ಲ.

ಮೆಮೊರಿ: ಎಕ್ಷ್ಪೀರಿಯಾ ಟಿಪೋ ಡ್ಯುಯಲ್ 2 GB ಆಂತರಿಕ ಮೆಮೊರಿಯೊಂದಿಗೆ 512 MB RAM ಒಳಗೊಂಡಿದ್ದರೆ, ಗ್ಯಾಲಾಕ್ಸಿ y ಡುಯ್ಯೋಸ್ 160MB ಆಂತರಿಕ ಮೆಮೊರಿ ಹಾಗೂ 512 MB RAM ನಿಂದ ಕೂಡಿದ್ದು ಎರಡೂ ಫೋನ್‌ಗಳಲ್ಲಿ ಮೈಕ್ರೋ SD ಕಾರ್ಡ್ ಅಳವಡಿಸಲು ಅವಕಾಶವಿದ್ದು ಮೆಮೊರಿಯನ್ನು 32 GB ವರೆಗು ವಿಸ್ತರಿಸಿಕೊಳ್ಳಬಹುದಾಗಿದೆ.

ಕನ್ನೆಕ್ಟಿವಿಟಿ: ಸಂಪರ್ಕ ಕುರಿತಂತೆ ಎರಡೂ ಹ್ಯಾಂಡ್‌ಸೆಟ್‌ಗಳಲ್ಲಿ ಬ್ಲೂ ಟೂತ್‌ 2.1 ಒಳಗೊಂಡಂತೆ A2DP, 3G ಹಾಗು 7.2 Mbps HSDPA ಹಾಗೂ 5.76 Mbps HSUPA ಸೇರಿದಂತೆ WI-fI ಮತ್ತು ಮೈಕ್ರೋ usb 2.0 ನಂತಹ ವಿಶೇಷತೆಗಳಿಂದ ಕೂಡಿದೆ.

ಬ್ಯಾಟರಿ: ಎಕ್ಷ್ಪೀರಿಯಾ ಟಿಪೋ ಡ್ಯುಯಲ್ 1,500 mAh Li-ion ಬ್ಯಾಟರಿ ಹೊಂದಿದ್ದು 6 ಗಂಟೆಗಳ ಟಾಕ್‌ಟೈಮ್ ಹಾಗೂsmartphones, 360 ಗಂಟೆಗಳ ಸ್ಟ್ಯಾಂಡ್‌ ಬೈ ನೀಡಬಲ್ಲದು ಆದರೆ ಗ್ಯಾಲಾಕ್ಸಿ y ಡುಯ್ಯೋಸ್ 1,300 mAh Li-ion ಬ್ಯಾಟರಿ ಹೊಂದಿದ್ದು 9 ಗಂಟೆಗಳ ಟಾಕ್‌ಟೈಮ್ ಹಾಗೂ 360 ಸ್ಟ್ಯಾಂಡ್‌ ಬೈ ನೀಡುತ್ತದೆ.

ತೀರ್ಪು: ನೀವು ಗೂಗಲ್‌ ಆ೦ಡ್ರಾಯ್ಡ್ OS ಚಾಲಿತ ಮೊಬೈಲ್ ಕೊಳ್ಳುವ ಆಲೋಚನೆಯಲ್ಲಿದ್ದರೆ ICS ನ ಪ್ರಕಾರ ಸೋನಿ ಎಕ್ಷ್ಪೀರಿಯಾ ಟಿಪೋ ಡ್ಯುಯಲ್ ಉತ್ತಮ ಆಯ್ಕೆಯಾಗಿದೆ. ಆಪರೇಟಿಂಗ್‌ ಸಿಸ್ಟಂ ಹೊರತು ಪಡಿಸಿದರೆ ಎರಡೂ ಫೋನ್‌ಗಳಲ್ಲಿ ಅಂತಹ ವ್ಯತ್ಯಾಸಗಳೇನು ಇಲ್ಲ. ಅಂದಹಾಗೆ ಎರಡೂ ಫೊನ್‌ಗಳಲ್ಲಿ ಪ್ಲಾಷ್‌ ಲೈಟ್‌, ವೀಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ವ್ಯವಸ್ಥೆ, ಧೀರ್ಘ ಕಾಲದ ಬ್ಯಾಟರಿ ಬ್ಯಾಕಪ್‌ ಹಾಗೂ ಮಲ್ಟಿಕೋರ್‌ ಪ್ರೋಸೆಸರ್‌ ನಂತಹ ಕೊರತೆ ಹೊಂದಿವೆ.

ಗ್ರಾಹಕರಿಂದ ಈಗಾಗಲೇ ಪ್ರಶಂಸೆಗೆ ಪಾತ್ರವಾಗಿರುವ ಗೆಲಾಕ್ಸಿ y ಡ್ಯುಯೋಸ್ ಬಹು ಬೇಡಿಕೆಯ ಫೋನ್ ಆಗಿದ್ದರೂ ಕೂಡ ಕೆಲ ಗ್ರಾಹಕರು ಗೆಲಾಕ್ಸಿ y ಗೆ ಹೋಲಿಸಿದರೆ ಕೇವಲ್ ಡ್ಯುಯಲ್ ಸಿಮ್ ಹೊರತು ಪಡಿಸಿದರೆ ಬೇರೇನು ವಿಶೇಷತೆಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸೋನಿ ಸಂಸ್ಥೆಯ ನೂತನ ಎಕ್ಷ್ಪೀರಿಯಾ ಟಿಪೋ ಡ್ಯುಯಲ್ ವಿಷಯಕ್ಕೆ ಬಂದಲ್ಲಿ ಸದ್ಯಕ್ಕೆ ಪ್ರೀ ಆರ್ಡರ್‌ನಲ್ಲಿ ಲಭ್ಯವಿದ್ದು ಮಾರುಕಟ್ಟೆಗೆ ಬಿಡುಗಡೆ ಯಾಗಬೇಕಿದೆ. ಆದರೂ ಸಹ ಸ್ಮಾರ್ಟ್ ಫೋನ್ ಖರೀದಿಸುವ ಮೊದಲು ತಜ್ಞರೊಬ್ಬರ ಸಲಹೆ ಪಡೆಯುವುದು ಉತ್ತಮ.

Read in English

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X