ಮೈಕ್ರೋಮಾಕ್ಸ್-ಏರ್‌ಟೆಲ್ ನಿಂದ ಬಂಪರ್ ಆಫರ್: ಒಂದು ವರ್ಷ ಅನ್‌ಲಿಮಿಟೆಡ್ 4G ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್
ಮೇ 17 ರಂದು ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಅನ್ನು ಮತ್ತೇ ಬಿಡುಗಡೆ ಮಾಡಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ತನ್ನ ಹಿಟ್ ಸ್ಮಾರ್ಟ್‌ಫೋನ್ ಅನ್ನು ನೋಕಿಯಾ ಮಾದರಿಯಲ್ಲಿ ಮೈಕ್ರೋಮಾಕ್ಸ್ ಮತ್ತೇ ಬಿಡುಗಡೆ ಮಾಡಲು ಮುಂದಾಗಿದೆ. ಈ ಫೋನ್‌ನನ್ನು ಖರೀದಿಸಿದವರಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್ ಘೋಷಣೆಯಾಗಿದೆ.

ಮೇ 17 ರಂದು ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ರೂ. 11,999 ಗಳಿಗೆ ದೊರೆಯಲಿರುವ ಈ ಫೋನಿನೊಂದಿಗೆ ಏರ್‌ಟೆಲ್ ಭರ್ಜರಿ ಆಫರ್ ನೀಡಲಿದ್ದು, ಒಂದು ವರ್ಷ ಪ್ರತಿ ನಿತ್ಯ 4G ವೇಗದ 1 GB ಡೇಟಾ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ದೊರೆಯುತ್ತಿದೆ.

ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಜೊತೆಗೆ ಏರ್‌ಟೆಲ್:
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ನೊಂದಿಗೆ ಏರ್‌ಟೆಲ್ 4G ಸಿಮ್ ಪ್ರೀ ಬಿಲ್ಡ್ ಆಗಿ ಬರಲಿದೆ. ಫೋನ್ ಖರೀದಿಸಿದವರಿಗೆ ಸಖತ್ ಆಫರ್ ನೀಡಬೇಕು ಹಾಗೂ ಮೊಬೈಲ್ ಖರೀದಿಸಲು ಈ ಆಫರ್ ಸಹ ಒಂದು ಕಾರಣವಾಗಬೇಕು ಎಂದು ಏರ್‌ಟೆಲ್ - ಮೈಕ್ರೋಮಾಕ್ಸ್ ಒಪ್ಪಂದಕ್ಕೆ ಮುಂದಾಗಿವೆ.

ಮೈಕ್ರೋಮಾಕ್ಸ್ ಕ್ಯಾನ್ವಸ್ 2 ನಲ್ಲಿ ಗೊಲೊರಿಲ್ಲ ಗ್ಲಾಸ್:
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ನಲ್ಲಿ ಪರದೆಗೆ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ಒದಗಿಸಲಾಗಿದ್ದು, ಈ ಹಿಂದಿನ ಫೋನ್‌ಗಳಲ್ಲಿ ಇದು ಇರಲಿಲ್ಲ ಎನ್ನಲಾಗಿದೆ. 5 ಇಂಚಿನ ಪರದೆಯೂ ಈ ಫೋನಿನಲ್ಲಿದೆ.

ಮೈಕ್ರೋಮಾಕ್ಸ್ ಕ್ಯಾನ್ವಸ್ 2ನಲ್ಲಿದೆ ನ್ಯಾಗಾ:
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ನಲ್ಲಿ ಆಂಡ್ರಾಯ್ಡ್ ನ್ಯಾಗಾ ಇರಲಿದ್ದು, ಈ ಹಿಂದಿನ ಫೋನಿನಲ್ಲಿ ಈ ಆಯ್ಕೆ ಇರಲಿಲ್ಲ. ರೀ ಲಾಂಚ್ ಫೋನಿನಲ್ಲಿ ನೂತನ ಆಂಡ್ರಾಯ್ಡ್ ನೀಡಲಾಗಿದೆ.

ಮೈಕ್ರೋಮಾಕ್ಸ್ ಕ್ಯಾನ್ವಸ್ 2ನಲ್ಲಿದೆ 3GB RAM:
ಮೈಕ್ರೋಮಾಕ್ಸ್ ಕ್ಯಾನ್ವಸ್ 2 ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 3GB RAM ನೀಡಲಾಗಿದೆ. 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅಳವಡಿಸಲಾಗಿದೆ. ಅಲ್ಲದೇ 16 GB ಇಂಟರ್ನಲ್ ಮೆಮೊರಿ ಇದ್ದು, 64GB ವರೆಗೂ ವಿಸ್ತರಿಸುವ ಅವಕಾಶವಿದೆ.

ಮೈಕ್ರೋಮಾಕ್ಸ್ ಕ್ಯಾನ್ವಸ್ 2ನಲ್ಲಿ 13 MP ಕ್ಯಾಮೆರಾ:
ಮೈಕ್ರೋಮಾಕ್ಸ್ ಕ್ಯಾನ್ವಸ್ 2ನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದರೊಂದಿಗೆ LED ಫ್ಲಾಷ್ ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಕೊಡಲಾಗಿದೆ.


Click it and Unblock the Notifications








