5000 mAh ಬ್ಯಾಟರಿ ಮತ್ತು 200 GB SD ಕಾರ್ಡ್ ಸಾಮಾರ್ಥ್ಯದ ನುಬಿಯಾ ಸ್ಮಾರ್ಟ್‌ಪೋನ್

|

ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ದಿನಕ್ಕೊಂದು ಹೊಸ ಪೋನ್ ಗಳು ಆಗಮಿಸುತ್ತಿದ್ದು, ಅದರಲ್ಲಿಯೂ ವಿದೇಶಿಯ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಗ್ರಾಹಕರನ್ನು ಗಳಿಸುತ್ತಿವೆ. ಈ ಹಿನ್ನಲೆಯಲ್ಲಿ ಒಬ್ಬರ ಹಿಂದೆ ಒಬ್ಬೊಬರಾಗಿ ದೇಶಿಯ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಈಗ ಈ ಸರದಿ ZET ಬ್ರಾಂಡ್‌ನದ್ದಾಗಿದೆ.

5000 mAh ಬ್ಯಾಟರಿ ಮತ್ತು 200 GB ಸಾಮಾರ್ಥ್ಯದ ಸ್ಮಾರ್ಟ್‌ಪೋನ್

2016ರ ಟಾಪ್ 4G ಡೇಟಾ ಪ್ಲಾನ್ ಮತ್ತು ಕಾಲಿಂಗ್ ಪ್ಲಾನ್ ಗಳು..!

ಮೊಬೈಲ್ ಬಿಡಿಭಾಗಗಳು, ಮೊಬೈಲ್ ಪೂರಕ ಭಾಗಗಳು ಮತ್ತು ಸಣ್ಣ ಪುಟ್ಟ ಮೊಬೈಲ್ ತಯಾರು ಮಾಡುತ್ತಿದ್ದ ZET ಈ ಬಾರಿ ನುಬಿಯಾ ಎನ್ನುವ ತನ್ನದೇ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಂದಿನಿಂದ ಆನ್‌ಲೈನ್‌ನಲ್ಲಿ ಮಾರಾಟವನ್ನು ಆರಂಭಿಸುತ್ತಿದೆ.

ನುಬಿಯಾ ಸ್ಮಾರ್ಟ್‌ಪೋನ್‌ಗಳು

ನುಬಿಯಾ ಸ್ಮಾರ್ಟ್‌ಪೋನ್‌ಗಳು

ಸದ್ಯ ZET Nubia Z11 ಮತ್ತು Nubia N1 ಎಂಬ ಎರಡು ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸೋಮವಾರದಿಂದ ಆನ್‌ಲೈನ್ ಮಾರುಕಟ್ಟೆಯಲ್ಲಿ ಸೆಲ್ ಆರಂಭವಾಗುತ್ತಿದ್ದು, ಟಾಪ್ ಎಂಡ್ ಶ್ರೇಣಿಯ Nubia Z11 ಪೋನ್ 29,999 ರೂ.ಗಳಿಗೆ ಲಭ್ಯವಿದ್ದರೆ, ಆರಂಭಿಕ ಶ್ರೇಣಿಯ Nubia N1 ಪೋನ್ 11,999 ರೂಗಳಿಗೆ ಮಾರಾಟವಾಗುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nubia Z11 ವಿಶೇಷಗಳು:

Nubia Z11 ವಿಶೇಷಗಳು:

Nubia Z11 ಟಾಪ್ ಎಂಡ್ ಸ್ಮಾರ್ಟ್‌ಪೋನ್‌ ಆಗಿದ್ದು, ಸ್ನಾಪ್‌ಡ್ರಾಗನ್ 830 SoC ಪ್ರೋಸೆಸರ್ ನೊಂದಿಗೆ, 6 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಸಾಮಾರ್ಥ್ಯವನ್ನು ಹೊಂದಿದ್ದು, 200 GB ಮೊಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ ಸಹ ಇದೆ.


ಈ ಪೋನು ಆಂಡ್ರಾಯ್ಡ್ 6.0 ಮತ್ತು UI 4.0 ತಂತ್ರಾಂಶದಲ್ಲಿ ಕಾರ್ಯ ನಿರ್ವಹಿಸಲಿದ್ದು, ಹೈಬ್ರಿಡ್ ಡುಯಲ್ ನ್ಯಾನೋ ಸಿಮ್ ಹಾಕಬಹುದಾಗಿದೆ. ಉತ್ತಮ ಗುಣಮಟ್ಟದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, ಗುಣಮಟ್ಟದ ವಿಡಿಯೋ ವಿಕ್ಷಣೆಗೆ 2.5D ಡಿಸ್‌ಪ್ಲೇ ಇದೆ.

16 MP ಹಿಂಬದಿ ಕ್ಯಾಮೆರಾದ ಜೊತೆಗೆ ಡುಯಲ್ ಫ್ಲಾಷ್, ಮುಂಭಾಗದಲ್ಲಿ 8MP ವೈಡ್ ಆಂಗಲ್ ಕ್ಯಾಮೆರಾವನ್ನು ಈ ಪೋನ್ ಹೊಂದಿದೆ. 4G ಗೆ ಸಪೋರ್ಟ್ ಮಾಡುವ ಈ ಪೋನ್ 3000 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.

Nubia N1 ವಿಶೇಷತೆಗಳು:

Nubia N1 ವಿಶೇಷತೆಗಳು:

Nubia N1 ಪೋನ್ ಪವರ್ ಫುಲ್ ಬ್ಯಾಟರಿ ಹೊಂದಿರುವ ಪೋನ್ ಆಗಿದ್ದು, 5000 mAh ಸಾಮಾರ್ಥ್ಯದ ಬ್ಯಾಟರಿ ಈ ಪೋನಿನ ಹೈಲೈಟ್. ದೀರ್ಘಕಾಲ ಬ್ಯಾಟರಿ ಬಾಳಿಕೆ ಭರವಸೆ ಈ ಪೋನ್ ಹೊಂದಲು ಪ್ರಮುಖ ಕಾರಣವಾಗಬಹುದು. ಅಲ್ಲದೇ ಈ ಪೋನ್ ವೇಗದ ಫಿಂಗರ್ ಫ್ರಿಂಟ್ ಸ್ಕ್ಯಾನರ್‌ ಇದ್ದು, ವೇಗವಾಗಿ ಸ್ಕ್ರಿನ್ ಲಾಕ್ ತೆರೆಯುತ್ತದೆ ಎಂದು ಕಂಪನಿ ಹೇಳಿದೆ.

ಈ ಪೋನಿನಲ್ಲಿ 5.5 ಇಂಚಿನ Full HD ಡಿಸ್‌ಪ್ಲೇ ಇದ್ದು, ವೇಗದ ಕಾರ್ಯ ನಿರ್ವಹಣೆಗೆ 1.8 GHz ವೇಗದ ಪ್ರೊಸೆಸರ್, 3GB RAM, 64 GB ಇಂಟರ್ನಲ್ ಮೆಮೊರಿ ಇದೆ. ಅಲ್ಲದೇ 128 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗದೆ.

4G ಸಪೋರ್ಟ್ ಮಾಡುವ ಈ ಪೋನ್‌ನಲ್ಲಿ ಹಿಂಬದಿಯ ಮತ್ತು ಮುಂಬದಿ ಎರಡು ಕಡೆ 13 MP ಕ್ಯಾಮರೆಗಳಿದ್ದು, ಫ್ಲಾಷ್ ಲೈಟ್ ಸಹ ಇದೆ. ಸ್ಮಾರ್ಟ್ ಫಿಲ್ಟರ್ ಗಳಲ್ಲಿದ್ದು, ಉತ್ತಮ ಸೆಲ್ಪಿ ತೆಗೆಯಲು ಉತ್ತಮ ಪೋನ್ ಇದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
ZTE brand Nubia Release two new smartphones in India earlier this month, the Nubia Z11 and Nubia N1. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X