ಫಿಲಿಪ್ಸ್ ನಿಂದ ಸರಿಸಾಟಿಯಿಲ್ಲದ ಮ್ಯೂಸಿಕ್ ಪ್ಲೇಯರ್

Posted By: Staff

ಫಿಲಿಪ್ಸ್ ನಿಂದ ಸರಿಸಾಟಿಯಿಲ್ಲದ ಮ್ಯೂಸಿಕ್ ಪ್ಲೇಯರ್
ದಶಕಗಳ ಹಿಂದೆ ಸುಪ್ರಸಿದ್ಧ ಕಂಪೆನಿಯಾಗಿದ್ದ ಫಿಲಿಪ್ಸ್ ಈಗ ಮಾರುಕಟ್ಟೆಯ ಗ್ಯಾಜೆಟ್ಸ್ ಸ್ಪರ್ಧೆಗೆ ಮತ್ತೊಮ್ಮೆ ಧುಮುಕಲಿದೆ. ಈಗ ಹೊಸ ಮೊಬೈಲ್ ಹಾಗೂ ಮ್ಯೂಸಿಕ್ ಸಿಸ್ಟಮ್ ಬಿಡುಗಡೆ ಮಾಡುವ ಮೂಲಕ ಅದು ಸದ್ದು-ಸುದ್ದಿಯಲ್ಲಿ ತೊಡಗಿದೆ.

ವಿಶೇಷವೆಂದರೆ ಫಿಲಿಪ್ಸ್ ನಿಂದ ಬಿಡುಗಡೆಗೆ ಸಜ್ಜಾಗಿರುವ ಈ ಹೊಸ ಮ್ಯೂಸಿಕ್ ಪ್ಲೇಯರ್ ಆಂಡ್ರಾಯ್ಡ್ ಬ್ಯಾಕಪ್ ಹೊಂದಿದೆ. ಇದನ್ನು ಗೋ ಗೇರ್ ಲೈನ್ ಎಂದು ಕರೆಯಲಾಗಿದೆ. ಈ ಆಂಡ್ರಾಯ್ಡ್ ಬ್ಯಾಕಪ್ ಫಿಲಿಪ್ಸ್ ಗೆ ಗೋ ಗೇರ್ ಲೈನ್ ಆಫ್ ಪ್ರಾಡಕ್ಟ್ ಆಗಿದೆ. ಗೋ ಗೇರ್ ಕನೆಕ್ಟ್ 3 ಇದು ಆಂಡ್ರಾಯ್ಡ್ ಬೇಸ್ಡ್ ಮೀಡಿಯಾ ಪ್ಲೇಯರ್ ಆಗಿದ್ದು ಇದು ಹೊಸ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ನ 2.3 ಆವೃತ್ತಿಯಾಗಿದೆ.

ಇದರ ಜೊತೆ ವೈ-ಫೈ ಕೂಡ ಇದ್ದು ಇದು ಸಮಸ್ಯೆ ರಹಿತ ಡಾಟಾ ಶೇರಿಂಗ್ ಹಾಗೂ ವೇಗವಾದ ಅಂತರ್ಜಾಲ ನಿರ್ವಹಿಸುತ್ತದೆ. ಇದರಲ್ಲಿ 3.2 ಇಂಚುಗಳ ಕೆಪೆಕ್ಟಿವ್ ಟಚ್ ಸ್ಕ್ರೀನ್ ಇದ್ದು ಹೈ ಡೆಫನಿಷನ್ 720p ಇದರಲ್ಲಿ ಲಭ್ಯ. ಇದರಲ್ಲಿ ಪಿಸಿ ಸಾಪ್ಟ್ ವೇರ್ ಇದ್ದು ಫಿಲಿಪ್ಸ್ ಸಾಂಗ್ ಬರ್ಡ್ ನಿಂದ ತಡೆರಹಿತ ಹಾಗೂ ಉತ್ಕೃಷ್ಟ ಸಂಗೀತ ಸಿಗಲಿದೆ.

ಇದರಲ್ಲಿ DLNA, ಸಿಂಪಲ್ ಶೇರ್, ಹಾಗೂ ಡಿಜಿಟಲ್ ಕ್ಯಾಮೆರಾ ಮತ್ತು ಫೋಟೋ ಫ್ರೇಮ್ ಲಭ್ಯ. ಇದು ಸದ್ಯ ಬಿಡುಗಡೆಯ ಹಂತದಲ್ಲಿದೆಯಾದ್ದರಿಂದ ಬೆಲೆ ಇನ್ನಷ್ಟೇ ನಿಗದಿಯಾಗಬೇಕಾಗಿದೆ. ಅಲ್ಲಿಯವರೆಗೆ ಕಾಯುವುದೊಂದೇ ದಾರಿ, ಆಮೇಲೆ ಸಂಗೀತ ಸ್ವರ್ಗದಲ್ಲಿ ತೇಲಾಡಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot