ಜಗತ್ತಿನ ವಿಸ್ಮಯಗಳಲ್ಲೊಂದು ಈ ಮ್ಯೂಸಿಕ್ ಸಿಸ್ಟಮ್

Posted By: Staff

ಜಗತ್ತಿನ ವಿಸ್ಮಯಗಳಲ್ಲೊಂದು ಈ ಮ್ಯೂಸಿಕ್ ಸಿಸ್ಟಮ್
ಈಗಾಗಲೇ ಜಗತ್ತಿನ 33 ದೇಶಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿರುವ ಮ್ಯೂಸಿಕ್ ಸಿಸ್ಟಮ್ ಇದೀಗ ಭಾರತಕ್ಕೂ ಬರುತ್ತಿದೆ. ಇದರ ಹೆಸರು ಡಿ-ಲಿಂಕ್ ಬಾಕ್ಸೀ ಬಾಕ್ಸ್ ಡಿಎಸ್ ಎಮ್-380. ಇದು ಡಿ-ಲಿಂಕ್ ಕಂಪೆನಿಯ ಕೊಡುಗೆ. ನವೆಂಬರ್ 2010ರಲ್ಲಿ ಬಿಡುಗಡೆಯಾಗಿ 33 ದೇಶಗಳನ್ನು ಸುತ್ತಿರುವ ಈ ಹೊಸ ಸಂಗೀತ ಸಾಧನ.

ಇದರಲ್ಲಿ ಏನೇನು ವಿಶೇಷಗಳಿವೆ ನೋಡೋಣ ಬನ್ನಿ. ಹೆಸರು ವಿಚಿತ್ರವಾಗಿ ಅನ್ನಿಸಿದರೂ ಇದು ಸಾಕಷ್ಟು ಕೂಲಾಗಿ ಮುದ್ದುಮುದ್ದಾಗಿರುವ ಡಿವೈಸ್. ಇದು ಟಿವಿಯಲ್ಲಿ ಇಂಟರ್ನೆಟ್ ಟಿವಿ ಮತ್ತು ವಿಡಿಯೋಸ್ ಗಳನ್ನು ಒಂದುಗೂಡಿಸುವ ಸಾಧನ. ಅಂದರೆ ಸಾಮಾಜಿಕ ತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ ಯೂಸರ್ಸ್ ಟಿವಿಯಲ್ಲಿ ಕಾಣಿಸಿಕೊಳ್ಳಲು ಸಮರ್ಥವಾಗಿದೆ.

ಈ ಬಾಕ್ಸೀ, ಬಾಕ್ಸೀ ಮೀಡಿಯಾ ಸೆಂಟರ್ ಸಾಪ್ಟ್ ವೇರ್ ನಿಂದ ಪ್ರೀ ಇನ್ ಸ್ಟಾಲ್ಡ್ ಆಗಿದೆ. ಚಿಪ್ ಪ್ಲಾಟ್ ಫಾರ್ಮ್ ನಲ್ಲಿರುವ ಇದು ಇಂಟೆಲ್ CE4110 ಹಾರ್ಡ್ ವೇರ್ ಆಗಿದೆ. ಇದರಲ್ಲಿ 1.2 GHz ಫ್ರೀಕ್ವೆನ್ಸ್ಇ ಇರುವ CPU, ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್, 1 GB RAM, NAND ಫ್ಲಾಶ್, 1 GB ಮೆಮೊರಿ, HDMI ಔಟ್ ಪುಟ್, HD ವಿಡಿಯೋಸ್, An S/PDIF ಆಪ್ಟಿಕಲ್ ಡಿಜಿಟಲ್ ಆಡಿಯೋ ಕನೆಕ್ಟರ್, ಸ್ಟಿರಿಯೋ ಆಡಿಯೋ RCA ಕನೆಕ್ಟರ್ ಇದೆ.

ವೈ-ಫೈ, 100 Mbps ವೈರ್, QWERTY ಸ್ಟಾಂಡರ್ಡ್ ಕೀ ಪ್ಯಾಡ್, SD ಕಾರ್ಡ್ ಸೌಲಭ್ಯ, USB ರಿಸೀವರ್, ಫಾರ್ಮೆಟ್ ಗಳಾದ MKV and MOV), DIVX, WMV, MPEG-1, ಮತ್ತು MPEG-2, ಸಂಗೀತ ಹಾಗೂ ಚಿತ್ರಗಳ ಫಾರ್ಮೆಟ್ಸ್, ಹೀಗೆ ಸಕಲ ಸೌಲಭ್ಯಗಳೂ ಇದರಲ್ಲಿವೆ.

ಅಬ್ಬಾ ಎನಿಸುವಷ್ಟು ವಿಶೇಷತೆಗಳು ಹಾಗೂ ಆಹಾ ಎನಿಸುವ ರೂಪ ಇದಕ್ಕಿದ್ದರೂ ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ರು. 14,000.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot