Subscribe to Gizbot

ಹೊಸ ಸ್ಪೀಕರ್ ಸೆನ್ ಹೀಸರ್ ಚೆನ್ನಾಗಿದೆ ನೋಡ್ರಿ!

Posted By: Super

ಹೊಸ ಸ್ಪೀಕರ್ ಸೆನ್ ಹೀಸರ್ ಚೆನ್ನಾಗಿದೆ ನೋಡ್ರಿ!
ಇಲ್ಲೊಂದು ಹೊಸ ಸಂಗೀತ ಸಾಧನವಿದೆ ಹೆಸರು ಸೆನ್ ಹೀಸರ್ HD 800. ಇದು ಸೂಪರ್ ಸಂಗೀತ ಸಾಧನ ಎನಿಸಿಕೊಳ್ಳಲಿದೆ. ಈಗಾಗಲೇ ಭಾರತೀಯ

ಮಾರುಕಟ್ಟೆಯನ್ನು ಪ್ರವೇಶಿಸಿರುವ ಇದು ಯಾವ ರೀತಿಯಲ್ಲಿ ವಿಶೇಷವಾಗಿದೆ ಎಂಬುದರ ವಿವರಣೆ ಕೆಳಗಿದೆ ನೋಡಿ...

ಮೊದಲನೆಯದಾಗಿ HD ಸಿರೀಸ್ ಆಗಿರುವ ಇದು HD 800 ಎಂದು ಹೆಸರಿಸಲಾಗಿರುವ ಡಿವೈಸ್. ಇದಕ್ಕಿಂತ ಮೊದಲು ಬಂದಿದ್ದ HD 650 ಕೂಡ ಸಾಕಷ್ಟು

ಪ್ರಸಿದ್ಧವಾಗಿತ್ತು. ಇದರಲ್ಲಿರುವ ಇಯರ್ ಫಿಸ್ ಮೈಕ್ರೋ ಫೈಬರ್ ನಿಂದ ಮಾಡಲಾಗಿದ್ದು ತುಂಬಾ ಸೂಕ್ಷ್ಮ ಹಾಗೂ ಚೆಂದದ ವಿನ್ಯಾಸ ಹೊಂದಿದೆ. 3.5 mm

ಕೇಬಲ್ ಇದರಲ್ಲಿವೆ. ಆದರೆ ಇದಕ್ಕೆ 6.3 mm ಕೇಬಲ್ ಇದ್ದರೆ ಚೆನ್ನಾಗಿತ್ತು ಎಂಬುದು ಎಲ್ಲರ ಅಭಿಪ್ರಾಯ.

ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು. 80,000. ಸಾಕಷ್ಟು ಆಧುನಿಕವಾಗಿರುವ ಇದು ಖಂಡಿತವಾಗಿಯೂ ಗ್ರಾಹಕರನ್ನು ಸೆಳೆಯಲಿದೆ. ಜಗತ್ತಿನಾದ್ಯಂತ

ಈಗಾಗಲೇ ಪ್ರಸಿದ್ಧವಾಗುವ ಎಲ್ಲ ಲಕ್ಷಣಗಳು ಈ ಸಂಗೀತಸಾಧನದಲ್ಲಿ ಇವೆ. ಇನ್ನು ನಾವು ಹೇಳಬೇಕಾಗಿರುವುದು ಕೇವಲ ಜೈ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot