ಆಪಲ್ ಏರ್ ಫೋನ್ ಸ್ಪೀಕರ್ ಸದ್ಯದಲ್ಲೇ ಮಾರುಕಟ್ಟೆಗೆ

Posted By: Staff

ಆಪಲ್ ಏರ್ ಫೋನ್ ಸ್ಪೀಕರ್ ಸದ್ಯದಲ್ಲೇ ಮಾರುಕಟ್ಟೆಗೆ
ಆಪಲ್ ಕಂಪೆನಿ ಜಗತ್ಪ್ರಸಿದ್ಧ. ಸ್ಟೀವ್ ಜಾಬ್ಸ್ ಸಿಇಒ ಹುದ್ದೆ ತ್ಯಜಿಸಿದರೂ ಇನ್ನೂ ಆರಾಧಿಸುತ್ತಿರುವ ಜನ. ಆಪಲ್ ಕಂಪೆನಿಯಿಂದ ಬಂದ ಐಫೋನ್, ಐಪ್ಯಾಡ್ ಹಾಗೂ ಇತರ ಪ್ರಸಿದ್ಧ ಉತ್ಪನ್ನಗಳು ಆಪಲ್ ಕಂಪೆನಿಯನ್ನು ಆಕಾಶದೆತ್ತರಕ್ಕೆ ಏರಿಸಿವೆ.

ಇದೀಗ ಈ ಕಂಪೆನಿ ಹೊಸ ಆಪಲ್ ಐಹೋಮ್ ಏರ್ ಪ್ಲೇ ಸಂಗೀತ ಸಾಧನವನ್ನು ಇದೇ ತಿಂಗಳು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಈ ಹೊಸ ಸಾಧನದ ಹೆಸರು ಐಹೋಮ್ iw1. ಇದು ಪ್ರಪಂಚದ ಪ್ರಪ್ರಥಮ ಏರ್ ಫೊನ್ ಸ್ಪೀಕರ್. ಈ ಹೊಸ ಐಹೋಮ್ ಏರ್ ಪ್ಲೇ ಇದೇ ತಿಂಗಳು ಬಿಡುಗಡೆಯಾಗಲಿದೆ.

ಇದನ್ನು ಉಪಯೋಗಿಸಿ ಬಳಕೆದಾರರು ವೈರ್ ಇಲ್ಲದೇ ಡಿವೇಸ್ ನಿಂದ ಏರ್ ಪ್ಲೇ ಲಭ್ಯತೆಗನುಗುಣವಾಗಿ ಸಂಗೀತ ಅನುಭವಿಸಬಹುದು. ಇದರಲ್ಲಿ ಎರಡು 3 ಇಂಚುಗಳ ವೂಫರ್ಸ್ ಮತ್ತು 1 ಇಂಚು ಟ್ವೀಟರ್ ಇದ್ದು ಇವು ಸಂಗೀತದ ಸಮಾನ ಹಂಚಿಕೆ ಕಾರ್ಯವನ್ನು ನಿರ್ವಹಿಸುತ್ತದೆ. ಸಂಪರ್ಕ ರಹಿತವಾಗಿ ಇದು ಹರಡುವ ಸಂಗೀತ ಹತ್ತಿರದ ವಾತಾವರಣವನ್ನೆಲ್ಲ ಹಿತವಾಗಿಸುವುದರ ಜೊತೆಗೆ ಒಂದರಿಂದ ಒಂದಕ್ಕೆ ಕನೆಕ್ಟ್ ಆಗಿ ಸ್ಥಳವನ್ನಾಕ್ರಮಿಸಿ ತೊಂದರೆಯಾಗುತ್ತಿದ್ದ ವೈರ್ ನಿಂದ ಮುಕ್ತಿಯನ್ನೂ ನೀಡುತ್ತದೆ.

ಸ್ಟೇಶನ್(DPS), ತಂತ್ರಜ್ಞಾನ, ವೈ-ಫೈ, ರೆಗ್ಯೂಲರ್ WPS ಸೆಟ್ ಅಪ್, USB ಪೋರ್ಟ್ ಗೆ ಕನೆಕ್ಟ್ ಮಾಡಿ ಚಾರ್ಜ್ ಮಾಡಬಲ್ಲ ವೈರ್ ಬಾಕ್ಸ್, ಎಲ್ಲವೂ ಇದರಲ್ಲಿದೆ. ಒಂದು ಸ್ಪೀಕರ್ ಮಾತ್ರ ಒಮ್ಮೆ ಬಳಸಬಹುದಾಗಿದೆ. ಇಷ್ಟೆಲ್ಲ ವೀಶೇಷ ಸೌಲಭ್ಯಗಳಿರುವ ಇದರ ಬೆಲೆ ಭಾರತದಲ್ಲಿ ರು. 1,50,000.

ಈ ಹೊಸ ಮ್ಯೂಸಿಕ್ ಸಾಧನ ಅಸಾಮಾನ್ಯವಾದುದು. ಇದರ ಬೆಲೆ ಜಾಸ್ತಿ ಎನಿಸಿದರೂ ವಿಶೇಷವಾದ ಸೌಲಭ್ಯುಗಳಿರುವುದರಿಂದ ನಿಗದಿಯಾಗಿರುವ ಬೆಲೆ ಹೆಚ್ಚು ಎನಿಸಲಾರದು..

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot