ಇಲ್ಲೊಂದು ಸೂಪರ್ ಸ್ಪೀಕರ್ ಇದೆ: ನಿಮಗೆ ಬೇಕೇ!

Posted By: Staff

ಇಲ್ಲೊಂದು ಸೂಪರ್ ಸ್ಪೀಕರ್ ಇದೆ: ನಿಮಗೆ ಬೇಕೇ!
ಸಂಗೀತವೆನ್ನುವುದು ತುಂಬಾ ಜನರಿಜಗೆ ಸರ್ವಸ್ವವೂ ಆಗಿದೆ. ಸಂಗೀತದ ಸುಮಧುರ ಜಗತ್ತನ್ನು ಪರಿಚಯಿಸುವಲ್ಲಿ ಸಂಗೀತಸಾಧನಗಳ ಪಾತ್ರ ಅತ್ಯಂತ ಹಿರಿದು. ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಅತ್ಯಾಧುನಿಕ ಮ್ಯೂಸಿಕ್ ಸಿಸ್ಟಮ್ ಲಭ್ಯವಿದೆ. ಈಗ ಹೊಸದೊಂದು ಸಂಗೀತದ ಸೂಪರ್ ಸಾಧನ ಬಿಡುಗಡೆಯಾಗಿದೆ.

ಜಗತ್ತಿನ ಮೊದಲ ಕ್ವಾಡ್ ಕೋರ್ ಆಡಿಯೋ ಮತ್ತು ವಿಡಿಯೋ ಪ್ರೊಸೆಸರ್ ಬಿಡುಗಡೆಯಾಗಿದೆ. ಕ್ರಿಯೇಟಿವ್ ಸಂಸ್ಥೆಯಿಂದ ಬಿಡುಗಡೆಯಾಗಿರುವ ಇದು ಸೌಂಡ್ ಬ್ಲಾಸ್ಟರ್ ರೇಕಾನ್ 3D ಎಂಬ ಹೆಸರನ್ನು ಹೊಂದಿದೆ. ಈ ಕ್ವಾಡ್ ಕೋರ್ ನ ಉತ್ಪನ್ನ ಸಾಕಷ್ಟು ಉನ್ನತ ಸೌಂಡ್ ಸಿಸ್ಟಮ್ ಆಗಿದೆ. ಈ ಹೊಸ ಆಡಿಯೋ ಹಾರ್ಡ್ ವೇರ್ ಇದೀಗ ಜಗತ್ತಿಗೆ ಸಮರ್ಪಣೆಯಾಗಿದೆ

ಇದರಲ್ಲಿ ಪಿಸಿ, ಮ್ಯಾಕ್ ಮತ್ತು ಗೇಮಿಂಗ್ ಕನ್ಸೋಲ್ಸ್ ಇದ್ದು 400 ಮಿಲಿಯನ್ ಸೌಂಡ್ ಬ್ಲಾಸ್ಟರ್ಸ್ ರೆಕಾನ್ 3D ಸೌಂಡ್ ಕಾರ್ಡ್ ಆಡಿಯೋ ಸೌಲಭ್ಯ ಲಭ್ಯ. ಇದರಲ್ಲಿರುವ HD ಆಡಿಯೋ ಕೋಡೆಕ್ಸ್ DSP 100dB ಹೊಂದಿರುವುದು ಒಂದೇ ಚಿಪ್ ನಲ್ಲಿ ಬಹಳಷ್ಟು ಇದ್ದಂತಾಯಿತು.

ಇದರಲ್ಲಿರುವ 3D ಫಾಟಾ 1 ಐಟಿ ಚಾಂಪಿಯನ್ ಮಲ್ಟಿ ಚಾನೆಲ್ ಸ್ಪೀಕರ್ ಮತ್ತು ಹೆಡ್ ಫೊನ್ ಗಳಿಗೆ ಸುಲಭಸಾಧ್ಯವಾದ ಸಂಪರ್ಕ ನೀಡುತ್ತದೆ. ಇದರಲ್ಲಿರುವ ಎಕೋ ಕ್ಯಾನ್ಸಲೇಷನ್, ಕ್ರಿಸ್ಟಲ್ ವೈಸ್ ಫೊಕಸ್, ಕ್ರಿಸ್ಟಲ್ ವೈಸ್ ಆಕ್ಟಿವ್ ನಾಯಿಸ್ ರಿಡಕ್ಷನ್ ಈ ಸಂಗೀತ ಸಾಧನದ ನಿಜವಾದ ವೈಶಿಷ್ಠ್ಯ.

ಇನ್ನೂ ಒಂದು ವಿಶೇಷವೆಂದರೆ ಕಾರ್ಡ್ PCI ಎಕ್ಸ್ ಪ್ರೆಸ್ ಸೌಂಡ್ ಕಾರ್ಡ್ ಹೊಂದಿದ್ದು ಇದು 6 ಚಾನೆಲ್ಗಳನ್ನು ಪ್ರತಿನಿಧಿಸುತ್ತದೆ. ಇವುಗಳ ಜತೆ ಹೆಡ್ ಫೋನ್ ಆಮ್ ಫ್ಲಿಫಾಯರ್ ಮತ್ತು ಡಿಜಿಟಲ್ ಮೈಕ್ರೋಫೋನ್ ಇಂಟರ್ ಫೇಸ್ ಇರುವುದು ಇದಕ್ಕೆ ಇನ್ನೂ ಹೆಚ್ಚಿನ ಮಾನ್ಯತೆ ತಂದುಕೊಟ್ಟಿದೆ. ಇದರ ಬೆಲೆ ಹಾಗೂ ಇನ್ನುಳಿದ ವಿಶೇಷತೆಗಳ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಾಗಿದೆ.


Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot