ಪಯೋನೀರ್ ಏರ್ ಪ್ಲೇ ಮ್ಯೂಸಿಕ್ ಬಂದಿದೆ; ಚೆನ್ನಾಗಿದೆ

Posted By: Staff

ಪಯೋನೀರ್ ಏರ್ ಪ್ಲೇ ಮ್ಯೂಸಿಕ್ ಬಂದಿದೆ; ಚೆನ್ನಾಗಿದೆ
ಈಗ ಮಾರುಕಟ್ಟೆಗೆ ಸಾಕಷ್ಟು ಹೊಸ ಹೊಸ ಗ್ಯಾಜೆಟ್ ಸಾಧನಗಳು ಕಾಲಿಡುತ್ತಿವೆ. ಸುಪರ್ ಕೂಲ್ ಸ್ಪೀಕರ್, ಸೌಂಡ್ ಸಿಸ್ಟಮ್ಸ್, ಮ್ಯೂಸಿಕ್ ಡಿವೈಸ್ ಇತ್ಯಾದಿಗಳೆಲ್ಲ ಹೊಸ ಹೊಸ ರೂಪ ಪಡೆದು ಲಗ್ಗೆ ಇಡುತ್ತಿವೆ. ಇದೀಗ ತಾನೇ ಬಿಡುಗಡೆಯಾಗಿರುವ ಐಹೋಮ್ iW1, ಈಗ ಸಾಕಷ್ಟು ಪ್ರಸಿದ್ಧವಾಗಿದೆ.

ಈಗ ಪಯೋನೀರ್ ಡ್ಯೂ ಸಿಮ್ ಲೈನ್ ವೈರ್ ಲೆಸ್ ಏರ್ ಪ್ಲೇ ಮಲ್ಟಿ ರೂಮ್ ಸಿಸ್ಟಮ್ಸ್ ಬರಲಿದೆ. ಹೊಸ ಈ ಸಾಧನಕ್ಕೆ ಹೆಸರು X-SMC3-K ಮತ್ತು X-SMC5-K. ಇದರಲ್ಲಿ ಹೊಸ ಟಾಪ್ ಸಿಸ್ಟಮ್ಸ್, ವೈ-ಫೈ ಕಾಂಪಾಟಿಬಿಲಿಟಿ, DLNA ಕೆನಕ್ಟಿವಿಟಿ, 2 ಚಾನೆಲ್ ಡಿಜಿಟಲ್ ಆಂಪ್ಲಿಫಾಯರ್, ಡ್ಯುಯಲ್ ಫುಲ್ ರೇಂಜ್ ಡ್ರೈವರ್ಸ್, 2X 20W RMS ಔಟ್ ಪುಟ್, 2.5 ಇಂಚಿನ ಸ್ಲೀಕ್ LCD ಫುಲ್ ಕಲರ್ ಡಿಸ್ ಪ್ಲೇ ಅಳವಡಿಸಲಾಗಿದೆ.

ಈ ಹೊಸ ಆಧುನಿಕ ಮ್ಯೂಸಿಕ್ ಸಿಸ್ಟಮ್ ಹೊಂದಿರುವ ಎಲ್ಲಾ ಫೀಚರ್ಸ್ ಗಳ ಎಲ್ಲಾ ಮಾಹಿತಿಗಳೂ ಲಭ್ಯವಿಲ್ಲದಿದ್ದರೂ ಇರುವ ಮಾಹಿತಿಯಲ್ಲೇ ಇದೊಂದು ಅಸಾಮಾನ್ಯ ಸಂಗೀತ ಸಾಧನವೆಂದು ಅರ್ಥೈಸಿಕೊಳ್ಳಬಹುದು.

ಇವುಗಳ ಬೆಲೆಗಳಲ್ಲಿ ಕೂಡ ಹೇರಳವಾದ ವ್ಯತ್ಯಾಸವೇನಿಲ್ಲ. ಪಯೋನೀರ್ X-SMC3-K ಬೆಲೆ ಸುಮಾರು ರು. 19,500 ಹಾಗೂ X-SMC5-K ಬೆಲೆ ಸುಮಾರು 22,500 ಎಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting