ಬಿ ಎಮ್ ಡಬ್ಲ್ಯುಕಾರಿನಲ್ಲಿನ್ನು ಸಂಗೀತದ ಸ್ವರ್ಗ!

Posted By: Staff

ಬಿ ಎಮ್ ಡಬ್ಲ್ಯುಕಾರಿನಲ್ಲಿನ್ನು ಸಂಗೀತದ ಸ್ವರ್ಗ!
ಬಿ ಎಮ್ ಡಬ್ಲ್ಯು(Bayerische Motoren Werke) ಆಟೋಮೊಬೈಲ್ ಕಂಪೆನಿಯೀಗ ಹೊಸ ಸಾಹಸಕ್ಕೆ ಮುಂದಾಗಿದೆ. ಈ ಕಂಪೆನಿಯೋಗ ಆಡಿಯೋ ಸಿಸ್ಟಮಗ ಗಳ ಸಿರೀಸ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದೀಗ 6 ಆಡಿಯೋ ಸಿಸ್ಟಮ್ ಗಳನ್ನು ಈ ಕಂಪೆನಿ ಜಗತ್ತಿನಾದ್ಯಂತ ಬಿಡುಗಡೆ ಮಾಡಲಿದ್ದು ಈಗಾಗಲೇ ಈ ಕಂಪೆನಿಯ 6 ಕಾರುಗಳ ಸಿರೀಸ್ ಜಗತ್ತಿನಾದ್ಯಂತ ಜನರಿಂದ ಒಪ್ಪಿಕೊಳ್ಳಲ್ಪಟ್ಟು ಮೆಚ್ಚುಗೆ ಗಳಿಸಿದೆ.

ಈ 6 ಸಿರೀಸ್ ಕೈಪ್ ಮತ್ತು ಕ್ಯಾಬ್ರಿಯೋಲೆಟ್ ಬ್ಯಾಂಗ್ ಮತ್ತು ಒಲುಪ್ಸೆನ್ ನಿಂದ ಆಧುನಿಕವಾಗಿದೆ. ಇದರಲ್ಲಿರುವ ಲೇಟೆಸ್ಟ್ ಕಟಿಂಗ್ ಎಡ್ಜ್ ತಂತ್ರಜ್ಞಾನ ಡೈರಾಕ್ ಡೈಮೆನ್ಷನ್ಸ್ 3D ಸೌಂಡ್ ಶ್ರೀಮಂತಿಕೆಯನ್ನು ನೀಡಲು ಸಮರ್ಥವಾಗಿದೆ. ಆಂತರಿಕವಾಗಿರುವ 16 ಲೌಡ್ ಸ್ಪೀಕರ್ ಅಪೂರ್ವ ಹಾಗೂ ವರ್ಣಿಸಲಸಾಧ್ಯವಾದ ಸುಮಧುರ ಸಂಗೀತದ ಅನುಭವ ನೀಡಲಿದೆ.

ವಾಹನದಲ್ಲಿರುವ ಸೌಂಡ್ ಸಿಸ್ಟಮ್ ನಿಂದ ಬರಲಿರುವ ಸಂಗೀತಕ್ಕೆ ಮರುಹುಟ್ಟು ನೀಡುವ ಮೂಲಕ ಈ ಆಡಿಯೋ ಸಿಸ್ಟಮ್ ಗಮನಾರ್ಹ ಗುಣಮಟ್ಟದ ಸಂಗೀತವನ್ನು ನೀಡಲು ಸಮರ್ಥವಾಗಿದೆ. ಆಶ್ಚರ್ಯವೆಂದರೆ ದುಬಾರಿ ಕಾರ್ ಎನಿಸಿರುವ ಬಿ ಎಮ್ ಡಬ್ಲ್ಯು ಕಾರಿನ ಒಳ ವಿನ್ಯಾಸವನ್ನು ಕೂಡ ಸಾಕಷ್ಟು ಶಬ್ಧರಹಿತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದರಲ್ಲಿ ಶ್ರೇಷ್ಠ ಗುಣಮಟ್ಟದ ಸಂಗೀತ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಈ ಹೊಸ ಸಿರೀಸ್ ಆಡಿಯೋ ಸಿಸ್ಟಮ್ ಕೇವಲ ಬಿ ಎಮ್ ಡಬ್ಲ್ಯುಕಾರಿನೊಳಗಡೆ ಮಾತ್ರ ಅಳವಡಿಸಲ್ಪಟ್ಟಿದೆ. ಇದೊಂದು ಸ್ವತಂತ್ರವಾದ ಸಂಗೀತದ ಉಪಕರಣ ಅಲ್ಲ ಎಂಬುದು ಗಮನಿಸಬೇಕಾದ ಅಂಶ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot