ಸದ್ಯದಲ್ಲೇ ಬರಲಿದೆ ಹೊಸ ಬ್ಲೂಟೂಥ್ ಹೆಡ್ ಸೆಟ್

Posted By: Staff

ಸದ್ಯದಲ್ಲೇ ಬರಲಿದೆ ಹೊಸ ಬ್ಲೂಟೂಥ್ ಹೆಡ್ ಸೆಟ್
ಬ್ಲೂಟೂಥ್ ಹೆಡ್ ಸೆಟ್ ಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಹೊಂದಿವೆ. ಈಗ ಬರುವ ಎಲ್ಲಾ ಗ್ಯಾಜೆಟ್ಸ್ ಗಳು ಆಧುನಿಕವಾದ ಬ್ಲೂಟೂಥ್ ಗಳನ್ನು ಹೊಂದಿರುತ್ತವೆ. ಬ್ಲೂಟೂಥ್ ಮೀಡಿಯಾ ಪ್ಲೇಯರ್ ಹೆಡ್ ಫೊನ್ಸ್ ಈಗ ಎಲ್ಲಾ ಕಡೆ ಸಾಮಾನ್ಯ ಎನಿಸಿದೆ. ವೈರ್ ಲೆಸ್ ಸಾಧನ ಯಾವುದೇ ಇರಲಿ, ಈಗ ಬಹುಪಯೋಗಿ ಎನಿಸಿದೆ.

ಪ್ಲಾನ್ ಟ್ರಾನಿಕ್ಸ್ ಕಂಪೆನಿ ಈಗ ಎರಡು ಆಧುನಿಕ ಬ್ಲೂಟೂಥ್ ಹೆಡ್ ಸೆಟ್ ಮಾರುಕಟ್ಟೆಗೆ ಬಿಡಲಿದೆ. ಇವುಗಳ ಹೆಸರು ಸೇವರ್ M1100 ಮತ್ತು M20. ಸದ್ಯದಲ್ಲೇ ಇದು ಭಾರತದ ಮಾರುಕಟ್ಟೆಯನ್ನೊಳಗೊಂಡಂತೆ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. DSP ತಂತ್ರಜ್ಞಾನ ಹೊಂದಿರುವ ಇದು ಮೈಕ್ರೋಫೊನ್ ಪರ್ಫಾರ್ಮನ್ಸ್ ನೀಡಲಿದೆ.

ಇದರಲ್ಲಿ ವಾತಾವರಣದ ಶಬ್ಧ ಮಾಲಿನ್ಯವನ್ನು ಸಾಕಷ್ಟು ನಿಗ್ರಹಿಸುವ ಶಕ್ತಿ ಇದೆ. ಕಂಪೆನಿಯ ಹೇಳಿಕೆಯಂತೆ ಈ ಹೊಸ 2 ಡಿವೈಸ್ ಗಳು ವೈಸ್ ಡ್ರಿವನ್ ಸರಳತೆ ಮತ್ತು ಶ್ರೇಷ್ಠತೆಯನ್ನೊಳಗೊಂಡಿದೆ.

ಇವುಗಳಲ್ಲಿ ಒಂದಾಗಿರುವ M20, ಮಲ್ಟಿಪಾಯಿಂಟ್ ತಂತ್ರಜ್ಞಾನ ಹೊಂದಿದೆ. ಇದರಿಂದ ಹೊಸ ಬಳಕೆದಾರರೂ ಕೂಡ ಇದರ ಕಾರ್ಯ ನಿರ್ವಹಣೆಯನ್ನು ಸುಲಭವಾಗಿ ಮಾಡಲು ಸಾದ್ಯವಿದೆ. ಸದ್ಯಕ್ಕೆ ಬಿಡುಗಡೆಯ ದಿನಾಂಕ ಮತ್ತು ದರ ನಿಗದಿಯಾಗಿಲ್ಲ.


Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot