ಹೊಸ ಓಲೋಜಿಕ್ ಡಿಸ್ಕ್ ಜಾಕಿ ಸ್ಪೀಕರ್ ಸೂಪರ್!

Posted By: Staff

ಹೊಸ ಓಲೋಜಿಕ್ ಡಿಸ್ಕ್ ಜಾಕಿ ಸ್ಪೀಕರ್ ಸೂಪರ್!
ಮಾರುಕಟ್ಟೆಯೀಗ ಜನರಿಗೆ ಸಂಗೀತದ ರಸದೌತಣ ನೀಡಲು ನಿರ್ಧರಿಸಿದೆ. ಒಂದರ ಹಿಂದೊಂದರಂತೆ ಸಂಗೀತ ಸಾಧನಗಳು ಬಿಡುಗಡೆಯಾಗುತ್ತಿದ್ದು ಗ್ರಾಹಕರಿಗೆ ಹೇರಳವಾದ ಅವಕಾಶ ಲಭ್ಯವಾಗಿದೆ. ಇದೀಗ ಓಲೋಜಿಕ್ ಕಂಪೆನಿ ಡಿಸ್ಕ್ ಜಾಕಿ ರೋಬೊಟ್ ಎಂಬ ಹೊಸ ಸಂಗೀತ ಸಾಧನ ಬಿಡುಗಡೆಗೆ ಮುಂದಾಗಿದೆ.

ಆಟೋಮ್ಯಾಟೆಡ್ ಮ್ಯೂಸಿಕ್ ಪರ್ಸನಾಲಿಟಿ(AMP) ಎಂಬ ಸಂಗೀತದ ಹೊಸ ಲೋಕವೀಗ ಜಗತ್ತಿಗೆ ತೆರೆದುಕೊಂಡಿದೆ. ಓಲೋಜಿಕ್ ಕಂಪೆನಿ ಡೆಮೋ ಫಾಲ್ 2011 ನಲ್ಲಿ ಇಂತಹ ಸಾಹಸವನ್ನು ಪ್ರಕಟಿಸಿದೆ. ಈ ಹೊಸ ಸ್ಮಾರ್ಟ್ ಪೋನ್ ನಲ್ಲಿ 2 ವೀಲ್, ರೂಮ್ ಥಂಬಿಂಗ್ ಆಡಿಯೋ ಸಿಸ್ಟಮ್, ಸ್ಪೀಕರ್ಸ್ ಹೀಗೆ ಸಾಕಷ್ಟು ಸೌಲಭ್ಯಗಳು ಅಡಕವಾಗಿವೆ.

ಈ ಹೊಸ ಸಾಧನ 73 ಸೆಂ.ಮೀ ಎತ್ತರ, ಕಪ್ಪು ಬಣ್ಣ ಹೊಂದಿದೆ. ಲೆಡ್ ಲೈಟ್ ಜೊತೆಗೆ ಬಾಬ್ ಹೆಡ್ ಹೊಂದಿರುವ ಇದು ಸಾಕಷ್ಟು ಆಧುನಿಕವಾಗಿದೆ. MP3 ಜೊತೆಗೆ ಇದು 12 W ಆಮ್ಪ್ ಹೊಂದಿದೆ.

ಸದ್ಯಕ್ಕೆ ಜಪಾನ್, ಯುಕೆ ಹಾಗೂ ಯು ಎಸ್ ಎ ಯಲ್ಲಿ ಈ ರೋಬೊಟ್ ಗಳು ಹೆಚ್ಚು ಪ್ರಚಾರದಲ್ಲಿವೆ. ಇದರೊಂದಿಗೆ ಇನ್ನೊಂದು ಹೊಸ ಸಿಸ್ಟಮ್ ಅಭಿವೃದ್ಧಿ ಪಡಿಸುವ ಯೋಚನೆಯೂ ಕಂಪೆನಿಗಿದೆ. ಬೆಲೆ ಸುಮಾರು ರು. 33,000 ಆಗುವುದೆಂದು ಅಂದಾಜಿಸಲಾಗಿದೆ. ಭಾರತೀಯ ಮಾರುಕಟ್ಟೆಗೂ ಇದು ಸದ್ಯದಲ್ಲಿಯೇ ಇದು ಲಗ್ಗೆ ಹಾಕುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot